ಆಧಾರ್ ಕಾರ್ಡ್ ಈಗ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಏಕೆಂದರೆ ಆಧಾರ್ ಅಸ್ತಿತ್ವ ಪರಿಶೀಲಿಸಿ ಸಾರ್ವಜನಿಕವಾಗಿ ಮಾಡಿದ್ದ ಅರ್ಜಿಯನ್ನು ಕೋರ್ಟ್ ತಳ್ಳಿ ಹಾಕಿ ಆಧಾರ್ ಗೆ ಮಾನ್ಯತೆ ನೀಡಿರುವ ವಿಚಾರ ನಮಗೆಲ್ಲ ತಿಳಿದಿದೆ. ಇನ್ನು ಸರಕಾರಿ ಸೇವೆಗೆ ಆಧಾರ್ ಬೇಕೇ ಬೇಕು ಎನ್ನುವ ಅಂಶವನ್ನು ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಮತ್ತು ಮೊಬೈಲ್ ಸಿಮ್, ಹಾಗು ಬ್ಯಾಂಕುಗಳಿಗೆ ಆಧಾರ್ ಬೇಡವೆಯೆಂದು ನಿರ್ಧರಿಸಿದೆ. ಇನ್ನು ಆಧಾರ್ ಸುರಕ್ಷತೆಯ ಬಗ್ಗೆ ಹಲವಾರು ಸವಾಲುಗಳು ಎದ್ದಿದ್ದವು, ನಿಮ್ಮ ಆಧಾರ್ ಸಂಖ್ಯೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ, ಸಾರ್ವಜನಿಕವಾಗಿ ತೋರಿಸಬೇಡಿ ಹೀಗೆ  ಪ್ರಶ್ನೆಗಳು ಜನರ ಮನದಲ್ಲಿದ್ದವು.

 

ಸರ್ಕಾರ ಕೂಡ ಈ ನಿಟ್ಟಿನಲ್ಲಿ ಇದೀಗ ಹೊಸದೊಂದು ಆಧಾರ್ ಕಾರ್ಡ್ ಅಪ್ಡೇಟ್ ಬಿಡುಗಡೆ ಮಾಡಿದ್ದೂ ಇದರ ಬಳಕೆಯಿಂದ ಸಾರ್ವಜನಿಕವಾಗಿ ನೀವು ಆಧಾರ್ ಎಲ್ಲೆಲ್ಲಿ ಅವಶ್ಯಕವೋ ಅಲ್ಲಿ ಯಾವುದೇ ಭಯವಿಲ್ಲದೆ ನೀಡಬಹುದಾಗಿದೆ ಇಷ್ಟಕ್ಕೂ ಏನಿದು ಹೊಸ ಆಧಾರ್ ಕಾರ್ಡ್ ಹೇಗೆ ಪಡೆಯುವುದು ಇದರಲ್ಲಿ ಏನೆಲ್ಲಾ ಫೀಚರ್ ಇರಲಿದೆ ತಿಳಿಯೋಣ ಬನ್ನಿ. ಈಗಾಗಲೇ ಆಧಾರ್ ಹೊಂದಿರುವವರು ನಿಮ್ಮ ಆಧಾರ್ ಸಂಖ್ಯೆ ಬಳಸಿ ಆಧಾರ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಮತ್ತು ಅಲ್ಲಿ ಆಧಾರ್ ಡೌನ್ಲೋಡ್ ಆಯ್ಕೆ ಬಳಸಿ.

ಇಲ್ಲಿ ನಿಮಗೆ ಮಾಸ್ಕಡ್ ಆಧಾರ್ ಕಾರ್ಡ್ ಎನ್ನುವ ಹೊಸ ಆಯ್ಕೆ ನೀಡಿದ್ದು ಈ ಆಧಾರ್ ನಲ್ಲಿ ನಿಮ್ಮ ಎಲ್ಲ ಮಾಹಿತಿಗಳು ಮುಚ್ಚಿಡಲಾಗಿದ್ದು ಯಾವುದರ ಅಗತ್ಯ ಇದೆ ಅದನ್ನ ಮಾತ್ರ ತೋರಿಸಲಾಗಿದೆ. ಆದ್ದರಿಂದ ನಾಗರಿಕರಿಗೆ ಬಹಳ ಲಾಭವಾಗಲಿದೆ. ಇನ್ನೊಂದು ಮಹತ್ವದ ವಿಚಾರ ಏನೆಂದರೆ ಎಲ್ಲ ಟೆಲಿಕಾಂ ಕಂಪನಿಗಳು ಇನ್ನು ಮುಂದೆ ಗ್ರಾಹಕರು ನೀಡಿದ್ದ ಆಧಾರ್ ಮಾಹಿತಿ ಅಳಿಸಿಹಾಕಿ ಎಂದು ಸೂಚಿಸಲಾಗಿದೆ.

 

ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಹಲವಾರು ಡಿಜಿಟಲ್‌ ಪೇಮೆಂಟ್‌ ಕಂಪನಿಗಳಿಗೆ ಆಧಾರ್‌ ಆಧಾರಿತ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಸೂಚಿಸಿದೆ. ಖಾಸಗಿ ಕಂಪನಿಗಳು ಆಧಾರ್‌ ಮಾಹಿತಿ ಸಂಗ್ರಹಿಸುವಂತೆ ಇಲ್ಲ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ತೀರ್ಪು ಕೊಟ್ಟ ನಂತರ, ಪ್ರಾಧಿಕಾರವು ಹೊರಡಿಸಿದ ಮಹತ್ವದ ಸೂಚನೆ ಇದಾಗಿದೆ.

Please follow and like us:
0
http://karnatakatoday.in/wp-content/uploads/2018/10/new-adhaar-card-1024x576.pnghttp://karnatakatoday.in/wp-content/uploads/2018/10/new-adhaar-card-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಲೈಫ್ ಸ್ಟೈಲ್ಆಧಾರ್ ಕಾರ್ಡ್ ಈಗ ಬಹಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ ಏಕೆಂದರೆ ಆಧಾರ್ ಅಸ್ತಿತ್ವ ಪರಿಶೀಲಿಸಿ ಸಾರ್ವಜನಿಕವಾಗಿ ಮಾಡಿದ್ದ ಅರ್ಜಿಯನ್ನು ಕೋರ್ಟ್ ತಳ್ಳಿ ಹಾಕಿ ಆಧಾರ್ ಗೆ ಮಾನ್ಯತೆ ನೀಡಿರುವ ವಿಚಾರ ನಮಗೆಲ್ಲ ತಿಳಿದಿದೆ. ಇನ್ನು ಸರಕಾರಿ ಸೇವೆಗೆ ಆಧಾರ್ ಬೇಕೇ ಬೇಕು ಎನ್ನುವ ಅಂಶವನ್ನು ಕೋರ್ಟ್ ಕೂಡ ಎತ್ತಿ ಹಿಡಿದಿದೆ. ಮತ್ತು ಮೊಬೈಲ್ ಸಿಮ್, ಹಾಗು ಬ್ಯಾಂಕುಗಳಿಗೆ ಆಧಾರ್ ಬೇಡವೆಯೆಂದು ನಿರ್ಧರಿಸಿದೆ. ಇನ್ನು ಆಧಾರ್ ಸುರಕ್ಷತೆಯ ಬಗ್ಗೆ ಹಲವಾರು ಸವಾಲುಗಳು...Kannada News