ದೇಶದ ಸಾರಿಗೆ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ ಎನ್ನುವ ಮಾತನ್ನು ಕೇಂದ್ರದ ಮಂತ್ರಿಯೊಬ್ಬರು ಇತ್ತೀಚಿಗೆ ತಿಳಿಸಿದ್ದರು, ಹೌದು ಅದೇ ಪ್ರಕಾರ ದೇಶಾದ್ಯಂತ ಈಗ ಡ್ರೈವಿಂಗ್ ಲೈಸನ್ಸ್ ಬಗ್ಗೆ ವ್ಯಾಪಕವಾದ ಚರ್ಚೆ ನಡೆಯುತ್ತಿದೆ, ಅದು ಯಾವ ವಿಷಯಕ್ಕಾಗಿ ಮತ್ತು ಏನಿದು ಚರ್ಚೆ ಈ ಎಲ್ಲ ಮಹತ್ವದ ವಿಷಯಗಳನ್ನು ನಾವಿಂದು ನಿಮಗೆ ತಿಳಿಸುತ್ತೇವೆ. ನಮಗೆಲ್ಲ ಗೊತ್ತೇ ಇರುವ ಹಾಗೆ ಸುಪ್ರೀಂ ಕೋರ್ಟ್ ಆಧಾರ್ ಮಾನ್ಯತೆಯನ್ನು ಎತ್ತಿ ಹಿಡಿದಿದೆ ಆದಾಗ್ಯೂ ಕೆಲವೊಂದು ಸೇವೆಗಳಿಗೆ ಆಧಾರ್ ಅವಶ್ಯಕತೆ ಇಲ್ಲ ಬದಲಾಗಿ ಸರ್ಕಾರದ ಎಲ್ಲ ಯೋಜನೆಗಳಿಗೆ ಆಧಾರ್ ಬೇಕೇ ಬೇಕು ಎಂದು ಹೇಳಿದೆ ಹೀಗಾಗಿ ಸರ್ಕಾರವೀಗ ಕೆಲ ಆಧಾರ್ ವಿಷಯವಾಗಿ ಮಹತ್ವದ ಬದಲಾವಣೆ ಮಾಡಲು ಹೊರಟಿದೆ. ಸದ್ಯದಲ್ಲೇ ಆಧಾರ್ ಕಾರ್ಡ್ ಗೆ ಡ್ರೈವಿಂಗ್ ಲೈಸೆನ್ಸ್ ಗೆ ಲಿಂಕ್ ಮಾಡುವುದು ಕಡ್ಡಾಯವಾಗಲಿದೆ ಎಂದು ಕೇಂದ್ರ ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.

ಪಂಜಾಬ್ ನ ಪ್ಹಾಗ್ವಾರನಲ್ಲಿ ನಡೆಯುತ್ತಿರುವ 106ನೇ ಭಾರತೀಯ ವಿಜ್ಞಾನ ಕಾಂಗ್ರೆಸ್ ನಲ್ಲಿ ಭಾಗವಹಿಸಿ ಮಾತನಾಡಿದ ರವಿಶಂಕರ್ ಪ್ರಸಾದ್ “ನಾವು ಸದ್ಯಲ್ಲೇ ಬಾಕಿ ಉಳಿದಿರುವ ಮಸೂದೆಯನ್ನು ಜಾರಿಗೆ ತರುವ ಮೂಲಕ ದೊಡ್ಡ ಬದಲಾವಣೆಯನ್ನು ತರಲಿದ್ದೇವೆ. ವಾಹನಗಳ ಡ್ರೈವಿಂಗ್ ಲೈಸೆನ್ಸ್ ನ್ನು ಆಧಾರ್ ಕಾರ್ಡ್ ಗಳಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಿದ್ದೇವೆ” ಎಂದರು.

ಇದೇ ವೇಳೆ ಆಧಾರ್ ವ್ಯಕ್ತಿ ಗುರುತನ್ನು ಕಂಡು ಹಿಡಿಯುವಲ್ಲಿ ಮಹತ್ವದ ಪಾತ್ರವಹಿಸಿದೆ ಎಂದರು. ಡ್ರೈವಿಂಗ್ ಲೈಸೆನ್ಸ್ ನ್ನು ಆಧಾರ ಕಾರ್ಡ್ ಗೆ ಲಿಂಕ್ ಮಾಡುವುದರ ಮೂಲಕ ಅದು ನಕಲಿ ಲೈಸೆನ್ಸ್ ಗಳನ್ನು ತಡೆಗಟ್ಟುವಲ್ಲಿ ನೆರವಾಗಲಿದೆ ಎಂದರು. ಇನ್ನು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡುವವರಿಗೂ ಇದು ನೆರವಾಗಲಿದೆ.

ಅಪರಾಧ ಪತ್ತೆ ಮಾಡುವಲ್ಲಿ ಆಧಾರ್ ಇನ್ನು ಮುಂದೆ ಪ್ರಮುಖ ಪಾತ್ರ ವಹಿಸಲಿದೆ ಹೀಗಾಗಿ ಇನ್ನು ಕೆಲವೇ ದಿನಗಲ್ಲಿ ನಿಮ್ಮ ಲೈಸನ್ಸ್ ಗೆ ಯಾವ ರೀತಿಯಲ್ಲಿ ಆಧಾರ್ ನೀಡಬೇಕು ಎನ್ನುವುದರ ಬಗ್ಗೆ ಅಧಿಸೂಚನೆ ಬರಲಿದೆ. ಹೀಗಾಗಿ ಇನ್ನು ತಡಮಾಡದೆ ಅದಃಸ್ತು ಜನರಿಗೆ ಈ ಸುದ್ದಿ ತಲುಪಿಸಿ ಮತ್ತು ಡ್ರೈವಿಂಗ್ ಲೈಸನ್ಸ್ ಹೊಂದಿರುವ ಎಲ್ಲರು ಈ ಕೆಲಸ ಮಾಡುವುದು ಇನ್ನು ಮುಂದೆ ಕಡ್ಡಾಯವಾಗಲಿದೆ.

Please follow and like us:
0
http://karnatakatoday.in/wp-content/uploads/2019/01/dl-karnataka-1024x576.pnghttp://karnatakatoday.in/wp-content/uploads/2019/01/dl-karnataka-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಬೆಂಗಳೂರುದೇಶದ ಸಾರಿಗೆ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆ ಆಗಲಿದೆ ಎನ್ನುವ ಮಾತನ್ನು ಕೇಂದ್ರದ ಮಂತ್ರಿಯೊಬ್ಬರು ಇತ್ತೀಚಿಗೆ ತಿಳಿಸಿದ್ದರು, ಹೌದು ಅದೇ ಪ್ರಕಾರ ದೇಶಾದ್ಯಂತ ಈಗ ಡ್ರೈವಿಂಗ್ ಲೈಸನ್ಸ್ ಬಗ್ಗೆ ವ್ಯಾಪಕವಾದ ಚರ್ಚೆ ನಡೆಯುತ್ತಿದೆ, ಅದು ಯಾವ ವಿಷಯಕ್ಕಾಗಿ ಮತ್ತು ಏನಿದು ಚರ್ಚೆ ಈ ಎಲ್ಲ ಮಹತ್ವದ ವಿಷಯಗಳನ್ನು ನಾವಿಂದು ನಿಮಗೆ ತಿಳಿಸುತ್ತೇವೆ. ನಮಗೆಲ್ಲ ಗೊತ್ತೇ ಇರುವ ಹಾಗೆ ಸುಪ್ರೀಂ ಕೋರ್ಟ್ ಆಧಾರ್ ಮಾನ್ಯತೆಯನ್ನು ಎತ್ತಿ ಹಿಡಿದಿದೆ ಆದಾಗ್ಯೂ ಕೆಲವೊಂದು ಸೇವೆಗಳಿಗೆ...Kannada News