ಕನ್ನಡದ ಸೂಪ್ಪರ್ ಸ್ಟಾರ್ ನಟರಿಬ್ಬರು ಒಂದೇ ಚಿತ್ರದಲ್ಲಿ ನಟಿಸುವ ಬಗ್ಗೆ ವ್ಯಾಪಕ ಚರ್ಚೆ ಈಗ ಆಗುತ್ತಿದೆ, ಹೌದು ಮಲ್ಟಿ ಸ್ಟಾರರ್ ಚಿತ್ರಗಳು ಈಗ ಹೆಚ್ಚು ಸದ್ದು ಮಾಡುತ್ತಿರುವ ಕಾಲ ಹೀಗಾಗಿ ಸ್ಯಾಂಡಲ್ವುಡ್ ನಲ್ಲೂ ಕೂಡ ಇದೆ ಕಿಚ್ಚು ಹೆಚ್ಚಲಿದೆ ಎನ್ನಬಹುದು, ಈಗಾಗಲೇ ದಿ ವಿಲನ್ ಚಿತ್ರ ಹೆಚ್ಚು ಕ್ರೇಜ್ ಸ್ರಷ್ಟಿ ಮಾಡಿದ್ದರೂ ಕೂಡ ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಪ್ರದರ್ಶನ ಕಾಣಲಿಲ್ಲ, ಆದರೆ ಈಗ ನಟ ಪುನೀತ್ ಮತ್ತು ಯಶ್ ಮತ್ತೆ ಒಟ್ಟಿಗೆ ಕಾಣಿಸಿಕೊಳ್ಳುವ ಬಗ್ಗೆ ಮಾತನಾಡಿದ್ದಾರೆ, ಈ ಸುದ್ದಿಗೋಷ್ಠಿಯ ಬಗ್ಗೆ ಹೇಳ್ತಿವಿ ಕೇಳಿ.ಇಂದು, ಫೆಬ್ರವರಿ 10, 2019ರಂದು ಟಿ ಎಸ್ ನಾಗಾಭರಣ ನಿರ್ದೇಶನ, ಚಿರಂಜೀವಿ ಸರ್ಜಾ ನಾಯಕತ್ವದ ‘ಜುಗಾರಿ ಕ್ರಾಸ್’ ಚಿತ್ರ ದ ಮುಹೂರ್ತಕ್ಕೆ ‘ವಿಶ್’ ಮಾಡಲು ಪುನೀತ್ ಮತ್ತು ಯಶ್ ಇಬ್ಬರೂ ಬಂದಿದ್ದರು.

ಅಲ್ಲಿ ಮಾಧ್ಯಮದವರು “ನೀವಿಬ್ಬರೂ ಒಟ್ಟಾಗಿ ನಟಿಸುತ್ತೀರಾ?” ಎಂದು ಕೇಳಿದ ಪ್ರಶ್ನೆಗೆ ಯಶ್ “ಹೌದು, ಅಪ್ಪು ಓಕೆ ಎಂದರೆ ನಾನು ಖಂಡಿತ ಅವರೊಟ್ಟಿಗೆ ಸಿನಿಮಾ ಮಾಡಲು ಸಿದ್ಧ’ ಎಂದಿದ್ದಾರೆ. ಅಲ್ಲೇ ಇದ್ದ ಅಪ್ಪು ತಕ್ಷಣ “ನಾನು ಯಾವಾಗಲೂ ರೆಡಿ. ಒಟ್ಟಿಗೆ ಸಿನಿಮಾ ಮಾಡೋಣ” ಎಂದು ಯಶ್ ಮಾತಿಗೆ ಖುಷಿಯಿಂದಲೇ ಒಪ್ಪಿಕೊಂಡಿದ್ದಾರೆ.

ಅದಕ್ಕೂ ಮೊದಲು ಇವತ್ತು ತಮ್ಮ ‘ನಟಸಾರ್ವಭೌಮ’ ಚಿತ್ರ ಯಶಸ್ಸನ್ನು ಹಂಚಿಕೊಳ್ಳಲು ‘ಪೇಸ್ ಬುಕ್ ಲೈವ್‌’ಗೆ ಬಂದಿದ್ದ ಪುನೀತ್ ರಾಜ್‌ಕುಮಾರ್ ಅವರಿಗೆ ಎಲ್ಲ ಸ್ಟಾರ್ ನಟರುಗಳ ಅಭಿಮಾನಿಗಳು ಮಲ್ಟಿ ಸ್ಟಾರ್ ಸಿನಿಮಾ ಮಾಡುವಂತೆ ಬೇಡಿಕೆ ಇಟ್ಟಿದ್ದಾರೆ. ಅದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡದ ಪುನೀತ್ ರಾಜ್‌ಕುಮಾರ್ “ಒಳ್ಳೆಯ ಕಥೆ ಸಿಕ್ಕರೆ ನಾನು ಖಂಡಿತ ಬೇರೆ ಸ್ಟಾರ್‌ಗಳ ಜೊತೆ ಸಿನಿಮಾ ಮಾಡುತ್ತೇನೆ” ಎಂದಿದ್ದಾರೆ. ಅವರ ಮಾತು ಕೇಳಿದ ಸಕಲ ಸ್ಟಾರ್‌ಗಳ ಅಭಿಮಾನಿಗಳೂ ಸಖತ್ ಖುಷಿಯಾಗಿದ್ದಾರೆ.

ಪುನೀತ್ ‘ಫೇಸ್‌ ಬುಕ್ ಲೈವ್‌’ನ ಮುಂದುವರಿದ ಭಾಗ ಎಂಬಂತೆ, ಇಂದೇ ಯಶ್ ಅವರೊಂದಿಗೆ ‘ಜುಗಾರಿ ಕ್ರಾಸ್’ ಮುಹೂರ್ತದ ‘ಪತ್ರಿಕಾ ಗೋಷ್ಠಿ’ಯಲ್ಲಿ ಮಾಧ್ಯಮದ ಎದುರು ಪುನೀತ್ ಹಾಗೂ ಯಶ್ ಒಟ್ಟಾಗಿ ತಾವಿಬ್ಬರೂ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲು ರೆಡಿ’ ಎಂದು ಘೋಷಿಸಿದ್ದಾರೆ.

ಈಗ, ಯಾವ ನಿರ್ದೇಶಕರು ಅವರಿಬ್ಬರನ್ನೂ ಒಟ್ಟಾಗಿಸಿ ಸಿನಿಮಾ ಮಾಡಲು ಕಥೆ ಸಿದ್ಧ ಪಡಿಸಿಕೊಂಡು ಮುಂದೆ ಬರುತ್ತಾರೆ ಎಂಬುದಷ್ಟೇ ಬಾಕಿ ಉಳಿದ ಸಂಗತಿ. ಕನ್ನಡ ಚಿತ್ರ ಪ್ರೇಮಿಗಳಿಗಂತೂ ಇದು ಬಹುವಾಗು ಖುಷಿ ಕೊಡುವ ಸಂಗತಿ ಎಂಬುದು ಸತ್ಯವಾದ ಮಾತು. ಎಲ್ಲ ಅಂದುಕೊಂಡಂತೆ ನಡೆದರೆ ಶೀಘ್ರದಲ್ಲಿಯೇ ಸಿನಿಮಾ ಸೆಟ್ಟೇರುವ ಲಕ್ಷಣಗಳಿವೆ.

Please follow and like us:
0
http://karnatakatoday.in/wp-content/uploads/2019/02/punith-yash-cinema-1024x576.jpghttp://karnatakatoday.in/wp-content/uploads/2019/02/punith-yash-cinema-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಕನ್ನಡದ ಸೂಪ್ಪರ್ ಸ್ಟಾರ್ ನಟರಿಬ್ಬರು ಒಂದೇ ಚಿತ್ರದಲ್ಲಿ ನಟಿಸುವ ಬಗ್ಗೆ ವ್ಯಾಪಕ ಚರ್ಚೆ ಈಗ ಆಗುತ್ತಿದೆ, ಹೌದು ಮಲ್ಟಿ ಸ್ಟಾರರ್ ಚಿತ್ರಗಳು ಈಗ ಹೆಚ್ಚು ಸದ್ದು ಮಾಡುತ್ತಿರುವ ಕಾಲ ಹೀಗಾಗಿ ಸ್ಯಾಂಡಲ್ವುಡ್ ನಲ್ಲೂ ಕೂಡ ಇದೆ ಕಿಚ್ಚು ಹೆಚ್ಚಲಿದೆ ಎನ್ನಬಹುದು, ಈಗಾಗಲೇ ದಿ ವಿಲನ್ ಚಿತ್ರ ಹೆಚ್ಚು ಕ್ರೇಜ್ ಸ್ರಷ್ಟಿ ಮಾಡಿದ್ದರೂ ಕೂಡ ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಪ್ರದರ್ಶನ ಕಾಣಲಿಲ್ಲ, ಆದರೆ ಈಗ ನಟ ಪುನೀತ್ ಮತ್ತು ಯಶ್...Kannada News