ದೇಶದ ಆಟೋ ದೊಡ್ಡ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹಲವಾರು ನಿಯಮಗಳನ್ನು ಸಡಿಲಿಸುವ ಮೂಲಕ ಶುಭವಾರ್ತೆ ನೀಡಿದೆ. ಈ ಮೂಲಕ ಗ್ರಾಹಕರು ಇನ್ನು ಮೇಲೆ ಈ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ಅಕ್ಟೋಬರ್ ನಿಂದ ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚು ಮಹತ್ವ ನೀಡುವ ಸಲುವಾಗಿ ಏಟಿಎಂ ಕ್ಯಾಶ್ ದಿನವೊಂದಕ್ಕೆ 40 ಸಾವಿರದಿಂದ 20 ಸಾವಿರಕ್ಕೆ ಇಳಿಸಿತ್ತು. ಆದರೆ ಈಗ ಕೆಲ ನಿಯಮಗಳನ್ನು ಹೊಸದಾಗಿ ತಂದಿದೆ. ಮೊದಲನೆಯದಾಗಿ ಇನ್ನು ಮುಂದೆ ಸ್ಟೇಟ್ ಬ್ಯಾಂಕ್ ನಲ್ಲಿ ಖಾತೆ ಇದ್ದವರು ದೇಶದ ಯಾವ ಮೂಲೆಯಲ್ಲಿ ಬ್ಯಾಂಕ್ ಇದ್ದರೂ ಕೂಡ ಅಲ್ಲಿ ಹಣವನ್ನು ಯಾವುದೇ ಮಿತಿ ಇಲ್ಲದೆ ಜಮೆ ಮಾಡಬಹುದಾಗಿದೆ. ಈ ಮೊದಲು ಇದರ ಮಿತಿ ಪ್ರತಿದಿನಕ್ಕೆ ಮೂವತ್ತು ಸಾವಿರ ರೂಪಾಯಿ ಇತ್ತು.

ಇದು ದೂರದ ಊರಿನಲ್ಲಿ ಪ್ರಯಾಣಿಸುವವರಿಗೆ ಮತ್ತು ದುಡಿಯುವವರಿಗೆ ಸ್ವಲ್ಪ ತೊಂದರೆ ಉಂಟು ಮಾಡಿತ್ತು ಹಾಗಾಗಿ ಇನ್ನು ಮುಂದೆ ಯಾವ ಮಿತಿ ಇಲ್ಲದೆ ಎಷ್ಟು ಬೇಕಾದರೂ ಹಣವನ್ನು ಡೆಪಾಸಿಟ್ ಮಾಡಬಹದಾಗಿದೆ. ಇದಲ್ಲದೆ ಒಂದು ವೇಳೆ ನೀವು ನಿಮ್ಮ ಖಾತೆಯಲ್ಲಿ ಬ್ಯಾಂಕ್ ಸೂಚಿಸಿದ ನಿರ್ದಿಷ್ಟ ಹಣ ಇಟ್ಟರೆ ನಿಮಗೆ ಎಟಿಎಂ ಮೂಲಕ ಯಾವುದೇ ಮಿತಿ ಇಲ್ಲದೆ ಹಣ ತೆಗೆಯುವ ಸೌಲಭ್ಯ ಕೂಡ ನೀಡುವದಾಗಿ ಹೇಳಿದೆ.

ಇದರಿಂದಾಗಿ ವ್ಯಾಪಾರಸ್ಥರಿಗೆ ಸಣ್ಣ ಪುಟ್ಟ ವ್ಯವಹಾರಗಳಿಗೆ ಅನುಕೂಲವಾಗಲಿದೆ. ನವೆಂಬರ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮೇಲೆ ಬಡ್ಡಿ ದರವನ್ನು ಕೂಡ ಏರಿಸಿತ್ತು ಸ್ಟೇಟ್ ಬ್ಯಾಂಕ್ ಏರಿಸಿತ್ತು. ಇದೇ ವೇಳೆ ಹಳೆಯ ಮ್ಯಾಗ್ನೆಟಿಕ್ ಸ್ಟ್ರಿಪ್ ನ ಡೆಬಿಟ್ ಕಾರ್ಡ್ ಗಳಿಂದ ವೈಯಕ್ತಿಕ ಮಾಹಿತಿ ಮತ್ತು ಕಾರ್ಡ್ ವಿವರಗಳನ್ನು ಕದಿಯುವುದು ವಂಚಕರಿಗೆ ಸುಲಭವಾಗಿದೆ ಮತ್ತು ಇವುಗಳನ್ನು ಮೋಸದ ವಹಿವಾಟುಗಳನ್ನು ನಡೆಸಲು ಬಳಸಬಹುದು.

ಆದ್ದರಿಂದ ಹಳೆಯ ಡೆಬಿಟ್ ಕಾರ್ಡ್‌ಗಳನ್ನು ಹೊಂದಿರುವವರು ಅವುಗಳನ್ನು ಯಾವುದೇ ಶುಲ್ಕಗಳಿಲ್ಲದೆ ಶಾಖೆಗಳಲ್ಲಿ ಅಥವಾ ಆನ್ ಲೈನ್‌ ಎಸ್ ಬಿಐ ಮೂಲಕ ನೂತನ ಇಎಂವಿ ಚಿಪ್ ಗಳನ್ನು ಹೊಂದಿರುವ ಕಾರ್ಡ್ ಗಳಿಗೆ ಬದಲಿಸಿಕೊಳ್ಳುವಂತೆಯೂ ಎಸ್ ಬಿಐ ತನ್ನ ಗ್ರಾಹಕರಿಗೆ ಸೂಚಿಸಿದೆ. ಸಾಧ್ಯವಾದಷ್ಟು ಜನರಿಗೆ ಈ ಮಾಹಿತಿ ಹಂಚಿಕೊಳ್ಳಿರಿ.

Please follow and like us:
0
http://karnatakatoday.in/wp-content/uploads/2018/12/sbi-good-1024x576.jpghttp://karnatakatoday.in/wp-content/uploads/2018/12/sbi-good-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುನಗರಬೆಂಗಳೂರುದೇಶದ ಆಟೋ ದೊಡ್ಡ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಹಲವಾರು ನಿಯಮಗಳನ್ನು ಸಡಿಲಿಸುವ ಮೂಲಕ ಶುಭವಾರ್ತೆ ನೀಡಿದೆ. ಈ ಮೂಲಕ ಗ್ರಾಹಕರು ಇನ್ನು ಮೇಲೆ ಈ ಲಾಭಗಳನ್ನು ಪಡೆದುಕೊಳ್ಳಬಹುದಾಗಿದೆ. ಅಕ್ಟೋಬರ್ ನಿಂದ ಡಿಜಿಟಲ್ ವ್ಯವಹಾರಗಳಿಗೆ ಹೆಚ್ಚು ಮಹತ್ವ ನೀಡುವ ಸಲುವಾಗಿ ಏಟಿಎಂ ಕ್ಯಾಶ್ ದಿನವೊಂದಕ್ಕೆ 40 ಸಾವಿರದಿಂದ 20 ಸಾವಿರಕ್ಕೆ ಇಳಿಸಿತ್ತು. ಆದರೆ ಈಗ ಕೆಲ ನಿಯಮಗಳನ್ನು ಹೊಸದಾಗಿ ತಂದಿದೆ. ಮೊದಲನೆಯದಾಗಿ...Kannada News