Kannada Amar Movie

ಅಂಬರೀಷ್ ಪುತ್ರ ಅಭಿಷೇಕ್ ಮೊದಲ ಬಾರಿ ನಾಯಕ ನಟರಾಗಿರೋ ಅಮರ್ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆಗಳು ಮನೆ ಮಾಡುತ್ತಿದೆ, ಕನ್ನಡ ಚಿತ್ರರಂಗದಲ್ಲಿ ಯಶಸ್ವೀ ನಿರ್ದೇಶಕ ಎಂದು ಹೆಸರುವಾಸಿಯಾಗಿರುವ ನಾಗಶೇಖರ್ ಬಿಡುವಿಲ್ಲದೆ ಚಿತ್ರೀಕರಣ ಮಾಡುತ್ತಿದ್ದಾರೆ.

ರೆಬಲ್ ಸ್ಟಾರ್ ಅಂಬರೀಷ್ ಪುತ್ರನ ಮೊದಲ ಚಿತ್ರ ಇದಾಗಿರುವುದರಿಂದ ಚಿತ್ರದ ಮೇಲೆ ಒಂದು ರೀತಿಯ ನಿರೀಕ್ಷೆ ಹುಟ್ಟಿಕೊಂಡಿದೆ. ಇದೀಗ ಚಿತ್ರಕ್ಕೆ ಸಂಬಂಧ ಸುದ್ದಿಯೊಂದು ಹೊರಗೆ ಬಿದ್ದಿದ್ದು ಅದನ್ನ ಕೇಳಿದ ಪ್ರತಿಯೊಬ್ಬರೂ ಅಚ್ಚರಿ ಪಡುತ್ತಿದ್ದಾರೆ.

Kannada Amar Movie

ತನ್ನ ಮೊದಲ ಸಿನೆಮಾಗೆ ಅಭಿಷೇಕ್ ದೊಡ್ಡ ಮೊತ್ತದ ಸಂಭಾವನೆ ತೆಗೆದುಕೊಂಡಿದ್ದಾರೆ ಅನ್ನುವ ಸುದ್ದಿ ಹೊರಗೆ ಬಿದ್ದಿದೆ. ಅಮರ್ ಚಿತ್ರಕ್ಕಾಗಿ ಅಭಿಷೇಕ್ ಒಂದು ಕೋಟಿ ಸಂಭಾವನೆಯನ್ನ ಪಡೆಯುತ್ತಿದ್ದಾರಂತೆ, ಈ ವಿಚಾರ ಆಪ್ತ ವಯಲದಲ್ಲಿ ಹರಿದಾಡುತ್ತಿದ್ದು ತುಂಬಾ ಅಚ್ಚರಿದಾಯಕವಾಗಿದೆ.

ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದರೆ ತನ್ನ ಮೊದಲ ಚಿತ್ರಕ್ಕೆ ಕನ್ನಡ ಸಿನಿಮಾ ರಂಗದಲ್ಲಿ ಕನ್ನಡದ ನಟನೊಬ್ಬ ತುಂಬಾ ಅಧಿಕ ಮೊತ್ತದ ಸಂಭಾವನೆ ಪಡೆದಂತಾಗುತ್ತದೆ.

Kannada Amar Movie

ಇನ್ನು ಈ ಚಿತ್ರದಲ್ಲಿ ಅಭಿಷೇಕ್ ಬೈಕ್ ರೇಸರ್ ಪಾತ್ರದಲ್ಲಿ ಅಭಿನಯ ಮಾಡುತ್ತಿದ್ದು ಅವರಿಗೆ ತಾನ್ಯಾ ಹೋಪ್ ನಾಯಕಿಯಾಗಿ ನಟನೆ ಮಾಡುತ್ತಿದ್ದಾರೆ. ಇನ್ನು ಉಳಿದಂತೆ ಸಂದೇಶ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಪಕ ಸಂದೇಶ್ ನಾಗರಾಜ್ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಗೀತ ಸಂಯೋಜನೆ ಮಾಡುತ್ತಿದ್ದು ಸತ್ಯಾ ಹೆಗ್ಡೆ ಅವರ ಕ್ಯಾಮೆರಾ ಕೈಚಳಕ ಇರಲಿದೆ.

ಸ್ನೇಹಿತರೆ ನಮ್ಮ ಕಲಿಯುಗದ ಕರ್ಣ ಅಂಬಿಯನ್ನ ಕಳೆದುಕೊಂಡಿರುವ ನೆನಪಿನಲ್ಲಿ ಇರುವ ಅಭಿಮಾನಿಗಳ ಮನಸ್ಸಿಗೆ ಮಗ ಅಭಿಷೇಕ್ ಈ ಚಿತ್ರದ ಖುಷಿ ಪಡಿಸುತ್ತಾರಾ ಅನ್ನುವುದನ್ನ ನಾವು ಕಾದು ನೋಡಬೇಕಾಗಿದೆ, ಸ್ನೇಹಿತರೆ ಈ ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Kannada Amar Movie

Please follow and like us:
0
http://karnatakatoday.in/wp-content/uploads/2018/12/Kannada-Movie-Amar-1024x576.jpghttp://karnatakatoday.in/wp-content/uploads/2018/12/Kannada-Movie-Amar-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಅಂಬರೀಷ್ ಪುತ್ರ ಅಭಿಷೇಕ್ ಮೊದಲ ಬಾರಿ ನಾಯಕ ನಟರಾಗಿರೋ ಅಮರ್ ಚಿತ್ರದ ಮೇಲೆ ಒಂದಷ್ಟು ನಿರೀಕ್ಷೆಗಳು ಮನೆ ಮಾಡುತ್ತಿದೆ, ಕನ್ನಡ ಚಿತ್ರರಂಗದಲ್ಲಿ ಯಶಸ್ವೀ ನಿರ್ದೇಶಕ ಎಂದು ಹೆಸರುವಾಸಿಯಾಗಿರುವ ನಾಗಶೇಖರ್ ಬಿಡುವಿಲ್ಲದೆ ಚಿತ್ರೀಕರಣ ಮಾಡುತ್ತಿದ್ದಾರೆ. ರೆಬಲ್ ಸ್ಟಾರ್ ಅಂಬರೀಷ್ ಪುತ್ರನ ಮೊದಲ ಚಿತ್ರ ಇದಾಗಿರುವುದರಿಂದ ಚಿತ್ರದ ಮೇಲೆ ಒಂದು ರೀತಿಯ ನಿರೀಕ್ಷೆ ಹುಟ್ಟಿಕೊಂಡಿದೆ. ಇದೀಗ ಚಿತ್ರಕ್ಕೆ ಸಂಬಂಧ ಸುದ್ದಿಯೊಂದು ಹೊರಗೆ ಬಿದ್ದಿದ್ದು ಅದನ್ನ ಕೇಳಿದ ಪ್ರತಿಯೊಬ್ಬರೂ ಅಚ್ಚರಿ ಪಡುತ್ತಿದ್ದಾರೆ. ತನ್ನ ಮೊದಲ ಸಿನೆಮಾಗೆ...Kannada News