ಅತ್ತಿ ಹಣ್ಣು ಅಥವಾ ಈ ಹಣ್ಣನ್ನ ಅಂಜೂರ ಹಣ್ಣು ಎಂದು ಕೂಡ ಕರೆಯುತ್ತಾರೆ, ಇನ್ನು ಈ ಹಣ್ಣಿನ ಬಗ್ಗೆ ತುಂಬಾ ಜನರಿಗೆ ಒಂದು ತಪ್ಪು ಕಲ್ಪನೆ ಇದೆ ಮತ್ತು ಈ ಹಣ್ಣು ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುವ ಭಾವನೆ ತುಂಬಾ ಜನರಿಗೆ ಇದೆ. ಸ್ನೇಹಿತರೆ ಈ ಹಣ್ಣ ತಿನ್ನುವುದರಿಂದ ಆಗುವ ಉಪಯೋಗವನ್ನ ಕೇಳಿದರೆ ನೀವು ಖಂಡಿತ ಶಾಕ್ ಆಗುತ್ತೀರಿ, ಹೌದು ಸ್ನೇಹಿತರೆ ಅಂಜೂರ ಹಣ್ಣನ್ನ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ ಲಾಭಗಳ ನಾವು ಈಗ ನಿಮಗೆ ತಿಳಿಸಿ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹಣ್ಣಿನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಮದುಮೇಹ ಅಥವಾ ಸಕ್ಕರೆ ಖಾಯಿಲೆ ಇರುವವರು ಅಂಜೂರ ಹಣ್ಣನ್ನ ಊಟದ ನಂತರ ತಿನ್ನುವುದರಿಂದ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನ ಹತೋಟಿಯಲ್ಲಿ ಇರುತ್ತದೆ ಮತ್ತು ಈ ಹಣ್ಣು ಅವರ ದೇಹಕ್ಕೆ ತುಂಬಾ ಒಳ್ಳೆಯದಾಗಿದೆ.

ಇನ್ನು ಚನ್ನಾಗಿ ಒಣಗಿದ ಅಂಜೂರ ಹಣ್ಣನ್ನ ತಿನ್ನುವುದರಿಂದ ಕ್ಯಾನ್ಸರ್ ನ ಸಮಸ್ಯೆ ದೂರವಾಗುತ್ತದೆ, ಇನ್ನು ಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿ ಜಾಸ್ತಿ ಇರುವುದರಿಂದ ನಮ್ಮ ದೇಹವನ್ನ ರೋಗಗಳಿಂದ ರಕ್ಷಿಸುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಅಂಜೂರ ಹಣ್ಣಿನಲ್ಲಿ ಕ್ಯಾಲ್ಸಿಯಂ ಅಂಶ ಜಾಸ್ತಿ ಇರುವರಿಂದ ಇದು ಮೂಲೆಗಳನ್ನ ಗಟ್ಟಿ ಮಾಡುವುದರಿಂದ ಪ್ರಮುಖ ಪಾತ್ರವನ್ನ ವಹಿಸುತ್ತದೆ ಮತ್ತು ಮೂಳೆ ಮುರಿದುಕೊಂಡಿರುವವರು ಈ ಹಣ್ಣನ್ನ ತಿಂದರೆ ಅವರ ಮೂಳೆಗಳು ಬೇಗ ಕೂಡಿಕೊಳ್ಳುತ್ತದೆ. ಇನ್ನು ಅಂಜೂರ ಹಣ್ಣಿನಲ್ಲಿ ಹೆಚ್ಚಿನ ಪೋಷಕಾಂಶ ಇರುವುದರಿಂದ ಈ ಹಣ್ಣನ್ನ ಹೆಚ್ಚಾಗಿ ಸೇವನೆ ಮಾಡಿದರೆ ನಮ್ಮ ದೇಹಕ್ಕೆ ಸಾಕಷ್ಟು ಶಕ್ತಿ ಸಿಗುತ್ತದೆ, ಇನ್ನು ಹಣ್ಣು ನಮ್ಮ ದೇಹದಲ್ಲಿನ ಕೊಬ್ಬಿನ ಅಂಶವನ್ನ ಕಡಿಮೆ ಮಾಡುವುದರಿಂದ ಈ ಹಣ್ಣನ್ನ ತಿನ್ನುವುದರಿಂದ ನಮ್ಮ ದೇಹದ ತೂಕವನ್ನ ಕಡಿಮೆ ಮಾಡಿಕೊಳ್ಳಬಹುದು.

Anjoor fruit

ಇನ್ನು ಹಣ್ಣನ್ನ ಊಟದ ಮುಂಚೆ ಸೇವನೆ ಮಾಡಿದರೆ ತುಂಬಾ ಒಳ್ಳೆಯದು, ಹೌದು ಸ್ನೇಹಿತರೆ ಈ ಹಣ್ಣನ್ನ ಊಟದ ಮುಂಚೆ ಸೇವನೆ ಮಾಡಿದರೆ ನಮಗೆ ಹೊಟ್ಟೆ ತುಂಬುತ್ತದೆ ಮತ್ತು ಹೆಚ್ಚಿನ ಊಟದ ಅವಶ್ಯಕತೆ ಇರುವುದಿಲ್ಲ ಮತ್ತು ಹೀಗೆ ಊಟ ಕಡಿಮೆ ಮಾಡಿವುದರಿಂದ ದೇಹದ ತೂಕವನ್ನ ಸಮತೋಲನದಲ್ಲಿ ಇಟ್ಟುಕೊಳ್ಳಬಹುದು. ಇನ್ನು ರಕ್ತದ ಒತ್ತಡ ಅಂದರೆ ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರು ಈ ಹಣ್ಣನ್ನ ಸೇವನೆ ಮಾಡುವುದರಿಂದ ಅವರ ರಕ್ತದ ಒತ್ತಡ ಸಮತೋಲನದಲ್ಲಿ ಇರುತ್ತದೆ, ಇನ್ನು ಈ ಹಣ್ಣು ದೇಹದಲ್ಲಿನ ಕೆಟ್ಟ ರಕ್ತವನ್ನ ಹೋಗಲಾಡಿಸಿ ರಕ್ತ ಶುದ್ದೀಕರಣದಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ.

ಇನ್ನು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು ಈ ಹಣ್ಣನ್ನ ಸೇವಿಸಿದರೆ ಅವರ ಕಾಯಿಲೆ ಹತೋಟಿಗೆ ಬರುತ್ತದೆ ಮತ್ತು ಹೃದಯ ಚನ್ನಾಗಿ ಕೆಲಸ ಮಾಡುವಂತೆ ನೋಡಿಕೊಳ್ಳುತ್ತದೆ. ಇನ್ನು ಹಣ್ಣನ್ನ ಹೆಚ್ಚಾಗಿ ಸೇವನೆ ಮಾಡಿದರೆ ಇದು ನಮ್ಮ ದೇಹದಲ್ಲಿ ಇರುವ ಕೆಟ್ಟ ಪದಾರ್ಥಗಳನ್ನ ದೇಹದಿಂದ ಹೊರಹಾಕುವಲ್ಲಿ ಪ್ರಮುಖ ಪಾತ್ರವನ್ನ ವಹಿಸುತ್ತದೆ ಮತ್ತು ಮನುಷ್ಯನ ದೇಹವನ್ನ ರೋಗ ಮುಕ್ತವಾಗಿ ಮಾಡಲು ಇದು ಸಹಕಾರಿಯಾಗಿದೆ ಮತ್ತು ಇದರಿಂದ ಆಯಸ್ಸು ಕೂಡ ವೃದ್ಧಿಯಾಗುತ್ತದೆ, ಸ್ನೇಹಿತರೆ ಈ ಹಣ್ಣಿನ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಮತ್ತು ಈ ಆರೋಗ್ಯ ಮಾಹಿತಿಯನ್ನ ತಪ್ಪದೆ ಉಳಿದವರಿಗೂ ತಲುಪಿಸಿ.

Anjoor fruit

Please follow and like us:
error0
http://karnatakatoday.in/wp-content/uploads/2019/11/Anjoor-fruit-1024x576.jpghttp://karnatakatoday.in/wp-content/uploads/2019/11/Anjoor-fruit-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಅತ್ತಿ ಹಣ್ಣು ಅಥವಾ ಈ ಹಣ್ಣನ್ನ ಅಂಜೂರ ಹಣ್ಣು ಎಂದು ಕೂಡ ಕರೆಯುತ್ತಾರೆ, ಇನ್ನು ಈ ಹಣ್ಣಿನ ಬಗ್ಗೆ ತುಂಬಾ ಜನರಿಗೆ ಒಂದು ತಪ್ಪು ಕಲ್ಪನೆ ಇದೆ ಮತ್ತು ಈ ಹಣ್ಣು ಆರೋಗ್ಯಕ್ಕೆ ಒಳ್ಳೆಯದಲ್ಲ ಅನ್ನುವ ಭಾವನೆ ತುಂಬಾ ಜನರಿಗೆ ಇದೆ. ಸ್ನೇಹಿತರೆ ಈ ಹಣ್ಣ ತಿನ್ನುವುದರಿಂದ ಆಗುವ ಉಪಯೋಗವನ್ನ ಕೇಳಿದರೆ ನೀವು ಖಂಡಿತ ಶಾಕ್ ಆಗುತ್ತೀರಿ, ಹೌದು ಸ್ನೇಹಿತರೆ ಅಂಜೂರ ಹಣ್ಣನ್ನ ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಆಗುವ...Film | Devotional | Cricket | Health | India