ಜನರು ಎಷ್ಟೇ ಸಿನಿಮಾ ನೋಡಿದರೂ ಕೂಡ ಕಿರುತೆರೆ ನಟಿಯರು ಅವರಿಗೆ ಬಹಳ ಬೇಗ ಇಷ್ಟ ಆಗಿ ಬಿಡುತ್ತಾರೆ ಏಕೆಂದರೆ ದಿನಾಲೂ ತಾವು ಕೂತು ನೋಡುವ ಧಾರವಾಹಿ ಅಷ್ಟೊಂದು ಮನರಂಜನೆ ಹಾಗು ಅಭಿಮಾನ ಬೆಳೆಸುತ್ತದೆ ಎನ್ನುವದರಲ್ಲಿ ಎರಡು ಮಾತಿಲ್ಲ. ಇದೆ ರೀತಿ ಕುಲವಧು ಧಾರವಾಹಿ ಮೂಲಕ ಅಪಾರ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾದ ನಟಿ ಅಮೃತ ಈಕೆಯ ನಟನೆಯ ಬಗ್ಗೆ ಹೇಳುವುದೇ ಬೇಕಾಗಿಲ್ಲ, ಕರುನಾಡಿನ ಮನೆಮಗಳು ಎಂದರು ತಪ್ಪಾಗಲಾರದು. ಇನ್ನು ಸದ್ಯಕ್ಕೆ ಅಮೃತ ಮದ್ವೆ ವಿಷ್ಯ ಈಗ ಅಂತರ್ಜಾಲದಲ್ಲಿ ಹರಿದಾಡುತ್ತಿದೆ.  ಇಷ್ಟಕ್ಕೂ ಈ ಸುದ್ದಿಯತ್ತ ಒಮ್ಮೆ ನಾವು ಗಮನಹರಿಸೋಣ ಬನ್ನಿ. ಸೋಶಿಯಲ್ ಮೀಡಿಯಾದಲ್ಲಿ ಇವರು ಹಂಚಿಕೊಂಡಿರುವ ವಿಷಯವೇನು ನೋಡೋಣ.

ಖಾಸಗಿ ವಾಹಿನಿಯಲ್ಲಿ ಪ್ರಸಾರ ಕಂಡು ಮೆಚ್ಚುಗೆ ಗಳಿಸಿದ್ದ “ಮಿ. ಆಂಡ್ ಮಿಸೆಸ್ ರಂಗೇಗೌಡ” ಧಾರಾವಾಹಿಯ ಪಾತ್ರಧಾರಿ ರಘು ಹಾಗೂ “ಕುಲವಧು” ಖ್ಯಾತಿಯ ಅಮೃತಾ ಹಸೆಮಣೆ ಏರಲು ಸಿದ್ದರಾಗಿದ್ದಾರೆ. ರಘು ಹಾಗೂ ಅಮೃತಾ ಪರಸ್ಪರ ಪ್ರೀತಿಸುತ್ತಿದ್ದರು. ಅವರ ನಿಶ್ಚಿತಾರ್ಥ ಇತ್ತೀಚೆಗಷ್ಟೇ ಸಂಪನ್ನವಾಗಿದ್ದು ಬರುವ ಮೇ 12ಕ್ಕೆ ವಿವಾಹವಾಗಲಿದ್ದಾರೆ. ಈ ಸಂಬಂಧ ಸ್ವತಃ ರಘು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.

“ಮಿ ಆಂಡ್ ಮಿಸೆಸ್ ರಂಗೇಗೌಡ” ಧಾರಾವಾಹಿಯಲ್ಲಿ ಇದೇ ಜೋಡಿ ಐಶ್ವರ್ಯಾ ಹಾಗೂ ರಂಗೇಗೌಡರಾಗಿ ಕಾಣಿಸಿಕೊಂಡಿದ್ದು ಅವರಿಗೆ “ಬೆಸ್ಟ್ ಜೋಡಿ” ಎಂಬ ಅವಾರ್ಡ್  ದೊರಕಿತ್ತು.”ನಾವು ಒಟ್ಟಾಗಿ ಧಾರಾವಾಹಿಯಲ್ಲಿ ಅಭಿನಯಿಸಿದ್ದೆವು, ಆ ವೇಳೆ ನಮ್ಮಿಬ್ಬರಲ್ಲಿ ಉತ್ತಮ ಸ್ನೇಹ ಸಂಬಂಧವಿತ್ತು.ಧಾರಾವಾಹಿ ಮುಗಿದ ಬಳಿಕ ಅವರನ್ನೊಮ್ಮೆ ಭೇಟಿಯಾಗಿದ್ದು ನನ್ನ ಮನಸ್ಸಿನ ಭಾವನೆ ಹಂಚಿಕೊಂಡೆ.

ಇದೀಗ ಅಮೃತಾ ಸಹ ಅದಕ್ಕೊಪ್ಪಿಗೆ ಸೂಚಿಸಿದ್ದು ನಾವಿಬ್ಬರೂ ಪರಸ್ಪರರನ್ನು ಅರಿತು ವಿವಾಹವಾಗುತ್ತಿದ್ದೇವೆ, ಇದಕ್ಕಾಗಿ ಇಬ್ಬರೂ ನಮ್ಮ ನಮ್ಮ ಕುಟುಂಬದ ಒಪ್ಪಿಗೆಯನ್ನೂ ಪಡೆಯಲು ಯಶಸ್ವಿಯಾಗಿದ್ದೇವೆ” ರಘು ಹೇಳಿದ್ದಾರೆ. ಜನಮೆಚ್ಚಿದ ಈ ಎರಡು ಜೋಡಿಗಳು ರಿಯಲ್ ಲೈಫ್ ನಲ್ಲೂ ಒಂದಾಗುತ್ತಿರುವುದು ಬಹಳಷ್ಟು ಖುಷಿ ನೀಡಿದೆ, ಇವರಿಬ್ಬರ ಮುಂದಿನ ಬದುಕು ಹೀಗೆ ನಗು ನಗುತ್ತ ಇರಲಿ ಎಂದು ಹಾರೈಸೋಣ. ಈ ಜೋಡಿಯ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Please follow and like us:
0
http://karnatakatoday.in/wp-content/uploads/2019/02/kulavadhu-1024x576.jpghttp://karnatakatoday.in/wp-content/uploads/2019/02/kulavadhu-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಚಲನಚಿತ್ರಜನರು ಎಷ್ಟೇ ಸಿನಿಮಾ ನೋಡಿದರೂ ಕೂಡ ಕಿರುತೆರೆ ನಟಿಯರು ಅವರಿಗೆ ಬಹಳ ಬೇಗ ಇಷ್ಟ ಆಗಿ ಬಿಡುತ್ತಾರೆ ಏಕೆಂದರೆ ದಿನಾಲೂ ತಾವು ಕೂತು ನೋಡುವ ಧಾರವಾಹಿ ಅಷ್ಟೊಂದು ಮನರಂಜನೆ ಹಾಗು ಅಭಿಮಾನ ಬೆಳೆಸುತ್ತದೆ ಎನ್ನುವದರಲ್ಲಿ ಎರಡು ಮಾತಿಲ್ಲ. ಇದೆ ರೀತಿ ಕುಲವಧು ಧಾರವಾಹಿ ಮೂಲಕ ಅಪಾರ ಕನ್ನಡಿಗರ ಮೆಚ್ಚುಗೆಗೆ ಪಾತ್ರವಾದ ನಟಿ ಅಮೃತ ಈಕೆಯ ನಟನೆಯ ಬಗ್ಗೆ ಹೇಳುವುದೇ ಬೇಕಾಗಿಲ್ಲ, ಕರುನಾಡಿನ ಮನೆಮಗಳು ಎಂದರು ತಪ್ಪಾಗಲಾರದು. ಇನ್ನು ಸದ್ಯಕ್ಕೆ...Kannada News