Actress LV Sharada

ಯಾಕೋ ಕನ್ನಡ ಚಿತ್ರರಂಗದ ಮತ್ತು ಕರ್ನಾಟಕದ ಟೈಮ್ ಸರಿ ಇಲ್ಲ ಅಂತ ಕಾಣುತ್ತದೆ, ಕನ್ನಡ ಚಿತ್ರರಂಗದ ಗಣ್ಯ ನಟ ಮತ್ತು ನಟಿಯರು ಒಬ್ಬರಾದ ಮೇಲೆ ಒಬ್ಬರು ಇಹಲೋಕವನ್ನ ತ್ಯಜಿಸುತ್ತಿದ್ದಾರೆ.

ನಮ್ಮ ರೆಬಲ್ ಸ್ಟಾರ್ ಅಂಬರೀಷ್ ಅವರ ಸಾವಿನ ನೋವನ್ನ ಅರಗಿಸಿಕೊಳ್ಳುವ ಮೊದಲ ಇನ್ನೊಬ್ಬ ಕನ್ನಡದ ಹಿರಿಯ ನಟಿ ಇಹಲೋಕವನ್ನ ತ್ಯಜಿಸಿದ್ದಾರೆ. ಹಾಗಾದರೆ ಆ ಕನ್ನಡದ ಹಿರಿಯ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡೋಣ.

Actress LV Sharada

ಅನಾರೋಗ್ಯದ ಕಾರಣದಿಂದ ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕನ್ನಡದ ಖ್ಯಾತ ನಟಿ L V ಶಾರದಾ ನಿನ್ನೆ ನಿಧನರಾಗಿದ್ದಾರೆ, ಜಯನಗರದ ಅವರ ಮನೆಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆಯನ್ನ ಮಾಡಲಾಯಿತು.

ನಿನ್ನೆ ಸಾಯಂಕಾಲ ನಟಿ ಶಾರದಾ ಅವರ ಅಂತ್ಯ ಸಂಸ್ಕಾರ ನಡೆದಿದೆ, ಶಾರದಾ ಅವರು ಕನ್ನಡದ ಸೂಪರ್ ಹಿಟ್ ಚಿತ್ರಗಳಾದ ವಂಶವೃಕ್ಷ, ಫಣಿಯಮ್ಮ, ಭೂತಯ್ಯನ ಮಗ ಅಯ್ಯು, ಮೈತ್ರಿ, ವಾತ್ಸಲ್ಯ ಪಾಠ, ಆದಿ ಶಂಕರಾಚಾರ್ಯ ಹೀಗೆ ಹತ್ತಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟನೆಯನ್ನ ಮಾಡಿದ್ದಾರೆ.

Actress LV Sharada

ವಂಶವೃಕ್ಷ ಮತ್ತು ವಾತ್ಸಲ್ಯ ಪಾಠ ಚಿತ್ರಗಳಿಗೆ ಎರಡು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನ ಗಳಿಸಿರುವ ಅಪರೂಪದ ಕಲಾವಿದೆ ನಟಿ L V ಶಾರದಾ ಅವರು. ಕನ್ನಡದ ಈ ಹೆಸರಾಂತ ನಟಿ ನಿನ್ನೆ ಇಹಲೋಕವನ್ನ ತ್ಯಜಿಸಿರುವುದು ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಆಗಿದೆ.

ಒಬ್ಬ ಹಿರಿಯ ಕಲಾವಿದೆಯನ್ನ ಕಳೆದುಕೊಂಡು ನಮ್ಮ ಕನ್ನಡ ಚಿತ್ರರಂಗ ಅನಾಥವಾಗಿದೆ ಅಂತ ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಈ ನಟಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ಮತ್ತು ಈ ಹಿರಿಯ ನಟಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Actress LV Sharada

Please follow and like us:
0
http://karnatakatoday.in/wp-content/uploads/2019/03/Actress-LV-Sharada-1-1024x576.jpghttp://karnatakatoday.in/wp-content/uploads/2019/03/Actress-LV-Sharada-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಯಾಕೋ ಕನ್ನಡ ಚಿತ್ರರಂಗದ ಮತ್ತು ಕರ್ನಾಟಕದ ಟೈಮ್ ಸರಿ ಇಲ್ಲ ಅಂತ ಕಾಣುತ್ತದೆ, ಕನ್ನಡ ಚಿತ್ರರಂಗದ ಗಣ್ಯ ನಟ ಮತ್ತು ನಟಿಯರು ಒಬ್ಬರಾದ ಮೇಲೆ ಒಬ್ಬರು ಇಹಲೋಕವನ್ನ ತ್ಯಜಿಸುತ್ತಿದ್ದಾರೆ. ನಮ್ಮ ರೆಬಲ್ ಸ್ಟಾರ್ ಅಂಬರೀಷ್ ಅವರ ಸಾವಿನ ನೋವನ್ನ ಅರಗಿಸಿಕೊಳ್ಳುವ ಮೊದಲ ಇನ್ನೊಬ್ಬ ಕನ್ನಡದ ಹಿರಿಯ ನಟಿ ಇಹಲೋಕವನ್ನ ತ್ಯಜಿಸಿದ್ದಾರೆ. ಹಾಗಾದರೆ ಆ ಕನ್ನಡದ ಹಿರಿಯ ನಟಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ...Kannada News