ಹಿಂದೂ ಧರ್ಮದಲ್ಲಿ ಹನುಮಂತ ದೇವರಿಗೆ ವಿಶಿಷ್ಟ ಸ್ಥಾನವಿದೆ. ಸ್ವಾಮಿನಿಷ್ಠೆಗೆ ಇನ್ನೊಂದು ಹೆಸರು ಆಂಜನೇಯ. ಈತನ ಭಕ್ತರಿಗೇನೂ ಕಡಿಮೆಯಿಲ್ಲ. ಭಾರತದಾದ್ಯಂತ ಕೋಟ್ಯಂತರ ಹಿಂದೂಗಳು ಹನುಮಂತ ದೇವರನ್ನು ಆರಾಧಿಸುತ್ತಾರೆ. ಆತನ ಧೈರ್ಯ, ಶೌರ್ಯ, ಸಾಹಸ, ಶಕ್ತಿ, ಮುಗ್ಧತೆ, ಅನುಕಂಪ, ಸಹಾನುಭೂತಿ ಮತ್ತು ಮುಖ್ಯವಾಗಿ ನಿಃಸ್ವಾರ್ಥ ಪ್ರೇಮವನ್ನು ಶತಮಾನಗಳಿಂದ ಉಲ್ಲೇಖಿಸಲಾಗುತ್ತಿದೆ. ಇನ್ನು ರಾಮಾಯಣದಲ್ಲಿ ಹನುಮಂತ ಎಷ್ಟೊಂದು ಪರಾಕ್ರಮಿ ಆಗಿದ್ದ ಎನ್ನುವುದರ ಬಗ್ಗೆ ನೀವೆಲ್ಲ ತಿಳಿದಿದ್ದೀರಿ, ಆದರೆ ಕುರುಕ್ಷೇತ್ರ ಯುದ್ಧದಲ್ಲಿ ಹನುಮಂತ ಎಲ್ಲಿದ್ದ, ಮತ್ತು ಯಾರ ಪರವಾಗಿದ್ದ ಗೊತ್ತೇ, ಇಷ್ಟಕ್ಕೂ ಮಹಾಭಾರತದಲ್ಲಿಯೂ ಹನುಮನ ಬಗ್ಗೆ ಏಕೆ ಉಲ್ಲೇಖವಿದೆ ಗೊತ್ತಾ ಇಲ್ಲಿದೆ ನೋಡಿ ವಿಷಯ.

ಆಂಜನೇಯ ಮಹಾಭಾರತದಲ್ಲೂ ಬರುತ್ತಾನೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಹನುಮಾನ್ ಜಿರಂಜೀವಿ. ಎಂದರೆ, ಸಾವೇ ಇಲ್ಲದವನು ಎಂದರ್ಥ. ಹೀಗಾಗಿ ಚಿರಂಜೀವಿಯಾದ ಹನುಮಂತ ಎಲ್ಲ ಕಾಲಕ್ಕೂ ಬದುಕಿರುತ್ತಾನೆ. ಮಹಾಭಾರತದಲ್ಲಿ ಆಂಜನೇಯ ಭೀಮನ ಸಹೋದರ. ಯಾಕೆಂದರೆ ಇಬ್ಬರೂ ವಾಯುಪುತ್ರರು. ಪಾಂಡವರು ಗಡಿಪಾರಾಗಿದ್ದ ವೇಳೆ ಆಂಜನೇಯ ಅವರನ್ನು ಭೇಟಿ ಮಾಡುತ್ತಾನೆ. ಮತ್ತೊಮ್ಮೆ ರಾಮೇಶ್ವರದಲ್ಲಿ ಅರ್ಜುನನ್ನು ಭೇಟಿ ಮಾಡುತ್ತಾನೆ.

ಇಡೀ ಕುರುಕ್ಷೇತ್ರ ಸಮರದುದ್ದಕ್ಕೂ ಅರ್ಜುನನ ರಥದ ಮೇಲಿನ ಧ್ವಜದಲ್ಲಿ ಕುಳಿತು ಹನುಮಾನ್ ರಥವನ್ನು ರಕ್ಷಿಸುತ್ತಾನೆ. ಏಷ್ಯಾದ ಜನಪ್ರಿಯ ದೈವಗಳಲ್ಲಿ ಹನುಮಂತನೂ ಒಬ್ಬ. ರಾಮಾಯಣದ ಕಿಷ್ಕಿಂದಾಖಾಂಡದಲ್ಲಿ ಮೊದಲು ಕಾಣಸಿಗುವ ಆತ, ಮುಂದೆ ರಾಮನ ಬಂಟನಾಗಿ ಉದ್ದಕ್ಕೂ ಕಾಣಿಸಿಕೊಳ್ಳುತ್ತಾನೆ. ಸೀತೆಯ ಪ್ರೀತಿಗೆ ಪಾತ್ರನಾದ ಆತ, ಆಕೆಗೆ ಮೊದಲು ಕಾಣಸಿಕ್ಕಿದ್ದು ಅಶೋಕವನದಲ್ಲಿ. ಇನ್ನು ಮಹಾಭಾರತದಲ್ಲಿ ಹನುಮನ ಪ್ರವೇಶವಾಗಿದ್ದು ಪಾಂಡವರ ವನವಾಸ ಸಮಯದಲ್ಲಿ. ದ್ರೌಪದಿಯ ಆಸೆಯಂತೆ ಸೌಗಂಧಿಕಾ ಪುಷ್ಪ ತರಲು ಹೋರಾಟ ಭೀಮನಿಗೆ ದಟ್ಟ ಅರಣ್ಯ ಎದುರಾಗುತ್ತದೆ,ಆ ಕಾಡಿನಲ್ಲಿ ಹನುಮಂತನು ವಾಸವಾಗಿದ್ದ.

ನಿದ್ರಿಸುತ್ತಿದ್ದ ಅವನನ್ನು ಭೀಮನ ಶಂಖನಾದವು ಎಚ್ಚರಿಸಿತು. ಆಕಳಿಸಿ ಬಾಲವನ್ನು ಬಡಿದ. ಗಿರಿಕಂದರಗಳಲ್ಲಿ ಪ್ರತಿಧ್ವನಿಸಿದ ಇದರ ಶಬ್ದ ಭೀಮನಿಗೂ ಕೇಳಿಸಿತು. ಇದು ಅವನಿಗೆ ಎಸೆದ ಸವಾಲೆನಿಸಿತು; ಆ ದಿಕ್ಕಿಗೆ ನಡೆದ. ಬಂಡೆಯ ಮೇಲೆ ಕುಳಿತಿದ್ದ ಮಹಾಕಪಿಯೊಂದು ಕಾಣಿಸಿತು. ಭೀಮನಿಗೆ ಆಶ್ಚರ್ಯ. ಇಂಥ ಕಪಿಯನ್ನು ಅವನು ಈ ಹಿಂದೆ ನೋಡಿರಲಿಲ್ಲ. ಶಾಂತವಾಗಿ, ಆದರೆ ದಾರಿಗಡ್ಡವಾಗಿ ಕುಳಿತಿದ್ದ ಅದರ ಬಳಿಗೆ ಹೋದ. ನೀನು ಸಾಮಾನ್ಯ ಕಪಿಯಂತೆ ಕಾಣಿಸುತ್ತಿಲ್ಲ.

ಕಪಿಯ ರೂಪವನ್ನು ತಳೆದಿರುವ ಯಾವುದೋ ದೇವತೆಯಿರಬೇಕು. ನಾನು ಕುಂತಿ ಹಾಗೂ ವಾಯುವಿನ ಮಗ ಭೀಮ ಎನ್ನುವನು. ಇತ್ತ ದಾರಿಗೆ ಅಡ್ಡಲಾಗಿರುವ ಹನುಮನ ಬಾಲವನ್ನು ಎಷ್ಟೇ ಪ್ರಯತ್ನಿಸಿದರು ಕೂಡ ಭೀಮನಿಗೆ ತೆಗೆಯಲಾಗಲಿಲ್ಲ. ತದನಂತರ ಭೀಮನಿಗೆ ಇದು ತನ್ನ ಸಹೋದರ ವಾನರ ಶ್ರೇಷ್ಠ ಎಂದು ತಿಳಿಯುತ್ತದೆ

Please follow and like us:
error0
http://karnatakatoday.in/wp-content/uploads/2019/08/hanuma-in-kurukshetra-1024x576.jpghttp://karnatakatoday.in/wp-content/uploads/2019/08/hanuma-in-kurukshetra-150x104.jpgKarnataka Trendingನಗರಹಿಂದೂ ಧರ್ಮದಲ್ಲಿ ಹನುಮಂತ ದೇವರಿಗೆ ವಿಶಿಷ್ಟ ಸ್ಥಾನವಿದೆ. ಸ್ವಾಮಿನಿಷ್ಠೆಗೆ ಇನ್ನೊಂದು ಹೆಸರು ಆಂಜನೇಯ. ಈತನ ಭಕ್ತರಿಗೇನೂ ಕಡಿಮೆಯಿಲ್ಲ. ಭಾರತದಾದ್ಯಂತ ಕೋಟ್ಯಂತರ ಹಿಂದೂಗಳು ಹನುಮಂತ ದೇವರನ್ನು ಆರಾಧಿಸುತ್ತಾರೆ. ಆತನ ಧೈರ್ಯ, ಶೌರ್ಯ, ಸಾಹಸ, ಶಕ್ತಿ, ಮುಗ್ಧತೆ, ಅನುಕಂಪ, ಸಹಾನುಭೂತಿ ಮತ್ತು ಮುಖ್ಯವಾಗಿ ನಿಃಸ್ವಾರ್ಥ ಪ್ರೇಮವನ್ನು ಶತಮಾನಗಳಿಂದ ಉಲ್ಲೇಖಿಸಲಾಗುತ್ತಿದೆ. ಇನ್ನು ರಾಮಾಯಣದಲ್ಲಿ ಹನುಮಂತ ಎಷ್ಟೊಂದು ಪರಾಕ್ರಮಿ ಆಗಿದ್ದ ಎನ್ನುವುದರ ಬಗ್ಗೆ ನೀವೆಲ್ಲ ತಿಳಿದಿದ್ದೀರಿ, ಆದರೆ ಕುರುಕ್ಷೇತ್ರ ಯುದ್ಧದಲ್ಲಿ ಹನುಮಂತ ಎಲ್ಲಿದ್ದ, ಮತ್ತು...Film | Devotional | Cricket | Health | India