ಆಧಾರ್ ಕಾರ್ಡ್ ಕುರಿತು ಕೇಂದ್ರ ಸರ್ಕಾರ ಹಾಗು ಬ್ಯಾಂಕ್ ಗಳಿಗೆ ಆಧಾರ್ ಇಲಾಖೆ ಮಹತ್ವದ ಸಂದೇಶವನ್ನು ಜಾರಿಗೊಳಿಸಿದೆ. ಆಧಾರ್ ಕಾರ್ಡ್ ಕುರಿತ ಬ್ರೇಕಿಂಗ್ ನ್ಯೂಸ್ ಇದಾಗಿದ್ದು ತಪ್ಪದೆ ಎಲ್ಲರು ಇದನ್ನು ಪಾಲಿಸಬೇಕಾಗಿ ನಿರ್ದೇಶಿಸಲಾಗಿದೆ. ನಿಮಗೆಲ್ಲ ಗೊತ್ತಿರಬಹುದು ಒಂದು ಸರ್ಕಾರೀ ಸೌಲಭ್ಯವನ್ನು ಪಡೆಯಲು ಆಧಾರ್ ಎಷ್ಟೊಂದು ಪ್ರಾಮುಖ್ಯತೆ ಎಂದು. ಇನ್ನು ಈ ಮೊದಲೇ ನೀವು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ನೀಡಿರುತ್ತೀರಿ. ಅದರಷ್ಟೇ ಈಗ ಬಂದಿರುವ ಹೊಸ ವಿಷಯವೇನೆಂದರೆ ಹಿಂದೆ ನೀವು ಆಧಾರ್ ನಕಲು ಪ್ರತಿಯನ್ನು ಬ್ಯಾಂಕುಗಳಿಗೆ ನೀಡುರುತ್ತೀರಿ.

ಮತ್ತು ಬ್ಯಾಂಕಿನವರು ಅದನ್ನು ಪರಿಶೀಲಿಸಿ ನಿಮ್ಮ ಖಾತೆಗೆ ಆಧಾರ್ ಜೋಡಣೆ ಮಾಡುತ್ತಿದ್ದರು. ಕೆಲವೊಮ್ಮೆ ಇದರ ಸರಿಯಾದ ಪರಿಚಯ ಇಲ್ಲದೆ ಕೂಡ ಜೆರಾಕ್ಸ್ ಕೊಟ್ಟಾಗ ಲಿಂಕ್ ಮಾಡುತ್ತಿದ್ದರು ಆದರೆ ಇದೆ ವಿಷಯದ ಕುರಿತು ಆಧಾರ್ ಇಲಾಖೆ ಸ್ಪಶ್ಟನೆಯೊಂದನ್ನು ನೀಡಿದೆಇನ್ನು ಮುಂದೆ ಆಧಾರ್ ಕಾಪಿಯ ಬದಲು ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ಆರಂಭಿಸುವ ಗ್ರಾಹಕನ ಬೆರಳಚ್ಚು ಮತ್ತು ಅಗತ್ಯ ಬಿದ್ದರೆ ಫೋಟೋ ಸ್ಕಾನ್ ಕೂಡ ಮಾಡಬೇಕೆಂದು ತಿಳಿಸಿದೆ.

UIDAI ಪ್ರಕಾರ ಹೊಸ ಬ್ಯಾಂಕ್ ಖಾತೆ ಮಾಡುವವರು ಕಡ್ಡಾಯವಾಗಿ ಆಧಾರ್ ಬೆರಳಚ್ಚು ಮಾಡಿಸಲೇಬೇಕು. ಇದರಿಂದ ನಿಮ್ಮ ಖಾತೆಗೆ ಇನ್ನಷ್ಟು ಸುರಕ್ಷಿತೆ ಹೆಚ್ಚಲಿದೆ ಎಂದಿದೆ. ಆಧಾರ್ ಅಕ್ರಮವನ್ನು ಬಯಲು ಮಾಡಲು ಸರ್ಕಾರ ಈ ಕ್ರಮ ಕೈಗೊಂಡಿದೆ. ಒಂದು ವೇಳೆ ನಿಮ್ಮ ಆಧಾರ್ ಬಳಸಿ ಯಾರು ಕೂಡ ನಕಲಿ ಖಾತೆ ತೆರೆಯುವ ಅಪಾಯ ಕೂಡ ಇದ್ದು ಇದರ ದುರುಪಯೋಗ ತಡೆಯಲು ಆಧಾರ್ ಇಲಾಖೆ ಮುಂದಾಗಿದೆ.

ಹೀಗಾಗಿ ಇನ್ನು ನೀವು ಬ್ಯಾಂಕ್ ಖಾತೆ ತೆರೆಯುವಾಗ ಇದನ್ನು ಮಾಡಿಸಿಕೊಳ್ಳಿ. ಅಷ್ಟೇ ಅಲ್ಲದೆ ಆನ್ಲೈನ್ ಮೂಲಕ ನಿಮ್ಮ ಆಧಾರ್ ಸಂಖ್ಯೆಯಲ್ಲಿ ಎಷ್ಟು ಬ್ಯಾಂಕ್ ಅಕೌಂಟ್ ಇದೆ ಎನ್ನುವುದನ್ನು ಒಮ್ಮೆ ಖಾತ್ರಿಪಡಿಸಿಕೊಳ್ಳಿ. ಸಾಧ್ಯವಾದಷ್ಟು ಜನರಿಗೆ ಮಾಹಿತಿ ತಲುಪಿಸಿ.ಮತ್ತು ನಿಮ್ಮ ಆಧಾರ್ ಕಾರ್ಡ್ ನಿಮ್ಮ ಸುರಕ್ಷತೆಯಲ್ಲಿರಬೇಕು ಯಾವುದೇ ಫ್ರಾಡ್ ಕರೆಗಳಿಗೆ ಓಗೊಟ್ಟು ನಿಮ್ಮ ಆಧಾರ್ ಸಂಖ್ಯೆಗಳನ್ನು ಎಲ್ಲಿಯೂ ತಿಳಿಸಬೇಡಿ, ಮತ್ತು ಸಾರ್ವಜನಿಕವಾಗಿ ನಿಮ್ಮ ಆಧಾರ್ ಸಂಖ್ಯೆ ಪ್ರಕಟಿಸಬೇಡಿ. ಇನ್ನು ನಕಲಿ ಸಂದೇಶ ಮತ್ತು ಕರೆಗಳಿಂದ ದೂರವಿರಿ.

Please follow and like us:
0
http://karnatakatoday.in/wp-content/uploads/2018/09/adhaar-bank-1024x576.pnghttp://karnatakatoday.in/wp-content/uploads/2018/09/adhaar-bank-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುಆಧಾರ್ ಕಾರ್ಡ್ ಕುರಿತು ಕೇಂದ್ರ ಸರ್ಕಾರ ಹಾಗು ಬ್ಯಾಂಕ್ ಗಳಿಗೆ ಆಧಾರ್ ಇಲಾಖೆ ಮಹತ್ವದ ಸಂದೇಶವನ್ನು ಜಾರಿಗೊಳಿಸಿದೆ. ಆಧಾರ್ ಕಾರ್ಡ್ ಕುರಿತ ಬ್ರೇಕಿಂಗ್ ನ್ಯೂಸ್ ಇದಾಗಿದ್ದು ತಪ್ಪದೆ ಎಲ್ಲರು ಇದನ್ನು ಪಾಲಿಸಬೇಕಾಗಿ ನಿರ್ದೇಶಿಸಲಾಗಿದೆ. ನಿಮಗೆಲ್ಲ ಗೊತ್ತಿರಬಹುದು ಒಂದು ಸರ್ಕಾರೀ ಸೌಲಭ್ಯವನ್ನು ಪಡೆಯಲು ಆಧಾರ್ ಎಷ್ಟೊಂದು ಪ್ರಾಮುಖ್ಯತೆ ಎಂದು. ಇನ್ನು ಈ ಮೊದಲೇ ನೀವು ಆಧಾರ್ ಕಾರ್ಡ್ ಅನ್ನು ಬ್ಯಾಂಕ್ ಖಾತೆಗೆ ನೀಡಿರುತ್ತೀರಿ. ಅದರಷ್ಟೇ ಈಗ ಬಂದಿರುವ ಹೊಸ ವಿಷಯವೇನೆಂದರೆ...Kannada News