Actress Navin Chandar

ಕನ್ನಡ ಚಿತ್ರರಂಗದ ಟೈಮ್ ಯಾಕೋ ಇತ್ತೀಚಿಗೆ ಸರಿ ಇಲ್ಲ ಅಂತ ಕಾಣುತ್ತದೆ, ನಮ್ಮ ರೆಬಲ್ ಸ್ಟಾರ್ ಅಂಬರೀಷ್ ಅವರ ಸಾವಿನ ನೋವನ್ನ ಮರೆಯುವ ಮುಂಚೇನೆ ಹಲವು ಗಣ್ಯ ನಟರು ಇಹಲೋಕವನ್ನ ತ್ಯಜಿಸುತ್ತಿದ್ದಾರೆ.

ಇನ್ನು ಮೊನ್ನೆ ಅಷ್ಟೇ L .V ಶಾರದಾ ಮತ್ತು ಮಾಲತಿ ಸಾಗರ್ ಅವರು ಇಹಲೋಕವನ್ನ ತ್ಯಜಿಸಿದ್ದು ನಿಮಗೆಲ್ಲ ಗೊತ್ತೇ ಇದೆ, ಈಗ ಮತ್ತೊಬ್ಬ ಕನ್ನಡದ ನಟ ಇಹಲೋಕವನ್ನ ತ್ಯಜಿಸಿದ್ದಾರೆ.

ಹಾಗಾದರೆ ಆ ಕನ್ನಡದ ನಟ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ನಟನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Actress Navin Chandar

ನಟ ಅಂಬರೀಷ್ ಅವರ ಜೊತೆ ಸಹ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ನಂತರ ನಾಯಕ ನಟನಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದ ಕನ್ನಡದ ಖ್ಯಾತ ನಟ ಇಹಲೋಕವನ್ನ ತ್ಯಜಿಸಿದ್ದಾರೆ.

ಅಂಬರೀಷ್ ಅವರು ಹೀರೋ ಆಗಿ ನಟನೆ ಮಾಡಿದ್ದ ‘ಕಾಲಚಕ್ರ’ ಚಿತ್ರದಲ್ಲಿ ಸಹ ನಟನಾಗಿ ಎಂಟ್ರಿ ಕೊಟ್ಟು ನಂತರ ನಾಯಕನಾಗಿ ನಟನೆ ಮಾಡಿದವರು ನವೀನ್ ಚಂದರ್, ಪ್ರಿಯ ಓ ಪ್ರಿಯಾ, ಪೂಜಾ, ಶೃತಿ ಸೇರಿದಂತೆ ಹಲವಾರು ಹಿಟ್ ಚಿತ್ರಗಳನ್ನ ಕೊಟ್ಟಿರುವ ನಟ ನವೀನ್ ಚಂದರ್ ನಿಧನರಾಗಿದ್ದಾರೆ.

Actress Navin Chandar

ಮೂಲತಃ ಮಂಡ್ಯ ಜಿಲ್ಲೆಯವರಾದ ನಟ ನವೀನ್ ಚಂದರ್ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಕಾರಣ ಅವರನ್ನ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ನಟನೆ ಜೊತೆ ಬಿಸಿನೆಸ್ ಕೂಡ ಮಾಡುತ್ತಿದ್ದ ನಟ ನವೀನ್ ಚಂದರ್ ಬೆಂಗಳೂರಿನಲ್ಲಿ ಹಲವು ಚಿತ್ರಮಂದಿರಗಳನ್ನ ಹೊಂದಿದ್ದಾರೆ, ನಟನೆ ಮಾತ್ರ ಅಲ್ಲದೆ ತಮ್ಮ ಚಿತ್ರಮಂದಿರಗಳ ಮೂಲಕ ಕನ್ನಡ ಚಿತ್ರಗಳಿಗೆ ಆಶ್ರಯ ಕೊಟ್ಟಿದ್ದ ನಟ ನವೀನ್ ಚಂದರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Actress Navin Chandar

Please follow and like us:
0
http://karnatakatoday.in/wp-content/uploads/2019/04/Actress-Navin-Chandar-1024x576.jpghttp://karnatakatoday.in/wp-content/uploads/2019/04/Actress-Navin-Chandar-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡ ಚಿತ್ರರಂಗದ ಟೈಮ್ ಯಾಕೋ ಇತ್ತೀಚಿಗೆ ಸರಿ ಇಲ್ಲ ಅಂತ ಕಾಣುತ್ತದೆ, ನಮ್ಮ ರೆಬಲ್ ಸ್ಟಾರ್ ಅಂಬರೀಷ್ ಅವರ ಸಾವಿನ ನೋವನ್ನ ಮರೆಯುವ ಮುಂಚೇನೆ ಹಲವು ಗಣ್ಯ ನಟರು ಇಹಲೋಕವನ್ನ ತ್ಯಜಿಸುತ್ತಿದ್ದಾರೆ. ಇನ್ನು ಮೊನ್ನೆ ಅಷ್ಟೇ L .V ಶಾರದಾ ಮತ್ತು ಮಾಲತಿ ಸಾಗರ್ ಅವರು ಇಹಲೋಕವನ್ನ ತ್ಯಜಿಸಿದ್ದು ನಿಮಗೆಲ್ಲ ಗೊತ್ತೇ ಇದೆ, ಈಗ ಮತ್ತೊಬ್ಬ ಕನ್ನಡದ ನಟ ಇಹಲೋಕವನ್ನ ತ್ಯಜಿಸಿದ್ದಾರೆ. ಹಾಗಾದರೆ ಆ ಕನ್ನಡದ ನಟ ಯಾರು ಅನ್ನುವುದರ ಬಗ್ಗೆ...Kannada News