ಪುರಾಣಿಕ ಚಿತ್ರವನ್ನು ತ್ರಿಡಿಯಲ್ಲಿ ವಿಜೃಂಭಣೆಯಿಂದ ನಿರ್ಮಿಸಿ ಇತಿಹಾಸ ಬರೆದ ಕನ್ನಡ ಚಿತ್ರರಂಗ ಇದೀಗ ಚಿತ್ರದ ಕಲೆಕ್ಷನ್ ಮೇಲೆ ಕಣ್ಣು ಹಾಕಿದೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಮೊದಲ ದಿನವೇ ದಾಖಲೆ ಬರೆದಿದೆ. ಚಾಲೆಂಜಿಂಗ್ ಸ್ಟಾರ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಬಿಡುಗಡೆಯಾದ ಈ ಸಿನಿಮಾಗೆ ಲಕ್ಷ್ಮಿಕಟಾಕ್ಷ ಸಿಕ್ಕಿದೆ ಎಂದಿದ್ದರು .

ಮೊದಲ ದಿನವೇ ಪ್ರೇಕ್ಷಕರಿಂದ ಸಿನಿಮಾ ಬಗ್ಗೆ ಒಳ್ಳೆಯ ಮಾತುಗಳು ಕೇಳಿಬಂದಿತ್ತು ಮುಂದಿನ ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸೌಂಡ್ ಮಾಡುವುದು ಪಕ್ಕಾ ಎಂದೇ ಎಂಅಭಿಮಾನಿಗಳು ಹೇಳಿದ್ದರು. ಅದರಂತೆಯೇ ಈಗ ಚಿತ್ರ ನಾಲ್ಕನೆಯ ದಿನದಂದು ಚಿಂದಿ ಚಿಂದಿ ಮಾಡಿದೆ ದಾಖಲೆಗಳನ್ನು ಹೌದು. ಸಿನಿಮಾ ಬಿಡುಗಡೆಗೂ ಮುನ್ನವೇ ಆನ್‍ಲೈನ್ ಬುಕ್ಕಿಂಗ್ ಜೋರಾಗಿ ಇದ್ದದ್ದು ಮೊದಲ ದಿನದ ಗಳಿಕೆಗೆ ಇನ್ನಷ್ಟು ಬೂಸ್ಟ್ ನೀಡಿದೆ.

2ಡಿ ಮತ್ತು 3ಡಿ ಆವೃತ್ತಿಯಲ್ಲಿ ರಿಲೀಸ್ ಆಗಿರುವ ಈ ಸಿನಿಮಾ ಮೂಲಗಳ ಪ್ರಕಾರ ಮೊದಲ ದಿನ ₹ 8 ರಿಂದ 10 ಕೋಟಿ ಗಳಿಸಿದೆ ಎನ್ನಲಾಗಿದೆ.ದರ್ಶನ್ ಪ್ರಭಾವಳಿ ಹಾಗೂ ವಾಣಿಜ್ಯಾತ್ಮಕ ಅಂಶಗಳನ್ನು ಇಟ್ಟುಕೊಂಡು ಮಹಾಭಾರತದ ಯುದ್ಧ ಆಧಾರಿತ ಚಿತ್ರವಾಗಿರುವ ಕುರುಕ್ಷೇತ್ರ ಜನಮನ್ನಣೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಮೊದಲ ನಾಲ್ಕು ದಿನಗಳಲ್ಲಿ ಉತ್ತಮ ಕಲೆಕ್ಷನ್ ಮಾಡುವ ಮೂಲಕ ದರ್ಶನ್ ಬಾಕ್ಸ್ ಆಫೀಸ್ ಸುಲ್ತಾನ ಎಂಬುದನ್ನು ಮತ್ತೆ ನಿರೂಪಿಸಿದ್ದಾರೆ.

ಕೆಸಿಎನ್ ಮೂವೀಸ್ ಬ್ಯಾನರ್ ಅಡಿಯಲ್ಲಿ ಮುನಿರತ್ನ ನಿರ್ಮಿಸಿ ನಾಗಣ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಂಬರೀಷ್, ವಿ. ರವಿಚಂದ್ರನ್, ಅರ್ಜುನ್ ಸರ್ಜಾ, ರವಿಶಂಕರ್, ಸೋನು ಸೋದ್, ಡ್ಯಾನಿಷ್ ಅಖ್ತರ್ ಸಫಿ, ನಿಖಿಲ್ ಕುಮಾರ್, ಮೇಘನ ರಾಜ್, ಶ್ರೀನಿವಾಸ್ ಮೂರ್ತಿ ಮತ್ತಿತರರ ದಂಡೇ ಇದೆ. ಚಿತ್ರ ಬಿಡುಗಡೆಯಾದ ಕೇವಲ ನಾಲ್ಕನೇ ದಿನಕ್ಕೆ ಭರ್ಜರಿ 30 ಕೋಟಿಯಷ್ಟು ಕಲೆಕ್ಷನ್ ಮಾಡಿದೆ.

ಈ ಮೂಲಕ ದಿ ವಿಲನ್ ಚಿತ್ರದ ದಾಖಲೆಯನ್ನು ಮುರಿದಿದೆ. ದರ್ಶನ್ ಅಭಿನಯದ ಈ ಹಿಂದಿನ ಸಿನಿಮಾ ‘ಯಜಮಾನ’ ಮೊದಲ ದಿನದ ಗಳಿಕೆಯನ್ನು ಹಿಂದಿಕ್ಕಿದೆ ಕುರುಕ್ಷೇತ್ರ. ದರ್ಶನ್, ಅರ್ಜುನ್ ಸರ್ಜಾ, ನಿಖಿಲ್, ರವಿಚಂದ್ರನ್, ಸೋನು ಸೂದ್, ಅಂಬರೀಷ್, ಸ್ನೇಹಾ ಮತ್ತು ಮೇಘನಾ ರಾಜ್ ತಾರಾಗಣದಲ್ಲಿದ್ದಾರೆ. ದುರ್ಯೋಧನನ ಪಾತ್ರದಲ್ಲಿ ದರ್ಶನ್ ಅಬ್ಬರಿಸಿದ್ದಾರೆ. ಭೀಷ್ಮನಾಗಿ ಅಂಬರೀಷ್, ಕರ್ಣನಾಗಿ ಅರ್ಜುನ್ ಸರ್ಜಾ, ಅಭಿಮನ್ಯು ಆಗಿ ನಿಖಿಲ್ ಕಾಣಿಸಿದ್ದಾರೆ.

Please follow and like us:
error0
http://karnatakatoday.in/wp-content/uploads/2019/08/kurukshetra-1024x576.jpghttp://karnatakatoday.in/wp-content/uploads/2019/08/kurukshetra-150x104.jpgKarnataka Trendingಅಂಕಣಪುರಾಣಿಕ ಚಿತ್ರವನ್ನು ತ್ರಿಡಿಯಲ್ಲಿ ವಿಜೃಂಭಣೆಯಿಂದ ನಿರ್ಮಿಸಿ ಇತಿಹಾಸ ಬರೆದ ಕನ್ನಡ ಚಿತ್ರರಂಗ ಇದೀಗ ಚಿತ್ರದ ಕಲೆಕ್ಷನ್ ಮೇಲೆ ಕಣ್ಣು ಹಾಕಿದೆ. ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಮೊದಲ ದಿನವೇ ದಾಖಲೆ ಬರೆದಿದೆ. ಚಾಲೆಂಜಿಂಗ್ ಸ್ಟಾರ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ ರಿಲೀಸ್ ಆಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ವರಮಹಾಲಕ್ಷ್ಮಿ ಹಬ್ಬದ ದಿನ ಬಿಡುಗಡೆಯಾದ ಈ ಸಿನಿಮಾಗೆ ಲಕ್ಷ್ಮಿಕಟಾಕ್ಷ ಸಿಕ್ಕಿದೆ ಎಂದಿದ್ದರು . ಮೊದಲ ದಿನವೇ ಪ್ರೇಕ್ಷಕರಿಂದ ಸಿನಿಮಾ ಬಗ್ಗೆ ಒಳ್ಳೆಯ...Film | Devotional | Cricket | Health | India