ಸಾಮಾನ್ಯವಾಗಿ ಹೆಚ್ಚಾಗಿ ಬ್ಯಾಂಕ್ ವ್ಯವಹಾರಗಳನ್ನು ಮಾಡುವವರಿಗೆ ಬಜೆಟ್ ಹಾಕಿಕೊಂಡು ಬದುಕುವವರಿಗೆ ಗೊತ್ತು ಬ್ಯಾಂಕ್ ವಿಧಿಸುವ ಹಲವು ಚಾರ್ಜ್ ಗಳ ಬಗ್ಗೆ. ಐದಾರು ವರ್ಷದ ಹಿಂದೆ ಬ್ಯಾಂಕುಗಳು ಎಲ್ಲದಕ್ಕೂ ಚಾರ್ಜ್ ಮಾಡುತ್ತಿದ್ದವು. ಈಗ ಸ್ವಲ್ಪ ಕಮ್ಮಿ ಆಗಿದೆ, ಆದರೂ ಕೂಡ ಇನ್ನು ಸ್ಟೇಟ್ ಬ್ಯಾಂಕ್ ಹಾಗು ಇತರ ವಿಲೀನಗೊಂಡ ಬ್ಯಾಂಕುಗಳಲ್ಲಿ ಕೂಡ ಎಟಿಎಂ ವಿಥ್ ಡ್ರಾ ಹಾಗು ಒಂದು ದಿನಕ್ಕೆ ಹಣ ತೆಗುಯುವ ಮಿತಿ ಮೇಲೆ ನಿರ್ಬಂಧನೆ ಇದೆ.

ಬ್ಯಾಂಕ್ ಖಾತೆಯಲ್ಲಿ ಇಷ್ಟು ಹಣ ಇಟ್ಟರೆ ಮಾತ್ರ ಕೆಲ ಶುಲ್ಕಗಳ ಮೇಲೆ ವಿನಾಯಿತಿ ಇದೆ. ಇಷ್ಟೇ ಅಲ್ಲದೆ ದಿನಕ್ಕೆ ಇಷ್ಟೇ ಟ್ರಾನ್ಸಾಕ್ಷನ್ ಮಾತ್ರ ಫ್ರೀ ಎನ್ನುವ ನಿಯಮ ಕೂಡ ಇದೆ. ಎಟಿಎಂನಿಂದ ನೀವು ಹಣ ತೆಗೆದರಷ್ಟೇ ಅದನ್ನು ವ್ಯವಹಾರ ಎನ್ನುವುದಿಲ್ಲ. ಮಿನಿ ಸ್ಟೇಟ್‌ಮೆಂಟ್‌ ಪಡೆಯುವುದು, ಬ್ಯಾಲೆನ್ಸ್‌ ಚೆಕ್‌ ಮಾಡುವುದು, ಪಿನ್‌ ಬದಲಿಸುವ ಪ್ರಕ್ರಿಯೆಗಳನ್ನೂ ವ್ಯವಹಾರವೆಂದೇ ಬ್ಯಾಂಕ್‌ಗಳು ಲೆಕ್ಕ ಹಾಕುತ್ತವೆ.

ಆದರೆ ರಿಸರ್ವ್ ಬ್ಯಾಂಕ್ ಈಗ ಹಲವು ಕಾಯಿದೆಗಳ ತಿದ್ದುಪಡಿ ಮಾಡಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಕ್ಯಾಶ್ ಲೆಸ್ ವ್ಯವಹಾರಕ್ಕೆ ಒತ್ತು ನೀಡುತ್ತಿರುವ ಸರ್ಕಾರ ಇನ್ನು ಮುಂದೆ ದೇಶದಲ್ಲಿ ಎಟಿಎಂ ವ್ಯವಹಾರಕ್ಕೆ ಯಾವುದೇ ಶುಲ್ಕ ವಿಧಿಸದೆ ನಡೆಸಲು ಗ್ರೀನ್ ಸಿಗ್ನಲ್ ನೀಡುವ ಸದ್ಯತೇ ಹೆಚ್ಚಿದೆ. ಈಗಾಗಲೇ ಈ ವರದಿ ಸಲ್ಲಿಸಲಾಗಿದೆ. ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕ್ ಇನ್ನೊಂದು ಸಿಹಿಸುದ್ದಿ ಅಟೆಮ್ ಕಾರ್ಡ್ ಇದ್ದವ್ರಿಗೆ ನೀಡಿತ್ತು ಅದೇನೆಂದರೆ ನಿಮ್ಮ ಹತ್ತಿರದ ಯಾವುದೇ ಎಟಿಎಂ ಕೇಂದ್ರದಲ್ಲಿ 3 ಗಂಟೆಗಿಂತ ಹೆಚ್ಚಿನ ಕಾಲ ಹಣ ಇಲ್ಲದೆ ಇದ್ದಾರೆ ಅದರ ದಂಡವನ್ನು ಬ್ಯಾಂಕುಗಳೇ ಕಟ್ಟಬೇಕು ಎನ್ನುವ ನಿಯಮ ರೂಪಿಸಿದೆ.

ಆ ಮೂಲಕ ಜನರು ಯಾವುದೇ ಅದೇ ತಡೆಯಿಲ್ಲದ ನಗದು ವ್ಯವಹಾರಕ್ಕೆ ಆಸ್ಪದ ಮಾಡಿಕೊಟ್ಟಿದೆ. ಬಿಲ್‌ಗಳ ಪಾವತಿ, ಸಿನಿಮಾ ಟಿಕೆಟ್‌ ಖರೀದಿ ವ್ಯವಹಾರಗಳಿಗೆ ಡಿಜಿಟಲ್‌ ಪದ್ಧತಿ ಉತ್ತಮ. ಪೇಟಿಎಂ, ಭೀಮ್‌ನಂಥ ಆ್ಯಪ್‌ಗಳು ನಗದುರಹಿತ ವ್ಯವಹಾರಕ್ಕೆ ನೆರವಾಗುತ್ತವೆ. ಎಷ್ಟೋ ಸಲ ಇಂಥ ಆ್ಯಪ್‌ಗಳನ್ನು ಬಳಸುವುದರಿಂದ ಸಾಕಷ್ಟು ರಿಯಾಯಿತಿಗಳು ಮತ್ತು ಒಂದಿಷ್ಟು ಪೇಬ್ಯಾಕ್‌ಗಳ ಅವಕಾಶವೂ ಇದೆ.

ಸದ್ಯಕ್ಕೆ ಈ ನಿಯಮಗಳು ಅಂಗೀಕಾರ ಆಗಬೇಕಷ್ಟೆ. ಹೀಗಾಗಿ ಎಟಿಎಂ ವ್ಯವಹಾರಗಳನ್ನು ಎಚ್ಚರಿಕೆಯಿಂದ ಮಾಡಿ. ನಿಮಗೆ ಮಿನಿ ಸ್ಟೇಟ್‌ಮೆಂಟ್‌ ಬೇಕಾದರೆ, ಬ್ಯಾಂಕ್‌ನ ಆ್ಯಪ್‌ಗಳ ಡೌನ್‌ಲೋಡ್‌ ಮಾಡಿಕೊಂಡರೆ ಸಾಕಾಗುತ್ತದೆ.ಬ್ಯಾಂಕ್‌ಗಳ ಶುಲ್ಕಗಳ ಬಗ್ಗೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿಯನ್ನು ಪಡೆಯಿರಿ. ಹಲವರಿಗೆ ಈ ಸುದ್ದಿ ತಲುಪಿಸಿ ಮತ್ತು ಎಟಿಎಂ ಶುಲ್ಕ ನಿಷೇದ ಮಾಡುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ.

Please follow and like us:
error0
http://karnatakatoday.in/wp-content/uploads/2019/06/ATM-CARD-NO-FEE-1024x576.jpghttp://karnatakatoday.in/wp-content/uploads/2019/06/ATM-CARD-NO-FEE-150x104.jpgKarnataka Trendingಅಂಕಣಎಲ್ಲಾ ಸುದ್ದಿಗಳುಸಾಮಾನ್ಯವಾಗಿ ಹೆಚ್ಚಾಗಿ ಬ್ಯಾಂಕ್ ವ್ಯವಹಾರಗಳನ್ನು ಮಾಡುವವರಿಗೆ ಬಜೆಟ್ ಹಾಕಿಕೊಂಡು ಬದುಕುವವರಿಗೆ ಗೊತ್ತು ಬ್ಯಾಂಕ್ ವಿಧಿಸುವ ಹಲವು ಚಾರ್ಜ್ ಗಳ ಬಗ್ಗೆ. ಐದಾರು ವರ್ಷದ ಹಿಂದೆ ಬ್ಯಾಂಕುಗಳು ಎಲ್ಲದಕ್ಕೂ ಚಾರ್ಜ್ ಮಾಡುತ್ತಿದ್ದವು. ಈಗ ಸ್ವಲ್ಪ ಕಮ್ಮಿ ಆಗಿದೆ, ಆದರೂ ಕೂಡ ಇನ್ನು ಸ್ಟೇಟ್ ಬ್ಯಾಂಕ್ ಹಾಗು ಇತರ ವಿಲೀನಗೊಂಡ ಬ್ಯಾಂಕುಗಳಲ್ಲಿ ಕೂಡ ಎಟಿಎಂ ವಿಥ್ ಡ್ರಾ ಹಾಗು ಒಂದು ದಿನಕ್ಕೆ ಹಣ ತೆಗುಯುವ ಮಿತಿ ಮೇಲೆ ನಿರ್ಬಂಧನೆ ಇದೆ. ಬ್ಯಾಂಕ್ ಖಾತೆಯಲ್ಲಿ...Film | Devotional | Cricket | Health | India