ದೇಶದಲ್ಲಿ ಹೆಚ್ಚುತ್ತಿರುವ ಬ್ಯಾಂಕ್ ದರೋಡೆ ಹಾಗು ಎಟಿಎಂ ಕೇಂದ್ರಗಳಲ್ಲಿ ಆಗುತ್ತಿರುವ ಎಲ್ಲ ರೀತಿಯ ಪರಾಧಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಎಟಿಎಂ ಗಳಲ್ಲಿ ಹಣ ತಗೆಯಲು ಹೋದಾಗ ಅಲ್ಲಿ ಜನರನ್ನು ಇತ್ತೀಚೆಗೆ ಹಲವಾರು ಖದೀಮರು ವಿವಿಧ ರೀತಿಯಲ್ಲಿ ಅವರನ್ನು ಮೋಸಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತದಲ್ಲಿ ಈಗಿರುವ ಹಲವಾರು ಎಟಿಎಂ ಗಳೂ ಕೂಡ ಹಳೆಯ ಸಾಫ್ಟ್ವೇರ್ ಹೊಂದಿದ್ದು ಇವುಗಳನ್ನು ಸುಲಭವಾಗಿ ವಂಚಿಸಬಹುದಾಗಿದೆ, ಅಷ್ಟೇ ಅಲ್ಲದೆ ಈ ಎಟಿಎಂ ಗಳ ನಿರ್ವಹಣಾ ವೆಚ್ಚ ಕೂಡ ದುಬಾರಿಯಾಗಿದೆ ಇದೆ ಕಾರಣಕ್ಕೆ ದೇಶದಲ್ಲಿರುವ ಅರ್ಧದಷ್ಟು ಎಟಿಎಂ ಗಳನ್ನು 2019 ರ ವೇಳೆಗೆ ಬಂದ್ ಮಾಡುವ ವಿಚಾರದ ಕುರಿತು ಸರ್ಕಾರ ಚಿಂತನೆ ನಡೆಸಿದೆ.

ದೇಶದಲ್ಲಿ ಹಳೆಯ ಸಾಫ್ಟ್‌ವೇರ್‌ ಮತ್ತು ಹಾರ್ಡ್‌ವೇರ್‌ ಹೊಂದಿರುವ ಎಟಿಎಂ ಘಟಕಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇವು ಸೈಬರ್‌ ಖದೀಮರ ವಂಚನೆಗೆ ಅನುಕೂಲವಾಗುವಂತಿವೆ. ಇದನ್ನು ತಪ್ಪಿಸಲು ಎಟಿಎಂನ ಸಾಫ್ಟ್‌ವೇರ್‌, ಹಾರ್ಡ್‌ವೇರ್‌ಗಳ ಅಪ್‌ಗ್ರೇಡ್‌ಗೆ ಸರಕಾರ ಸೂಚಿಸಿದೆ. ಇದರಿಂದ ಎಟಿಎಂ ಉದ್ಯಮಕ್ಕೆ ಹೆಚ್ಚಿನ ಹೊರೆ ಬೀಳುತ್ತಿದೆ.

ಇತ್ತೀಚಿನ ಹೊಸ ನಿಯಮಗಳಿಂದ ಎಟಿಎಂ ನಿರ್ವಹಣೆಯ ವೆಚ್ಚ ಏರಿಕೆಯಾಗುತ್ತಿದ್ದು, ಆದಾಯ ಕಡಿಮೆಯಾಗುತ್ತಿದೆ. ಈಗ ದೇಶದಲ್ಲಿ 2.39 ಎಟಿಎಂಗಳಿದ್ದು, 2019ರ ಮಾರ್ಚ್‌ ಹೊತ್ತಿಗೆ ಅರ್ಧದಷ್ಟು ಅಂದರೆ 1.13 ಲಕ್ಷ ಎಟಿಎಂಗಳನ್ನು ಎಟಿಎಂ ಸೇವಾ ಪೂರೈಕೆದಾರರು ಅನ್ಯಮಾರ್ಗವಿಲ್ಲದೆ ಮುಚ್ಚಲಿದ್ದಾರೆ. ಇದರಿಂದ ವ್ಯವಸ್ಥೆಗೆ ಹಣಕಾಸು ಪೂರೈಸುವ ಸರಕಾರದ ಪ್ರಯತ್ನಕ್ಕೂ ಅಡಚಣೆಯಾಗಲಿದೆ ಎಂದು ಒಕ್ಕೂಟ ಹೇಳಿದೆ.

ಆದ್ದರಿಂದ ಗ್ರಾಮೀಣ ಭಾಗದ ಎಲ್ಲ ಎಟಿಎಂ ಕೇಂದ್ರಗಳು ಮುಚ್ಚುವ ಸಾಧ್ಯತೆಯೇ ಹೆಚ್ಚಾಗಿದ್ದು ಇನ್ನು ಮುಂದೆ ಜನರಿಗೆ ಇದು ದೊಡ್ಡ ತಲೆನೋವಾಗಲಿದೆ ಏಕೆಂದರೆ, ಈಗ ನಾವು ಹಣ ಬೇಕಾದಾಗ ಸುಲಭವಾಗಿ ಪಡೆಯುತ್ತಿದ್ದೇವೆ ಆದರೆ ಇನ್ನು ಮುಂದೆ ಎಟಿಎಂ ಕೇಂದ್ರ ಹುಡುಕುತ್ತ ಅಲೆಯಬೇಕಾದ ಪರಿಸ್ಥಿತಿ ಬಂದರು ಬರಬಹುದು.

Please follow and like us:
0
http://karnatakatoday.in/wp-content/uploads/2018/11/atm-ban-1024x576.jpghttp://karnatakatoday.in/wp-content/uploads/2018/11/atm-ban-150x104.jpgKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುಗ್ಯಾಡ್ಜೆಟ್ಸ್ದೇಶದಲ್ಲಿ ಹೆಚ್ಚುತ್ತಿರುವ ಬ್ಯಾಂಕ್ ದರೋಡೆ ಹಾಗು ಎಟಿಎಂ ಕೇಂದ್ರಗಳಲ್ಲಿ ಆಗುತ್ತಿರುವ ಎಲ್ಲ ರೀತಿಯ ಪರಾಧಗಳನ್ನು ಸರ್ಕಾರ ಸೂಕ್ಷ್ಮವಾಗಿ ಗಮನಿಸುತ್ತಿದೆ. ಎಟಿಎಂ ಗಳಲ್ಲಿ ಹಣ ತಗೆಯಲು ಹೋದಾಗ ಅಲ್ಲಿ ಜನರನ್ನು ಇತ್ತೀಚೆಗೆ ಹಲವಾರು ಖದೀಮರು ವಿವಿಧ ರೀತಿಯಲ್ಲಿ ಅವರನ್ನು ಮೋಸಗೊಳಿಸಿದ್ದಾರೆ. ಅಷ್ಟೇ ಅಲ್ಲದೆ ಭಾರತದಲ್ಲಿ ಈಗಿರುವ ಹಲವಾರು ಎಟಿಎಂ ಗಳೂ ಕೂಡ ಹಳೆಯ ಸಾಫ್ಟ್ವೇರ್ ಹೊಂದಿದ್ದು ಇವುಗಳನ್ನು ಸುಲಭವಾಗಿ ವಂಚಿಸಬಹುದಾಗಿದೆ, ಅಷ್ಟೇ ಅಲ್ಲದೆ ಈ ಎಟಿಎಂ ಗಳ ನಿರ್ವಹಣಾ ವೆಚ್ಚ...Kannada News