2019 Budget

ನಮ್ಮ ಕರ್ನಾಟಕದ ಮುಖ್ಯ ಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿಯವರು 2019 ರ ಬಜೆಟ್ ಮಂಡನೆಯನ್ನ ಇಂದು ಮಾಡಿದ್ದು ಯಾರು ಯಾರಿಗೆ ಏನೇನು ಸಿಕ್ಕಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

2019-2020 ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಸಾಧನೆಗಳನ್ನ ಪ್ರಸ್ತಾಪಿಸಿದ್ದು ನಾಡಿನ ಪ್ರತಿ ಜನರಿಗೆ ಸ್ವಾಭಿಮಾನದಿಂದ ಬದುಕುವ ವಾತಾವರಣವನ್ನ ನಿರ್ಮಾಣ ಮಾಡುವ ಆಶಯವನ್ನ ವ್ಯಕ್ತ ಪಡಿಸಿದ್ದಾರೆ.

2019 Budget

ಒಟ್ಟಿನಲ್ಲಿ 2019 ರ ಬಜೆಟ್ ನಲ್ಲಿ ಜನಸಾಮಾನ್ಯರಿಗೆ ಮತ್ತು ರೈತರಿಗೆ ಏನು ಸಿಕ್ಕಿದೆ ಅನ್ನುವುದನ್ನ ಕಂಪ್ಲೀಟ್ ಆಗಿ ನೋಡೋಣ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿ, ನಗರಾಭಿವೃದ್ಧಿ ಮತ್ತು ಗ್ರಾಮೀಣಾಭಿವೃದ್ಧಿಗೆ ಆದ್ಯತೆ ಮತ್ತು ಕೊಡಗಿನಲ್ಲಿ ಮನೆಯನ್ನ ಕಳೆದುಕೊಂಡವರಿಗೆ 800 ಮನೆ ಮತ್ತು ನಿರಾಶ್ರಿತರಿಗೆ ಮನೆಗಳ ನಿರ್ಮಾಣ ಕಾರ್ಯವನ್ನ ಬಜೆಟ್ ನಲ್ಲಿ ಮಂಡನೆ ಮಾಡಲಾಗಿದೆ.

ಇನ್ನು ರೈತರ ಸಾಲಮನ್ನಾ ಯೋಜನೆ ಯಶಸ್ವಿಯಾಗಿ ಜಾರಿ, ವಾಣಿಜ್ಯ ಬ್ಯಾಂಕ್ ಗಳಲ್ಲಿ ಸಾಲಮನ್ನಾಕ್ಕೆ ಕ್ರಮಕ್ಕೆ, ರೈತರಿಗೆ ನೇರವಾಗಿ ಸಾಲಮನ್ನಾ ಬಿಡುಗಡೆ ಮಾಡುವ ಯೋಜನೆ.

ಇನ್ನು ಬೀದಿ ಬದಿಯಲ್ಲಿ ವ್ಯಾಪಾರ ಮಾಡುವವರಿಗೆ 7 ಕೋಟಿ 68 ಲಕ್ಷ ರೂಪಾಯಿ ಬಡ್ಡಿ ರಹಿತ ಸಾಲ ಯೋಜನೆ, ಕೋಲಾರ, ತೂಮಕೂರು, ಚಿಕ್ಕಬಳ್ಳಾಪುರ ಕುಡಿಯುವ ನೀರಿನ ಯೋಜನೆ.

2019 Budget

ಇನ್ನು ಬೆಂಗಳೂರಿನಲ್ಲಿ ಎರಡನೇ ಹಂತದ ಮೆಟ್ರೋಗೆ ಚಾಲನೆ, ಬೆಂಗಳೂರು ನಗರವನ್ನ ವಿಶ್ವ ಮಟ್ಟಕ್ಕೆ ಏರಿಸುವ ಕ್ರಮ, ಕುಡಿಯುವ ನೀರಿಗಾಗಿ ಜಲಧಾರೆ ಯೋಜನೆ, ಸಂದ್ಯಾ ಸುರಕ್ಷಾ ಯೋಜನೆಯಡಿ ಪ್ರೀತಿ ತಿಂಗಳು ನೀಡುವ 500 ರೂಪಾಯಿಯನ್ನ 1000 ರುಪಾಯಿಗೆ ಏರಿಸಲಾಗಿದೆ.

ಮಾತೃಶ್ರೀ ಯೋಜನೆಯಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ 6000 ರೂಪಾಯಿಯನ್ನ ನೀಡಲು ಕ್ರಮ, ಪರಿಶಿಷ್ಟ ಜಾತಿ ಮತ್ತು ಪಂಡದವರಿಗೆ ಅನುದಾನಗಳು, ಕೃಷಿ, ತೋಟಗಾರಿಗೆ, ಪಶು ಸಂಗೋಪನೆ ಮತ್ತು ರೇಷ್ಮೆ ಬೆಳೆಗಾರರಿಗೆ ಸರ್ಕಾರದಿಂದ ಸಹಾಯ ಧನ.

ಇನ್ನು ಮಂಗನ ಕಾಯಿಲೆ ನಿಯಂತ್ರಣಕ್ಕೆ 5 ಕೋಟಿ ರೂಪಾಯಿ ಮೀಸಲು, ಮೀನುಗಾರಿಕೆ ಮತ್ತು ದೋಣಿಗಾರಿಕೆಗೆ 50% ರಷ್ಟು ಸಹಾಯಧನ, ಇನ್ನು ಅನೇಕ ಅಂಶಗಳನ್ನ ಒಳಗೊಂಡಂತೆ ಕುಮಾರಸ್ವಾಮಿಯರು ಇಂದು ಬಜೆಟ್ ಮಂಡನೆಯನ್ನ ಮಾಡಿದ್ದಾರೆ, ಈ ಬಜೆಟ್ ನಿಮಗೆ ಇಷ್ಟವಾಗಿದ್ದರೆ ನಮಗೆ ಯಸ್ ಎಂದು ತಿಳಿಸಿ ಮತ್ತು ಇಲ್ಲದವಾದರೆ ನೋ ಎಂದು ನಮಗೆ ತಿಳಿಸಿ.

2019 Budget

Please follow and like us:
0
http://karnatakatoday.in/wp-content/uploads/2019/02/2019-Budget-1024x576.jpghttp://karnatakatoday.in/wp-content/uploads/2019/02/2019-Budget-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣನಮ್ಮ ಕರ್ನಾಟಕದ ಮುಖ್ಯ ಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿಯವರು 2019 ರ ಬಜೆಟ್ ಮಂಡನೆಯನ್ನ ಇಂದು ಮಾಡಿದ್ದು ಯಾರು ಯಾರಿಗೆ ಏನೇನು ಸಿಕ್ಕಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. 2019-2020 ನೇ ಸಾಲಿನ ಬಜೆಟ್ ಮಂಡನೆಯಲ್ಲಿ ಕುಮಾರಸ್ವಾಮಿಯವರು ಮೈತ್ರಿ ಸರ್ಕಾರದ ಸಾಧನೆಗಳನ್ನ ಪ್ರಸ್ತಾಪಿಸಿದ್ದು ನಾಡಿನ ಪ್ರತಿ ಜನರಿಗೆ ಸ್ವಾಭಿಮಾನದಿಂದ ಬದುಕುವ ವಾತಾವರಣವನ್ನ ನಿರ್ಮಾಣ ಮಾಡುವ...Kannada News