ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲವನ್ನ ಮೂಡಿಸಿದ್ದ ರಕ್ಷಿತ್ ಅಭಿನಯದ ಅವನೇ ಶ್ರೀಮನ್ ನಾರಾಯಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಇನ್ನು ಅವನೇ ಶ್ರೀಮನ್ ನಾರಾಯಣ ಚಿತ್ರದ ಟ್ರೈಲರ್ ಇಡೀ ಭಾರತ ಚಿತ್ರರಂಗದ ಟ್ರೈಲರ್ ನಲ್ಲಿ ಅತೀ ಉದ್ದದ ಟ್ರೈಲರ್ ಅನ್ನುವ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ. ಇನ್ನು ಚಿತ್ರದ ಟ್ರೈಲರ್ ಬಿಡುಗಡೆ ಆಗುತ್ತಿದ್ದಂತೆ ಲಕ್ಷ ಲಕ್ಷ ವೀಕ್ಷಣೆಯನ್ನ ಕಂಡು ಯು ಟ್ಯೂಬ್ ನಲ್ಲಿ ಟ್ರೆಂಡಿಂಗ್ ಸ್ಥಾನವನ್ನ ಪಡೆದುಕೊಳ್ಳುತ್ತಿದೆ. ಇನ್ನು ನಿನ್ನೆ ಸಂಜೆ ಬಿಡುಗಡೆಯಾದ ಅವನೇ ಶ್ರೀಮನ್ ನಾರಾಯಣ ಚಿತ್ರದ ಟ್ರೈಲರ್ 24 ಘಂಟೆ ಮುಗಿಯುವುದರ ಒಳಗೆ ಸುಮಾರು 40 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನ ಕಂಡು ದಾಖಲೆಯನ್ನ ಸೃಷ್ಟಿ ಮಾಡಿದೆ, ಇನ್ನು ಈ ಚಿತ್ರ ಕನ್ನಡ ಚಿತ್ರರಂಗದ ಇನ್ನೊಂದು ಮಹತ್ವದ ಮತ್ತು ಇತಿಹಾಸ ಸೃಷ್ಟಿ ಮಾಡುವ ಚಿತ್ರ ಎಂದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ತಮ್ಮ ಚಿತ್ರದ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ ಅವರು ಏನು ಹೇಳಿದ್ದಾರೆ ಅಂದರೆ, ನಾವು ಈ ಚಿತ್ರಕ್ಕೆ ಇಷ್ಟು ಹಣವನ್ನ ಹೂಡಲು ಕಾರಣ KGF ಚಿತ್ರ, ಹೌದು KGF ಚಿತ್ರದ ಯಶಸ್ಸೇ ನಮಗೆ ಸ್ಫೂರ್ತಿ ಮತ್ತು ಈ ಚಿತ್ರದ ಸಂಪೂರ್ಣ ಕ್ರೆಡಿಟ್ ರಾಕಿಂಗ್ ಯಶ್ ಮತ್ತು KGF ಚಿತ್ರತಂಡಕ್ಕೆ ಎಂದು ಹೇಳಿದ್ದಾರೆ ರಕ್ಷಿತ್ ಶೆಟ್ಟಿ ಅವರು. ಇನ್ನು ಚಿತ್ರದ ಟ್ರೈಲರ್ ನೋಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಏನು ಹೇಳಿದ್ದಾರೆ ಎಂದು ತಿಳಿದರೆ ನೀವು ಕೂಡ ಹೆಮ್ಮೆ ಪಡುತ್ತೀರಾ, ಹಾಗಾದರೆ ದರ್ಶನ್ ಮತ್ತು ಯಶ್ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

avane srimannarayana

ಸ್ನೇಹಿತರೆ ಅವನೇ ಶ್ರೀಮನ್ ನಾರಾಯಣ ಚಿತ್ರ ಕೂಡ KGF ಮತ್ತು ಕುರುಕ್ಷೇತ್ರ ಚಿತ್ರಗಳಂತೆ ಪಂಚಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ, ಇನ್ನು ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿರುವ ಕನ್ನಡದ ಮೂರನೇ ಚಿತ್ರ ಅವನೇ ಶ್ರೀಮನ್ ನಾರಾಯಣ ಆಗಿದೆ. ಇನ್ನು ಅವನೇ ಶ್ರೀಮನ್ ನಾರಾಯಣ ಚಿತ್ರದ ಟ್ರೈಲರ್ ನೋಡಿದ ಯಶ್ ಅವರು ಇದೊಂದು ಅದ್ಬುತ ಟ್ರೈಲರ್ ಮತ್ತು ನಮ್ಮವರು ಯಾರಿಗೂ ಕಮ್ಮಿ ಇಲ್ಲ ಮತ್ತು ನಮ್ಮಲ್ಲಿರುವ ಪ್ರತಿಭೆ ಯಾರ ಬಳಿ ಕೂಡ ಇಲ್ಲ ಹಾಗೆ ರಕ್ಷಿತ್ ಶೆಟ್ಟಿ ಅವರಿಗೆ ಒಳ್ಳೆಯದಾಗಲಿ ಮತ್ತು ಚಿತ್ರ ಸೂಪರ್ ಹಿಟ್ ಆಗಲಿ ಎಂದು ಹೇಳಿದ್ದಾರೆ ರಾಕಿಂಗ್ ಸ್ಟಾರ್ ಯಶ್ ಅವರು.

ಇನ್ನು ಚಿತ್ರದ ಟ್ರೇಲರ್ ನೋಡಿದ ದರ್ಶನ್ ಅವರು ಇದೊಂದು ಅದ್ಬುತ ದೃಶ್ಯಕಾವ್ಯ, ಚಿತ್ರದ ಟ್ರೈಲರ್ ತುಂಬಾ ಸೊಗಸಾಗಿದೆ ಮತ್ತು ಕನ್ನಡ ಚಿತ್ರರಂಗದ ಬೆಳವಣಿಗೆ ಕಂಡು ನನಗೆ ತುಂಬಾ ಖುಷಿಯಾಗುತ್ತಿದೆ ಮತ್ತು ಈ ಚಿತ್ರ ಕೂಡ ಎಲ್ಲಾ ಚಿತ್ರಗಳಂತೆ ಗೆದ್ದು ಇತಿಹಾಸವನ್ನ ಸೃಷ್ಟಿ ಮಾಡಲಿ ಎಂದು ಹೇಳಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು. ಸ್ನೇಹಿತರೆ ಕೇವಲ ದರ್ಶನ್ ಮತ್ತು ಯಶ್ ಮಾತ್ರವಲ್ಲದೆ ನಾವು ನೀವು ಕೂಡ ಚಿತ್ರಕ್ಕೆ ಸಪೋರ್ಟ್ ಮಾಡೋಣ, ಸ್ನೇಹಿತರೆ ಅವನೇ ಶ್ರೀಮನ್ ನಾರಾಯಣ ಚಿತ್ರದ ಟ್ರೈಲರ್ ಹೇಗಿದೆ ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

avane srimannarayana

Please follow and like us:
error0
http://karnatakatoday.in/wp-content/uploads/2019/11/avane-srimannarayana-1024x576.jpghttp://karnatakatoday.in/wp-content/uploads/2019/11/avane-srimannarayana-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಮಂಗಳೂರುಸುದ್ದಿಜಾಲಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಕುತೂಹಲವನ್ನ ಮೂಡಿಸಿದ್ದ ರಕ್ಷಿತ್ ಅಭಿನಯದ ಅವನೇ ಶ್ರೀಮನ್ ನಾರಾಯಣ ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿರುವುದು ನಿಮಗೆಲ್ಲ ಗೊತ್ತೇ ಇದೆ. ಇನ್ನು ಅವನೇ ಶ್ರೀಮನ್ ನಾರಾಯಣ ಚಿತ್ರದ ಟ್ರೈಲರ್ ಇಡೀ ಭಾರತ ಚಿತ್ರರಂಗದ ಟ್ರೈಲರ್ ನಲ್ಲಿ ಅತೀ ಉದ್ದದ ಟ್ರೈಲರ್ ಅನ್ನುವ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ. ಇನ್ನು ಚಿತ್ರದ ಟ್ರೈಲರ್ ಬಿಡುಗಡೆ ಆಗುತ್ತಿದ್ದಂತೆ ಲಕ್ಷ ಲಕ್ಷ ವೀಕ್ಷಣೆಯನ್ನ ಕಂಡು ಯು ಟ್ಯೂಬ್...Film | Devotional | Cricket | Health | India