ನಟ ಅನಿರುಧ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ನಟ ಅನಿರುಧ್ ಕೂಡ ಒಬ್ಬರು, ಕನ್ನಡದ ಹಲವು ಖ್ಯಾತ ನಟರ ಜೊತೆ ನಟನೆಯನ್ನ ಮಾಡಿರುವ ನಟ ಅನಿರುಧ್ ಅವರು ಕರುನಾಡಿನಲ್ಲಿ ತನ್ನದೇ ಅಭಿಮಾನಿಗಳನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಅನಿರುಧ್ ಹೆಚ್ಚಿನ ಜನ ಇವರನ್ನ ಗುರುತು ಹಿಡಿಯುವುದು ವಿಷ್ಣುವರ್ಧನ್ ಅವರ ಅಳಿಯ ಎಂದು, ಈಗ ಸದ್ಯಕ್ಕೆ ಕಿರುತೆರೆಯಲ್ಲಿ ಮಿಂಚುತ್ತಿರುವ ನಟ ಅನಿರುಧ್ ಅವರು ಆರ್ಯವರ್ಧನ್ ಹೆಸರಿನಲ್ಲಿ ಎಲ್ಲರ ಮನೆಮಾತಾಗಿದ್ದಾರೆ.

ಹೌದು ಜೀ ಕನ್ನಡ ವಾಹಿನಿಯಲ್ಲಿ ಮೂಡಿಬರುವ ಜೊತೆ ಜೊತೆ ಧಾರಾವಾಹಿಯಲ್ಲಿ ನಾಯಕತ ನಟನಾಗಿ ಅಭಿನಯ ಮಾಡುತ್ತಿರುವ ನಟ ಅನಿರುಧ್ ಆರ್ಯವರ್ಧನ್ ಅನ್ನುವ ಹೆಸರಿನಲ್ಲಿ ಎಲ್ಲರ ಗಮನವನ್ನ ಸೆಳೆದಿದ್ದಾರೆ ಮತ್ತು ಈ ಧಾರಾವಾಹಿ ಕನ್ನಡ ಕಿರುತೆರೆಯಲ್ಲಿ ಅತೀ ಹೆಚ್ಚು TRP ಪಡೆದುಕೊಂಡಿರುವ ಧಾರಾವಾಹಿ ಕೂಡ ಹೌದು. ಇನ್ನು ಅನಿರುಧ್ ಅವರು ಜೊತೆ ಜೊತೆ ಧಾರಾವಾಹಿಯಲ್ಲಿ ನಟನೆ ಮಾಡಿವುದರ ಜೊತೆಗೆ ಸಿನಿಮಾ, ಡಾಕ್ಯುಮೆಂಟರಿ ಮತ್ತು ಸಂಗೀತ ಸಂಯೋಜನೆಯಲ್ಲಿ ಬ್ಯುಸಿ ಇರುತ್ತಾರೆ ಮತ್ತು ಅದರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಕೂಡ ಸಮಯವನ್ನ ಕಳೆಯುತ್ತಾರೆ ನಟ ಅನಿರುಧ್ ಅವರು. ಇನ್ನು ಧಾರಾವಾಹಿಯಲ್ಲಿ ಕೂಡ ಸಾಮಾಜಿಕ ಕಳಕಳಿಯನ್ನ ಮೂಡಿಸುವಂತಹ ದೃಶ್ಯಗಳು ಮತ್ತು ಸಂಭಾಷಣೆಗಳು ಕೂಡ ಇದೆ.

Anirudh Mail to Modi

ಇನ್ನು ವಿಷಯಕ್ಕೆ ಬರುವುದಾದರೆ ನಟ ಅನಿರುಧ್ ಅವರು ನಮ್ಮ ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರಿಗೆ ಒಂದು ಸಂದೇಶವನ್ನ ಕಳುಹಿಸಿದ್ದಾರೆ ಮತ್ತು ಅವರ ಸಂದೇಶಕ್ಕೆ ಅಭಿಮಾನಿಗಳಿಂದ ಬಹಳ ಒಳ್ಳೆಯ ಮೆಚ್ಚುಗೆ ಕೂಡ ಬಂದಿದೆ. ಹಾಗಾದರೆ ಅನಿರುಧ್ ಅವರು ನರೇಂದ್ರ ಮೋದಿಯವರಿಗೆ ಕಳುಹಿಸಿರುವ ಸಂದೇಶದಲ್ಲಿ ಏನಿದೆ ಮತ್ತು ಯಾವುದರ ಕುರಿತಾಗಿ ಅವರು ಸಂದೇಶವನ್ನ ಕಳುಹಿಸಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಎರಡನೆಯ ಜಾಗತಿಕ ಸಮರ ಯಾರಿಗೆ ತಿಳಿದಿಲ್ಲ ನೀವೇ ಹೇಳಿ, ಇನ್ನು ಸಮರದಲ್ಲಿ ಹೋರಾಟ ಮಾಡಲು ಸುಭಾಷ್ ಚಂದ್ರ ಬೋಸ್ ಅವರು ಒಂದು ದೊಡ್ಡ ಸೇನೆಯನ್ನ ಕಟ್ಟಿದ್ದು ನಿಮಗೆಲ್ಲ ಗೊತ್ತೇ ಇದೆ ಮತ್ತು ಈ ಯುದ್ಧದಲ್ಲಿ ಹೋರಾಡಿ ಬದುಕಿಳಿದವರು ಈಗಲೂ ಇದ್ದಾರೆ ಅನ್ನುವುದು ನಟ ಅನಿರುಧ್ ಅವರ ಗಮನಕ್ಕೆ ಬಂದಿದೆ. ಹೌದು ಸ್ನೇಹಿತರೆ ಸುಭಾಷ್ ಚಂದ್ರ ಬೋಸ್ ಅವರ ಜೊತೆ ಸೇವೆಯನ್ನ ಸಲ್ಲಿಸಿದ 94 ವರ್ಷದ ಪಾಂಡಿಯ ರಾಜ್ ಅನ್ನುವ ಹೆಮ್ಮೆಯ ಸೈನಿಕ ಈಗಲೂ ಕೂಡ ಬದುಕಿದ್ದಾರೆ. ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಸೇವೆಯನ್ನ ಸಲ್ಲಿಸಿದ ಇವರು ಈಗ ತಮಿಳುನಾಡಿನ ರಾಮನಾಥಪುರಂ ನಲ್ಲಿ ವಾಸ ಮಾಡುತ್ತಿದ್ದಾರೆ.

Anirudh Mail to Modi

ಇನ್ನು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಇಂಡಿಯನ್ ನ್ಯಾಷನಲ್ ಆರ್ಮಿಯಲ್ಲಿ ಕೆಲಸ ಮಾಡಿದ 94 ವರ್ಷದ ಪಾಂಡಿಯ ರಾಜ್ ತಮಿಳುನಾಡಿನ ರಾಮನಾಥಪುರಂ ನಲ್ಲಿ ಸಣ್ಣದಾದ ಬಾಡಿಗೆ ಮೆನಯಲ್ಲಿ ವಾಸ ಮಾಡುತ್ತಿದ್ದಾರೆ ಅನ್ನುವುದು ನಿಜಕ್ಕೂ ದುರ್ವಿಧಿಯೇ ಸರಿ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇದನ್ನ ನೋಡಿದ ನಟ ಅನಿರುಧ್ ಅವರಿಗೆ ತುಂಬಾ ಬೇಸರ ಆಗಿದ್ದು ಹೆಮ್ಮೆಯ ಸೈನಿಕ ಪಾಂಡಿಯ ರಾಜ್ ಅವರಿಗೆ ಮನೆ ಸಿಗುವ ಭರವಸೆಯಿಂದ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿಯವರಿಗೆ ಈ ಮೇಲ್ ಮೂಲಕ ಸಂದೇಶವನ್ನ ಕಳುಹಿಸಿದ್ದಾರೆ ನಟ ಅನಿರುಧ್, ಇನ್ನು ನಟ ಅನಿರುಧ್ ಅವರ ಸಂದೇಶಕ್ಕೆ ಜನರಿಗೆ ಕೂಡ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ, ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2020/03/Anirudh-Mail-to-Modi-1-1024x576.jpghttp://karnatakatoday.in/wp-content/uploads/2020/03/Anirudh-Mail-to-Modi-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲನಟ ಅನಿರುಧ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಕನ್ನಡ ಚಿತ್ರರಂಗದ ಖ್ಯಾತ ನಟರಲ್ಲಿ ನಟ ಅನಿರುಧ್ ಕೂಡ ಒಬ್ಬರು, ಕನ್ನಡದ ಹಲವು ಖ್ಯಾತ ನಟರ ಜೊತೆ ನಟನೆಯನ್ನ ಮಾಡಿರುವ ನಟ ಅನಿರುಧ್ ಅವರು ಕರುನಾಡಿನಲ್ಲಿ ತನ್ನದೇ ಅಭಿಮಾನಿಗಳನ್ನ ಹೊಂದಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಅನಿರುಧ್ ಹೆಚ್ಚಿನ ಜನ ಇವರನ್ನ ಗುರುತು ಹಿಡಿಯುವುದು ವಿಷ್ಣುವರ್ಧನ್ ಅವರ ಅಳಿಯ ಎಂದು, ಈಗ ಸದ್ಯಕ್ಕೆ ಕಿರುತೆರೆಯಲ್ಲಿ ಮಿಂಚುತ್ತಿರುವ ನಟ ಅನಿರುಧ್ ಅವರು...Film | Devotional | Cricket | Health | India