ಮುಕೇಶ್ ಅಂಬಾನಿ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಜಿಯೋ ಅನ್ನುವ ಸಿಮ್ ಜಾರಿಗೆ ತಂದಮೇಲೆ ಚಿಕ್ಕ ಮಕ್ಕಳಿಂದ ಮುದುಕರ ವರೆಗೂ ಗೊತ್ತಿದೆ ಮುಕೇಶ್ ಅಂಬಾನಿ ಯಾರು ಅಂತ ಗೊತ್ತು, ಇನ್ನು ಕೆಲವರು ಅಂಬಾನಿ ಅವರನ್ನ ಜಿಯೋ ಅಂಬಾನಿ ಎಂದು ಕರೆಯುತ್ತಾರೆ. ದೇಶದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವ ವ್ಯಕ್ತಿ ಅಂದರೆ ಅದೂ ಮುಕೇಶ್ ಅಂಬಾನಿ ಅವರು ಆಗಿದ್ದಾರೆ, ಸ್ನೇಹಿತರೆ ನಿಮಗೆ ಮುಕೇಶ್ ಅಂಬಾನಿ ಅವರ ಬಗ್ಗೆ ತಿಳಿದಿರಬಹುದು ಆದರೆ ಅವರ ಮನೆಯ ಬಗ್ಗೆ ತಿಳಿದಿರಲು ಸಾಧ್ಯವೇ ಇಲ್ಲ. ನಾವು ಇಂದು ಅವರ ಮನೆಯ ಬಗ್ಗೆ ನಿಮಗೆ ತಿಳಿಯದ ಕೆಲವು ಆಶ್ಚರ್ಯಕರ ವಿಷಯಗಳ ಬಗ್ಗೆ ತಿಳಿಸಿಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಮುಕೇಶ್ ಅಂಬಾನಿ ಅವರ ಮನೆ 27 ಮಹಡಿಗಳನ್ನ ಹೊಂದಿದೆ ಮತ್ತು ಅವರ ಮನೆ ಸುಮಾರು 4 ಲಕ್ಷ ಚದರ ಇದೆ, ಇನ್ನು ಈ ಮನೆಯನ್ನ ನಿರ್ಮಾಣ ಮಾಡಿದ್ದು ಚಿಕಾಗೋದ ವಿನ್ಯಾಸಗಾರರು ಆಗಿದ್ದಾರೆ.

ಮುಕೇಶ್ ಅಂಬಾನಿ ಅವರ ಮನೆಯನ್ನ ಹೇಗೆ ನಿರ್ಮಾಣ ಮಾಡಲಾಗಿದೆ ಅಂದರೆ ಈ ಮನೆ ಯಾವುದೇ ರೀತಿಯ ಪ್ರಕೃತಿ ವಿಕೋಪಕ್ಕೆ ಒಳಗಾಗುವುದಿಲ್ಲ, ಹೌದು ಸ್ನೇಹಿತರೆ ಭೂಕಂಪ ಆದರೂ ಕೂಡ ಈ ಮನೆಗೆ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ. ಇನ್ನು ಈ ಮನೆಯ 27 ಅಂತಸ್ತುಗಳಲ್ಲಿ ಎಲ್ಲಾ ಅಂತಸ್ತು ಕೂಡ ಬೇರೆ ಬೇರೆ ತರನಾಗಿಯೇ ಇದೆ ಮತ್ತು ಕೆಳಗಿನ ಆರು ಅಂತಸ್ತುಗಳನ್ನ ಕೇವಲ ಕಾರುಗಳ ಪಾರ್ಕಿಂಗ್ ಮಾಡಲು ಮಾಡಲಾಗಿದೆ. ಇನ್ನು ಇದರ ಜೊತೆಗೆ ಈ ಮನೆಯ ಒಳಗಡೆ ಜಿಮ್, ಐಸ್ ಕ್ರೀಮ್ ಪಾರ್ಲರ್, ಯೋಗ, ಈಜುಕೊಳ, ಚಿತ್ರಮಂದಿರ, ಸ್ಟುಡಿಯೋ ಹೀಗೆ ಹಲವು ರೀತಿಯ ಸಕಲ ಸೌಕರ್ಯಗಳು ಇರುವ ಮನೆ ಮುಕೇಶ್ ಅಂಬಾನಿಯವರದ್ದು ಆಗಿದೆ.

Ambani home electricity bill

ಮುಕೇಶ್ ಅಂಬಾನಿಯವರ ಮನೆಯಲ್ಲಿ ಸುಮಾರು 600 ಕೆಲಸಗಾರರು ಕೆಲಸವನ್ನ ಮಾಡುತ್ತಿದ್ದಾರೆ, ಆದರೆ ಇಷ್ಟು ದೊಡ್ಡ ಮನೆಯಲ್ಲಿ ವಾಸ ಮಾಡುತ್ತಿರುವುದು ಐದು ಜನ ಮಾತ್ರ, ಹೌದು ಸ್ನೇಹಿತರೆ ಮುಕೇಶ್ ಅಂಬಾನಿ ಮತ್ತು ಅವರ ಪತ್ನಿಯ ಜೊತೆಗೆ ಮೂವರು ಮಕ್ಕಳು ಈ ಮನೆಯಲ್ಲಿ ವಾಸವಿದ್ದಾರೆ. ಇನ್ನು ಮುಂಬೈ ನಲ್ಲಿ ಬೇಸಿಗೆ ಸಮಯದಲ್ಲಿ ಜೀವನವನ್ನ ಮಾಡುವುದು ಬಹಳ ಕಷ್ಟ, ಹೌದು ಮುಂಬೈ ನಲ್ಲಿ ಬೇಸಿಗೆ ಸಮಯದಲ್ಲಿ ತುಂಬಾ ಸೆಕೆ ಇರುತ್ತದೆ, ಆದರೆ ಮುಕೇಶ್ ಅಂಬಾನಿ ಅವರ ಮನೆಯಲ್ಲಿ ಒಂದು ರೂಮ್ ಮಾಡಲಾಗಿದ್ದು ಆ ಕೋಣೆಯಲ್ಲಿ ಸೆಕೆ ಅನ್ನುವುದು ಆಗುವುದಿಲ್ಲ ಮತ್ತು ಚಳಿಗಾಲದ ಸಮಯದ ವಾತಾವರಣ ಆ ರೂಮ್ ನಲ್ಲಿ ಇರುತ್ತದೆ. ಇನ್ನು ಈ ಮನೆಯ ಸದಸ್ಯರು ಪೂಜೆಯನ್ನ ಮಾಡಲು ಮನೆಯಲ್ಲಿ ಒಂದು ದೊಡ್ಡ ದೇವಸ್ಥಾನವನ್ನ ಕೂಡ ನಿರ್ಮಾಣ ಮಾಡಲಾಗಿದೆ ಮತ್ತು ಮನೆಯ ಮೇಲೆ ಮೂರೂ ಎಲಿಪ್ಯಾಡ್ ಕೂಡ ಇದೆ.

ಇದೆ ರೀತಿಯಾಗಿ ಈ ಮನೆಯಲ್ಲಿ ತುಂಬಾ ವಿಶೇಷತೆಗಳು ಇವೆ, ಆದರೆ ಜನರಲ್ಲಿ ಇರುವ ಒಂದೇ ಒಂದೇ ಪ್ರಶ್ನೆ ಏನು ಅಂದರೆ ಇಷ್ಟು ದೊಡ್ಡ ಮನೆಯ ಒಂದು ತಿಂಗಳ ಕರೆಂಟ್ ಬಿಲ್ ಎಷ್ಟು ಬರುತ್ತದೆ ಅನ್ನುವುದು ಆಗಿದೆ, ಸ್ನೇಹಿತರೆ ಇಷ್ಟು ಸವಲತ್ತುಗಳನ್ನ ಹೊಂದಿರುವ ಈ ಮನೆಯ ಕರೆಂಟ್ ಬಿಲ್ ಕೇಳಿದರೆ ನೀವು ಒಂದು ಕ್ಷಣ ಶಾಕ್ ಆಗುವುದು ಗ್ಯಾರೆಂಟಿ. ಹೌದು ಸ್ನೇಹಿತರೆ ಈ ಮನೆಯ ಕರೆಂಟ್ ಬಿಲ್ ಒಂದು ತಿಂಗಳಿಗೆ ಸುಮಾರು 71 ಲಕ್ಷ ರೂಪಾಯಿ ಆಗಿದೆ, ಇಷ್ಟು ಸವಲತ್ತುಗಳನ್ನ ಹೊಂದಿರುವ ಈ ಮನೆ ಪ್ರಪಂಚದಲ್ಲೇ ಅತೀ ದುಬಾರಿಯಾದ ಮನೆ ಆಗಿದೆ. ಸ್ನೇಹಿತರೆ ಮುಕೇಶ್ ಅಂಬಾನಿಯವರ ಮನೆಯ ಬಗ್ಗೆ ಇನ್ನು ನಮಗೆ ತಿಳಿದುಕೊಳ್ಳುವುದು ಬಹಳಷ್ಟು ಇದೆ, ಸ್ನೇಹಿತರೆ ಅಂಬಾನಿಯವರ ಈ ಮನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Ambani home electricity bill

Please follow and like us:
error0
http://karnatakatoday.in/wp-content/uploads/2020/02/Ambani-Home-electricity-bill-2-1024x576.jpghttp://karnatakatoday.in/wp-content/uploads/2020/02/Ambani-Home-electricity-bill-2-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಮುಕೇಶ್ ಅಂಬಾನಿ ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಜಿಯೋ ಅನ್ನುವ ಸಿಮ್ ಜಾರಿಗೆ ತಂದಮೇಲೆ ಚಿಕ್ಕ ಮಕ್ಕಳಿಂದ ಮುದುಕರ ವರೆಗೂ ಗೊತ್ತಿದೆ ಮುಕೇಶ್ ಅಂಬಾನಿ ಯಾರು ಅಂತ ಗೊತ್ತು, ಇನ್ನು ಕೆಲವರು ಅಂಬಾನಿ ಅವರನ್ನ ಜಿಯೋ ಅಂಬಾನಿ ಎಂದು ಕರೆಯುತ್ತಾರೆ. ದೇಶದ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇರುವ ವ್ಯಕ್ತಿ ಅಂದರೆ ಅದೂ ಮುಕೇಶ್ ಅಂಬಾನಿ ಅವರು ಆಗಿದ್ದಾರೆ, ಸ್ನೇಹಿತರೆ ನಿಮಗೆ ಮುಕೇಶ್ ಅಂಬಾನಿ ಅವರ ಬಗ್ಗೆ ತಿಳಿದಿರಬಹುದು...Film | Devotional | Cricket | Health | India