ಚಿಕ್ಕವರಿದ್ದಾಗ ನಾವೆಲ್ಲ ಕೇಳಿದ್ದೇವೆ ಬಾದಾಮಿ ತಿಂದರೆ ಬುದ್ದಿವಂತರಾಗುತ್ತಾರೆ. ಮೆದುಳು ಚುರುಕಾಗುತ್ತದೆ ಎನ್ನುವ ಮಾತನ್ನು ಹಾಗಾದರೆ ವೈಜ್ಞಾನಿಕವಾಗಿ ಇದೆಷ್ಟು ಸತ್ಯ ಮತ್ತು ಬಾದಾಮಿಯಲ್ಲಿ ಅಂತಹ ಯಾವ ಶಕ್ತಿ ಇದೆ. ಇಷ್ಟಕ್ಕೂ ದಿನಕ್ಕೆ 6 ಬಾದಾಮಿ ತಿಂದರೆ ನಿಮ್ಮ ಮೆದುಳಿಗೆ ಏನಾಗುತ್ತದೆ ಇದೆಲ್ಲದರ ಬಗ್ಗೆ ಇಂದು ವಿವರವಾಗಿ ತಿಳಿಸುತ್ತೇವೆ. ಬಾದಾಮಿ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಅತ್ಯುತ್ತಮವಾದ ಔಷಧಿಯಾಗಿದೆ. ಮೆದುಳು ಸಾಮರ್ಥ್ಯ ಹೆಚ್ಚಿಸಬೇಕೆಂದು ಬಯಸುವುದಾದರೆ ದಿನಾ ನಾಲ್ಕು ಬಾದಾಮಿ ಮಿಸ್‌ ಮಾಡದೆ ತಿನ್ನಿ. ದಿನಾ 6 ಬಾದಾಮಿ ನೀರಿನಲ್ಲಿ ನೆನೆಹಾಕಿ ತಿನ್ನುವುದರಿಂದ ಮೆದುಳಿನ ಸಾಮರ್ಥ್ಯ ಹೆಚ್ಚಾಗುವುದರ ಜತೆಗೆ ಬಾದಾಮಿ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಸೂಪರ್‌ಫುಡ್‌ ಆಗಿದೆ.

ಬಾದಾಮಿಯಲ್ಲಿ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಕೆಲ ಅಂಶಗಳಿವೆ ಇದೆ ಎಂದು ವೈದ್ಯರು ದ್ರಢಪಡಿಸಿದ್ದಾರೆ.ತೂಕ ಇಳಿಕೆಗೆ ಸಹಕಾರಿ.ಕಡಿಮೆ ಕ್ಯಾಲೋರಿಯ ಬಾದಾಮಿ ಹಸಿವನ್ನು ಇಂಗಿಸುತ್ತದೆ. ಇದರಿಂದ ತೂಕ ಇಳಿಕೆಗೆ ಸಹಕಾರಿ.ವಾರದಲ್ಲಿ 5 ಬಾರಿ ಬಾದಾಮಿ ತಿಂದರೆ ಹೃದಯಾಘಾತ ಆಗುವ ಬರುವ ಸಾಧ್ಯತೆ 50% ಕಡಿಮೆಯಾಗುತ್ತದೆ. ಬಾದಾಮಿಯಲ್ಲಿರುವ ರಂಜಕ ಹಾಗೂ ಕ್ಯಾಲ್ಸಿಯಂ ಮೂಳೆಗಳ ಆರೋಗ್ಯಕ್ಕೆ ತುಂಬಾ ಒಳ್ಳೆಯದು.


ಬಾದಾಮಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ, ಕೊಲೆಸ್ಟ್ರಾಲ್‌ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
ಬಾದಾಮಿಯಲ್ಲಿ ಅನೇಕ ಪೌಷ್ಠಿಕಾಂಶಗಳ ಮೂಲಗಳಿದ್ದು, ಮೆದುಳಿನ ವಿಕಾಸ ಮತ್ತು ಆರೋಗ್ಯ ರಕ್ಷಣೆಗೆ ನೆರವಾಗುತ್ತದೆ. ವಿಶೇಷವಾಗಿ ಬೆಳೆಯುತ್ತಿರುವ ಮಕ್ಕಳಿಗೆ ಸಂತುಲಿತ ಪ್ರಮಾಣದಲ್ಲಿ ಬಾದಾಮಿ ನೀಡುವುದರಿಂದ ಅವರ ಮೆದುಳಿನ ಬೆಳವಣಿಗೆ ಜೊತೆಗೆ ಅವರ ಬುದ್ಧಿಮತ್ತೆಯೂ ವೃದ್ಧಿಯಾಗುತ್ತದೆ.

ಇದರಲ್ಲಿ ಮೆದುಳಿನ ಕಾರ್ಯಕ್ಕೆ ಪ್ರಯೋಜನವಾಗುವ ರಿಬೋಫ್ಲಾವಿನ್ ಮತ್ತು ಎಲ್-ಕಾರಿಟೈನ್ ಎಂಬ ಪೌಷ್ಠಿಕಾಂಶಗಳಿವೆ.
ಇದು ಮೆದುಳಿನಲ್ಲಿರುವ ನರಗಳ ಕ್ರಿಯಾ ಚಟುವಟಿಕೆಯನ್ನು ವೃದ್ಧಿಗೊಳಿಸುತ್ತದೆ. ಇದರಿಂದ ಅಲ್‌ಝೆಮೈರ್ ರೋಗದ ಸಾಧ್ಯತೆಯನ್ನು ತಡೆಗಟ್ಟುತ್ತದೆ. ಇದರಲ್ಲಿನ ತೈಲವು (ಬಾದಾಮಿ ತೈಲ) ದೇಹದ ಸಮಗ್ರ ಆರೋಗ್ಯ ರಕ್ಷಣೆ ಮತ್ತು ನರಗಳ ಕಾರ್ಯನಿರ್ವಹಣೆಗೆ ಪ್ರಯೋಜನಕಾರಿ.

ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಣದಲ್ಲಿಡಲು ಬಾದಾಮಿ ಸಹಾಯ ಮಾಡುತ್ತದೆ ಎಂಬುದಕ್ಕೆ ಕೆಲವು ಪುರಾವೆಗಳಿವೆ.ಬಹು ಹಿಂದಿನಿಂದಲೂ ಇದನ್ನು ಚರ್ಮ,ತ್ವಚೆ ರಕ್ಷಣೆ, ಕೂದಲ ಆರೈಕೆಗೆ ಬಳಸಲಾಗುತ್ತಿದೆ. ಅನೇಕ ಪ್ರಸಿದ್ಧ ಕಂಪನಿಗಳು ತನ್ನ ಬ್ರಾಂಡ್ ಹೆಸರಿನಲ್ಲಿ ಸೋಪು, ಶಾಂಪೂ, ಹೇರ್ ಆಯಿಲ್, ಫೇಸ್‌ಪ್ಯಾಕ್ ಇತ್ಯಾದಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು. ಅಪಾರ ಬೇಡಿಕೆ ಇದೆ.

Please follow and like us:
error0
http://karnatakatoday.in/wp-content/uploads/2019/07/POWER-OF-ALMONDS-1024x576.jpghttp://karnatakatoday.in/wp-content/uploads/2019/07/POWER-OF-ALMONDS-150x104.jpgKarnataka Trendingನಗರಲೈಫ್ ಸ್ಟೈಲ್ಚಿಕ್ಕವರಿದ್ದಾಗ ನಾವೆಲ್ಲ ಕೇಳಿದ್ದೇವೆ ಬಾದಾಮಿ ತಿಂದರೆ ಬುದ್ದಿವಂತರಾಗುತ್ತಾರೆ. ಮೆದುಳು ಚುರುಕಾಗುತ್ತದೆ ಎನ್ನುವ ಮಾತನ್ನು ಹಾಗಾದರೆ ವೈಜ್ಞಾನಿಕವಾಗಿ ಇದೆಷ್ಟು ಸತ್ಯ ಮತ್ತು ಬಾದಾಮಿಯಲ್ಲಿ ಅಂತಹ ಯಾವ ಶಕ್ತಿ ಇದೆ. ಇಷ್ಟಕ್ಕೂ ದಿನಕ್ಕೆ 6 ಬಾದಾಮಿ ತಿಂದರೆ ನಿಮ್ಮ ಮೆದುಳಿಗೆ ಏನಾಗುತ್ತದೆ ಇದೆಲ್ಲದರ ಬಗ್ಗೆ ಇಂದು ವಿವರವಾಗಿ ತಿಳಿಸುತ್ತೇವೆ. ಬಾದಾಮಿ ಮೆದುಳಿನ ಸಾಮರ್ಥ್ಯ ಹೆಚ್ಚಿಸುವ ಅತ್ಯುತ್ತಮವಾದ ಔಷಧಿಯಾಗಿದೆ. ಮೆದುಳು ಸಾಮರ್ಥ್ಯ ಹೆಚ್ಚಿಸಬೇಕೆಂದು ಬಯಸುವುದಾದರೆ ದಿನಾ ನಾಲ್ಕು ಬಾದಾಮಿ ಮಿಸ್‌ ಮಾಡದೆ ತಿನ್ನಿ....Film | Devotional | Cricket | Health | India