ದೇಶದಲ್ಲಿ ಇದೀಗ ಡೆಬಿಟ್ ಹಾಗು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ಸೂಚನೆ ಒಂದನ್ನು ಜಾರಿಗೆ ತಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಹಲವಾರು ಹೊಸ ಕ್ರಮಗಳನ್ನು ಪರಿಚಯಿಸಿದೆ. ಬ್ಯಾಂಕಿಂಗ್ ವಂಚನೆ ಮತ್ತು ಕಾರ್ಡ್‌ಗಳ ದುರುಪಯೋಗವನ್ನು ತಡೆಯಲು ಈ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಹೌದು ಡೆಬಿಟ್ ಹಾಗು ಕ್ರೆಡಿಟ್ ಕಾರ್ಡ್ ಗಳ ವಂಚನೆಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಮತ್ತು ಇಂತಹ ಸಂದರ್ಭದಲ್ಲಿ ಆನ್ಲೈನ್ ವಹಿವಾಟುಗಳಿಗೆ ಹೆಚ್ಚಿನ ಸುರಕ್ಷತೆ ನೀಡಲು ರಿಸರ್ವ್ ಬ್ಯಾಂಕ್ ಇಂದಿನಿಂದ ಕೆಲವು ನಿಯಮಗಳಲ್ಲಿ ಬದಲಾವಣೆ ಮಾಡಿದೆ. ಹಾಗಾಗಿ ಯಾರು ಹೆಚ್ಚು ಆನ್ಲೈನ್ ವ್ಯವಹಾರಗಳನ್ನು ಕಾರ್ಡ್ ಬಳಸಿ ಮಾಡುತ್ತಾರೋ ಅವರಿಗೆ ಈ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ.

ಹಾಗಿದ್ದರೆ ಬದಲಾದ ಆ ನಿಯಮವೇನೂ ನೀವು ಈಗ ಏನು ಮಾಡಬೇಕು ಎನ್ನುವುದರ ಬಗ್ಗೆ ತಿಳಿಯೋಣ, ಮೊದಲ ಸೂಚನೆಯಾಗಿ ನೀವು ನಿಮ್ಮ ಕಾರ್ಡ್ ಬಳಸಿ ಕಾಂಟಾಕ್ಟ್ ಲೆಸ್ ವ್ಯವಹಾರ ಅಂದರೆ ತುರ್ತು ಸಮಯದಲ್ಲಿ ಪಿನ್ ಬಳಸದೆ ಚಿಪ್ ಮೂಲಕ ಸ್ಕಾನ್ ಮಾಡಿ ಮಾಡುವ ವ್ಯವಹಾರದ ಮೇಲೆ ರಿಸರ್ವ್ ಬ್ಯಾಂಕ್ ನಿಗಾ ವಹಿಸಿದೆ. ಇನ್ನು ಮುಂದೆ ನೀವು ಸಂಪರ್ಕವಿಲ್ಲದ ವಹಿವಾಟು(Contactless Transactions) ಅಥವಾ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ಗಳೊಂದಿಗೆ ಆನ್‌ಲೈನ್ ವಹಿವಾಟು ನಡೆಸದ ಅಂತಹ ಕಾರ್ಡ್ ಬಳಕೆದಾರರಿಗೆ ಮಾರ್ಚ್ 16 ರಿಂದ ಸ್ವಯಂಚಾಲಿತವಾಗಿ ಅದು ಸ್ಥಗಿತಗೊಳ್ಳಲಿದೆ.

news of credit and debit card

2020 ರ ಮಾರ್ಚ್ 16 ರವರೆಗೆ ಆನ್‌ಲೈನ್ ಅಥವಾ Contactless Transactions ನಡೆಸದ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್‌ಗಳನ್ನು ನಿಲ್ಲಿಸಲಾಗುವುದು ಎಂದು ಇತ್ತೀಚೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಅಧಿಸೂಚನೆ ಹೊರಡಿಸಿತ್ತು. ಇಷ್ಟೇ ಅಲ್ಲದೆ ಭಾರತದಲ್ಲಿ ವ್ಯವಹಾರ ನಡೆಸಲು ಹೆಚ್ಚು ಪ್ರಾಶಸ್ತ್ಯ ನೀಡಲು ಕಾರ್ಡ್ ಗಳಲ್ಲಿ ಕೆಲವು ಬದಲಾವಣೆ ತಂದಿದೆ. ಆನ್‌ಲೈನ್ ವಹಿವಾಟುಗಳಿಗಾಗಿ ಕಾರ್ಡ್‌ ಹೋಲ್ಡರ್ ಬ್ಯಾಂಕನ್ನು ಸಂಪರ್ಕಿಸಬೇಕಾಗುತ್ತದೆ, ಇಂದಿನಿಂದ ಕಾರ್ಡ್‌ಗಳನ್ನು ನೀಡುವಾಗ ಅಥವಾ ವಿತರಿಸುವಾಗ ದೇಶೀಯ ಎಟಿಎಂ ಮತ್ತು ಪಿಒಎಸ್ ಟರ್ಮಿನಲ್‌ಗಳಲ್ಲಿ ದೇಶೀಯ ಕಾರ್ಡ್‌ಗಳೊಂದಿಗಿನ ವ್ಯವಹಾರಗಳಿಗೆ ಮಾತ್ರ ಅವಕಾಶ ನೀಡಲಾಗುವುದು ಎಂದು ಆರ್‌ಬಿಐ ಬ್ಯಾಂಕುಗಳಿಗೆ ಆದೇಶಿಸಿದೆ.

ಬೇರೆ ಯಾವ ಕಾರ್ಡ್ ಗಳಿಗೂ ಕೂಡ ಈ ಸೌಲಭ್ಯ ಇಲ್ಲ. ಒಂದು ವೇಳೆ ನೀವು ವಿದೇಶಕ್ಕೆ ಹೋದಾಗ ನಿಮಗೆ ಈಗ ಇರುವ ಕಾರ್ಡಿನೊಂದಿಗೆ ಯಾವ ಸೌಲಭ್ಯ ಕೂಡ ಸಿಗುವುದಿಲ್ಲ. ಹೀಗಾಗಿ ಗ್ಲೋಳ್ಳಿ ಬೆನಿಫಿಟ್ ಪಡೆಯಲು ನೀವು ಬ್ಯಾಂಕಿಗೆ ಅರ್ಜಿ ಸಲ್ಲಿಸಲೇಬೇಕು. ಇಷ್ಟೇ ಅಲ್ಲದೆ ಬ್ಯಾಂಕುಗಳು ಇನ್ನು ಮುಂದೆ ಗ್ರಾಹಕರಿಗೆ 24 ಗಂಟೆಗಳ ಕಾಲ ಯಾವುದೇ ಸಮಯದಲ್ಲಿ ಕೂಡ ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಆನ್ ಅಥವಾ ಆಫ್ ಮಾಡುವ ಸೌಲಭ್ಯ ನೀಡಿದೆ. ಹೀಗಾಗಿ ಯಾವುದೇ ತುರ್ತು ಸಂದರ್ಭದಲ್ಲಿ ನೀವು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಆಫ್ ಮಾಡಬಹುದು. ಇದಕ್ಕಾಗಿ ನೀವು ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಸಹಾಯ ಪಡೆಯಬಹುದು. ಇಷ್ಟೇ ಅಲ್ಲದೆ ಪಿನ್ ಬಳಸದೆ ಮಾಡುವ ವ್ಯವಹಾರಗಳಿಗೆ ನೀವು ಇನ್ನು ಮುಂದೆ ಲಿಮಿಟ್ ಕೂಡ ಆಯ್ಕೆ ಮಾಡಬಹುದಾಗಿದೆ. ಪಿಓಎಸ್, ಎಟಿಎಂ , ಆನ್‌ಲೈನ್ ವಹಿವಾಟು ಸಂಪರ್ಕವಿಲ್ಲದ ವಹಿವಾಟಿನ ಮಿತಿಯನ್ನು ಬದಲಾಯಿಸುವ ಸೌಲಭ್ಯವಿರುತ್ತದೆ.

news of credit and debit card

 

Please follow and like us:
error0
http://karnatakatoday.in/wp-content/uploads/2020/03/RBI-RULES-1024x576.jpghttp://karnatakatoday.in/wp-content/uploads/2020/03/RBI-RULES-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲದೇಶದಲ್ಲಿ ಇದೀಗ ಡೆಬಿಟ್ ಹಾಗು ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ಸೂಚನೆ ಒಂದನ್ನು ಜಾರಿಗೆ ತಂದಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಇತ್ತೀಚೆಗೆ ಹಲವಾರು ಹೊಸ ಕ್ರಮಗಳನ್ನು ಪರಿಚಯಿಸಿದೆ. ಬ್ಯಾಂಕಿಂಗ್ ವಂಚನೆ ಮತ್ತು ಕಾರ್ಡ್‌ಗಳ ದುರುಪಯೋಗವನ್ನು ತಡೆಯಲು ಈ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಹೌದು ಡೆಬಿಟ್ ಹಾಗು ಕ್ರೆಡಿಟ್ ಕಾರ್ಡ್ ಗಳ ವಂಚನೆಯ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಮತ್ತು ಇಂತಹ ಸಂದರ್ಭದಲ್ಲಿ ಆನ್ಲೈನ್ ವಹಿವಾಟುಗಳಿಗೆ...Film | Devotional | Cricket | Health | India