Baby Born Two Times america

ಮಾನವನ ಜೀವನವನ್ನ ಉತ್ತಮಗೊಳಿಸುವ ಸಲುವಾಗಿ ಹೊಸ ಹೊಸ ವಿಧಾನ ಮತ್ತು ಅನ್ವೇಷಣೆಗಳು ನಡೆಯುತ್ತಲೇ ಇರುತ್ತದೆ, ಬಹುಷ್ಯ ಈ ವಿದಾನವನ್ನ ನೀವು ಕೇಳದೆ ಇರಬಹುದು.

ವೈದ್ಯಕೀಯ ಶಾಸ್ತ್ರದಲ್ಲಿ ಇದೊಂದು ವಿಶೇಷವಾದ ಹೆಜ್ಜೆ, ಅದು ಏನು, ಅಮೆರಿಕಾಗೆ ಸೇರಿದ ಮಾರ್ಗರೇಟ್ 24 ವಾರಗಳ ಗರ್ಭಿಣಿ, ಎಂದಿನಂತೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಲು ಆಸ್ಪತ್ರೆಗೆ ಹೋಗಿದ್ದರು.

Baby Born Two Times america

ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿದ ಡಾಕ್ಟರ್ ಮಗುವಿಗೆ ಟ್ಯೂಮರ್ ಇರುವುದನ್ನ ನೋಡಿದರು, ಇದು ಮಗು ಹುಟ್ಟುವ ಮುಂಚೆ ಹಾಗು ನಂತರ ಬರುವ ಟ್ಯೂಮರ್, ಈ ವಿಷಯವನ್ನ ಗಂಭೀರವಾಗಿ ತಗೆದುಕೊಂಡ ಡಾಕ್ಟರ್ ಮಗು ಬದುಕುವುದು ಕಷ್ಟ ಹಾಗು ನಿಮ್ಮ ಪ್ರಾಣಕ್ಕೂ ಕುತ್ತು ಬರಬಹುದು ಎಂದು ಮಾರ್ಗರೆಟ್ ಗೆ ಹೇಳಿದರು.

ಅದೇ ಸಂದರ್ಭದಲ್ಲಿ ಹೊಸದಾದ ಆಲೋಚನೆ ಮಾಡಿದ ಡಾಕ್ಟರ್ ಮಗುವಿಗೆ ಆಪರೇಷನ್ ಮಾಡಲು ನಿರ್ಧಾರ ಮಾಡಿದರು, ಅದು ಹೇಗೆ ?, 24 ವಾರ ಗರ್ಭಿಣಿಯಾದ ಮಾರ್ಗರೆಟ್ ಗೆ ಸೀಸರಿಯನ್ ಮಾಡಿ, ಜರಾಯು ಕಟ್ ಮಾಡದೆ ಮಗುವನ್ನ ಆಚೆಗೆ ತಗೆದರು ಡಾಕ್ಟರ್.

Baby Born Two Times america

ಆಪರೇಷನ್ ಮೂಲಕ ಮಗುವಿನ ಟ್ಯೂಮರ್ ತಗೆದು ಮತ್ತೆ ಮಗುವನ್ನ ತಾಯಿಯ ಗರ್ಭದಲ್ಲಿ ಕೂರಿಸಿದರು, ಈ ಆಪರೇಷನ್ ಗೆ 5 ಘಂಟೆ ಸಮಯ ತಗೆದುಕೊಂಡರು ಡಾಕ್ಟರ್ಸ್.

ಮಾರ್ಗರೆಟ್ ಗೆ 36 ವಾರ ತುಂಬಿದ ನಂತರ ಸೀಸರಿಯನ್ ಮೂಲಕ ಮತ್ತೆ ಮಗುವನ್ನ ಆಚೆಗೆ ತಗೆದರು, ಮಗು ಸರಿಯಾದ ತೂಕದೊಂದಿಗೆ ಆರೋಗ್ಯವಾಗಿತ್ತು, ಮಗುವನ್ನ ನೋಡಿದ ಮಾರ್ಗರೆಟ್ ಗೆ ಕಣ್ಣಲ್ಲಿ ನೀರು ಬಂತು, ಡಾಕ್ಟರ್ಸ್ ಶ್ರಮಕ್ಕೆ ಫಲ ಸಿಕ್ಕಿತು, ಈ ಮಗು ಎರಡು ಬಾರಿ ಹುಟ್ಟಿತು.

Baby Born Two Times america

ಹೊಟ್ಟೆಯಲ್ಲಿರುವ ಮಗು ತುಂಬಾ ಸಂಕಷ್ಟದ ಸಂದರ್ಭದಲ್ಲಿ ಈ ಆಪರೇಷನ್ ಮಾಡಲಾಗುತ್ತದೆ, ಭಾರತದಲ್ಲೂ ಕೂಡ ಇಂತಹ ಕೆಲವು ಆಪರೇಷನ್ ಗಳನ್ನ ಮಾಡಲಾಗಿದೆ, ಈ ವಿಷಯ ಹೊಸದು ಹಾಗು ವಿಚಿತ್ರ ಅನಿಸಿದರೂ ಫೇಕ್ ಮಾತ್ರ ಅಲ್ಲ.

Please follow and like us:
0
http://karnatakatoday.in/wp-content/uploads/2018/06/aq-1024x576.jpghttp://karnatakatoday.in/wp-content/uploads/2018/06/aq-150x150.jpgeditorಆರೋಗ್ಯಎಲ್ಲಾ ಸುದ್ದಿಗಳುಸುದ್ದಿಜಾಲಮಾನವನ ಜೀವನವನ್ನ ಉತ್ತಮಗೊಳಿಸುವ ಸಲುವಾಗಿ ಹೊಸ ಹೊಸ ವಿಧಾನ ಮತ್ತು ಅನ್ವೇಷಣೆಗಳು ನಡೆಯುತ್ತಲೇ ಇರುತ್ತದೆ, ಬಹುಷ್ಯ ಈ ವಿದಾನವನ್ನ ನೀವು ಕೇಳದೆ ಇರಬಹುದು. ವೈದ್ಯಕೀಯ ಶಾಸ್ತ್ರದಲ್ಲಿ ಇದೊಂದು ವಿಶೇಷವಾದ ಹೆಜ್ಜೆ, ಅದು ಏನು, ಅಮೆರಿಕಾಗೆ ಸೇರಿದ ಮಾರ್ಗರೇಟ್ 24 ವಾರಗಳ ಗರ್ಭಿಣಿ, ಎಂದಿನಂತೆ ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿಸಲು ಆಸ್ಪತ್ರೆಗೆ ಹೋಗಿದ್ದರು. ಅಲ್ಟ್ರಾ ಸೌಂಡ್ ಸ್ಕ್ಯಾನಿಂಗ್ ಮಾಡಿದ ಡಾಕ್ಟರ್ ಮಗುವಿಗೆ ಟ್ಯೂಮರ್ ಇರುವುದನ್ನ ನೋಡಿದರು, ಇದು ಮಗು ಹುಟ್ಟುವ ಮುಂಚೆ ಹಾಗು...Karnataka news