Archaka venkatesh

ಸ್ನೇಹಿತರೆ ಈಗ ಮಳೆ ಕಡಿಮೆಯಾಗಿ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳು ಈಗ ಸಹಜ ಸ್ಥಿತಿಗೆ ಬರುತ್ತಿದೆ, ಆದರೆ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಇನ್ನು ಮಳೆಯಾಗುತ್ತಿರುವುದರಿಂದ ಇನ್ನು ಸಹಜ ಸ್ಥಿತಿಗೆ ಬಂದಿಲ್ಲ. ಇನ್ನು ಈ ಮಳೆಯಲ್ಲಿ ನದಿಯ ಮದ್ಯೆ ಕೊಚ್ಚಿ ಹೋಗಿದ್ದ 55 ವರ್ಷದ ಅರ್ಚಕ ಮೂರೂ ದಿನಗಳ ನಂತರ ಪವಾಡದ ರೀತಿಯಲ್ಲಿ ಬದುಕಿ ಬಂದಿದ್ದಾರೆ, ಇನ್ನು ಈ ಅರ್ಚಕ ಮಾಡಿದ ಉಪಾಯ ನೋಡಿದರೆ ನಿಮಗೆ ಶಾಕ್ ಆಗುತ್ತದೆ.

ಹಾಗಾದರೆ ಆ ಉಪಾಯ ಏನು ಮತ್ತು ಆತ ಬದುಕಿ ಬಂದಿದ್ದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಅರ್ಚಕ ಮಾಡಿದ ಉಪಾಯದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಕೊಡಗಿನಲ್ಲಿ ಭಾರಿ ಮಳೆ ಸುರಿದು ಪ್ರವಾಹ ಉಂಟಾದ ಕಾರಣ ಕಪಿಲ ನದಿ ಹಿಂದೆಂದೂ ನೋಡದ ಹಾಗೆ ಉಕ್ಕಿ ಹರಿಯುತ್ತಿತ್ತು, ಇನ್ನು ಇದೆ ಸಮಯದಲ್ಲಿ ನಂಜನಗೂಡಿನ ಅರ್ಚಕ ವೆಂಕಟೇಶ್ ಪ್ರವಾಹದ ನದಿಯಲ್ಲಿ ನಾವು ಈಜುತ್ತೇನೆ ಎಂದು ತನ್ನ ಸ್ನೇಹಿತರ ಬಳಿ ಸವಾಲನ್ನ ಹಾಕಿದ್ದರು.

Archaka venkatesh

ಇನ್ನು ಇದು ಪ್ರವಾಹ ಮತ್ತು ನೀವು ಇಂತಹ ಸಾಹಸಕ್ಕೆ ಯಾವುದೇ ಕಾರಣಕ್ಕೂ ಕೈ ಹಾಕಬೇಡಿ ಎಂದು ಅಲ್ಲಿನ ಜನರು ಅರ್ಚಕ ವೆಂಕಟೇಶ್ ಅವರ ಮನವನ್ನ ಒಲಿಸಲು ತುಂಬಾ ಪ್ರಯತ್ನ ಮಾಡಿದರು. ಇನ್ನು ಯಾರೇ ಎಷ್ಟೇ ಹೇಳಿದರು ಒಪ್ಪದ ಅರ್ಚಕ ವೆಂಕಟೇಶ್ ಕಪಿಲ ನದಿಗೆ ಧುಮಿಕಿದರು, ಇನ್ನು ನದಿಯಲ್ಲಿ ಈಜುತ್ತಾ ಎಲ್ಲರಿಗೂ ಬೈ ಬೈ ಕೂಡ ಹೇಳಿದರು, ಇನ್ನು ಈಜುತ್ತಿದ್ದ ಸ್ವಲ್ಪ ಸಮಯದಲ್ಲೇ ಕಣ್ಮರೆಯಾದರು ಅರ್ಚಕ ವೆಂಕಟೇಶ್ ಅವರು.

ಇನ್ನು ಅರ್ಚಕ ಕಣ್ಮರೆಯಾಗಿದ್ದನ್ನ ನೋಡಿ ಶಾಕ್ ಆದರೂ ಅಲ್ಲಿನ ಜನ ಮತ್ತು ಎರಡು ದಿನ ಕಳೆದರು ಅರ್ಚಕ ವೆಂಕಟೇಶ್ ಬರಲೇ ಇಲ್ಲ, ಇನ್ನು ಅರ್ಚಕ ಸತ್ತು ಹೋಗಿದ್ದಾರೆ ಎಂದು ತಿಳಿದ ಜನ ಅರ್ಚಕರ ಶವವನ್ನ ಹುಡುಕಲು ಆರಂಭ ಮಾಡಿದರು.

ಇನ್ನು ಆಶ್ಚರ್ಯ ಅನ್ನುವಂತೆ ಮೊನ್ನೆ ಸಂಜೆ ಅರ್ಚಕ ವೆಂಕಟೇಶ್ ಅವರು ಈಜಿಕೊಂಡು ದಡವನ್ನ ಸೇರಿದ್ದಾರೆ, ಇನ್ನು ತಾನು ನಾಪತ್ತೆಯಾದ ವಿಷಯದ ಬಗ್ಗೆ ಅರ್ಚಕ ಹೇಳಿದ್ದನ್ನು ಕೇಳಿ ಅಲ್ಲಿನ ಜನ ನಿಜಕ್ಕೂ ಶಾಕ್ ಆದರು.

Archaka venkatesh

ಹೌದು ನದಿಗೆ ಈಜಲು ಹಾರಿದ ಅರ್ಚಕ ವೆಂಕಟೇಶ್ ಅವರು ಈಜುತ್ತಾ ಈಜುತ್ತಾ ದಾರಿ ತಪ್ಪಿ ಬೇರೆ ಕಡೆ ಹೋಗಿ ನದಿಯಲ್ಲಿ ಹಾಕಿದ್ದ ಒಂದು ದೊಡ್ಡ ಪೈಪ್ ಒಳಗೆ ಹೋಗಿ ಬಿಟ್ಟಿದ್ದರಂತೆ ವೆಂಕಟೇಶ್ ಅವರು, ಹೇಗೋ ಅದರ ಒಳಗಿನಿಂದ ತಪ್ಪಿಸಿಕೊಂಡು ಪಾರಾಗಿ ಆಚೆ ಬಂದು ಸೇತುವೆಯೊಂದನ್ನ ಹಿಡಿದು ಅದರ ಅಡಿಯಲ್ಲಿ ಮಲಗಿದ್ದರಂತೆ ವೆಂಟಕೇಶ್ ಅವರು.

ಎರಡು ದಿನಗಳಿಂದ ಊಟವಿಲ್ಲದೆ ಸೇತುವೆಯ ಕೆಳಗೆ ಮಲಗಿದ್ದ ವೆಂಕಟೇಶ್ ಅವರು ನೀರಿನಲ್ಲಿ ತೇಲಿ ಬಂದ ಎಳನೀರನ್ನ ಕುಡಿದು ಕಾಲ ಕಳೆದಿದ್ದಾರೆ, ಇನ್ನು ಎರಡು ದಿನ ಸೇತುವೆಯ ಕೆಳಗೆ ಕಾಲವನ್ನ ಕಳೆದ ಅರ್ಚಕ ನಂತರ ಹೇಗೋ ಈಜಿಕೊಂಡು ದಡವನ್ನ ಸೇರಿದ್ದಾರೆ. ಯೋಗ ಹಾಗು ಉಪವಾಸ ಇರುವುದು ನನಗೆ ಅಭ್ಯಾಸ ಇರುವುದರಿಂದ ಯಾವುದೇ ಸಮಸ್ಯೆ ಎದುರಾಗಲಿಲ್ಲ ಎಂದು ಹೇಳಿದ್ದಾರೆ ಅರ್ಚಕ ವೆಂಕಟೇಶ್ ಅವರು, ಸ್ನೇಹಿತರೆ ಅರ್ಚಕ ವೆಂಟಕೇಶ್ ಅವರ ಈ ಸಾಹಸದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Archaka venkatesh

Please follow and like us:
error0
http://karnatakatoday.in/wp-content/uploads/2019/08/Archaka-Venkatesh-1024x576.jpghttp://karnatakatoday.in/wp-content/uploads/2019/08/Archaka-Venkatesh-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಈಗ ಮಳೆ ಕಡಿಮೆಯಾಗಿ ಉತ್ತರ ಕರ್ನಾಟಕದ ಕೆಲವು ಪ್ರದೇಶಗಳು ಈಗ ಸಹಜ ಸ್ಥಿತಿಗೆ ಬರುತ್ತಿದೆ, ಆದರೆ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಇನ್ನು ಮಳೆಯಾಗುತ್ತಿರುವುದರಿಂದ ಇನ್ನು ಸಹಜ ಸ್ಥಿತಿಗೆ ಬಂದಿಲ್ಲ. ಇನ್ನು ಈ ಮಳೆಯಲ್ಲಿ ನದಿಯ ಮದ್ಯೆ ಕೊಚ್ಚಿ ಹೋಗಿದ್ದ 55 ವರ್ಷದ ಅರ್ಚಕ ಮೂರೂ ದಿನಗಳ ನಂತರ ಪವಾಡದ ರೀತಿಯಲ್ಲಿ ಬದುಕಿ ಬಂದಿದ್ದಾರೆ, ಇನ್ನು ಈ ಅರ್ಚಕ ಮಾಡಿದ ಉಪಾಯ ನೋಡಿದರೆ ನಿಮಗೆ ಶಾಕ್ ಆಗುತ್ತದೆ. ಹಾಗಾದರೆ ಆ...Film | Devotional | Cricket | Health | India