Ambi Goft to Yash and Radhika Baby

ಯಶ್ ಮತ್ತು ರಾಧಿಕಾ ಅವರಿಗೆ ಅಂಬರೀಷ್ ಮತ್ತು ಸುಮಲತಾ ಅವರು ಅಂದರೆ ಎಲ್ಲಿಲ್ಲದ ಪ್ರೀತಿ, ಅಂಬಿ ಮತ್ತು ಸುಮಲತಾ ಅವರು ಕೂಡ ಇವರಿಬ್ಬರನ್ನ ಅಷ್ಟೇ ಪ್ರೀತಿ ಮಾಡುತ್ತಿದ್ದರು.

ಅಂಬರೀಷ್ ಅವರು ಇದ್ದ ಅಪಾರ್ಟ್ ಮೆಂಟ್ ನಲ್ಲೆ ಮನೆಯನ್ನ ಖರೀದಿ ಮಾಡಿ ಯಶ್ ಮತ್ತು ರಾಧಿಕಾ ಅವರು ಅಲ್ಲಿ ನೆಲೆಸಿದ್ದು ಇದಕ್ಕೊಂದು ನಿದರ್ಶನ ಎಂದು ಹೇಳಿದರೆ ತಪ್ಪಾಗಲ್ಲ. ಅಂಬರೀಷ್ ಮತ್ತು ಯಶ್ ಅವರ ನಡುವಿನ ಪ್ರೀತಿ ಅಪ್ಪ ಮಗನಂತೆ ಇತ್ತು, ಹಾಗಾಗಿ ಯಶ್ ಮತ್ತು ರಾಧಿಕಾ ಪಂಡಿತ್ ಅವರಿಗೆ ಹುಟ್ಟುವ ಮಗುವಿಗೆ ಅಂಬರೀಷ್ ಅವರು 1.5 ಲಕ್ಷ ಬೆಲೆಯ ದುಬಾರಿ ಗಿಫ್ಟ್ ಒಂದನ್ನ ರೆಡಿ ಮಾಡಿದ್ದರು, ಸದ್ಯ ಯಶ್ ಅವರ ಮಗಳಿಗೆ ಈ ಉಡುಗೊರೆಯನ್ನ ಸುಮಲತಾ ಅವರು ನೀಡಿದ್ದಾರೆ.

Ambi Goft to Yash and Radhika Baby

ಅಂಬರೀಷ್ ಅವರು ಯಾರಿಗೂ ಗೊತ್ತಾಗದಂತೆ ಮತ್ತು ಯಾರಿಗೂ ತಿಳಿಯದಂತೆ ತೊಟ್ಟಿಲ ಕೆಲಸವನ್ನ ಮಾಡಿಸಿದ್ದರು, ಯಶ್ ಮತ್ತು ರಾಧಿಕಾ ಅವರ ಮಗಳಿಗೆ ಸುಂದರವಾದ ತೊಟ್ಟಿಲ್ಲನ್ನ ಮಾಡಿಸಿಟ್ಟಿದ್ದರು ಅಂಬರೀಷ್ ಅವರು.

ಇನ್ನು ತೊಟ್ಟಿಲ ಬಗ್ಗೆ ಯಾರಿಗೂ ಸ್ವಲ್ಪಾನು ಮಾಹಿತಿ ಇರಲಿಲ್ಲ, ಇದೆಲ್ಲ ಗೊತ್ತಾಗಿದ್ದು ಯಶ್ ಅವರ ಮಗಳು ಹುಟ್ಟಿದ ಮೇಲೆ. ಸುಮಲತಾ ಅವರ ಮೊಬೈಲ್ ಗೆ ಸಂದೇಶವೊಂದು ಬಂತು ಮತ್ತು ಆ ಸಂದೇಶದ ಜೊತೆಗೆ ತೊಟ್ಟಿಲಿನ ಚಿತ್ರವು ಇತ್ತು.

ಇದನ್ನ ನೋಡಿ ಅಚ್ಚರಿಯಾದ ಸುಮಲತಾ ಅವರು, ನಾವು ಯಾರು ತೊಟ್ಟಿಲು ಆರ್ಡರ್ ಮಾಡಿಲ್ಲ, ನಿಮಗೆ ತಪ್ಪಾಗಿ ಸಂದೇಶ ಬಂದಿದೆ ಮತ್ತು ಇದರ ಬಗ್ಗೆ ಸತ್ಯ ಸತ್ಯತೆಯನ್ನ ತಿಳಿಯಲು ಸಂದೇಶ ಬಂದ ಮೊಬೈಲ್ ಗೆ ಕಾಲ್ ಮಾಡಿದ್ದಾರೆ ಸುಮಲತಾ ಅವರು, ಆಗ ಸತ್ಯ ಗೊತ್ತಾಗಿದೆ.

Ambi Goft to Yash and Radhika Baby

ಅದು ಕುದ್ದು ಅಂಬಿಯೇ ಆರ್ಡರ್ ಕೊಟ್ಟು ಮಾಡಿಸಿದ್ದ ತೊಟ್ಟಿಲು, ಅದಕ್ಕಿಂತ ಹೆಚ್ಚಾಗಿ ಈ ಆರ್ಡರ್ ಕೊಟ್ಟಿದ್ದು ಅಂಬರೀಷ್ ಅವರು ಅನ್ನುವುದು ಆ ಅಂಗಡಿ ಮಾಲಿಕನಿಗೆ ಗೊತ್ತಿರಲಿಲ್ಲ, ತೊಟ್ಟಿಲು ರೆಡಿ ಆದ ಆದಮೇಲೆ ತಿಳಿಸಲು ತಮ್ಮ ಪತ್ನಿ ಸುಮಲತಾ ಅವರ ನಂಬರ್ ಕೊಟ್ಟಿದ್ದರು ಅಂಬರೀಷ್.

ಸುಮಲತಾ ಅವರಿಗೆ ವಿಷಯ ಗೊತ್ತಾಗುತ್ತಿದ್ದಂತೆ, ಮೊದಲು ಯಶ್ ಗೆ ಕಾಲ್ ಮಾಡಿ ಹೇಳಿದ ಮಾತು ಏನು ಅಂದರೆ, ‘ನಿಮ್ಮ ಅಪ್ಪಾಜಿ ಸ್ವರ್ಗದಿಂದಲೇ ನಿಮ್ಮ ಮಗಳಿಗೆ ತೊಟ್ಟಿಲ್ಲನ್ನ ಕಳುಹಿಸಿದ್ದಾರೆ, ನಿಮ್ಮ ಮಗಳು ಪುಣ್ಯವಂತೆ’ ಎಂದು ಹೇಳಿದರು ಸುಮಲತಾ. ತಾಯಿ ಆಡಿದ ಮಾತಿಗೆ ಪ್ರತಿಕ್ರಿಯೆ ನೀಡಲು ಸಾಧ್ಯವಾಗದೆ ಯಶ್ ಮೌನವಾಗಿ ನಿಂತರು, ಸ್ನೇಹಿತರೆ ಈ ತೊಟ್ಟಿಲ್ಲ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Ambi Goft to Yash and Radhika Baby

Please follow and like us:
0
http://karnatakatoday.in/wp-content/uploads/2018/12/Ambi-Goft-to-Yash-and-Radhika-Baby-1024x576.jpghttp://karnatakatoday.in/wp-content/uploads/2018/12/Ambi-Goft-to-Yash-and-Radhika-Baby-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಯಶ್ ಮತ್ತು ರಾಧಿಕಾ ಅವರಿಗೆ ಅಂಬರೀಷ್ ಮತ್ತು ಸುಮಲತಾ ಅವರು ಅಂದರೆ ಎಲ್ಲಿಲ್ಲದ ಪ್ರೀತಿ, ಅಂಬಿ ಮತ್ತು ಸುಮಲತಾ ಅವರು ಕೂಡ ಇವರಿಬ್ಬರನ್ನ ಅಷ್ಟೇ ಪ್ರೀತಿ ಮಾಡುತ್ತಿದ್ದರು. ಅಂಬರೀಷ್ ಅವರು ಇದ್ದ ಅಪಾರ್ಟ್ ಮೆಂಟ್ ನಲ್ಲೆ ಮನೆಯನ್ನ ಖರೀದಿ ಮಾಡಿ ಯಶ್ ಮತ್ತು ರಾಧಿಕಾ ಅವರು ಅಲ್ಲಿ ನೆಲೆಸಿದ್ದು ಇದಕ್ಕೊಂದು ನಿದರ್ಶನ ಎಂದು ಹೇಳಿದರೆ ತಪ್ಪಾಗಲ್ಲ. ಅಂಬರೀಷ್ ಮತ್ತು ಯಶ್ ಅವರ ನಡುವಿನ ಪ್ರೀತಿ ಅಪ್ಪ ಮಗನಂತೆ ಇತ್ತು, ಹಾಗಾಗಿ...Kannada News