Aadhar link of driving licens

ವಾಹನ ಹಾಗು ವಾಹನ ಸವಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಎರಡು ಮಹತ್ವದ ನಿರ್ಧಾರವನ್ನ ಜಾರಿಗೆ ತಂದಿದೆ.

ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ವಿಷಯವನ್ನ ತಿಳಿದುಕೊಳ್ಳಬೇಕು, ಇನ್ನು ಆ ಎರಡು ಮಹತ್ವದ ನಿರ್ಧಾರ ಏನು ಅನ್ನುವುದರ ಬಗ್ಗ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹಾಗೆ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Aadhar link of driving licens

ಹೌದು ಇಲ್ಲಿಯವರೆಗೂ ಪ್ರತಿ ರಾಜ್ಯಕ್ಕೂ ಬೇರೆ ಬೇರೆಯಾದ ಡ್ರೈವಿಂಗ್ ಲೈಸೆನ್ಸ್ ಇರುತ್ತಿತ್ತು, ಆದರೆ ಇನ್ನುಮುಂದೆ ಹಾಗೆ ಇರುವುದಿಲ್ಲ, ಹೌದು ಕೇಂದ್ರ ಸರ್ಕಾರ ತಂದಿರುವ ಹೊಸ ನಿಯಮದ ಪ್ರಕಾರ ದೇಶದ ಎಲ್ಲಾ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ಕೂಡ ಒಂದೇ ರೀತಿಯ ಡ್ರೈವಿಂಗ್ ಲೈಸೆನ್ಸ್ ಇರಲಿದೆ.

ಇನ್ನುಮುಂದೆ ಡ್ರೈವಿಂಗ್ ಲೈಸೆನ್ಸ್ ಸ್ಮಾರ್ಟ್ ಕಾರ್ಡ್ ನ ಬಣ್ಣ, ವಿನ್ಯಾಸ ಮತ್ತು ಸುರಕ್ಷತಾ ಸೆಕ್ಯುರಿಟಿ ಫ್ಯೂಚರ್ ಗಳು ಒಂದೇ ರೀತಿಯಲ್ಲಿ ಇರಲಿದೆ, ಇನ್ನುಮುಂದೆ ನೀಡಲಿರುವ ಏಕರೀತಿಯ ಡ್ರೈವಿಂಗ್ ಲೈಸೆನ್ಸ್ ನಲ್ಲಿ ಮೈಕ್ರೋ ಚಿಪ್ ಮತ್ತು QR ಕೋಡ್ ಗಳು ಸಹ ಇರಲಿದೆ.

Aadhar link of driving licens

ಇನ್ನು ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ವ್ಯಕ್ತಿಯ ಪ್ರತಿಯೊಂದು ವಿವರಗಳನ್ನ ಈ ಮೈಕ್ರೋ ಚಿಪ್ ನಲ್ಲಿ ಸಂಗ್ರಹ ಮಾಡಲಾಗಿರುತ್ತದೆ, ಇನ್ನು ಇದರಿಂದ ಯಾವುದೇ ಒಬ್ಬ ವ್ಯಕ್ತಿ ಟ್ರಾಫಿಕ್ ರೂಲ್ಸ್ ನ್ನ ಬ್ರೇಕ್ ಮಾಡಿದರೆ ಪೊಲೀಸರು QR ಕೋಡ್ ಮತ್ತು ಮೈಕ್ರೋ ಚಿಪ್ ನ್ನ ಬಳಸಿಕೊಂಡು ಸುಲಭವಾಗಿ ಪತ್ತೆಹಚ್ಚಲಿದ್ದಾರೆ.

ಇನ್ನು ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧ ಪಟ್ಟಂತೆ ಕೇಂದ್ರ ಸರ್ಕಾರದ ಇನ್ನೊಂದು ಮಹತ್ವದ ನಿರ್ಧಾರ ಏನು ಅಂದರೆ, ಇನ್ನು ಮುಂದೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ಗೆ ಆಧಾರ್ ಕಾರ್ಡ್ ನ್ನ ಲಿಂಕ್ ಮಾಡಬೇಕು.

ಹೌದು ಡ್ರೈವಿಂಗ್ ಲೈಸೆನ್ಸ್ ಆಧಾರ್ ಕಾರ್ಡ್ ನ್ನ ಲಿಂಕ್ ಮಾಡುವುದರಿಂದ ಹಲವು ಉಪಯೋಗಗಳಿವೆ, ನಕಲಿ ಡ್ರೈವಿಂಗ್ ಲೈಸೆನ್ಸ್ ಪಡೆಯುವುದನ್ನ ತಡೆಗಟ್ಟುವ ಹಾಗು ಡ್ರೈವಿಂಗ್ ಲೈಸೆನ್ಸ್ ಗೆ ಸಂಬಂಧ ಪಟ್ಟಂತೆ ಹೆಚ್ಚಿನ ಸುರಕ್ಷತೆಯ ದೃಷ್ಟಿಯಿಂದ ಡ್ರೈವಿಂಗ್ ಲೈಸೆನ್ಸ್ ಆಧಾರ್ ಕಾರ್ಡ್ ನ್ನ ಲಿಂಕ್ ಮಾಡುವುದನ್ನ ಕೇಂದ್ರ ಸರ್ಕಾರ ಕಡ್ಡಾಯಗೊಳಿಸಲಿದೆ. ಸ್ನೇಹಿತರೆ ಈ ಎರಡು ಮಹತ್ವದ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹಾಗೆ ಈ ಮಾಹಿತಿಯನ್ನ ಪ್ರತಿಯೊಬ್ಬ ಭಾರತೀಯನಿಗೂ ತಲುಪುವಂತೆ ಮಾಡಿ.

Aadhar link of driving licens

Please follow and like us:
0
http://karnatakatoday.in/wp-content/uploads/2019/01/Aadhar-card-link-of-driving-License-1024x576.jpghttp://karnatakatoday.in/wp-content/uploads/2019/01/Aadhar-card-link-of-driving-License-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲ  ವಾಹನ ಹಾಗು ವಾಹನ ಸವಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಎರಡು ಮಹತ್ವದ ನಿರ್ಧಾರವನ್ನ ಜಾರಿಗೆ ತಂದಿದೆ. ಡ್ರೈವಿಂಗ್ ಲೈಸೆನ್ಸ್ ಹೊಂದಿರುವ ಪ್ರತಿಯೊಬ್ಬರೂ ಕೂಡ ಈ ವಿಷಯವನ್ನ ತಿಳಿದುಕೊಳ್ಳಬೇಕು, ಇನ್ನು ಆ ಎರಡು ಮಹತ್ವದ ನಿರ್ಧಾರ ಏನು ಅನ್ನುವುದರ ಬಗ್ಗ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಹಾಗೆ ಈ...Kannada News