Vijay Surya in Agnisakshi

ಕನ್ನಡಿಗರೆಲ್ಲರ ಮನೆಮಾತಾದ ಒಂದು ಧಾರವಾಹಿ ಎಂದರೆ ಅದು ಅಗ್ನಿಸಾಕ್ಷಿ ಮೊದ ಮೊದಲು ಆರಂಭವಾದ ಬಳಿಕ ಭಾರಿ ಸಡ್ಡು ಮಾಡಿದ್ದ ಈ ಧಾರವಾಹಿ ಎಲ್ಲರ ಮನಸ್ಸನ್ನು ಕದ್ದಿತ್ತು, ಪ್ರತಿಯೊಬ್ಬರನ್ನು ಸೆಳೆದ ಕನ್ನಡದ ನೆಚ್ಚಿನ ಸೀರಿಯಲ್ ಆಗಿತ್ತು.

ಇದರಲ್ಲಿರುವ ಪ್ರತಿ ಪಾತ್ರಧಾರಿಯೂ ಕನ್ನಡಿಗರ ಮನೆ ಮನದಲ್ಲಿದ್ದ, ಈ ಧಾರವಾಹಿ ಅದೆಷ್ಟೋ ಜನರನ್ನು ಕನ್ನಡಕ್ಕೆ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿತ್ತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರಾವಾಹಿಯ ಸಿದ್ದಾರ್ಥ್ ಪಾತ್ರಧಾರಿ ನಟ ವಿಜಯ್ ಸೂರ್ಯ ಹೊರ ಬಂದಿದ್ದಾರೆ.

Vijay Surya in Agnisakshi

ಈ ಧಾರಾವಾಹಿಗಾಗಿ ವಿಜಯ್ ಸೂರ್ಯ 5 ವರ್ಷ ಒಪ್ಪಂದ ಕೂಡ ಮಾಡಿಕೊಂಡಿದ್ದರು, ಈಗ ಅಗ್ರಿಮೆಂಟ್ ಅವಧಿ ಮುಗಿದಿರುವ ಕಾರಣ ವಿಜಯ್ ಧಾರಾವಾಹಿಯಿಂದ ಹೊರಬಂದಿದ್ದಾರೆ.

ವಿಜಯ್ ಗೆ ಬ್ರೇಕ್ ಬೇಕಾಗಿರುವ ಕಾರಣ ಅವರು ಧಾರಾವಾಹಿಯಿಂದ ಹೊರ ನಡೆಯಲು ಇದೇ ಸಮಯ ಉತ್ತಮ ಎಂದು ಹೊರ ನಡೆದಿದ್ದಾರೆ, ಅಗ್ನಿಸಾಕ್ಷಿ ಧಾರಾವಾಹಿ ಶುರುವಾಗಿ ಐದು ವರ್ಷ ಆಗಿದ್ದು, ವಿಜಯ್ ಸೂರ್ಯ ನಟಿಸಿದ ಸಿದ್ಧಾರ್ಥ್ ಪಾತ್ರ ಕೂಡ ಕೊನೆಯಾಗುತ್ತಿದೆ.

ಧಾರಾವಾಹಿಯಲ್ಲಿ ಈಗಾಗಲೇ ಸಿದ್ಧಾರ್ಥ್ ಆಸ್ಟ್ರೇಲಿಯಾಗೆ ಹೊರಡಲು ಸಿದ್ಧರಾಗಿದ್ದು, ಅವರು ಅಲ್ಲಿಗೆ ಹೊರಟ ನಂತರ ಅವರ ಪಾತ್ರ ಕೊನೆಯಾಗಲಿದೆ, ಫೆಬ್ರವರಿ ತಿಂಗಳಿನಲ್ಲಿ ವಿಜಯ್ ಸೂರ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು, ಈಗ ಅವರು ತಮ್ಮ ಕುಟುಂಬದ ಜೊತೆ ಸ್ವಲ್ಪ ಕಾಲ ಕಳೆಯಬೇಕು ಎಂದು ಧಾರಾವಾಹಿಗಳಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

Vijay Surya in Agnisakshi

ವಿಜಯ್ ಈಗಾಗಲೇ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದು, ಈಗ ಅವರು ಲಕ್ನೋ ಟು ಮುಂಬೈ ಸಿನಿಮಾದ ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ, ಇನ್ನು ಕನ್ನಡದ ಬೆಳ್ಳಿ ತೆರೆಯಲ್ಲಿ ಸದ್ಯಕ್ಕೆ ಮಿಂಚಲು ಸೂರ್ಯ ತಯಾರಾಗುತ್ತಿದ್ದಾರೆ, ಈಗಾಗಲೇ ಕೆಲ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ದೊಡ್ಡದೊಂದು ಬ್ರೇಕ್ ಗಾಗಿ ಕಾಯುತ್ತಿದ್ದಾರೆ.

ಕನ್ನಡದಲ್ಲಿ ಇವರಿಗೆ ಒಂದು ಚಿತ್ರ ದೊಡ್ಡ ಹೆಸರು ಮಾಡಿಕೊಡಲಿ ಎನ್ನುವುದು ನಮ್ಮೆಲ್ಲರ ಆಶಯ, ಇಷ್ಟು ವರ್ಷ ಧಾರಾವಾಹಿಯಲ್ಲಿ ನಮ್ಮನ್ನೆಲ್ಲ ರಂಜಿಸಿದ ವಿಜಯ್ ಮುಂದಿನ ಚಿತ್ರರಂಗದ ಪಯಣ ಶುಭವು ಸುಖಕರವು ಆಗಿರಲಿ ಎನ್ನುವುದು ನಮ್ಮ ಹಾರೈಕೆ ಹಾಗೆಯೆ ಅಗ್ನಿಸಾಕ್ಷಿ ಧಾರಾವಾಹಿಯ ಬಗ್ಗೆ ನಿಮ್ಮ ಅಭಿಪ್ರಾಯ ಇದ್ದರೆ ತಿಳಿಸಿ.

Vijay Surya in Agnisakshi

Please follow and like us:
0
http://karnatakatoday.in/wp-content/uploads/2019/06/agnisakshi-serial-1024x576.jpghttp://karnatakatoday.in/wp-content/uploads/2019/06/agnisakshi-serial-150x104.jpgKarnataka Today's Newsಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನ್ನಡಿಗರೆಲ್ಲರ ಮನೆಮಾತಾದ ಒಂದು ಧಾರವಾಹಿ ಎಂದರೆ ಅದು ಅಗ್ನಿಸಾಕ್ಷಿ ಮೊದ ಮೊದಲು ಆರಂಭವಾದ ಬಳಿಕ ಭಾರಿ ಸಡ್ಡು ಮಾಡಿದ್ದ ಈ ಧಾರವಾಹಿ ಎಲ್ಲರ ಮನಸ್ಸನ್ನು ಕದ್ದಿತ್ತು, ಪ್ರತಿಯೊಬ್ಬರನ್ನು ಸೆಳೆದ ಕನ್ನಡದ ನೆಚ್ಚಿನ ಸೀರಿಯಲ್ ಆಗಿತ್ತು. ಇದರಲ್ಲಿರುವ ಪ್ರತಿ ಪಾತ್ರಧಾರಿಯೂ ಕನ್ನಡಿಗರ ಮನೆ ಮನದಲ್ಲಿದ್ದ, ಈ ಧಾರವಾಹಿ ಅದೆಷ್ಟೋ ಜನರನ್ನು ಕನ್ನಡಕ್ಕೆ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟಿತ್ತು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ‘ಅಗ್ನಿಸಾಕ್ಷಿ’ ಧಾರಾವಾಹಿಯ ಸಿದ್ದಾರ್ಥ್ ಪಾತ್ರಧಾರಿ ನಟ ವಿಜಯ್ ಸೂರ್ಯ...Kannada News