ಸಾಧನೆ ಮಾಡಲು ಮತ್ತು ಹಣವನ್ನ ಸಂಪಾದನೆ ಮಾಡಲು ಯಾವತ್ತೂ ವಯಸ್ಸು ಅಡ್ಡ ಬರುವುದಿಲ್ಲ ಅನ್ನುವುದಕ್ಕೆ ಸಾಕ್ಷಿ ಈ ಹುಡುಗಿ ಎಂದು ಹೇಳಿದರೆ ತಪ್ಪಾಗಲ್ಲ. ನಾವು ಹೇಳುವ ಈ ಹುಡುಗಿ ತನ್ನ 21 ನೇ ವಯಸ್ಸಿನಲ್ಲಿ ಇಡೀ ಪ್ರಪಂಚವೇ ತನ್ನ ಕಡೆ ನೋಡುವಂತೆ ಮಾಡಿದ್ದಾಳೆ. ಹಣವನ್ನ ಸಂಪಾದನೆ ಮಾಡಲು ನಾನಾ ರೀತಿಯ ದಾರಿಗಳಿವೆ ಈ ಪ್ರಪಂಚದಲ್ಲಿ, ಇನ್ನು ಕೆಲವರು ಹಣವನ್ನ ಸಂಪಾದನೆ ಮಾಡಲು ಅಡ್ಡ ದಾರಿಗಳನ್ನ ಹಿಡಿದರೆ ಇನ್ನು ಕೆಲವರು ಒಳ್ಳೆಯ ದಾರಿಯನ್ನ ಹಿಡಿಯುತ್ತಾರೆ, ಕೆಟ್ಟ ದಾರಿಯನ್ನ ಹಿಡಿದು ಸಂಪಾದನೆ ಮಾಡಿದ ಹಣ ಮತ್ತು ಆಸ್ತಿ ತಾತ್ಕಾಲಿಕ, ಆದರೆ ಒಳ್ಳೆಯ ದಾರಿಯನ್ನ ಹಿಡಿದು ಸಂಪಾದನೆ ಮಾಡಿದ ಹಣ ಮತ್ತು ಆಸ್ತಿ ಯಾವಾಗಲು ಶಾಶ್ವತ. ಹಾಗಾದರೆ ನಾವು ಹೇಳುತ್ತಿರುವ ಈ ಹುಡುಗಿ ಇಷ್ಟು ಹಣವನ್ನ ಹೇಗೆ ಸಂಪಾದನೆ ಮಾಡಿದಳು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈಕೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ 21 ವರ್ಷದ ಈ ಹುಡುಗಿಯ ಹೆಸರು ಅಲೆಕ್ಸಾಂಡರ್ ಅಂಡ್ರೆಸನ್, ನಾರ್ವೆ ದೇಶಕ್ಕೆ ಸೇರಿದ ಈ ಹುಡುಗಿ ಈಗ ಆ ದೇಶದ ಶ್ರೀಮಂತ ಹುಡುಗಿ. ಸಾಮಾನ್ಯವಾಗಿ ಒಬ್ಬ 17 ವರ್ಷದ ಹುಡುಗಿ ಏನು ಮಾಡುತ್ತಾಳೆ ಕಾಲೇಜ್ ಗೆ ಹೋಗುತ್ತಾಳೆ ಅಥವಾ ವಾಟ್ಸಾಪ್ ಟಿಕ್ ಟಾಕ್ ನಲ್ಲಿ ಸಮಯವನ್ನ ಕಳೆಯುತ್ತಾಳೆ, ಆದರೆ ಅಲೆಕ್ಸಾಂಡರ್ ಅಂಡ್ರೆಸನ್ ಮಾಡಿದ್ದೇನು ಎಂದು ತಿಳಿದರೆ ನೀವು ಕೂಡ ಶಾಕ್ ಆಗುತ್ತೀರಿ. ತನ್ನ ತಂದೆಯಿಂದ ತನಗೆ ಬಂದ ಸ್ವಲ್ಪ ಮಟ್ಟದ ಹಣವನ್ನ ಉಪಯೋಗಿಸಿಕೊಂಡ ಅಲೆಕ್ಸಾಂಡರ್ ಅಂಡ್ರೆಸನ್ ಅದನ್ನ ನೂರು ಪಟ್ಟು ಜಾಸ್ತಿ ಮಾಡುವುದೇ ಗುರಿಯಾಗಿಸಿಕೊಂಡಳು.

alexandra andresen

ತನಗೆ ಬಿಡುವಿನ ಸಮಯ ಇದ್ದಾಗ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಘಾಡವಾಗಿ ಅಧ್ಯಯನ ಮಾಡಿದ ಅಲೆಕ್ಸಾಂಡರ್ ಅಂಡ್ರೆಸನ್ ತನ್ನ ತಂದೆ ಕೊಟ್ಟ ಸ್ವಲ್ಪ ಮಟ್ಟದ ಹಣವನ್ನ ರಿಯಲ್ ಎಸ್ಟೇಟ್ ಮತ್ತು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಹಗಲು ರಾತ್ರಿ ಶ್ರಮಿಸಿದಳು. ಆಕೆಯ ಚಾಣಾಕ್ಷತೆ ಮತ್ತು ಪರಿಶ್ರಮಕ್ಕೆ ಕೊನೆಗೂ ಒಂದು ಒಳ್ಳೆಯ ಫಲಿತಾಂಶ ಕೂಡ ಸಿಗುತ್ತದೆ, ಹಡಿಕೆ ಮಾಡಿದ ಎಲ್ಲಾ ಕಡೆ ಹತ್ತು ಪಟ್ಟು ಲಾಭವನ್ನ ಗಳಿಸಿದಳು ಅಲೆಕ್ಸಾಂಡರ್ ಅಂಡ್ರೆಸನ್, ಇನ್ನು ಈಕೆಯ ಈಗಿನ ಆಸ್ತಿ ಬರೋಬ್ಬರಿ 8 ಸಾವಿರ ಕೋಟಿ. ಈಕೆ ಕೇವಲ ತನ್ನ 21 ವಯಸ್ಸಿನಲ್ಲಿ ನಾರ್ವೆ ದೇಶದಲ್ಲಿ ದೊಡ್ಡ ಶ್ರೀಮಂತ ವ್ಯಕ್ತಿಯಾಗಿ ಬೆಳೆದಿದ್ದಾಳೆ, ತನ್ನ 18 ನೇ ವಯಸ್ಸಿನಲ್ಲಿ ಬಿಸಿನೆಸ್ ನಲ್ಲಿ ತನ್ನನ್ನ ತೊಡಗಿಸಿಕೊಂಡ ಅಲೆಕ್ಸಾಂಡರ್ ಅಂಡ್ರೆಸನ್ ತನ್ನ 19 ನೇ ವಯಸ್ಸಿಗೆ ಪ್ರಪಂಚದ ಅತೀ ಚಿಕ್ಕ ವಯಸ್ಸಿನ ಬಿಲೇನಿಯರ್ ಪಟ್ಟವನ್ನ ತನ್ನದಾಗಿಸಿಕೊಂಡಳು.

ದೊಡ್ಡ ಶ್ರೀಮಂತೆಯಾಗಿದ್ದರೂ ತನ್ನ ಬಳಿ 8 ಸಾವಿರ ಕೋಟಿ ಆಸ್ತಿ ಇದ್ದರೂ ಕೂಡ ಅಲೆಕ್ಸಾಂಡರ್ ಅಂಡ್ರೆಸನ್ ತುಂಬಾ ಸಿಂಪಲ್, ಈಕೆ ಇಲ್ಲಿಯತನಕ ಹೊಸ ಕಾರ್ ಕೂಡ ಖರೀದಿ ಮಾಡಿಲ್ಲ ಮತ್ತು ಮನೆಯಲ್ಲಿ ಹಳೆಯದಾದ ಕಾರನ್ನೇ ಉಪಯೋಗಿಸುತ್ತಿದ್ದಾಳೆ. ಇನ್ನು ಸಾಮಾನ್ಯ ಹುಡುಗಿಯಂತೆ ಇದ್ದ ಅಲೆಕ್ಸಾಂಡರ್ ಅಂಡ್ರೆಸನ್ ನ ಬ್ಯಾಂಕ್ ಬ್ಯಾಲೆನ್ಸ್ ನೋಡಿದ ಆಕೆಯ ಸ್ನೇಹಿತೆಯರು ಒಂದು ಕ್ಷಣ ಶಾಕ್ ಆಗಿದ್ದರಂತೆ, ಇನ್ನು ಸಮಯ ಸಿಕ್ಕಾಗಲೆಲ್ಲಾ ಭಾರತಕ್ಕೆ ಭೇಟಿ ನೀಡುವ ಅಲೆಕ್ಸಾಂಡರ್ ಅಂಡ್ರೆಸನ್ ಭಾರತ ದೇಶ ಅಂದರೆ ನನಗೆ ತುಂಬಾ ಇಷ್ಟ ಎಂದು ಹೇಳಿಕೊಂಡಿದ್ದಾರೆ, ಸ್ನೇಹಿತರೆ ಅಲೆಕ್ಸಾಂಡರ್ ಅಂಡ್ರೆಸನ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

alexandra andresen

Please follow and like us:
error0
http://karnatakatoday.in/wp-content/uploads/2019/12/alexandra-andresen-1-1024x576.jpghttp://karnatakatoday.in/wp-content/uploads/2019/12/alexandra-andresen-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಸಾಧನೆ ಮಾಡಲು ಮತ್ತು ಹಣವನ್ನ ಸಂಪಾದನೆ ಮಾಡಲು ಯಾವತ್ತೂ ವಯಸ್ಸು ಅಡ್ಡ ಬರುವುದಿಲ್ಲ ಅನ್ನುವುದಕ್ಕೆ ಸಾಕ್ಷಿ ಈ ಹುಡುಗಿ ಎಂದು ಹೇಳಿದರೆ ತಪ್ಪಾಗಲ್ಲ. ನಾವು ಹೇಳುವ ಈ ಹುಡುಗಿ ತನ್ನ 21 ನೇ ವಯಸ್ಸಿನಲ್ಲಿ ಇಡೀ ಪ್ರಪಂಚವೇ ತನ್ನ ಕಡೆ ನೋಡುವಂತೆ ಮಾಡಿದ್ದಾಳೆ. ಹಣವನ್ನ ಸಂಪಾದನೆ ಮಾಡಲು ನಾನಾ ರೀತಿಯ ದಾರಿಗಳಿವೆ ಈ ಪ್ರಪಂಚದಲ್ಲಿ, ಇನ್ನು ಕೆಲವರು ಹಣವನ್ನ ಸಂಪಾದನೆ ಮಾಡಲು ಅಡ್ಡ ದಾರಿಗಳನ್ನ ಹಿಡಿದರೆ ಇನ್ನು ಕೆಲವರು...Film | Devotional | Cricket | Health | India