actress srividya and husband georje thamas

ಸೆಂಟಿಮೆಂಟ್ ಸನ್ನಿವೇಶಗಳಲ್ಲಿ ಮನಸ್ಸಿಗೆ ನಾಟುವಂತೆ ಅಭಿನಯ ಮಾಡುತ್ತಿದ್ದ ನಟಿ ಶ್ರೀವಿದ್ಯಾ, ಕನ್ನಡ ಚಿತ್ರಗಳನ್ನ ಸೇರಿ ದಕ್ಷಿಣ ಭಾರತದ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಆದರೆ ಇವರ ವೈವಾಹಿಕ ಜೀವನ ಮಾತ್ರ ಹೇಳತೀರದ್ದಾಗಿದೆ, ಕಮಲ್ ಹಸ್ಸನ್ ಮತ್ತು ಶ್ರೀವಿದ್ಯಾ ತುಂಬಾ ಘಾಡವಾಗಿ ಪ್ರೀತಿ ಮಾಡುತ್ತಿದ್ದರು, ಮದುವೆಯಾಗುವ ಹಂತಕ್ಕೆ ಹೋಗಿತ್ತು ಇವರಿಬ್ಬರ ಪ್ರೀತಿ.

actress srividya and husband georje thamas

ಆದರೆ ಕೊನೆಯ ಕ್ಷಣದಲ್ಲಿ ಶ್ರೀವಿದ್ಯಾ ಅವರಿಗೆ ಕಮಲ್ ಹಸ್ಸನ್ ಅವರು ಕೈ ಕೊಟ್ಟರು, ನಂತರ ತನ್ನ ಚಿತ್ರಕ್ಕೆ ಅಸ್ಸಿಸ್ಟನ್ಟ್ ಡೈರೆಕ್ಟರ್ ಆಗಿದ್ದ ಜೋರ್ಜ್ ಥಾಮಸ್ ಅವರನ್ನ ಪ್ರೀತಿಸಿ ಮದುವೆಯಾದರು ಶ್ರೀವಿದ್ಯಾ.

ಜೋರ್ಜ್ ಥಾಮಸ್ ಅವರನ್ನ ಮದುವೆಯಾಗುವ ಸಲುವಾಗಿ ಹಿಂದೂ ಧರ್ಮದಿಂದ ಕ್ರಿಶ್ಚಿಯಾನ್ ಧರ್ಮಕ್ಕೆ ಮತಾಂತರ ಆದರು ಶ್ರೀವಿದ್ಯಾ. ಮದುವೆಯಾದ ಮೇಲೆ ನಟಿಸೋದು ಬೇಡ ಎಂದು ಮನೆಯಲ್ಲೇ ಇರಲು ನಿರ್ಧಾರ ಮಾಡಿದರು ಶ್ರೀವಿದ್ಯಾ ಆದರೆ ಗಂಡ ಬಿಡಲಿಲ್ಲ, ಮಾನಸಿಕವಾಗಿ ಹಾಗು ದೈಹಿಕವಾಗಿ ಹಿಂಸೆಯನ್ನ ಕೊಟ್ಟ ಗಂಡ ಆಕೆಯನ್ನ ಮತ್ತೆ ನಟಿಸುವಂತೆ ಮಾಡುತ್ತಾನೆ.

actress srividya and husband georje thamas

ಆದರು ಆಕೆಗೆ ಹಿಂಸೆಯನ್ನ ಕೊಡುತ್ತಿದ್ದ ಜೋರ್ಜ್ ಥಾಮಸ್, ಇದರಿಂದ ಬೇಸೆತ್ತ ಶ್ರೀವಿದ್ಯಾ ಗಂಡನಿಗೆ ವಿಚ್ಛೇದನವನ್ನ ಕೊಟ್ಟರು, ಆದರು ಗಂಡ ಆಕೆಗೆ ಕಾಟ ಕೊಡೋದನ್ನ ಬಿಡಲೇ ಇಲ್ಲ.

ತನ್ನ ಹೆಂಡತಿಯ ಆಸ್ತಿಯಿಂದ ನನಗೆ ಪಾಲು ಬೇಕು ಎಂದು ಕೋರ್ಟ್ ಮೆಟ್ಟಿಲೇರಿದ ಜೋರ್ಜ್ ಥಾಮಸ್, ಶ್ರೀವಿದ್ಯಾ ಇದಕ್ಕೆ ಆಸ್ಪದ ಕೊಡದೆ ಸುಪ್ರೀಂ ಕೋರ್ಟ್ ವರೆಗೂ ಹೋಗಿ ಗಂಡನ ವಿರುದ್ಧ ಹೋರಾಡಿ ಗೆದ್ದಳು.

actress srividya and husband georje thamas

ನಂತರ 2003 ರಲ್ಲಿ ಈಕೆಗೆ ಕ್ಯಾನ್ಸರ್ ಇದೆ ಎಂದು ಗೊತ್ತಾಯಿತು, ನಂತರ ಇನ್ನೇನು 2 ತಿಂಗಳಲ್ಲಿ ನಾನು ಸಾಯುತ್ತೇನೆ ಎಂದು ತಿಳಿದು ಶ್ರೀವಿದ್ಯಾ ತನ್ನ 90% ಆಸ್ತಿಯನ್ನ ವಿದ್ಯಾರ್ಥಿಗಳಿಗೆ ಹಂಚಿದರು ಶ್ರೀವಿದ್ಯಾ, ಉಳಿದ ಹಣವನ್ನ ಮನೆಯ ಕೆಲಸಗಾರರಿಗೆ ಕೊಟ್ಟರು. ಎಲ್ಲರಿಂದ ಮೋಸ ಹೋದ ಶ್ರೀವಿದ್ಯಾ 2006 ರಲ್ಲಿ ನಮ್ಮೆಲ್ಲರನ್ನ ಬಿಟ್ಟು ಇಹಲೋಕವನ್ನ ತ್ಯಜಿಸಿದರು.

Please follow and like us:
0
http://karnatakatoday.in/wp-content/uploads/2018/05/c-1024x576.pnghttp://karnatakatoday.in/wp-content/uploads/2018/05/c-150x150.pngeditorಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲಹಣಸೆಂಟಿಮೆಂಟ್ ಸನ್ನಿವೇಶಗಳಲ್ಲಿ ಮನಸ್ಸಿಗೆ ನಾಟುವಂತೆ ಅಭಿನಯ ಮಾಡುತ್ತಿದ್ದ ನಟಿ ಶ್ರೀವಿದ್ಯಾ, ಕನ್ನಡ ಚಿತ್ರಗಳನ್ನ ಸೇರಿ ದಕ್ಷಿಣ ಭಾರತದ ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇವರ ವೈವಾಹಿಕ ಜೀವನ ಮಾತ್ರ ಹೇಳತೀರದ್ದಾಗಿದೆ, ಕಮಲ್ ಹಸ್ಸನ್ ಮತ್ತು ಶ್ರೀವಿದ್ಯಾ ತುಂಬಾ ಘಾಡವಾಗಿ ಪ್ರೀತಿ ಮಾಡುತ್ತಿದ್ದರು, ಮದುವೆಯಾಗುವ ಹಂತಕ್ಕೆ ಹೋಗಿತ್ತು ಇವರಿಬ್ಬರ ಪ್ರೀತಿ. ಆದರೆ ಕೊನೆಯ ಕ್ಷಣದಲ್ಲಿ ಶ್ರೀವಿದ್ಯಾ ಅವರಿಗೆ ಕಮಲ್ ಹಸ್ಸನ್ ಅವರು ಕೈ ಕೊಟ್ಟರು, ನಂತರ ತನ್ನ ಚಿತ್ರಕ್ಕೆ...Kannada News