ಸ್ನೇಹಿತರೆ ಇಂದು ಆಯುಧ ಪೂಜೆ ಮತ್ತು ಗಾಡಿಗಳಿಗೆ ಮತ್ತು ಆಯುಧಗಳಿಗೆ ಪೂಜೆ ಮಾಡುವ ದಿನ, ಇನ್ನು ಈ ದಿನದಂದು ಹೊಸ ಕೆಲಸ ಮತ್ತು ವ್ಯವಹಾರವನ್ನ ಆರಂಭಿಸಲು ಇದೆ ಬಹಳ ಒಳ್ಳೆಯ ಸಮಯಾಗಿದೆ ಮತ್ತು ಹೊಸ ಗಾಡಿ ಮತ್ತು ಯಂತ್ರಗಳನ್ನ ಕೊಂಡುಕೊಳ್ಳಲು ಕೂಡ ಇದು ಒಳ್ಳೆಯ ಸಮಯವಾಗಿದೆ. ಇನ್ನು ದೊಡ್ಡ ಫ್ಯಾಕ್ಟರಿ ಮತ್ತು ಕಚೇರಿಗಳಲ್ಲಿ ಇಂದು ಯಂತ್ರಗಳಿಗೆ ವಿಶೇಷವಾದ ಪೂಜೆಯನ್ನ ಮಾಡುತ್ತಾರೆ, ಇನ್ನು ಈ ದಿನದಂದು ಈ ತಪ್ಪುಗಳನ್ನ ಯಾವುದೇ ಕಾರಣಕ್ಕೂ ಮಾಡಬಾರದು, ಹಾಗಾದರೆ ಆ ತಪ್ಪುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನೀವು ಕೂಡ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನ ಮಾಡಬೇಡಿ.

ಸ್ನೇಹಿತರೆ ಇಂದು ನವರಾತ್ರಿಯ ಕಡೆಯ ದಿನ ಮತ್ತು ಆಯುಧ ಪೂಜೆ, ಇನ್ನು ಈ ದಿನದಂದು ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಮನೆಯ ಎಲ್ಲಾ ರೀತಿಯ ಆಯುಧಗಳನ್ನ ದೇವರ ಮನೆಯಲ್ಲಿ ವಿಶೇಷವಾದ ಪೂಜೆಯನ್ನ ಮಾಡುತ್ತಾರೆ ಮತ್ತು ಅದರ ಜೊತೆಗೆ ಓದುವ ಪುಸ್ತಕಗಳಿಗೂ ಕೂಡ ಪೂಜೆಯನ್ನ ಮಾಡುತ್ತಾರೆ. ಈ ವಿಶೇಷವಾದ ದಿನವನ್ನ ಮಹಾನವಮಿ ಎಂದು ಕೂಡ ಕರೆಯುತ್ತಾರೆ, ಬೆಳಿಗ್ಗೆ 6 ಗಂಟೆಯಿಂದ ಹಿಡಿದು ಮದ್ಯಾಹ್ನ 12 ಗಂಟೆಯ ತನಕ ಬಹಳ ಸಮಯ ಆಗಿರುವುದರಿಂದ ಪೂಜೆಯನ್ನ ಮಾಡಲು ಇದು ಬಹಳ ಒಳ್ಳೆಯ ಸಮಯ ಮತ್ತು ಸಾಯಂಕಾಲ 4 ರಿಂದ 6 ತನಕ ಒಳ್ಳೆಯ ಸಮಯ.

Ayudha Pooja

ಸ್ನೇಹಿತರೆ ನಾಳೆ ಸೋಮವಾರ ಆದಕಾರಣ ಕೋಳಿಗಳನ್ನ ಬಲಿ ಕೊಡುವುದು ಮತ್ತು ಪ್ರಾಣಿಗಳನ್ನ ಬಲಿ ಕೊಡುವುದನ್ನ ಮಾಡಬಾರದು, ಇನ್ನು ನೀವೇನಾದರೂ ಗಾಡಿಗಳಿಗೆ ಪ್ರಾಣಿಗಳನ್ನ ಬಲಿ ಕೊಟ್ಟೆ ಪೂಜೆ ಮಾಡಬೇಕು ಅಂದರೆ ಬುಧವಾರದ ದಿನದಂದು ಮಾಡಬಹುದಾಗಿದೆ. ಇನ್ನು ನಾಳೆ ಜ್ಯೋತಿಷ್ಯದ ಪ್ರಕಾರ ಬಹಳ ಒಳ್ಳೆಯ ದಿನ ಆಗಿರುವುದರಿಂದ ಬೂದು ಗುಂಬಳ ಕಾಯಿಯನ್ನ ಗಾಡಿಗಳಿಗೆ ಒಡೆದು ಪೂಜೆ ಮಾಡುವುದು ಒಳ್ಳೆಯದು.

ಇನ್ನು ಗಾಡಿಗಳಿಗೆ ಪೂಜೆ ಮಾಡುವ ಮುನ್ನ ನೀವು ಸ್ವಚ್ಛರಾಗಬೇಕು ಮತ್ತು ಗಾಡಿಗಳನ್ನ ಕೂಡ ಸ್ವಚ್ಛ ಮಾಡಬೇಕು, ಇನ್ನು ಈ ದಿನದಂದು ಗಾಡಿಗಳಿಂದ ಯಾವುದೇ ಕಾರಣಕ್ಕೂ ಬೀಳಬಾರದು ಅಥವಾ ಆಕ್ಸಿಡೆಂಟ್ ಮಾಡಿಕೊಳ್ಳಬಾರದು, ಯಾಕೆ ಅಂದರೆ ಅದೂ ತುಂಬಾ ಅಶುಭ. ಇನ್ನು ನಾಳೆಯ ದಿನ ನೀವು ಗಾಡಿಯಲ್ಲಿ ಎಡವಿದರೆ ನೀವು ವರ್ಷಪೂರ್ತಿ ಎಡವುತ್ತಲೇ ಇರಬೇಕಾಗುತ್ತದೆ.

ಇನ್ನು ನಾಳೆ ಆಯುವ ಪೂಜೆ ಆಗಿರುವುದರಿಂದ ಯಾವುದೇ ಕಾರಣಕ್ಕೂ ಪೂಜೆ ಮಾಡುವ ಆಯುಧಗಳಿಂದ ಯಾವುದೇ ಕೆಲಸವನ್ನ ಮಾಡಬಾರದು ಮತ್ತು ಅದನ್ನ ಶುಚಿಯಾಗಿ ನೋಡಿಕೊಳ್ಳಿ. ಇನ್ನು ಗಾಡಿಗಳನ್ನ ಪೂಜೆ ಮಾಡುವ ಸಮಯದಲ್ಲಿ ಗಾಡಿಗೆ ಅರಿಶಿನ ಮತ್ತು ಕುಂಕುಮದಿಂದ ಅಲಂಕಾರ ಮಾಡಿ ಪೂಜೆ ಮಾಡಿ ಮತ್ತು ಆದಷ್ಟು ನಿಮ್ಮ ಮನೆದೇವರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ನಿಮಗೆ ದೇವರ ಆಶೀರ್ವಾದ ಸಿಗಲಿದ್ದು ಮುಂದಿನ ದಿನಗಳು ಸುಖಮಯವಾಗಿ ಸಾಗಲಿದೆ.

Ayudha Pooja

Please follow and like us:
error0
http://karnatakatoday.in/wp-content/uploads/2019/10/Ayudha-Pooja-1-1024x576.jpghttp://karnatakatoday.in/wp-content/uploads/2019/10/Ayudha-Pooja-1-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಇಂದು ಆಯುಧ ಪೂಜೆ ಮತ್ತು ಗಾಡಿಗಳಿಗೆ ಮತ್ತು ಆಯುಧಗಳಿಗೆ ಪೂಜೆ ಮಾಡುವ ದಿನ, ಇನ್ನು ಈ ದಿನದಂದು ಹೊಸ ಕೆಲಸ ಮತ್ತು ವ್ಯವಹಾರವನ್ನ ಆರಂಭಿಸಲು ಇದೆ ಬಹಳ ಒಳ್ಳೆಯ ಸಮಯಾಗಿದೆ ಮತ್ತು ಹೊಸ ಗಾಡಿ ಮತ್ತು ಯಂತ್ರಗಳನ್ನ ಕೊಂಡುಕೊಳ್ಳಲು ಕೂಡ ಇದು ಒಳ್ಳೆಯ ಸಮಯವಾಗಿದೆ. ಇನ್ನು ದೊಡ್ಡ ಫ್ಯಾಕ್ಟರಿ ಮತ್ತು ಕಚೇರಿಗಳಲ್ಲಿ ಇಂದು ಯಂತ್ರಗಳಿಗೆ ವಿಶೇಷವಾದ ಪೂಜೆಯನ್ನ ಮಾಡುತ್ತಾರೆ, ಇನ್ನು ಈ ದಿನದಂದು ಈ ತಪ್ಪುಗಳನ್ನ ಯಾವುದೇ...Film | Devotional | Cricket | Health | India