Bad Habbit in Temple

ಸ್ನೇಹಿತರೆ ದೇವಸ್ಥಾನವು ಒಂದು ಶಾಂತಿಯ ಧಾಮ ಮತ್ತು ದೇವರು ನೆಲೆಸಿರುವ ಪುಣ್ಯ ಸ್ಥಳ, ಇನ್ನು ನಮಗೆ ಎಷ್ಟೇ ಕಷ್ಟ ಇದ್ದರೂ ಕೂಡ ಒಮ್ಮೆ ದೇವಸ್ಥಾನಕ್ಕೆ ಎಲ್ಲಾ ಕಷ್ಟಗಳನ್ನ ನಾವು ಮರೆತು ನಾವು ದೇವರ ಧ್ಯಾನವನ್ನ ಮಾಡುತ್ತೇವೆ, ಯಾಕೆ ಅಂದರೆ ಆ ಸ್ಥಳ ಅಂತಹುದ್ದು. ಇನ್ನು ಕೆಲವರು ದೇವಾಲಯಗಳಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನ ಮಾಡುತ್ತಾರೆ, ನಾವು ಮಾಡುವ ಈ ಸಣ್ಣ ಪುಟ್ಟ ತಪ್ಪುಗಳಿಂದ ನಾವು ಹಲವು ರೀತಿಯ ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಮತ್ತು ನಮಗೆ ದೋಷ ಕೂಡ ಕಟ್ಟಿಕೊಳ್ಳುತ್ತದೆ.

ಇನ್ನು ಜನರಿಗೆ ತಾವು ಮಾಡುವ ಕೆಲವು ತಪ್ಪುಗಳ ಬಗ್ಗೆ ಅರಿವೇ ಇರುವುದಿಲ್ಲ, ಹಾಗಾದರೆ ನಾವು ದೇವಸ್ಥಾನದಲ್ಲಿ ಯಾವ ಯಾವ ತಪ್ಪುಗಳನ್ನ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಜೀವನದಲ್ಲಿ ಯಾವುದೇ ಒಂದು ವಿಷಯದ ಬಗ್ಗೆ ತೀರ್ಮಾನವನ್ನ ತೆಗೆದುಕೊಳ್ಳಬೇಕು ಅಂದರೆ ಅದಕ್ಕೆ ಒಂದು ವಿಧಿ ಮತ್ತು ನಿಯಮ ಇದ್ದೆ ಇರುತ್ತದೆ ಹಾಗಾಗಿ ದೇವಸ್ಥಾನದಲ್ಲಿ ಕೆಲವು ನಿಯಮಗಳನ್ನ ಪಾಲನೆ ಮಾಡುವುದು ತುಂಬಾ ಒಳ್ಳೆಯದು.

Bad Habbit in Temple

ಇನ್ನು ನಾವು ದೇವಸ್ಥಾನದಲ್ಲಿ ಯಾವುದೇ ಕಾರಣಕ್ಕೂ ಜೋರಾಗಿ ಮಾತನಾಡುವುದು ಮತ್ತು ನಗುವುದು ಮಾಡಲೇ ಬಾರದು, ಹೌದು ನಾವು ಜೋರಾಗಿ ಮಾತನಾಡುವುದರಿಂದ ಮತ್ತು ನಗುವುದರಿಂದ ನಮ್ಮ ಮನಸ್ಸಿನ ಏಕಾಗ್ರತೆ ಕಡಿಮೆ ಆಗುತ್ತದೆ ಮತ್ತು ದೇವರ ಧ್ಯಾನಕ್ಕೆ ಅಡ್ಡಿ ಉಂಟಾಗುತ್ತದೆ. ಇನ್ನು ಎರಡನೆಯದಾಗಿ ದೇವಸ್ಥಾನದಲ್ಲಿ ಯಾರಾದರೂ ದೇವರಿಗೆ ಪ್ರಾಥನೆಯನ್ನ ಮಾಡುವಾಗ ನಾವು ಅವರ ಮುಂದೆ ಹೋಗಿ ನಿಲ್ಲಬಾರದು ಮತ್ತು ಅವರ ಮುಂದೆ ನಾವು ನಡೆದುಕೊಂಡು ಹೋಗಬಾರದು, ಹೀಗೆ ಮಾಡುವುದರಿಂದ ಆ ವ್ಯಕ್ತಿಯ ಪ್ರಾರ್ಥನೆಗೆ ನಾವು ಭಂಗ ಮಾಡಿದಂತೆ ಆಗುತ್ತದೆ.

ಇನ್ನು ಕೆಲವರಿಗೆ ದೇವರಿಗೆ ಹೇಗೆ ಪ್ರದಕ್ಷಿಣೆ ಹಾಕಬೇಕು ಎಂದು ತಿಳಿದಿರುವುದಿಲ್ಲ ಮತ್ತು ಯಾವಾಗಲು ಅಪ್ರದೀಕ್ಷಿಣೆಯನ್ನ ಹಾಕುತ್ತಾರೆ, ಸ್ನೇಹಿತರೆ ಹೀಗೆ ಮಾಡುವುದು ಶುಭ ಅಲ್ಲ, ಸ್ನೇಹಿತರೆ ಯಾವಾಗಲು ಬಲ ಬದಿಯಿಂದ ಪ್ರದಕ್ಷಿಣೆಯನ್ನ ಹಾಕಬೇಕು ಮತ್ತು ಶಿವಲಿಂಗಕ್ಕೆ ಮಾತ್ರ ಅರ್ಧ ಸುತ್ತನ್ನ ಹಾಕಬೇಕು.

Bad Habbit in Temple

ಇನ್ನು ಮುಖ್ಯವಾದ ವಿಷಯ ಏನು ಅಂದರೆ ನಾವು ಯಾವುದೇ ಕಾರಣಕು ಚರ್ಮದಿಂದ ಮಾಡಿದ ಬೆಲ್ಟ್ ಧರಿಸಿ ಯಾವುದೇ ಕಾರಣಕ್ಕೂ ದೇವಸ್ಥಾನಕ್ಕೆ ಹೋಗಬಾರದು ಮತ್ತು ಯಾವುದೇ ಚರ್ಮದ ವಸ್ತುವನ್ನ ತೆಗೆದುಕೊಂಡು ದೇವಸ್ಥಾನಕ್ಕೆ ಹೋಗಬಾರದು, ಚರ್ಮವನ್ನ ಅಶುದ್ಧವೆಂದು ಪರಿಗಣನೆ ಮಾಡಲಾಗಿದೆ.

ಇನ್ನು ದೇವಸ್ಥಾನಕ್ಕೆ ಹೋದಾಗ ಯಾವುದೇ ಕಾರಣಕ್ಕೂ ದೇವರ ಮೂರ್ತಿಯ ಎದುರುಗಡೆ ನಿಲ್ಲಬಾರದು, ಹೌದು ದೇವರ ಮೂರ್ತಿಯಿಂದ ಹೊರಗೆ ಬರುವ ಪ್ರಭಾಶಾಲಿ ಶಕ್ತಿಯನ್ನ ತಡೆದುಕೊಳ್ಳುವ ಶಕ್ತಿ ನಮ್ಮ ದೇಹಕ್ಕೆ ಇರುವುದಿಲ್ಲ. ಸ್ನೇಹಿತರೆ ನೀವು ಇನ್ನುಮುಂದೆ ದೇವಸ್ಥಾನಕ್ಕೆ ಹೋದಾಗ ಈ ನಿಯಮಗಳನ್ನ ಪಾಲನೆ ಮಾಡಿ ದೇವರ ಆಶೀರ್ವಾದವನ್ನ ಪಡೆದುಕೊಳ್ಳಿ, ಮತ್ತು ಓಂ ನಮಃ ಶಿವಾಯ ಎಂದು ಹೇಳಿ.

Bad Habbit in Temple

Please follow and like us:
error0
http://karnatakatoday.in/wp-content/uploads/2019/08/Bad-Habbit-in-Temple-1-1024x576.jpghttp://karnatakatoday.in/wp-content/uploads/2019/08/Bad-Habbit-in-Temple-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಮಂಗಳೂರುಸುದ್ದಿಜಾಲಸ್ನೇಹಿತರೆ ದೇವಸ್ಥಾನವು ಒಂದು ಶಾಂತಿಯ ಧಾಮ ಮತ್ತು ದೇವರು ನೆಲೆಸಿರುವ ಪುಣ್ಯ ಸ್ಥಳ, ಇನ್ನು ನಮಗೆ ಎಷ್ಟೇ ಕಷ್ಟ ಇದ್ದರೂ ಕೂಡ ಒಮ್ಮೆ ದೇವಸ್ಥಾನಕ್ಕೆ ಎಲ್ಲಾ ಕಷ್ಟಗಳನ್ನ ನಾವು ಮರೆತು ನಾವು ದೇವರ ಧ್ಯಾನವನ್ನ ಮಾಡುತ್ತೇವೆ, ಯಾಕೆ ಅಂದರೆ ಆ ಸ್ಥಳ ಅಂತಹುದ್ದು. ಇನ್ನು ಕೆಲವರು ದೇವಾಲಯಗಳಲ್ಲಿ ಸಣ್ಣ ಪುಟ್ಟ ತಪ್ಪುಗಳನ್ನ ಮಾಡುತ್ತಾರೆ, ನಾವು ಮಾಡುವ ಈ ಸಣ್ಣ ಪುಟ್ಟ ತಪ್ಪುಗಳಿಂದ ನಾವು ಹಲವು ರೀತಿಯ ತೊಂದರೆಗಳನ್ನ ಎದುರಿಸಬೇಕಾಗುತ್ತದೆ...Film | Devotional | Cricket | Health | India