ಆಧಾರ್ ಕಾರ್ಡ್ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದಿರುವ ವಿಷಯ ನಿಮಗೆಲ್ಲ ತಿಳಿದೇ ಇದೆ. ಆಧಾರ್ ಕಾರ್ಡ್ ಸದ್ಯಕ್ಕೆ ದೇಶದಲ್ಲಿ ಬೇಕಾಗಿರುವ ಗುರುತಿನ ಸಂಖ್ಯೆಗಳಲ್ಲಿ ಒಂದು ಆದ್ದರಿಂದ ಆಧಾರ್ ಮಾನ್ಯತೆಯನ್ನು ಕೋರ್ಟ್ ಎತ್ತಿ ಹಿಡಿದು ಎಲ್ಲಾ ಸರಕಾರಿ ಸೇವೆಗೆ ಆಧಾರ್ ಬೇಕೇ ಬೇಕು ಎಂದು ತಿಳಿಸಿದೆ. ಮಧ್ಯವರ್ತಿಗಳ ಹಾವಳಿ ಮತ್ತು ನಕಲಿ ಹೆಸರಿನಲ್ಲಿ ಸರ್ಕಾರದ ಯೋಜನೆ ಪಡೆಯುವವರಿಗೆ ಇದು ಒಂದು ದೊಡ್ಡ ಅಸ್ತ್ರವಾಗಿದೆ ಈ ಕಾರಣದಿಂದಾಗಿ ಆಧಾರ್ ಉಪಯೋಗಿಯಾಗಿದೆ. ಇನ್ನು ಈಗ ಬಂದಿರುವ ವಿಷಯ ಏನೆಂದರೆ ಇನ್ಸೂರೆನ್ಸ್ ಹೊಂದಿರುವ ಸಿಮ್ ಹಾಗು ಬ್ಯಾಂಕಿಗೆ ಆಧಾರ್ ನೀಡುವುದು ಬೇಡ ಎಂದು ಹೇಳಲಾಗಿದೆ ಆದರೆ ಇನ್ಸೂರೆನ್ಸ್ ಮಾಡಿಸಿದವರು ತಪ್ಪದೆ ಈ ಕೆಲಸವನ್ನು ಶೀಘ್ರದಲ್ಲೇ ಮಾಡಲೇಬೇಕಾಗುತ್ತದೆ.

ನಿಮ್ಮ ಪಾಲಿಸಿಗೆ ಆಧಾರ್ ಸಂಖ್ಯೆ ಲಿಂಕ್ ಮಾಡಲೇಬೇಕಾಗುತ್ತದೆ. ಆಧಾರ್ ಲಿಂಕ್ ಮಾಡುವ ಮಾಹಿತಿಯನ್ನು ನಾವು ಇಲ್ಲಿ ನೀಡಿದ್ದೇವೆ ದಯವಿಟ್ಟು ಹೇಗೆಂದು ತಿಳಿದುಕೊಳ್ಳಿ. ಭಾರತೀಯ ಜೀವ ವಿಮಾ ನಿಗಮದ ಜಾಲತಾಣಕ್ಕೆ ಭೇಟಿ ನೀಡಿದರೆ ಮುಖಪುಟದಲ್ಲಿಯೇ ‘ಲಿಂಕ್‌ ಆಧಾರ್‌ ಆ್ಯಂಡ್‌ ಪ್ಯಾನ್‌ ಟೂ ಪಾಲಿಸಿ’ ಎನ್ನುವ ಲಿಂಕ್‌ವೊಂದು ಕಾಣಿಸುತ್ತದೆ. ಅದನ್ನು ಕ್ಲಿಕ್‌ ಮಾಡಿದರೆ, ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ನೀವು ಏನನ್ನು ಮಾಡಬೇಕು ಎಂದು ಅಲ್ಲಿ ಸೂಚನೆಗಳಿರುತ್ತವೆ.

ಯುಐಡಿಎಐಗೆ ನಿಮ್ಮ ಮೊಬೈಲ್‌ ಸಂಖ್ಯೆ ನೋಂದಣಿಯಾಗಿದೆಯೇ ಎಂಬುದನ್ನು ಗಮನಿಸಿ. ಹೌದು ಅನ್ನುವುದಾದರೆ, ಒಂದು ಅವಧಿಯ ಪಾಸ್‌ವರ್ಡ್‌(ಒಟಿಪಿ) ನಿಮ್ಮ ಮೊಬೈಲ್‌ಗೆ ಬರುತ್ತದೆ. ಒಂದು ವೇಳೆ ನಿಮ್ಮ ಮೊಬೈಲ್‌ ಸಂಖ್ಯೆ ಅಪ್‌ಡೇಟ್‌ ಆಗದೇ ಇದ್ದರೆ, ಆಧಾರ್‌ ಜೋಡಣೆ ಸಲುವಾಗಿ ಎಲ್‌ಐಸಿ ಶಾಖೆಗೆ ಭೇಟಿ ನೀಡಿ.ಸೂಚನೆಗಳನ್ನು ಓದಿದ ತರುವಾಯ ‘ಪ್ರೊಸೀಡ್‌’ ಎನ್ನುವ ಇನ್ನೊಂದು ಕೊಂಡಿಯನ್ನು ಕ್ಲಿಕ್‌ ಮಾಡಿ. ಆಗ ಅಲ್ಲಿ ನಿಮ್ಮ ಹೆಸರು, ಜನ್ಮದಿನಾಂಕ, ಆಧಾರ್‌ ಸಂಖ್ಯೆ, ಲಿಂಗ, ಇಮೇಲ್‌ ಐಡಿ, ಪ್ಯಾನ್‌ ಸಂಖ್ಯೆ, ಆಧಾರ್‌ಗೆ ನೋಂದಣಿಯಾಗಿರುವ ಮೊಬೈಲ್‌ ಸಂಖ್ಯೆ, ನಿಮ್ಮ ವಿಮಾ ಪಾಲಿಸಿಯ ಸಂಖ್ಯೆಯನ್ನು ಕೇಳಲಾಗುತ್ತದೆ.

Adhaar link to lic

ಅವುಗಳನ್ನು ಭರ್ತಿ ಮಾಡಿ, ಓಕೆ ಮಾಡಿದರೆ ಮುಗಿಯಿತು. ಎಲ್ಲ ವಿವರಗಳೂ ಸರಿಯಾಗಿದ್ದ ಪಕ್ಷದಲ್ಲಿ, ‘ಜೋಡಣೆ ಪ್ರಕ್ರಿಯೆ ಯಶಸ್ವಿಯಾಗಿದೆ’ ಎನ್ನುವ ಸಂದೇಶ ನಿಮಗೆ ತೆರೆ ಮೇಲೆ ಕಾಣಿಸುತ್ತದೆ. ಕೆಲವು ದಿನಗಳ ಬಳಿಕ ನಿಮ್ಮ ಮೊಬೈಲ್‌ಗೆ ಈ ಬಗ್ಗೆ ಎಲ್‌ಐಸಿಯಿಂದ ಸಂದೇಶವೂ ಬರುತ್ತದೆ.ಓದಿದ ಪ್ರತಿಯೊಬ್ಬರೂ ಇತರರಿಗೂ ಈ ಮಾಹಿತಿ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/10/adhaar-and-lic-1024x576.pnghttp://karnatakatoday.in/wp-content/uploads/2018/10/adhaar-and-lic-150x104.pngKarnataka Today's Newsಅಂಕಣಆಟೋನಗರಆಧಾರ್ ಕಾರ್ಡ್ ಬಗ್ಗೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದಿರುವ ವಿಷಯ ನಿಮಗೆಲ್ಲ ತಿಳಿದೇ ಇದೆ. ಆಧಾರ್ ಕಾರ್ಡ್ ಸದ್ಯಕ್ಕೆ ದೇಶದಲ್ಲಿ ಬೇಕಾಗಿರುವ ಗುರುತಿನ ಸಂಖ್ಯೆಗಳಲ್ಲಿ ಒಂದು ಆದ್ದರಿಂದ ಆಧಾರ್ ಮಾನ್ಯತೆಯನ್ನು ಕೋರ್ಟ್ ಎತ್ತಿ ಹಿಡಿದು ಎಲ್ಲಾ ಸರಕಾರಿ ಸೇವೆಗೆ ಆಧಾರ್ ಬೇಕೇ ಬೇಕು ಎಂದು ತಿಳಿಸಿದೆ. ಮಧ್ಯವರ್ತಿಗಳ ಹಾವಳಿ ಮತ್ತು ನಕಲಿ ಹೆಸರಿನಲ್ಲಿ ಸರ್ಕಾರದ ಯೋಜನೆ ಪಡೆಯುವವರಿಗೆ ಇದು ಒಂದು ದೊಡ್ಡ ಅಸ್ತ್ರವಾಗಿದೆ ಈ ಕಾರಣದಿಂದಾಗಿ ಆಧಾರ್...Kannada News