ಸಮಾಜ ಕಲ್ಯಾಣಕ್ಕಾಗಿ ಹಾಗು ಜನರ ಜೀವನ ಸುಧಾರಿಸಲು ಹಲವು ರೀತಿಯ ತ್ಯಾಗಗಳನ್ನು ದಾನಗಳನ್ನು ಮಾಡಿದವರ ಬಗ್ಗೆ ನೀವು ಕೇಳಿರುತ್ತೀರಿ, ಆದರೆ ಇಂದು ನಾವು ನಿಮಗೆ ಹೇಳುತ್ತಿರುವ ಈ ಸ್ಟೋರಿ ಯಾವುದೊ ಕೋಟ್ಯಧಿಪತಿ ನೀಡಿದ ದಾನದ ಬಗ್ಗೆ ಅಲ್ಲ, ಬದಲಿಗೆ ಹೃದಯ ಶ್ರೀಮಂತಿಕೆ ಇರುವ ಮತ್ತು ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವ ಒಂದು ಹೆಣ್ಣುಮಗಳ ಬಗ್ಗೆ. ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಈ ಹೆಣ್ಣುಮಗಳು ಅದೆಂತಹ ಕಾರ್ಯ ಮಾಡಿದ್ದಾಳೆ ಎಂದು ಇಂದು ನಾವು ನಿಮಗೆ ತಿಳಿಸಿದರೆ ಖಂಡಿತ ನೀವು ಆಕೆಯನ್ನು ಕೊಂಡಾಡುತ್ತೀರಿ. ಹೌದು ಕೇರಳದ ತ್ರಿಶೂರ್ ಜಿಲ್ಲೆಯಲ್ಲಿ ನಡೆದ ಈ ಘಟನೆ ಸದ್ಯಕ್ಕೆ ವಿಶ್ವದಾದ್ಯಂತ ಭಾರಿ ವೈರಲ್ ಆಗುತ್ತಿದೆ.

ಹೌದು ತ್ರಿಶೂರ್ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅಪರ್ಣಾ ಲವಕುಮಾರ್ ಇದೀಗ ತನ್ನ ಕೇಶವನ್ನು ಸಂಪೂರ್ಣ ತೆಗೆಯುವುದರ ಮೂಲಕ ಸದ್ಯಕ್ಕೆ ಎಲ್ಲರ ಗಮನಸೆಳೆದಿದ್ದಾರೆ , ಇಷ್ಟಕ್ಕೂ ಇಂಥ ದಿಟ್ಟ ನಿರ್ಧಾರವನ್ನು ಅವರೇಕೆ ತಗೆದುಕೊಂಡ್ರು ಗೊತ್ತಿದೆಯಾ, ಅದರ ಬಗ್ಗೆ ಸಂಪೂರ್ಣ ವರದಿ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ನಿಮಗೆಲಾ ತಿಳಿದಿರಬಹುದು ಕನಸರ್ ಎನ್ನುವುದು ಎಷ್ಟು ಭಯಾನಕ ರೋಗ ಎಂದು ಒಮ್ಮೆ ಬಂತೆಂದರೆ ಇದರ ಚಿಕೆತ್ಸೆ ಬಹಳ ದುಬಾರಿ ಮತ್ತು ಅತ್ಯಂತ ಕಷ್ಟವಾದ ಸ್ಥಿತಿಯನ್ನು ಅನುಭವಿಸಬೇಕಾಗುತ್ತದೆ. ಕಾನ್ಸರ್ ರೋಗಕ್ಕೆ ಚಿಕಿತ್ಸೆ ಎಂದರೆ ಅದು ಕೀಮೋಥೆರಪಿ, ಈ ಚಿಕಿತ್ಸೆ ಮಾಡಿಸುವಾಗ ನೆತ್ತಿಯ ಕೂದಲುಗಳು ಬಹಳ ಬೇಗನೆ ಉದುರಿಹೋಗುತ್ತವೆ.

ಸಾಮಾನ್ಯವಾಗಿ ಇದರ ಬಗ್ಗೆ ನೀವು ಟಿವಿ ಮಾಧ್ಯಮಗಳಲ್ಲಿ ನೋಡಿರಬಹುದು, ಕಾನ್ಸರ್ ರೋಗಿಗಳು ತಲೆಯಲ್ಲಿ ಸಾಮನ್ಯವಾಗಿ ಕೂದಲುಗಳು ಇರುವುದಿಲ್ಲ. ಒಮ್ಮೊಮ್ಮೆ ಈ ಕೂದಲು ಉದುರುವುದು ಕಾನ್ಸರ್ ರೋಗಿಗಳಿಗೆ ಮಾನಸಿಕವಾಗಿ ಕೂಡ ಪ್ರಭಾವ ಬೀರುತ್ತದೆ, ಇದೆ ಕಾರಣಕ್ಕಾಗಿ ಅಪರ್ಣಾ ಕಾನ್ಸರ್ ರೋಗಿಗಳಿಗೆ ವಿಗ್ ತಯಾರಿಸಲು ತನ್ನ ಕೇಶ ರಾಶಿಯನ್ನು ಸಂಪೂರ್ಣವಾಗಿ ತಗೆದುಕೊಂಡಿದ್ದಾರೆ. ಈ ಒಂದು ವಿಷಯಕ್ಕಾಗಿ ದೇಶಾದ್ಯಂತ ಅಪರ್ಣಾ ಮಾಡಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇನ್ನು ಅಪರ್ಣ ಅವರ ಕಾರ್ಯವನ್ನು ಬಾಲಿವುಡ್ ನಟಿ ಅನುಷ್ಕಾ ಶ್ರಮ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡು ನಿಮಗೊಂದು ಸಲಾಂ ಎಂದು ಹೇಳುವ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅಪರ್ಣ ಅವರು ನಾನೇನು ದೊಡ್ಡ ಸಾಧನೆ ಮಾಡಿಲ್ಲ, ಈ ಹೊಗಳಿಕೆ ಅಗತ್ಯವಿಲ್ಲ, ನನ್ನ ಕೂದಲುಗಳು ವರುಷದೊಳಗೆ ಮತ್ತೆ ಬೆಳೆಯುತ್ತದೆ ಆದರೆ ನಿಜವಾದ ಹೀರೋಗಳೆಂದರೆ ಅಂಗ ದಾನವನ್ನು ಮಾಡುವ ಮಹಾ ದಾನಿಗಳು ಎಂದಿದ್ದಾರೆ. ಕೇಶಗಳು ನಿಮ್ಮ ಅಂದವನ್ನು ಹೆಚ್ಚಿಸುತ್ತದೆ ಅಷ್ಟೇ, ಅಂದದಿಂದ ಏನು ಸಾಧ್ಯವಿಲ್ಲ ಮಹತ್ವದ ಕೆಲಸಗಳನ್ನು ಮಾಡುವುದು ಮುಖ್ಯ ಎಂದಿದ್ದಾರೆ.

ಅಪರ್ಣ ಸಾಮಾಜಿಕ ಸೇವೆಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡುವುದು ಇದೇ ಮೊದಲಲ್ಲ, ಇದಕ್ಕೂ ಮೊದಲು, 10 ವರ್ಷಗಳ ಹಿಂದೆ, ಅವರು ಮತ್ತೊಮ್ಮೆ ಚರ್ಚೆಯ ವಿಷಯವಾದರು. ಆಗ ಮೃತ ದೇಹವನ್ನು ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಲು ಬಡ ಕುಟುಂಬಕ್ಕೆ ಹಣವಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಅಪರ್ಣ ತನ್ನ ಮೂರು ಚಿನ್ನದ ಉಂಗುರಗಳನ್ನು ದಾನ ಮಾಡಿದ್ದರು. ಮೊದಲಿನಿಂದಲೂ ಅಪರ್ಣ ಅವರು ತನ್ನ ಕೂದಲನ್ನು ಸ್ವಲ್ಪ ಸಲ್ಪ ದಾನ ಮಾಡುತ್ತಲೇ ಬಂದಿದ್ದರಂತೆ, ಆದರೆ ಈ ಬಾರಿ ಪೂರ್ಣ ಪ್ರಮಾಣದಲ್ಲಿ ದಾನ ಮಾಡುವ ಮೂಲಕ ಹೃದಯವಂತಿಕೆ ಪ್ರದರ್ಶಿಸಿದ್ದಾರೆ. ದೇವರು ಇವರಿಗೆ ಒಳ್ಳೆಯದನ್ನು ಮಾಡಲಿ, ನಿಮಗೂ ಕೂಡ ಇವರ ಕಾರ್ಯ ಇಷ್ಟವಾಗಿದ್ದರೆ ಅನಿಸಿಕೆ ತಿಳಿಸಿ.

Please follow and like us:
error0
http://karnatakatoday.in/wp-content/uploads/2019/09/aparna-lavkumar-inspirational-1024x576.jpghttp://karnatakatoday.in/wp-content/uploads/2019/09/aparna-lavkumar-inspirational-150x104.jpgKarnataka Trendingಆರೋಗ್ಯಸಮಾಜ ಕಲ್ಯಾಣಕ್ಕಾಗಿ ಹಾಗು ಜನರ ಜೀವನ ಸುಧಾರಿಸಲು ಹಲವು ರೀತಿಯ ತ್ಯಾಗಗಳನ್ನು ದಾನಗಳನ್ನು ಮಾಡಿದವರ ಬಗ್ಗೆ ನೀವು ಕೇಳಿರುತ್ತೀರಿ, ಆದರೆ ಇಂದು ನಾವು ನಿಮಗೆ ಹೇಳುತ್ತಿರುವ ಈ ಸ್ಟೋರಿ ಯಾವುದೊ ಕೋಟ್ಯಧಿಪತಿ ನೀಡಿದ ದಾನದ ಬಗ್ಗೆ ಅಲ್ಲ, ಬದಲಿಗೆ ಹೃದಯ ಶ್ರೀಮಂತಿಕೆ ಇರುವ ಮತ್ತು ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವ ಒಂದು ಹೆಣ್ಣುಮಗಳ ಬಗ್ಗೆ. ಸಮಾಜದ ಬಗ್ಗೆ ಕಳಕಳಿ ಹೊಂದಿರುವ ಈ ಹೆಣ್ಣುಮಗಳು ಅದೆಂತಹ ಕಾರ್ಯ ಮಾಡಿದ್ದಾಳೆ ಎಂದು ಇಂದು...Film | Devotional | Cricket | Health | India