Actress Annapurna Daughter

ದಕ್ಷಿಣ ಭಾರತದಲ್ಲಿ ತಾಯಿ ಪಾತ್ರ ಎಂದ ತಕ್ಷಣ ಪ್ರತಿಯೊಬ್ಬರ ಮುಂದೆ ಕಾಣುವುದು ನಟಿ ಅನ್ನಪೂರ್ಣಮ್ಮ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ಈ ನಟಿ ಸುಮಾರು 700 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಆದರೆ ಈಗ ತನ್ನ ಕರುಳಿನ ಕುಡಿಯನ್ನ ಕಳೆದುಕೊಂಡು ಅನಾಥರಾಗಿದ್ದಾರೆ.

ಅನ್ನಪೂರ್ಣಮ್ಮ ತಾಯಿ ಪಾತ್ರಕ್ಕೆ ಹೇಳಿ ಮಾಡಿಸಿದ ನಟಿ, ಇವರಿಗೆ ಕೀರ್ತಿ ಅನ್ನೋ ಮುದ್ದಾದ ಮಗಳು ಇದ್ದಳು, 3 ವರ್ಷದ ಹಿಂದೆ ಕೀರ್ತಿಯನ್ನ ಕರ್ನಾಟಕದ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದರು.

Actress Annapurna Daughter

ಕೀರ್ತಿ ಗೆ ಒಂದು ವರ್ಷದ ಮುದ್ದಾದ ಮಗ ಕೂಡ ಇದ್ದಾನೆ, ಎಲ್ಲಾ ಹಯಾಗೆ ಇತ್ತು, ಮಗಳಿಗೆ ಮದುವೆಯಾಗಿ ಮಗು ಹುಟ್ಟಿದ ನಂತರ ಅನ್ನಪೂರ್ಣ ತುಂಬಾ ಸಂತೋಷವಾಗಿದ್ದರು, ಆದರೆ ಆ ಸಂತಸ ತುಂಬಾ ದಿನ ಇರಲಿಲ್ಲ.

ಕೆಲವು ದಿನಗಳ ನಂತರ ಮಗಳು ಕೀರ್ತಿ ನಿದ್ರೆ ಬಾರದ ಕಾಯಿಲೆಗೆ ತುತ್ತಾದರು, ಕಾಲ ಕಳೆದಂತೆ ಈ ಖಾಯಿಲೆ ತೀವ್ರತೆ ಪಡೆದುಕೊಂಡಿತು, ಮಗಳ ಕಾಯಿಲೆಯನ್ನ ವಾಸಿ ಮಾಡಲು ತುಂಬಾ ಹಣವನ್ನ ಖರ್ಚು ಮಾಡಿದರು ಅನ್ನಪೂರ್ಣ ಆದರೂ ಫಲ ಇಲ್ಲ.

Actress Annapurna Daughter

ನನಗ್ಯಾಕೆ ಸುಮ್ಮನೆ ಟೈಮ್ ವೆಸ್ಟ್ ಮಾಡುತ್ತೀಯಾ ಅಮ್ಮ ಎಂದು ಕೀರ್ತಿ ಹೇಳುತ್ತಿದ್ದರು, ಕಾಯಿಲೆಯಿಂದ ಬೇಸೆತ್ತ ಕೀರ್ತಿ ಖಿನ್ನತೆಗೆ ಒಳಗಾಗಿ ನಿನ್ನೆ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಸುಮಾರು 300 ಚಿತ್ರಗಳಲ್ಲಿ ತಾಯಿ ಪಾತ್ರ ಮಾಡಿರುವ ಅನ್ನಪೂರ್ಣ ಗೆ ಅಮ್ಮ ಅನ್ನೋ ಮಗಳೇ ಇಲ್ಲದಂತಾಗಿದೆ, ಬೆಳೆದು ನಿಂತ ಮಗು ಕಣ್ಣಮುಂದೆ ಸಾವನ್ನಪ್ಪಿದರೆ ಆ ನೋವನ್ನ ಭರಿಸುವ ಶಕ್ತಿ ಯಾವ ತಾಯಿಗೂ ಇರುವುದಿಲ್ಲ.

Actress Annapurna Daughter

Please follow and like us:
0
http://karnatakatoday.in/wp-content/uploads/2018/07/ga-1024x576.jpghttp://karnatakatoday.in/wp-content/uploads/2018/07/ga-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರನಗರಸುದ್ದಿಜಾಲದಕ್ಷಿಣ ಭಾರತದಲ್ಲಿ ತಾಯಿ ಪಾತ್ರ ಎಂದ ತಕ್ಷಣ ಪ್ರತಿಯೊಬ್ಬರ ಮುಂದೆ ಕಾಣುವುದು ನಟಿ ಅನ್ನಪೂರ್ಣಮ್ಮ, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟಿಸಿರುವ ಈ ನಟಿ ಸುಮಾರು 700 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಆದರೆ ಈಗ ತನ್ನ ಕರುಳಿನ ಕುಡಿಯನ್ನ ಕಳೆದುಕೊಂಡು ಅನಾಥರಾಗಿದ್ದಾರೆ. ಅನ್ನಪೂರ್ಣಮ್ಮ ತಾಯಿ ಪಾತ್ರಕ್ಕೆ ಹೇಳಿ ಮಾಡಿಸಿದ ನಟಿ, ಇವರಿಗೆ ಕೀರ್ತಿ ಅನ್ನೋ ಮುದ್ದಾದ ಮಗಳು ಇದ್ದಳು, 3 ವರ್ಷದ ಹಿಂದೆ ಕೀರ್ತಿಯನ್ನ ಕರ್ನಾಟಕದ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದರು. ಕೀರ್ತಿ...Kannada News