Andrew father in Big boss

ಬಿಗ್ ಬಾಸ್ ಕನ್ನಡ ಸೀಸನ್ 6 ರಲ್ಲಿ ಒಂದೊಂದು ಕ್ಯಾರೆಕ್ಟರ್ ಒಂದೊಂದು ರೀತಿ, ಇನ್ನು ಶೋ ಆರಂಭದಿಂದಲೂ ಕಿರಿಕ್ ಮಾಡುತ್ತಿದ್ದರು ಆಂಡಿ, ಇನ್ನು ಆಂಡಿಯ ನಡವಳಿಕೆ ಕೆಲವರಿಗೆ ಇಷ್ಟ ಆಗುತ್ತಿದ್ದರೂ ಕೂಡ ಅವರು ಹೆಣ್ಣು ಮಕ್ಕಳ ಜೊತೆ ನಡೆದುಕೊಂಡ ರೀತಿ ಹಲವರಿಗೆ ಇರಿಸು ಮುರಿಸು ತಂದಿದ್ದಂತೂ ನಿಜ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಂಡಿಯ ಪರವಾಗಿ ಮಾತನಾಡಿದರೆ ಕೆಲವು ಆಂಡಿಯ ವಿರುದ್ಧವಾಗಿ ಮಾತನಾಡುತ್ತಿದ್ದರು.

ಇನ್ನು ಈ ವಾರ ಬಿಗ್ ಬಾಸ್ ಮನೆಗೆ ಸ್ಪರ್ದಿಯ ಮನೆಯವರು ಬಂದರು, ಇನ್ನು ಅಲ್ಲಿಗೆ ಬಂದ ಸ್ಪರ್ದಿಯ ಮನೆಯವರು ಮಕ್ಕಳನ್ನ ಕಂಡು ಕಣ್ಣೀರಿಟ್ಟರು, ಅತ್ತರು ಮತ್ತು ತಬ್ಬಿ ಮುದ್ದಾಡಿದರು, ಅಕ್ಷತಾ ಏನೇ ತಪ್ಪು ಮಾಡಿದ್ದರು ಅವರ ಅಮ್ಮ ಬಂದು ಮುದ್ದಾಡಿ ಮಗಳ ಬಳಿ ಗೆದ್ದು ಬಾ ಅಂದರು.

Andrew father in Big boss

ಇನ್ನು ಧನರಾಜ್ ಅವರ ಹೆಂಡತಿ ಬಿಗ್ ಬಾಸ್ ಮನೆಗೆ ಬಂದು ಪತಿಗೆ ಪ್ರೀತಿಯ ಮಳೆಗೆರೆದರು, ಇನ್ನು ನವೀನನ ಅಮ್ಮ ಬಂದು ಎಲ್ಲರಿಗೂ ಪ್ರೀತಿ ಕೊಟ್ಟು ಹೋದರು. ಇನ್ನು ಕವಿತಾ ಅವರ ಅಮ್ಮ ಬಂದು ಎಲ್ಲರಿಗೆ ಜೋಷ್ ತುಂಬಿದರು, ರಶ್ಮಿಯ ಪತಿ ಬಂದು ಹೆಂಡತಿಗೆ ಧೈರ್ಯ ತುಂಬಿ ಹೋದರು, ಇನ್ನು ಅಲ್ಲಿಗೆ ಬಂದ ಆಂಡಿ ಅವರ ಅಪ್ಪ ಮಾಡಿದ್ದೆ ಬೇರೆ.

ಇನ್ನು ಆಂಡಿ ಅವರ ಅಪ್ಪ ಮನೆಯೊಳಗೇ ಬರುತ್ತಿದ್ದಂತೆ ಸ್ಟ್ಯಾಚ್ಯು ನಲ್ಲಿ ಇದ್ದರೂ ಕೂಡ ಆಂಡಿಯನ ಎಳೆದುಕೊಂಡು ಮನೆಯಿಂದ ಹೊರಗೆ ನಡೆದಿದ್ದಾರೆ. ಇನ್ನು ಎಲ್ಲಾ ಸ್ಪರ್ದಿಗಳು ಅಂಕಲ್ ಆಂಡಿಯನ್ನ ಕ್ಷಮಿಸಿ, ಆಂಡಿ ಮನೆಯಲ್ಲೇ ಇರಲಿ ಎಂದು ಎಷ್ಟೇ ಬೇಡಿಕೊಂಡರು ಆಂಡಿಯ ಅಪ್ಪ ಇಲ್ಲ ಇವನು ನಿಮಗೆ ತುಂಬಾ ನೋವನ್ನ ಕೊಟ್ಟಿದ್ದಾನೆ, ಇವನು ಬಿಗ್ ಬಾಸ್ ಮನೆಯಲ್ಲಿ ಇರುವುದು ಬೇಡ ಎಂದು ಎಳೆದುಕೊಂಡು ಹೋದರು.

Andrew father in Big boss

ಆಂಡಿ ಅಪ್ಪನ ಬಳಿ 80 ದಿನ ಆಗಿದೆ, ಇಷ್ಟು ದಿನ ಕಷ್ಟ ಪಟ್ಟು ಆಡಿದ್ದೀನಿ ನನಗೆ ಇಲ್ಲಿ ಇರಲಿ ಬಿಡಿ ಎಂದು ಎಷ್ಟೇ ಅಂಗಲಾಚಿದರೂ ಅಪ್ಪ ಮಾತ್ರ ಬಿಡಲೇ ಇಲ್ಲ, ಇನ್ನು ನೀನು ಇಲ್ಲಿ ಬಂದಿರುವುದು ಎಲ್ಲರ ಪ್ರೀತಿಯನ್ನ ಸಂಪಾದಿಸಲು ಆದರೆ ನೀನು ಮಾಡುತ್ತಿರುವುದು ಎಲ್ಲರಿಗೂ ತೊಂದರೆ ಕೊಡುವ ಕೆಲಸ ಎಂದು ಆಂಡಿ ಅಪ್ಪ ಬಿಗ್ ಬಾಸ್ ಕ್ಯಾಮೆರಾ ಮುಂದೆ ಬಿಗ್ ಬಾಸ್ ನಾನು ಆಂಡಿಯನ್ನ ಕರೆದುಕೊಂಡು ಹೋಗುತ್ತಿದ್ದೇನೆ ಎಂದು ಹೇಳಿ ಆಂಡಿಯನ್ನ ಕರೆದುಕೊಂಡು ಹೋಗೆ ಬಿಟ್ಟರು.

ಇನ್ನು ಬಿಗ್ ಬಾಸ್ ಆಂಡಿ ಅವರ ತಂದೆಯ ನಿರ್ಧಾರಕ್ಕೆ ಏನೆನ್ನುತ್ತಾರೆ ಎಂದು ನಾವು ನಾಳೆಯ ವರೆಗೂ ಕಾದು ನೋಡಬೇಕಾಗಿದೆ, ಒಂದು ವೇಳೆ ಆಂಡಿ ಮನೆಯಿಂದ ಹೊರಗೆ ಹೋದರೆ ಬಾಗ್ ಬಾಸ್ ಇತಿಹಾಸದಲ್ಲೇ ಇದೆ ಮೊದಲ ಬಾರಿಗೆ ಅಪ್ಪನೇ ಮಗನನ್ನ ಕರೆದುಕೊಂಡು ಹೋದಂತ್ತಾಗುತ್ತದೆ.

ಆಂಡಿಯ 80 ದಿನದ ಕನಸು ನುಚ್ಚು ನೂರಾಗುತ್ತದೆಯೋ ಅಥವಾ ಆಂಡಿ ಜರ್ನಿ ಮುಂದೆವರೆಯುತ್ತದೆಯೋ ನಾವು ಕಾದು ನೋಡಬೇಕಾಗಿದೆ, ಸ್ನೇಹಿತರೆ ಆಂಡಿ ಮನೆಯಲ್ಲಿ ಇರಬೇಕಾ ಅಥವಾ ಬೇಡವಾ ಅನ್ನುವುದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Andrew father in Big boss

Please follow and like us:
0
http://karnatakatoday.in/wp-content/uploads/2019/01/Andrew-Father-in-big-boss-1024x576.jpghttp://karnatakatoday.in/wp-content/uploads/2019/01/Andrew-Father-in-big-boss-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಬಿಗ್ ಬಾಸ್ ಕನ್ನಡ ಸೀಸನ್ 6 ರಲ್ಲಿ ಒಂದೊಂದು ಕ್ಯಾರೆಕ್ಟರ್ ಒಂದೊಂದು ರೀತಿ, ಇನ್ನು ಶೋ ಆರಂಭದಿಂದಲೂ ಕಿರಿಕ್ ಮಾಡುತ್ತಿದ್ದರು ಆಂಡಿ, ಇನ್ನು ಆಂಡಿಯ ನಡವಳಿಕೆ ಕೆಲವರಿಗೆ ಇಷ್ಟ ಆಗುತ್ತಿದ್ದರೂ ಕೂಡ ಅವರು ಹೆಣ್ಣು ಮಕ್ಕಳ ಜೊತೆ ನಡೆದುಕೊಂಡ ರೀತಿ ಹಲವರಿಗೆ ಇರಿಸು ಮುರಿಸು ತಂದಿದ್ದಂತೂ ನಿಜ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಅನೇಕರು ಆಂಡಿಯ ಪರವಾಗಿ ಮಾತನಾಡಿದರೆ ಕೆಲವು ಆಂಡಿಯ ವಿರುದ್ಧವಾಗಿ ಮಾತನಾಡುತ್ತಿದ್ದರು. ಇನ್ನು ಈ ವಾರ ಬಿಗ್ ಬಾಸ್...Kannada News