ದಕ್ಷಿಣ ಭಾರತದ ಸಿನಿಮಾ ಜಗತ್ತಿನಲ್ಲಿ ತನ್ನ ಸಹಜ ಅಭಿನಯದ ಮೂಲಕ ಪ್ರೇಕ್ಷಕರನ್ನ ತನ್ನತ್ತ ಸೆಳೆದ ಮೋಹಕ ನಟಿ ಅಂದರೆ ಅದೂ ಮೀನಾ ಎಂದು ಹೇಳಿದರೆ ತಪ್ಪಾಗಲ್ಲ. ಸೆಪ್ಟೆಂಬರ್ 16 1976 ರಲ್ಲಿ ತಮಿಳುನಾಡಿನ ಚನೈ ನಲ್ಲಿ ಜನಿಸಿದ ನಟಿ ಮೀನಾ ತಮಿಳಿನ ಒಂದು ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು ನಟಿ ಮೀನಾ ಅವರು. ಇನ್ನು ತಮಿಳು ಮತ್ತು ಮಲಯಾಳಂ ನ ಹಲವು ಚಿತ್ರದಲ್ಲಿ ನಟಿ ಮೀನಾ ಬಾಲನಟಿಯಾಗಿ ನಟನೆಯನ್ನ ಮಾಡಿದರು, ಇನ್ನು ವರ್ಷಗಳು ಉರುಳಿದಂತೆ ನಾಯಕಿಯಾಗಿ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ನಟನೆ ಮಾಡಿದ ನಟಿ ಮೀನಾ ದಕ್ಷಿಣ ಭಾರತ ಶ್ರೇಷ್ಠ ನಟಿಯಾಗಿ ಹೊರಹೊಮ್ಮಿದರು.

ಮೀನಾ ಅವರು 8 ನೇ ತರಗತಿಯನ್ನ ಓದುತ್ತಿದ್ದಾಗಲೇ ಶಾಲೆಗೆ ವಿಧಾಯ ಹೇಳಿ ಚಿತ್ರಗಳಲ್ಲಿ ನಟನೆ ಮಾಡಲು ಆರಂಭ ಮಾಡಿದರು, ಹೀಗೆ ಕೆಲವು ಸಮಯದ ನಂತರ ಅವಕಾಶಗಳು ಕಡಿಮೆ ಆದಾಗ ಹತ್ತನೇ ತರಗತಿ ಪರೀಕ್ಷೆಯನ್ನ ಬರೆದು ಮತ್ತೆ ಚಿತ್ರರಂಗನಕ್ಕೇ ಬಂದು ಫೇಮಸ್ ಆದರೂ ನಟಿ ಮೀನಾ. ಇನ್ನು ರವಿಚಂದ್ರನ್ ಅವರ ಪುಟ್ನಂಜ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಮೀನಾ ನಂತರ ರವಿಚಂದ್ರನ್ ಅವರ ಜೊತೆಯಲ್ಲಿ ಚಲುವ, ಮೊಮ್ಮಗ ಚಿತ್ರದಲ್ಲಿ ನಟನೆ ಮಾಡಿದರು.

Actress meena

ಇನ್ನು ಸಾಹಸಿಂಹ ವಿಷ್ಣುವರ್ಧನ್ ಅವರ ಜೊತೆಯಲ್ಲಿ ಸಿಂಹಾದ್ರಿಯ ಸಿಂಹ, ಕಿಚ್ಚ ಸುದೀಪ್ ಅವರ ಸ್ವಾತಿಮುತ್ತು ಮತ್ತು ಮೈ ಆಟೋಗ್ರಾಫ್ ಚಿತ್ರಗಳಲ್ಲಿ ನಾಯಕಿಯಾಗಿ ನಟನೆ ಮಾಡಿದರು ಕನ್ನಡಿಗರ ಮನದಲ್ಲಿ ಸ್ಥಾನವನ್ನ ಗಿಟ್ಟಿಸಿಕೊಂಡರು ನಟಿ ಮೀನಾ. ಹಾಗಾದರೆ ಇಷ್ಟು ಫೇಮಸ್ ಆದ ನಟಿ ಮೀನಾ ಈಗ ಎಲ್ಲಿದ್ದಾರೆ ಅನ್ನುವುದರ ಬಗ್ಗೆ ಹಲವು ಜನರಿಗೆ ಇನ್ನು ತಿಳಿದಿಲ್ಲ, ಹಾಗಾದರೆ ನಟಿ ಮೀನಾ ಈಗ ಎಲ್ಲಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು 2009 ಉದ್ಯಮಿ ವಿದ್ಯಾಸಾಗರ್ ಅನ್ನುವವರನ್ನ ಮದುವೆಯಾದ ನಟಿ ಮೀನಾ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಮಗು ಇದ್ದಕಾರಣ ನಟಿ ಮೀನಾ ನಟನೆಯತ್ತ ಮುಖಮಾಡಲಿಲ್ಲ. ಮಗು ಮತ್ತು ಗಂಡನ ಬಗ್ಗೆ ಹೆಚ್ಚು ಒಲವು ತೋರುವ ಮೀನಾ ಗಂಡ ಮತ್ತು ಮಗಳೇ ನನ್ನ ಪ್ರಪಂಚ ಎಂದು ಬದುಕುತ್ತಿದ್ದು ಸಂಸಾರದಲ್ಲಿ ಸುಖ ಕಾಣುತ್ತಿದ್ದಾರೆ. ಇನ್ನು ಮಗಳ ಭವಿಷ್ಯದ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುವ ಮೀನಾ ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡುವುದರ ಜೊತೆಗೆ ನಟನೆಯನ್ನ ಕೂಡ ಕಲಿಸಿಕೊಡುತ್ತಿದ್ದಾರೆ. ಇನ್ನು ಮೀನಾ ಅವರು ಬೇಬಿ ಮೈನಿಕಾ ತಮಿಳು ನಟ ವಿಜಯ್ ಅವರ ತೇರಿ ಅನ್ನುವ ಚಿತ್ರದಲ್ಲಿ ನಟನೆಯನ್ನ ಮಾಡಿದ್ದಾರೆ, ಸ್ನೇಹಿತರೆ ನಟಿ ಮೀನಾ ಅವರ ನಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ತಿಳಿಸಿ.

Actress meena

Please follow and like us:
error0
http://karnatakatoday.in/wp-content/uploads/2020/04/Actress-meena-1024x576.jpghttp://karnatakatoday.in/wp-content/uploads/2020/04/Actress-meena-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲದಕ್ಷಿಣ ಭಾರತದ ಸಿನಿಮಾ ಜಗತ್ತಿನಲ್ಲಿ ತನ್ನ ಸಹಜ ಅಭಿನಯದ ಮೂಲಕ ಪ್ರೇಕ್ಷಕರನ್ನ ತನ್ನತ್ತ ಸೆಳೆದ ಮೋಹಕ ನಟಿ ಅಂದರೆ ಅದೂ ಮೀನಾ ಎಂದು ಹೇಳಿದರೆ ತಪ್ಪಾಗಲ್ಲ. ಸೆಪ್ಟೆಂಬರ್ 16 1976 ರಲ್ಲಿ ತಮಿಳುನಾಡಿನ ಚನೈ ನಲ್ಲಿ ಜನಿಸಿದ ನಟಿ ಮೀನಾ ತಮಿಳಿನ ಒಂದು ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು ನಟಿ ಮೀನಾ ಅವರು. ಇನ್ನು ತಮಿಳು ಮತ್ತು ಮಲಯಾಳಂ ನ ಹಲವು ಚಿತ್ರದಲ್ಲಿ ನಟಿ ಮೀನಾ ಬಾಲನಟಿಯಾಗಿ ನಟನೆಯನ್ನ...Film | Devotional | Cricket | Health | India