ಸಂಪತ್ತಿನ ಅಧಿಪತಿಯಾದ ಕುಬೇರ ದೇವನ ಆಶೀರ್ವಾದ 2019 ರ ಅಂತ್ಯದಲ್ಲಿ ಕೆಲ ರಾಶಿಗಳಿಗೆ ಆರಂಭವಾಗಲಿದೆ. ವರ್ಷಾಂತ್ಯದಲ್ಲಿ ಈ ರಾಶಿಗಳು ತಾವು ಬಯಸಿದ್ದೆಲ್ಲ ಪಡೆದು ಹಣಕಾಸಿನ ವಿಷಯದಲ್ಲಿ ಪ್ರಬಲರಾಗುವ ಎಲ್ಲ ಸೂಚನೆಗಳಿವೆ. ವರ್ಷದ ಕೊನೆಯಲ್ಲಿ ಒಳ್ಳೆಯ ಫಲ ಪಡೆಯುತ್ತಿರುವ ಆ ರಾಶಿಗಳ ಬಗ್ಗೆ ಇಂದು ತಿಳಿಸುತ್ತಿದ್ದೇವೆ ಕೇಳಿ. ಎಷ್ಟೇ ಕಷ್ಟಗಳು ನಿಮ್ಮ ಹಾದಿಯಲ್ಲಿ ಬಂದರೂ ಕೂಡ ಸಮಸ್ಯೆಗಳನ್ನು ಎದುರಿಸಿ ಛಲದಿಂದ ಗುರಿ ಸಾಧಿಸುವ ಮನೋಭಾವನೆ ಹೊಂದಿದಾಗ ಮಾತ್ರ ನಿಮಗೆ ಯಶಸ್ಸು ಸಾಧ್ಯ, ಇದಕ್ಕೆ ಸರಿಯಾದ ಗುರುಬಲ ಕೂಡ ಈ ವರ್ಷದ ಅಂತ್ಯದಲ್ಲಿ ನಿಮ್ಮ ಪಾಲಾಗಲಿದೆ.

ಇನ್ನು ಈ ವರ್ಷದ ಕೊನೆಯಲ್ಲಿ ಮೇಷ ರಾಶಿಯವರಿಗೆ ದೇವನಾದ ಗುರು ನಿಮ್ಮೆಡೆಗೆ ಸಂತುಷ್ಟನಾದಂತೆ ತೋರುತ್ತದೆ. ಗುರುವಿನ ಆಶೀರ್ವಾದ ನಿಮ್ಮನ್ನು ಸರಿಯಾದ ದಾರಿಯಲ್ಲಿ ಕೊಂಡೊಯ್ಯುತ್ತಿದ್ದು ನಿಮಗೆ ಯಶಸ್ಸು ತರುತ್ತಾನೆ. ನೀವು ಕೇವಲ ನಿಮ್ಮ ಕಾರ್ಯಗಳನ್ನು ಸರಿಯಾಗಿ ಮಾಡುವುದಷ್ಟೇ ಅಲ್ಲದೇ ಅದರ ಜೊತೆಗೆ ಮೆಚ್ಚುಗೆ, ಗೌರವ ಹಾಗೂ ಹೊಗಳಿಕೆಯನ್ನೂ ಸ್ವೀಕರಿಸುತ್ತೀರಿ. ಶನಿ ನಿಮ್ಮ ಆದಾಯದಲ್ಲಿ ಅಡಚಣೆಗಳನ್ನು ತರಬಹುದು. ಆದರೆ, ಚಿಂತಿಸಬೇಡಿ; ನೀವು ಸಂತೋಷದ ಮೌಲ್ಯವನ್ನು ಅರ್ಥ ಮಾಡಿಕೊಳ್ಳಲು ಕಠಿಣ ಸಮಯಗಳು ಉತ್ತಮ ಸಮಯಕ್ಕಿಂತ ಮೊದಲು ಬರುತ್ತವೆ. ಇದರ ಜೊತೆಗೆ, ನೀವು ನಿಮ್ಮ ವೈಯಕ್ತಿಕ ಜೀವನದಲ್ಲಿ ಹೊಂದಾಣಿಕೆಯ ಕೊರತೆಯನ್ನು ಎದುರಿಸಬೇಕಾಗಬಹುದು. ಆದರೆ, ನೀವು ಕೆಲವೇ ಪ್ರಯತ್ನಗಳು ಮಾಡುವ ಮೂಲಕ ಎಲ್ಲಾ ಅಡೆತಡೆಗಳನ್ನು ದಾಟಬಹುದು.

ಇನ್ನು ಮಿಥುನ ರಾಶಿಯವರಿಗೆ ನಿಮ್ಮ ಪ್ರೀತಿಪಾತ್ರರಿಗೆ ನೀವು ಏನಾದರೂ ವಿಶೇಷವಾದದ್ದನ್ನು ಮಾಡಲು ಯೋಜನೆ ಹಾಕಿಕೊಂಡಿದ್ದಲ್ಲಿ ನಿಮ್ಮ ಪ್ರಯತ್ನಗಳು ಸಫಲವಾಗುತ್ತವೆ. ನೀವು ಒಂದು ಸಂಸ್ಥೆಯಯಲ್ಲಿ ಕೆಲಸ ಮಾಡುತ್ತಿದ್ದು ಬದಲಾವಣೆ ಬಯಸುತ್ತಿದ್ದಲ್ಲಿ ಇನ್ನೂ ಉತ್ತಮವಾದದ್ದು ದೊರಕುವ ಅತ್ಯುತ್ತಮ ಅವಕಾಶಗಳಿವೆ. ಆದ್ದರಿಂದ, ಅದನ್ನು ಪಡೆದುಕೊಳ್ಳುವುದಕ್ಕಿರುವ ಯಾವುದೇ ಹೊಸ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ. ಉದ್ಯಮಿಗಳು ಸ್ವಲ್ಪ ಶ್ರಮವಹಿಸಿ ಕೆಲಸ ಮಾಡಬೇಕಾದರೂ ಶ್ರಮಪಟ್ಟು ಕೆಲಸ ಮಾಡುವುದು ಯಾವಾಗಲೂ ಸಫಲತೆ ತರುತ್ತದೆಂದು ನೆನಪಿಡಿ.

ಕರ್ಕ ರಾಶಿಗೆ ಈ ಬಾರಿ ಡಿಸೆಂಬರ್ ತಿಂಗಳಲ್ಲಿ ವ್ಯಾಪಾರ ವ್ಯವಹಾರದಲ್ಲಿ ನಿರ್ದಿಷ್ಟ ಲಾಭ ಕಂಡು ಹೊಸ ವರ್ಷದ ಸಮಯದಲ್ಲಿ ಹರ್ಷ ಕಾಣಲಿದ್ದೀರಿ. ಮಕ್ಕಳ ವಿದ್ಯಾಭ್ಯಾಸ ಹಾಗು ಉದ್ಯೋಗದ ವಿಚಾರದಲ್ಲಿ ಸಿಹಿಸುದ್ದಿ ಕೇಳುವಿರಿ. ದಾನಗಳನ್ನು ಮಾಡುವುದರಿಂದ ಇನ್ನು ಹೆಚ್ಚಿನ ಫಲ ಪಡೆಯುವ ಅವಕಾಶವಿದೆ.

ಅದರಂತೆಯೇ ಸರ್ಕಾರೀ ಕೆಲಸದ ಯೋಚನೆ ಹೊತ್ತಿರುವ ಮೀನ ರಾಶಿಯವರಿಗೆ ಮಿಶ್ರಫಲವಿದೆ ನಿಮ್ಮ ಪ್ರಯತ್ನ ಇನ್ನು ಕೂಡ ಸಾಗಬೇಕಿದೆ. ಈ ದಿಶೆಯಲ್ಲಿ ಕಠಿಣ ಪ್ರಯತ್ನ ಅಗತ್ಯವಾಗಿದೆ.ಬರಹಗಾರರಿಗೆ, ಪತ್ರಿಕೋದ್ಯಮಿಗಳಿಗೆ, ಪ್ರಾಧ್ಯಾಪಕರುಗಳಿಗೆ ಮನ್ನಣೆ ದೊರೆಯುವ ಸಾಧ್ಯತೆ ಹೇರಳವಾಗಿರುವುದು. ನಿಮ್ಮ ಮನೋಕಾಮನೆಗಳು ಬಹುತೇಕ ಈಡೇರುವವು. ಸಮಾಜದಲ್ಲಿ ಗೌರವ ಆದರಗಳು ದೊರೆಯುವವು.

ಧನು ರಾಶಿಗೆ ಬಹಳಷ್ಟು ಗ್ರಹಗಳು ನಿಮ್ಮ ಪರವಾಗಿರುವಂತೆ ತೋರುತ್ತಿವೆ. ನೀವು ಸುರಕ್ಷಿತವಾಗಿರುವಂತೆ ಕಾಣುತ್ತದೆ. ವೈವಾಹಿಕ ಜೀವನದಲ್ಲಿ ಕೆಲವು ಅಡಚಣೆಗಳು ಉಂಟಾಗಬಹುದು. ಕೆಲವೊಮ್ಮೆ ಸ್ವಲ್ಪ ಪ್ರೀತಿಗಾಗಿ ಹಂಬಲಿಸುವುದು ಒಳ್ಳೆಯದೇ. ಹೆಚ್ಚುವರಿಯಾಗಿ, ಇದು ನಿಮಗೆ ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನೂ ಉಂಟುಮಾಡಬಹುದು. ಚಿಂತಿಸಬೇಡಿ, ಪ್ರಮುಖವಾದದ್ದೇನೂ ಕಾಣುತ್ತಿಲ್ಲ. ಇದು ಕೆಲಸಕ್ಕೂ ಒಳ್ಳೆಯ ಸಮಯ. ಆದ್ದರಿಂದ ಶ್ರಮಪಟ್ಟು ಕೆಲಸ ಮಾಡುವವರಿಗೆ ಇದು ಒಳ್ಳೆಯ ಸಮಯದಂತೆ ತೋರುತ್ತಿದೆ.

Please follow and like us:
error0
http://karnatakatoday.in/wp-content/uploads/2019/11/2019-ends-here-1024x576.pnghttp://karnatakatoday.in/wp-content/uploads/2019/11/2019-ends-here-150x104.pngKarnataka Trendingಅಂಕಣಜ್ಯೋತಿಷ್ಯಸಂಪತ್ತಿನ ಅಧಿಪತಿಯಾದ ಕುಬೇರ ದೇವನ ಆಶೀರ್ವಾದ 2019 ರ ಅಂತ್ಯದಲ್ಲಿ ಕೆಲ ರಾಶಿಗಳಿಗೆ ಆರಂಭವಾಗಲಿದೆ. ವರ್ಷಾಂತ್ಯದಲ್ಲಿ ಈ ರಾಶಿಗಳು ತಾವು ಬಯಸಿದ್ದೆಲ್ಲ ಪಡೆದು ಹಣಕಾಸಿನ ವಿಷಯದಲ್ಲಿ ಪ್ರಬಲರಾಗುವ ಎಲ್ಲ ಸೂಚನೆಗಳಿವೆ. ವರ್ಷದ ಕೊನೆಯಲ್ಲಿ ಒಳ್ಳೆಯ ಫಲ ಪಡೆಯುತ್ತಿರುವ ಆ ರಾಶಿಗಳ ಬಗ್ಗೆ ಇಂದು ತಿಳಿಸುತ್ತಿದ್ದೇವೆ ಕೇಳಿ. ಎಷ್ಟೇ ಕಷ್ಟಗಳು ನಿಮ್ಮ ಹಾದಿಯಲ್ಲಿ ಬಂದರೂ ಕೂಡ ಸಮಸ್ಯೆಗಳನ್ನು ಎದುರಿಸಿ ಛಲದಿಂದ ಗುರಿ ಸಾಧಿಸುವ ಮನೋಭಾವನೆ ಹೊಂದಿದಾಗ ಮಾತ್ರ ನಿಮಗೆ ಯಶಸ್ಸು...Film | Devotional | Cricket | Health | India