ಜೀವನದಲ್ಲಿ ಒಮ್ಮೆಯಾದರೂ ವಿಮಾನ ಪಯಣ ಮಾಡಬೇಕೆಂಬ ಅಸೆ ಎಲ್ಲರಿಗೂ ಕೂಡ ಇರುತ್ತದೆ, ಗಗನದಲ್ಲಿ ಒಮ್ಮೆ ಪ್ರಯಾಣ ಬೆಳೆಸಿ ಆ ಮಧುರ ಕ್ಷಣವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂಬ ಆಸೆ ಕೂಡ ಪ್ರತಿಯೊಬ್ಬರಿಗೆ ಇರುತ್ತದೆ. ವಿಮಾನಗಳ ಯಾನ ಈ ಮೊದಲು ಬಹಳ ದುಬಾರಿ ಯಾನ ಎಂದೇ ಪರಿಗಣಿಸಲಾಗಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರದ ಹಲವು ನಿಯಮಗಳು ಭಾರತದಲ್ಲಿ ವಿಮಾನಯಾನ ಪ್ರತಿಯೊಬ್ಬ ನಾಗರಿಕನ ಕೈಗೆಟುಕುವ ದರ ಕೂಡ ನಿಗದಿ ಮಾಡಲಾಗಿದೆ ಮತ್ತು ಉಡಾನ್ ರೀತಿಯ ಹಲವು ಯೋಜನೆಗಳು ಇದಕ್ಕೆ ಸಾಕ್ಷಿ. ನಮ್ಮ ದೇಶದ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಪರ್ಕ ಬೆಳೆಸಲು ಅದು ಕೂಡ ಕಡಿಮೆ ಅವಧಿಯಲ್ಲಿ ಈ ದೂರ ಕ್ರಮಿಸಲು ವಿಮಾನಯಾನ ಬಹು ಲಾಭಕರ. ಕೇವಲ ಪ್ರಯಾಣಿಕರು ಮಾತ್ರವಲ್ಲ ಸರಕುಗಳು ಕೂಡ ಸಾಗುತ್ತವೆ ಈ ಯಾನದಲ್ಲಿ, ಇನ್ನು ವಿಮಾನ ಎಂದಾಗ ನೆನಪಾಗುವುದು ವಿಮಾನ ಪ್ರಯಾಣದಲ್ಲಿ ಪ್ರಯಾಣಿಕರ ಆಸನವನ್ನು ಹಾಗು ಅವರ ಸಹಾಯಕ್ಕಾಗಿ ಇರುವ ಗಗನಸಖಿಯರು.

ಶಿಸ್ತಿನ ಸಿಪಾಯಿಗಳಂತೆ ಇರುವ ಈ ಗಗನಸಖಿಯರು ವಿಮಾನದಲ್ಲಿರುವ ಪ್ರಯಾಣಿಕರ ಸಹಾಯಕ್ಕೆ ಇರುತ್ತಾರೆ, ನೀವು ವಿಮಾನಯಾನ ಆರಂಭಿಸುವ ಮೊದಲು ನಿಮಗೆ ನೀವು ಕ್ರಮಿಸುತ್ತಿರುವ ದಾರಿ, ದೂರ ಇವುಗಳ ಬಗ್ಗೆ ಪೈಲಟ್ ಹೇಳಿದರೆ ವಿಮಾನದ ಒಳಗಡೆ ಯಾವ ರೀತಿ ಇರಬೇಕೆಂದು ಗಗನಸಖಿಯರು ತಿಳಿಸುತ್ತಾರೆ. ಒಂದು ವಿಮಾನ ಯಶಸ್ವಿಯಾಗಿ ಟೇಕ್ ಆಫ್ ಆಗಲು ಹಾಗು ಲ್ಯಾಂಡಿಂಗ್ ಆಗಲು ಗಗನಸಖಿಯರ ಪಾತ್ರ ಕೂಡ ಪ್ರಮುಖವಾದದ್ದು, ನಿಮ್ಮ ವಿಮಾನ ಪ್ರಯಾಣ ಆರಂಭವಾಗುವ ಮೊದಲು ಈ ಗಗನಸಖಿಯರು ವಿಮಾನದ ಬಗ್ಗೆ ತಿಳಿಸಿಕೊಡುತ್ತಾರೆ. ಹೌದು ಯಾವ ರೀತಿ ಸೀಟ್ ಬೆಲ್ ಹಾಕಿಕೊಳ್ಳಬೇಕು, ಯಾವ ರೀತಿಯ ಎಮೆರ್ಜೆನ್ಸಿ ವ್ಯವಸ್ಥೆಗಳಿವೆ ಮತ್ತು ಯಾವ ಸಂದರ್ಭದಲ್ಲಿ ನಿಮ್ಮ ಫೋನ್ ಆಫ್ ಆಗಿರಬೇಕು ಹೀಗೆ ವಿವಿಧ ಮಾಹಿತಿಗಳನ್ನು ನಿಮ್ಮ ಎದುರೇ ನಿಂತು ಹೇಳುತ್ತಾರೆ.

Air hostess Salary

ಇಷ್ಟೆಲ್ಲ ಕರ್ತವ್ಯ ನಿರ್ವಹಣೆ ಮಾಡುವ ಈ ಗಗನಸಖಿಯರ ಸಂಬಳ ಎಷ್ಟಿರುತ್ತದೆ ಗೊತ್ತಾ, ಹಾಗಾದರೆ ಒಬ್ಬ ಗಗನಸಖಿಯ ಸಂಬಳ ಎಷ್ಟಿರುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಗಗನಸಖಿರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ವಿಮಾನ ಯಾನದಲ್ಲಿ ಎರಡು ರೀತಿಗಳಿವೆ, ಒಂದು ಡೊಮೆಸ್ಟಿಕ್ ಇನ್ನೊಂದು ಇಂಟರ್ ನ್ಯಾಷನಲ್, ದೇಶದೊಳಗೆ ಸಂಚರಿಸುವ ಯಾನವನ್ನು ಡೊಮೆಸ್ಟಿಕ್ ಫ್ಲೈಟ್ ಎನ್ನುತ್ತೇವೆ ಹಾಗೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಪ್ರಯಾಣಿಸುವುದನ್ನು ಇಂಟರ್ ನ್ಯಾಷನಲ್ ಫ್ಲೈಟ್ ಎನ್ನುತ್ತೇವೆ. ಇನ್ನು ಇಂಟೆರ್ ನ್ಯಾಷನಲ್ ವಿಮಾನದಲ್ಲಿ ಕಾರ್ಯ ನಿರ್ವಹಿಸುವ ಗಗನಸಖಿರ ಸಂಬಳ ಸಾಮಾನ್ಯವಾಗಿ 20000 ರೂನಿಂದ 80000 ರೂ ತನಕ ಇರುತ್ತದೆ.

ಡೊಮೆಸ್ಟಿಕ್ ಫ್ಲೈಟ್ ಗಳಲ್ಲಿ ಸಾಮಾನ್ಯವಾಗಿ 20 ರಿಂದ 35 ಸಾವಿರದವರೆಗೆ ಸಂಬಳ ನಿಗದಿಯಾಗಿರುತ್ತದೆ, ಅವರ ಅನುಭವ ಹಾಗು ಕಾರ್ಯಕ್ಷಮತೆಯ ಮೇಲೆ ಇದು 80 ಸಾವಿರ ಕೂಡ ಇರಬಹುದು. ಇಷ್ಟೇ ಅಲ್ಲದೆ ಕೆಲ ವಿಮಾನಯಾನ ಸಂಸ್ಥೆಗಳು ತಮ್ಮ ಅನುಭವಿ ಗಗನಸಖಿಯರಿಗೆ ಅಂತಾರಾಷ್ಟ್ರೀಯ ಯಾನದಲ್ಲಿ ಒಂದು ಲಕ್ಷದಿಂದ ಎರಡು ಲಕ್ಷದವರೆಗೆ ವೇತನ ನೀಡುತ್ತಾರೆ, ಇದರ ಜೊತೆ ಗಗನಸಖಿಯರಿಗೆ ಹೆಚ್ಚುವರಿಯಾಗಿ, ಕಂಪನಿಗಳು ವೈದ್ಯಕೀಯ ವಿಮೆ, ನಿವೃತ್ತಿ ಯೋಜನೆಗಳು ಮತ್ತು ವಿಮಾನ ಟಿಕೆಟ್‌ಗಳಲ್ಲಿ ರಿಯಾಯಿತಿಯಂತಹ ಹೆಚ್ಚುವರಿ ಭತ್ಯೆಗಳನ್ನು ಸಹ ನೀಡುತ್ತವೆ, ಸ್ನೇಹಿತರೆ ಈ ಮಾಹಿತಿಗಳು ಅಂತರ್ಜಾಲದಲ್ಲಿ ಸಂಗ್ರಹಿಸಿದ್ದು ಹೀಗಾಗಿ ಸ್ವಲ್ಪ ಏರಿಳಿತ ಇರಬಹುದು.

Air hostess Salary

Please follow and like us:
error0
http://karnatakatoday.in/wp-content/uploads/2019/12/Air-hostess-Salary-1-1024x576.jpghttp://karnatakatoday.in/wp-content/uploads/2019/12/Air-hostess-Salary-1-150x104.jpgKarnataka Trendingಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಜೀವನದಲ್ಲಿ ಒಮ್ಮೆಯಾದರೂ ವಿಮಾನ ಪಯಣ ಮಾಡಬೇಕೆಂಬ ಅಸೆ ಎಲ್ಲರಿಗೂ ಕೂಡ ಇರುತ್ತದೆ, ಗಗನದಲ್ಲಿ ಒಮ್ಮೆ ಪ್ರಯಾಣ ಬೆಳೆಸಿ ಆ ಮಧುರ ಕ್ಷಣವನ್ನು ಎಲ್ಲರೊಂದಿಗೆ ಹಂಚಿಕೊಳ್ಳಬೇಕೆಂಬ ಆಸೆ ಕೂಡ ಪ್ರತಿಯೊಬ್ಬರಿಗೆ ಇರುತ್ತದೆ. ವಿಮಾನಗಳ ಯಾನ ಈ ಮೊದಲು ಬಹಳ ದುಬಾರಿ ಯಾನ ಎಂದೇ ಪರಿಗಣಿಸಲಾಗಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಸರ್ಕಾರದ ಹಲವು ನಿಯಮಗಳು ಭಾರತದಲ್ಲಿ ವಿಮಾನಯಾನ ಪ್ರತಿಯೊಬ್ಬ ನಾಗರಿಕನ ಕೈಗೆಟುಕುವ ದರ ಕೂಡ ನಿಗದಿ ಮಾಡಲಾಗಿದೆ ಮತ್ತು ಉಡಾನ್ ರೀತಿಯ...Film | Devotional | Cricket | Health | India