ಸ್ನೇಹಿತರೆ ಅವನೇ ಶ್ರೀಮನ್ ನಾರಾಯಣ ಚಿತ್ರ ಬಿಡುಗಡೆಯಾಗಿ ನಿನ್ನೆಗೆ ಎರಡು ವಾರಗಳು ಕಳೆದಿದೆ, ಚಿತ್ರ ಬಿಡುಗಡೆಯಾಗಿ ಎರಡು ವಾರಗಳು ಕಳೆದರು ಕೂಡ ಕೆಲವು ಚಿತ್ರ ಮಂದಿರಗಳಲ್ಲಿ ಇನ್ನು ಹೌಸ್ ಫುಲ್ ಆಗಿ ಪ್ರದರ್ಶನವನ್ನ ಕಾಣುತ್ತಿದೆ. ಚಿತ್ರವನ್ನ ನೋಡಿದ ಸಿನಿ ಪ್ರಿಯರು ಅವನೇ ಶ್ರೀಮನ್ ನಾರಾಯಣ ಚಿತ್ರವನ್ನ ಹಾಡಿ ಹೊಗಳಿದು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ, ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ರಿಲೀಸ್ ಆದ ಕನ್ನಡದ ಮೂರನೇ ಚಿತ್ರ ಇದಾಗಿದ್ದು ಚಿತ್ರ ಆರಂಭದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿತ್ತು ಆದರೆ ಈಗ ಪಂಚ ಭಾಷೆಯಲ್ಲಿ ಬಿಡುಗಡೆಯಾಗಿದ್ದು ಚಿತ್ರ ಎಲ್ಲಾ ಭಾಷೆಗಳಲ್ಲಿ ಅದ್ದೂರಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ. ಹಾಗಾದರೆ ಅವನೇ ಶ್ರೀಮನ್ ನಾರಾಯಣ ಚಿತ್ರ ಎರಡು ವಾರದಲ್ಲಿ ಎಷ್ಟು ಸಂಪಾದನೆ ಮಾಡಿದೆ ಎಂದು ತಿಳಿದರೆ ನೀವು ಶಾಕ್ ಆಗುತ್ತೀರಿ.

ಹಾಗಾದರೆ ಚಿತ್ರ ಮಾಡಿದ ಗಳಿಕೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿತ್ರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಅವನೇ ಶ್ರೀಮನ್ ನಾರಾಯಣ ಚಿತ್ರ ಬಿಡುಗಡೆಯಾದ ದಿನದಿಂದ ಇಲ್ಲಿಯ ತನಕ ಭರ್ಜರಿ ಪ್ರದರ್ಶನವನ್ನ ಕಾಣುತ್ತಿದೆ, ಇನ್ನು ಚಿತ್ರ ಬಿಡುಗಡೆಯಾದ ಮೊದಲ ದಿನ ಚಿತ್ರ 13 ಕೋಟಿ ಕಲೆಕ್ಷನ್ ಮಾಡಿತ್ತು ಎಂದು ಮಾಹಿತಿಗಳಿಂದ ತಿಳಿದು ಬಂದಿತ್ತು. ಅವನೇ ಶ್ರೀಮನ್ ನಾರಾಯಣ ವಾರದಿಂದ ವಾರಕ್ಕೆ ತನ್ನ ಕಲೆಕ್ಷನ್ ನ್ನ ಹೆಚ್ಚಿಸಿಕೊಳ್ಳುತ್ತಲೇ ಹೋಗುತ್ತಿದ್ದಾನೆ, ಚಿತ್ರ ಬಿಡುಗಡೆಯಾಗಿ ಎರಡು ವಾರಗಳು ಕಳೆದರೂ ಕೂಡ ಚಿತ್ರ ನೋಡುವವರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

Avane Srimannarayana total collection

ಮೊದಲ ಮೂರೂ ದಿನಗಳಲ್ಲಿ ಮೂವತ್ತಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡಿದ್ದ ಅವನೇ ಶ್ರೀಮನ್ ನಾರಾಯಣ ಚಿತ್ರ ನಂತರ 5 ದಿನಗಳಲ್ಲಿ 30 ಕೋಟಿ ಸಂಪಾದನೆ ಮಾಡಿದ್ದಾನೆ ಎಂದು ಗಾಂಧಿನಗರದ ಪಂಡಿತರು ಹೇಳಿದ್ದರು. ಹೌದು ಮೊದಲ ಒಂದು ವಾರದಲ್ಲಿ ಸುಮಾರು 60 ಕೋಟಿ ಸಂಪಾದನೆ ಮಾಡಿದ್ದ ಅವನೇ ಶ್ರೀಮನ್ ನಾರಾಯಣ ಈಗ ಪಂಚಭಾಷೆಯಲ್ಲಿ ರಿಲೀಸ್ ಆಗಿದ್ದು ಸುಮಾರು 100 ಕೋಟಿ ಸಂಪಾದನೆ ಮಾಡಿದ್ದಾನೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ. ಇನ್ನು ಅವನೇ ಶ್ರೀಮನ್ ನಾರಾಯಣ ಚಿತ್ರ ಕಲೆಕ್ಷನ್ ವಿಚಾರದಲ್ಲಿ ರಕ್ಷಿತ್ ಶೆಟ್ಟಿ ಅವರ ಕಿರಿಕ್ ಪಾರ್ಟಿ ಚಿತ್ರವನ್ನ ಹಿಂದಕ್ಕೆ ಸರಿಸಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

ಇನ್ನು ವಿತರಕರು ಕೂಡ ಚಿತ್ರದ ಅಸಲಿ ಕಲೆಕ್ಷನ್ ಎಷ್ಟು ಅನ್ನುವುದನ್ನ ಗುಪ್ತವಾಗಿಯೇ ಇಟ್ಟಿದ್ದಾರೆ, ಇನ್ನು ಚಿತ್ರ ಪಂಡಿತರ ಪ್ರಕಾರ ಅವನೇ ಶ್ರೀಮನ್ ನಾರಾಯಣ ಚಿತ್ರ ಕನ್ನಡ ಹಲವು ಚಿತ್ರಗಳ ದಾಖಲೆಗಳನ್ನ ಉಡೀಸ್ ಮಾಡಿ ಮುನ್ನುಗ್ಗುತ್ತಿದೆ ಎಂದು ಚಿತ್ರ ಪಂಡಿತರು ಹೇಳುತ್ತಿದ್ದಾರೆ. ಇನ್ನು ಚಿತ್ರದ ಕಲೆಕ್ಷನ್ ಹೀಗೆ ಮುಂದುವರೆದರೆ ಚಿತ್ರ ತಿಂಗಳ ಅಂತ್ಯದಲ್ಲಿ ಸುಮಾರು 200 ಕೋಟಿ ಸಂಪಾದನೆ ಮಾಡಬಹದು ಎಂದು ಹೇಳಲಾಗುತ್ತಿದೆ, ಚಿತ್ರ ಕಲೆಕ್ಷನ್ ಹೀಗೆ ಮುಂದುವರೆದರೆ ಶೀಘ್ರದಲ್ಲಿ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸದಾದ ದಾಖಲೆಯನ್ನ ಅವನೇ ಶ್ರೀಮನ್ ನಾರಾಯಣ ಮಾಡಲಿದ್ದಾನೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಅವನೇ ಶ್ರೀಮನ್ ನಾರಾಯಣ ಚಿತ್ರದ ಬಗ್ಗೆ ನಿಮ್ಮ ಬಗ್ಗೆ ಮತ್ತು ಅವನೇ ಶ್ರೀಮನ್ ನಾರಾಯಣ ಚಿತ್ರ ಎಷ್ಟು ಗಳಿಕೆ ಮಾಡಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Avane Srimannarayana total collection

Please follow and like us:
error0
http://karnatakatoday.in/wp-content/uploads/2020/01/Avane-Srimannarayana-total-colloction-1024x576.jpghttp://karnatakatoday.in/wp-content/uploads/2020/01/Avane-Srimannarayana-total-colloction-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಹಣಸ್ನೇಹಿತರೆ ಅವನೇ ಶ್ರೀಮನ್ ನಾರಾಯಣ ಚಿತ್ರ ಬಿಡುಗಡೆಯಾಗಿ ನಿನ್ನೆಗೆ ಎರಡು ವಾರಗಳು ಕಳೆದಿದೆ, ಚಿತ್ರ ಬಿಡುಗಡೆಯಾಗಿ ಎರಡು ವಾರಗಳು ಕಳೆದರು ಕೂಡ ಕೆಲವು ಚಿತ್ರ ಮಂದಿರಗಳಲ್ಲಿ ಇನ್ನು ಹೌಸ್ ಫುಲ್ ಆಗಿ ಪ್ರದರ್ಶನವನ್ನ ಕಾಣುತ್ತಿದೆ. ಚಿತ್ರವನ್ನ ನೋಡಿದ ಸಿನಿ ಪ್ರಿಯರು ಅವನೇ ಶ್ರೀಮನ್ ನಾರಾಯಣ ಚಿತ್ರವನ್ನ ಹಾಡಿ ಹೊಗಳಿದು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ, ಫ್ಯಾನ್ ಇಂಡಿಯಾ ಕಾನ್ಸೆಪ್ಟ್ ನಲ್ಲಿ ರಿಲೀಸ್ ಆದ ಕನ್ನಡದ ಮೂರನೇ ಚಿತ್ರ ಇದಾಗಿದ್ದು ಚಿತ್ರ...Film | Devotional | Cricket | Health | India