ಜೀವನ ಅಂದರೇನೇ ಹಾಗೆ ಸ್ನೇಹಿತರೆ ಬಡ ಶ್ರೀಮಂತನಾಗಬಹುದು ಮತ್ತು ಶ್ರೀಮಂತ ಬಡವನಾಗಬಹುದು, ಅದೃಷ್ಟ ಅನ್ನುವುದು ಕೆಲವು ಸಮಯದಲ್ಲಿ ನಮ್ಮ ಕೈ ಹಿಡಿದರೆ ಇನ್ನು ಕೆಲವು ಸಮಯದಲ್ಲಿ ನಮ್ಮ ಕಾಲನ್ನ ಎಳೆಯುತ್ತದೆ ಅನ್ನಬಹುದು. ಜೀವನ ಅನ್ನುವ ಸಾಗರದಲ್ಲಿ ಅನೇಕ ಸುಖ ಮತ್ತು ಕಷ್ಟಗಳು ಇದ್ದೆ ಇರುತ್ತದೆ ಮತ್ತು ನಾವು ಅದನ್ನ ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು ಅಷ್ಟೇ, ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ ನಟಿ ಈಗ ಒಂದು ಶಾಲೆಯಲ್ಲಿ ಟಾಪ್ ನಟಿಯಾಗಿ ಕೆಲಸ ಮಾಡುತ್ತಿದ್ದಾರೆ ಅಂದರೆ ನಿಮಗೆ ನಂಬಲು ಸಾಧ್ಯವಾಗದೆ ಇರಬಹುದು, ಆದರೂ ಕೂಡ ನೀವು ನಂಬಲೇಬೇಕು. ಹಾಗಾದರೆ ಆ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಕನ್ನಡ ಖ್ಯಾತ ನಟ ವಿಷ್ಣುವರ್ಧನ್ ಮತ್ತು ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿ ಕನ್ನಡ ಚಿತ್ರರಂಗದಲ್ಲಿ ನಕ್ಷತ್ರದಂತೆ ಮಿಂಚಿ ಕನ್ನಡಿಗರ ಮನಗೆದ್ದ ತಾರೆ ಅಂದರೆ ಅದೂ ನಟಿ ದೇವಯಾನಿ. ದೇವಯಾನಿ ಅವರು ತುಂಬಾ ಒಳ್ಳೆಯ ಅದ್ಬುತ ನಟಿಯಾಗಿದ್ದರು ಮತ್ತು ಸಿನಿಮಾಗಳಲ್ಲಿ ನಟನೆ ಮಾಡುವಾಗ ನಿರ್ದೇಶಕ ರಾಜಕುಮಾರನ್ ಅವರನ್ನ ಪ್ರೀತಿ ಮಾಡಿದ ನಟಿ ದೇವಯಾನಿ ಮನೆಯವರನ್ನ ಎದುರು ಹಾಕಿಕೊಂಡು ನಿರ್ದೇಶಕ ರಾಜಕುಮಾರನ್ ಅವರನ್ನ ಮದುವೆ ಮಾಡಿಕೊಂಡರು. ಇನ್ನು ಕೆಲವು ಸಮಯದ ನಂತರ ದೇವಯಾನಿಗೆ ಇಬ್ಬರು ಮಕ್ಕಳು ಹುಟ್ಟಿದರು ಮತ್ತು ದಿನಗಳು ಉರುಳಿದಂತೆ ದೇವಯಾನಿ ಅವರಿಗೆ ಅವಕಾಶಗಳು ಕಡಿಮೆ ಆಗುತ್ತಾ ಬಂದವು ಮತ್ತು ಇನ್ನೊಂದು ಗಂಡ ನಿರ್ದೇಶನ ಮಾಡಿದ ಹೆಚ್ಚಿನ ಚಿತ್ರಗಳು ಅಷ್ಟಾಗಿ ಓಡಲಿಲ್ಲ.

Actress Devayani

ಚಿತ್ರಗಳು ಫ್ಲಾಪ್ ಆದಕಾರಣ ಗಂಡ ಕೆಲಸವಿಲ್ಲದೇ ಮನೆಯಲ್ಲಿ ಇರಬೇಕಾಯಿತು ಮತ್ತು ದೇವಯಾನಿಗೂ ಅವಕಾಶಗಳು ಬರಲಿಲ್ಲ, ಮನೆಯವರ ವಿರುದ್ಧವಾಗಿ ಮದುವೆಯಾದ ದೇವಯಾನಿಗೆ ಕುಟುಂಬದವರ ಕಡೆಯಿಂದ ಯಾವುದೇ ರೀತಿಯ ಸಹಕಾರ ಸಿಗಲಿಲ್ಲ. ಸ್ಟಾರ್ ನಟಿಯಾಗಿದ್ದ ನನ್ನ ಜೀವನ ಹೀಗೆ ಆಗಲು ಕಾರಣ ನೀವೇ ಎಂದು ಗಂಡನನ್ನ ದೋಷಿಸಬಹುದಾಗಿತ್ತು ದೇವಯಾನಿಯವರು, ಆದರೆ ಅಂತಹ ಆಲೋಚನೆ ಮಾಡದ ನಟಿ ದೇವಯಾನಿ ಗಂಡನ ಬೆನ್ನೆಲುಬಾಗಿ ನಿಂತರು. ಅವರಿವರ ಕೈ ಹಿಡಿದು ಅವಕಾಶವನ್ನ ಪಡೆಯುವ ಜಾಯಮಾನ ದೇವಯಾನಿ ಅವರದ್ದು ಅಲ್ಲ, ಕೊನೆಗೆ ವಿಧಿ ಇಲ್ಲದ ಮನೆ ಮತ್ತು ಮಕ್ಕಳ ಜವಾಬ್ದಾರಿಯನ್ನ ಹೊತ್ತ ದೇವಯಾನಿ ಅವರು ಒಂದು ಖಾಸಗಿ ಸ್ಕೂಲ್ ನಲ್ಲಿ ಟೀಚರ್ ಆಗಿ ಕೆಲಸಕ್ಕೆ ಸೇರಿಕೊಂಡರು.

ನಾಲ್ಕನೇ ತರಗತಿಯ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿರುವ ದೇವಯಾನಿಯವರು ಬರುವ ಸಂಬಳದಲ್ಲಿ ಹಾಯಾಗಿ ಜೀವನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ, ಅವಕಾಶ ಸಿಗಲಿಲ್ಲ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿ ಜೀವನ ನಾಶ ಮಾಡಿಕೊಂಡ ಅದೆಷ್ಟೋ ಸ್ಟಾರ್ ನಟಿಯರಿಗೆ ನಟಿ ದೇವಯಾನಿ ಮಾದರಿಯಾಗಿ ನಿಂತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಚಿತ್ರರಂಗ ಯಾವಾಗ ಬೇಕಾದರೂ ಕೈ ಕೊಡಬಹುದು ಆದರೆ ಕಲಿತ ವಿದ್ಯೆ ಯಾವತ್ತೂ ಕೈ ಕೊಡಲ್ಲ ಅನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ ಎಂದು ಹೇಳಿದರೆ ತಪ್ಪಾಗಲ್ಲ, ಸ್ನೇಹಿತರೆ ನಟಿ ದೇವಯಾನಿ ಅವರ ಈ ದೃಢ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Actress Devayani

Please follow and like us:
error0
http://karnatakatoday.in/wp-content/uploads/2020/03/Actress-Deyavani-1024x576.jpghttp://karnatakatoday.in/wp-content/uploads/2020/03/Actress-Deyavani-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಲೈಫ್ ಸ್ಟೈಲ್ಸುದ್ದಿಜಾಲಜೀವನ ಅಂದರೇನೇ ಹಾಗೆ ಸ್ನೇಹಿತರೆ ಬಡ ಶ್ರೀಮಂತನಾಗಬಹುದು ಮತ್ತು ಶ್ರೀಮಂತ ಬಡವನಾಗಬಹುದು, ಅದೃಷ್ಟ ಅನ್ನುವುದು ಕೆಲವು ಸಮಯದಲ್ಲಿ ನಮ್ಮ ಕೈ ಹಿಡಿದರೆ ಇನ್ನು ಕೆಲವು ಸಮಯದಲ್ಲಿ ನಮ್ಮ ಕಾಲನ್ನ ಎಳೆಯುತ್ತದೆ ಅನ್ನಬಹುದು. ಜೀವನ ಅನ್ನುವ ಸಾಗರದಲ್ಲಿ ಅನೇಕ ಸುಖ ಮತ್ತು ಕಷ್ಟಗಳು ಇದ್ದೆ ಇರುತ್ತದೆ ಮತ್ತು ನಾವು ಅದನ್ನ ಸರಿಯಾಗಿ ನಿಭಾಯಿಸಿಕೊಂಡು ಹೋಗಬೇಕು ಅಷ್ಟೇ, ಒಂದು ಕಾಲದಲ್ಲಿ ಟಾಪ್ ನಟಿಯಾಗಿ ಮಿಂಚಿದ ನಟಿ ಈಗ ಒಂದು ಶಾಲೆಯಲ್ಲಿ ಟಾಪ್...Film | Devotional | Cricket | Health | India