ಕಳೆದ ಸುಮಾರು ತಿಂಗಳುಗಳಿಂದ ದೇಶಾದ್ಯಂತ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಅಂದರೆ ಅದೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯ ಏರಿಕೆಯಿಂದ ದೇಶದ ಜನರು ಕಂಗಾಲಾಗಿದ್ದರೂ ಎಂದು ಹೇಳಿದರೆ ತಪ್ಪಾಗಲ್ಲ, ದೇಶದ ಆರ್ಥಿಕತೆ ಕುಸಿಯುತ್ತಿರುವ ಕಾರಣ ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೆ ಹೋಗಿದೆ ಎಂದು ಹೇಳಲಾಗಿತ್ತು. ದೇಶದ ಕೆಲವು ಬ್ಯಾಂಕುಗಳು ಅತೀ ಹೆಚ್ಚು ಚಿನ್ನವನ್ನ ಖರೀದಿ ಮಾಡುತ್ತಿರುವ ಕಾರಣ ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆಯಾಗಿತ್ತು, ಚಿನ್ನ ಮತ್ತು ಬೆಳ್ಳಿ ಬೆಲೆಯ ಏರಿಕೆಯ ಕಾರಣ ದೇಶದ ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ತುಂಬಾ ತೊಂದರೆಯಾಗಿತ್ತು. ಚಿನ್ನದ ಬೆಲೆ ಗಗನಕ್ಕೆ ಏರಿದ ಕಾರಣ ಅದೆಷ್ಟೇ ಬಡವರ ಮತ್ತು ಮಧ್ಯಮ ವರ್ಗದ ಜನರ ಮನೆಯಲ್ಲಿ ನಡೆಯಬೇಕಾಗಿದ್ದ ಮದುವೆ ಮತ್ತು ಇತರೆ ಸಮಾರಂಭಗಳನ್ನ ಮುಂದೂಡಲಾಗಿತ್ತು.

ಇನ್ನು ಈಗ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿತ್ತು ಗ್ರಾಹಕರ ಮುಖದಲ್ಲಿ ಸಂತಸ ಮೂಡಿದೆ, ಈ ತಿಂಗಳ ಆರಂಭದಿಂದಲೇ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿತ್ತು ಜನರು ಚಿನ್ನ ಕೊಳ್ಳಲು ಚಿನ್ನದ ಅಂಗಡಿಯ ಕಡೆಗೆ ಬರುತ್ತಿದ್ದಾರೆ. ಹಾಗಾದರೆ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟು ಕಡಿಮೆ ಆಗಿದೆ ಮತ್ತು ಕಡಿಮೆ ಆಗಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಕಳೆದ ಮೂರೂ ತಿಂಗಳ ಹಿಂದೆ ಚಿನ್ನದ ಬೆಲೆ 40 ಸಾವಿರದ ಗಡಿ ದಾಟಿದ್ದು ನಿಮಗೆಲ್ಲ ಗೊತ್ತೇ ಇದೆ, ಬಹಳ ಏರಿಕೆಯಾಗಿದ್ದ ಚಿನ್ನದ ಬೆಲೆಯೂ ಈಗ ದೇಶಿಯ ಮಾರುಕಟ್ಟೆಯಲ್ಲಿ ಇಳಿಕೆಯತ್ತ ಮುಖ ಮಾಡಿದೆ.

Again gold rate down

ಇನ್ನು ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ ನಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯಾಗಿದ್ದು 22 ಕ್ಯಾರೆಟ್ ನ 10 ಚಿನ್ನದ ಬೆಲೆ 35680 ರೂಪಾಯಿ ಆಗಿದೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ ನ ಚಿನ್ನದ ಬೆಲೆ 37460 ರುಯಾಯಿ ಆಗಿದೆ, ಇನ್ನು ಚಿನ್ನದ ಬೆಲೆಯೂ ಇಳಿಕೆಯತ್ತ ಮುಖವನ್ನ ಮಾಡಿದ್ದು ತಿಂಗಳ ಅಂತ್ಯದಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ, 40 ಸಾವಿರದ ಗಡಿ ದಾಟಿದ್ದ ಚಿನ್ನದ ಬೆಲೆ 35 ಸಾವಿರಕ್ಕೆ ಬಂದು ತಲುಪಿದ್ದು ಸುಮಾರು 5 ಸಾವಿರ ರೂಪಾಯಿಯಷ್ಟು ಕಡಿಮೆ ಆಗಿದೆ.

ಇನ್ನು ಮುಂದಿನ ತಿಂಗಳಲ್ಲಿ ಚಿನ್ನದ ಬೆಲೆ 30 -31 ಸಾವಿರಕ್ಕೆ ಬಂದು ತಲುಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ, ಚಿನ್ನವನ್ನ ಖರೀದಿ ಮಾಡಲು ಇದೆ ಬಹಳ ಒಳ್ಳೆಯ ಸಮಯವಾಗಿದ್ದು ಬಡವರು ಮತ್ತು ಮಧ್ಯಮ ವರ್ಗದವರು ಈ ಸಮಯದಲ್ಲಿ ಚಿನ್ನವನ್ನ ಖರೀದಿ ಮಾಡುವುದು ಉತ್ತಮ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಚಿನ್ನದ ಜೊತೆ ಬೆಳ್ಳಿಯ ಬೆಲೆಯಲ್ಲಿ ಕೂಡ ಇಳಿಕೆಯಾಗಿದ್ದು 1 ಕೆಜಿ ಬೆಳ್ಳಿಯ ಬೆಲೆ 47900 ರೂಪಾಯಿ ಆಗಿದೆ. ದೇಶದ ಆರ್ಥಿಕತೆ ಈಗ ಸುಧಾರಿಸುತ್ತಿರುವುದು ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಳಿಕೆಯಾಗಲು ಪ್ರಮುಖ ಕಾರಣ ಆಗಿದೆ ಸ್ನೇಹಿತರೆ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Again gold rate down

Please follow and like us:
error0
http://karnatakatoday.in/wp-content/uploads/2019/11/Again-gold-rate-down-2-1024x576.jpghttp://karnatakatoday.in/wp-content/uploads/2019/11/Again-gold-rate-down-2-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಕಳೆದ ಸುಮಾರು ತಿಂಗಳುಗಳಿಂದ ದೇಶಾದ್ಯಂತ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಅಂದರೆ ಅದೂ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಚಿನ್ನ ಮತ್ತು ಬೆಳ್ಳಿಯ ಬೆಲೆಯ ಏರಿಕೆಯಿಂದ ದೇಶದ ಜನರು ಕಂಗಾಲಾಗಿದ್ದರೂ ಎಂದು ಹೇಳಿದರೆ ತಪ್ಪಾಗಲ್ಲ, ದೇಶದ ಆರ್ಥಿಕತೆ ಕುಸಿಯುತ್ತಿರುವ ಕಾರಣ ದೇಶದಲ್ಲಿ ಚಿನ್ನದ ಬೆಲೆ ಗಗನಕ್ಕೆ ಹೋಗಿದೆ ಎಂದು ಹೇಳಲಾಗಿತ್ತು. ದೇಶದ ಕೆಲವು ಬ್ಯಾಂಕುಗಳು ಅತೀ ಹೆಚ್ಚು ಚಿನ್ನವನ್ನ ಖರೀದಿ ಮಾಡುತ್ತಿರುವ ಕಾರಣ ದೇಶದಲ್ಲಿ ಚಿನ್ನ...Film | Devotional | Cricket | Health | India