ದೇಶದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದೂ ಕರೋನ ವೈರಸ್ ಎಂದು ಹೇಳಿದರೆ ತಪ್ಪಾಗಲ್ಲ, ಚೀನಾ ದೇಶದಲ್ಲಿ ಹುಟ್ಟಿ ಈಗ ಇಡೀ ಪ್ರಪಂಚದಾದ್ಯಂತ ಹರಡಿರುವ ಈ ಮಾರಕ ಖಾಯಿಲೆ ಅದೆಷ್ಟೋ ಜನರನ್ನ ಬಲಿ ತೆಗೆದುಕೊಂಡಿದೆ. ಈಗ ನಮ್ಮ ದೇಶದಲ್ಲಿ ಕೂಡ ಭಯಂಕರವಾದ ಖಾಯಿಲೆ ಕಾಣಿಸಿಕೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿದೆ, ದಿನದಿಂದ ದಿನಕ್ಕೆ ಈ ಮಾರಕ ಖಾಯಿಲೆ ಎಲ್ಲಾ ಕಡೆ ಹರಡುತ್ತಿದ್ದು ಈ ಖಾಯಿಲೆಯನ್ನ ತಡೆಗಟ್ಟಲು ಎಷ್ಟೇ ಕಠಿಣ ಕ್ರಮಗಳನ್ನ ಕೈಗೊಂಡರು ಅದೂ ಸಾಧ್ಯವಾಗುತ್ತಿಲ್ಲ. ಇನ್ನು ರಾಜ್ಯದಲ್ಲಿ ಒಬ್ಬ ವ್ಯಕ್ತಿ ಈ ಕರೋನ ವೈರಸ್ ನಿಂದ ಸಾವನ್ನಪ್ಪಿದ್ದು ಇನ್ನು ಹಲವು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆಯುತ್ತಿದ್ದಾರೆ.

ಇನ್ನು ಕರೋನ ವೈರಸ್ ಹಿನ್ನಲೆಯಲ್ಲಿ ದೇಶದ ಆರ್ಥಿಕತೆ ಕೂಡ ಕುಸಿತ ಕಂಡಿದ್ದು ಇದು ಜನರ ವ್ಯವಹಾರದ ಮೇಲೆ ಕೆಟ್ಟ ಪರಿಣಾಮವನ್ನ ಬೀರಿದೆ. ಇನ್ನು ದೇಶದಲ್ಲಿ ಕರೋನ ವೈರಸ್ ಜೊತೆಗೆ ಹಕ್ಕಿ ಜ್ವರ ಕೂಡ ಕಾಣಿಸಿಕೊಂಡಿದ್ದು ಕೋಳಿಗಳ ಮಾರಣಹೋಮ ಕೂಡ ನಡೆಯುತ್ತಿದೆ ಎಂದು ಹೇಳಬಹುದು. ಇನ್ನು ಈಗ ನಮ್ಮ ಕರ್ನಾಟಕ ಈ ಕರೋನ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಕೆಲವು ಕಟ್ಟುನಿಟ್ಟಿನ ನಿಯಮವನ್ನ ಜಾರಿಗೆ ತಂದಿದ್ದು ಈ ನಿಯಮವನ್ನ ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲನೆ ಮಾಡಲೇಬೇಕು.

Bad Corona

ಹಾಗಾದರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಆ ಕಟ್ಟುನಿಟ್ಟಿನ ಕ್ರಮಗಳು ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ರಾಜ್ಯದಲ್ಲಿ ಕರೋನ ವೈರಸ್ ಅಲ್ಲಿಗೆ ಒಳಗಾಗಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಖಾಸಗಿ ಮತ್ತು ಸರ್ಕಾರೀ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ನಾಳೆಯಿಂದ ದಿನಾಂಕ 28 ರ ವರೆಗೆ ಅಂದರೆ 15 ದಿನಗಳ ಕಾಲ ರಜೆಯನ್ನ ಘೋಷಣೆ ಮಾಡಲಾಗಿದೆ.

ಇನ್ನು ಕರೋನ ವೈರಸ್ ಹಿನ್ನಲೆಯಲ್ಲಿ ಒಂದು ವಾರದ ಮಟ್ಟಿಗೆ ರಾಜ್ಯದ ಎಲ್ಲಾ ಬಾರ್, ಪಬ್ ಗಳನ್ನ ಬಂದ್ ಮಾಡಲು ಆದೇಶವನ್ನ ಹೊರಡಿಸಲಾಗಿದೆ ಮತ್ತು ಇದರ ಜೊತೆಗೆ ರಾಜ್ಯದ ಎಲ್ಲಾ ವಿಶ್ವ ವಿದ್ಯಾನಿಲಯಗಳು ಒಂದು ವಾರ ಬಂದ್ ಮಾಡಲು ಸೂಚನೆಯನ್ನ ನೀಡಲಾಗಿದೆ. ಇನ್ನು ರಾಜ್ಯದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಾದ ಹುಟ್ಟಿದ ಹಬ್ಬ ಮತ್ತು ಎಂಗೇಜ್ ಮೆಂಟ್ ಗಳನ್ನ ಕೂಡ ಬಂದ್ ಮಾಡಲು ಆದೇಶವನ್ನ ಹೊರಡಿಸಲಾಗಿದೆ. ಇನ್ನು ಮದುವೆಯ ಕಾರ್ಯಕ್ರಮಗಳನ್ನ ಬಹಳ ಸರಳ ರೀತಿಯ ನಡೆಸುವಂತೆ ಸೂಚನೆ ನೀಡಲಾಗಿದೆ ಮತ್ತು ಮದುವೆಗೆ ನೂರಕ್ಕಿಂತ ಹೆಚ್ಚಿನ ಜನರು ಸೇರಿಯುವಂತಿಲ್ಲ, ಇನ್ನು ಯಾವುದೇ ಕಾರ್ಯಕ್ರಮವನ್ನ ಕೂಡ ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ನಡೆಸುವಂತೆ ಇಲ್ಲ ಎಂದು ಆದೇಶವನ್ನ ಹೊರಡಿಸಲಾಗಿದೆ.

Bad Corona

ಇನ್ನು ವಿದೇಶ ಪ್ರಯಾಣವನ್ನ ನೀವು ಮಾಡಬೇಕು ಅಂದುಕೊಂಡಿದ್ದರೆ ಅದನ್ನ ಕೈಬಿಡುವುದು ಒಳ್ಳೆಯದು, ಹೌದು ಯಾವುದೇ ಕಾರಣಕ್ಕೂ ವಿದೇಶ ಪ್ರಯಾಣವನ್ನ ಕೈಗೊಳ್ಳುವ ಹಾಗೆ ಇಲ್ಲ. ಇನ್ನು ಎಲ್ಲಾ ಮಾದರಿಯ ಕ್ರೀಡೆಗಳನ್ನ ರದ್ದು ಮಾಡಲಾಗಿದೆ ಮತ್ತು ಅದರ ಜೊತೆಗೆ ಎಲ್ಲಾ ಮಾಲ್ ಕೂಡ ಬಂದ್ ಇರಲಿದೆ, ವಸ್ತು ಪ್ರದರ್ಶನಗಳು ಕೂಡ ಬಂದ್ ಇರಲಿದೆ, ಇನ್ನು ಇದರ ಜೊತೆಗೆ ಜಾತ್ರೆಗಳನ್ನ ಕೂಡ ನಡೆಸುವಂತೆ ಇಲ್ಲ ಸೂಚನೆಯನ್ನ ನೀಡಲಾಗಿದೆ, ಯಾವುದೇ ಸಮ್ಮರ್ ಕ್ಯಾಂಪ್ ಕೂಡ ಇರುವುದಿಲ್ಲ. ರಾಜ್ಯದ ಜನರಿಗೆ ಈ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಾಗಿದೆ ಎಂದು ರಾಜ್ಯದ ಮುಖ್ಯ ಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನರು ಹೇಳಿದ್ದಾರೆ, ಸ್ನೇಹಿತರೆ ಈ ಮಾಹಿತಿಯನ್ನ ರಾಜ್ಯದ ಪ್ರತಿಯೊಬ್ಬರಿಗೂ ತಲುಪಿಸಿ.

Please follow and like us:
error0
http://karnatakatoday.in/wp-content/uploads/2020/03/Bad-Corona-1-1024x576.jpghttp://karnatakatoday.in/wp-content/uploads/2020/03/Bad-Corona-1-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಹಣದೇಶದಲ್ಲಿ ಅತೀ ಹೆಚ್ಚು ಸುದ್ದಿಯಾಗುತ್ತಿರುವ ವಿಷಯ ಏನು ಅಂದರೆ ಅದೂ ಕರೋನ ವೈರಸ್ ಎಂದು ಹೇಳಿದರೆ ತಪ್ಪಾಗಲ್ಲ, ಚೀನಾ ದೇಶದಲ್ಲಿ ಹುಟ್ಟಿ ಈಗ ಇಡೀ ಪ್ರಪಂಚದಾದ್ಯಂತ ಹರಡಿರುವ ಈ ಮಾರಕ ಖಾಯಿಲೆ ಅದೆಷ್ಟೋ ಜನರನ್ನ ಬಲಿ ತೆಗೆದುಕೊಂಡಿದೆ. ಈಗ ನಮ್ಮ ದೇಶದಲ್ಲಿ ಕೂಡ ಭಯಂಕರವಾದ ಖಾಯಿಲೆ ಕಾಣಿಸಿಕೊಂಡಿದ್ದು ಜನರ ಆತಂಕಕ್ಕೆ ಕಾರಣವಾಗಿದೆ, ದಿನದಿಂದ ದಿನಕ್ಕೆ ಈ ಮಾರಕ ಖಾಯಿಲೆ ಎಲ್ಲಾ ಕಡೆ ಹರಡುತ್ತಿದ್ದು ಈ ಖಾಯಿಲೆಯನ್ನ ತಡೆಗಟ್ಟಲು ಎಷ್ಟೇ...Film | Devotional | Cricket | Health | India