ಸ್ನೇಹಿತರೆ ಮನೆಯಲ್ಲಿ ಹೆಂಗಸರು ಈ ರೀತಿಯ ಕೆಲಸಗಳನ್ನ ಮಾಡಿದರೆ ದರಿದ್ರ ಅನ್ನುವುದು ಕಾಡುತ್ತದೆ, ಇನ್ನು ಕೆಲವೊಮ್ಮೆ ಗೊತ್ತಿದ್ದೂ ಮತ್ತು ಗೊತ್ತಿಲ್ಲದೇ ಹೆಣ್ಣು ಮಕ್ಕಳು ಮನೆಯಲ್ಲಿ ಇಂತಹ ತಪ್ಪುಗಳನ್ನ ಮಾಡುತ್ತಿರುತ್ತಾರೆ ಮತ್ತು ಇಂತಹ ಮನೆಯಲ್ಲಿ ಹೆಣ್ಣು ಮಕ್ಕಳು ಮಾಡಿದರೆ ಆ ಮನೆಯಲ್ಲಿ ಕಷ್ಟಗಳು ಯಾವಾಗಲೂ ಇರುತ್ತದೆ. ಹೌದು ಮೊದಲನೆಯದಾಗಿ ಹೆಣ್ಣು ಮಕ್ಕಳು ಅಪ್ಪಿತಪ್ಪಿ ಕೂಡ ಪೊರಕೆಯ ಮೇಲೆ ಕಾಲನ್ನ ಇಡಬಾರದು ಮತ್ತು ಪೊರಕೆಯನ್ನ ಯಾವುದೇ ಕಾರಣಕ್ಕೂ ಕಾಲಿನಿಂದ ಒದೆಯಬಾರದು. ಹೌದು ಸ್ನೇಹಿತರೆ ಪೊರಕೆ ಅನ್ನುವುದು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪ ಮತ್ತು ಪೊರಕೆಯನ್ನ ಕಾಲಿನಲ್ಲಿ ತುಳಿದರೆ ಲಕ್ಷ್ಮಿ ದೇವಿಗೆ ಕಾಲಿನ ತುಳಿದ ಹಾಗೆ ಎಂದು ಪುರಾಣಗಳಲ್ಲಿ ಉಲ್ಲೇಖ ಮಾಡಲಾಗಿದೆ.

ಇನ್ನು ಮನೆಯ ಮಹಿಳೆಯರು ಯಾವುದೇ ಕಾರಣಕ್ಕೂ ಮನೆಯ ಮುಖ್ಯ ಬಾಗಿಲನ್ನ ಕಾಲಿನಿಂದ ಒದೆಯಬಾರದು ಮತ್ತು ಕಾಲಿನಿಂದ ಬಾಗಿಲ್ಲ ತೆಗೆಯುವುದಾಗಲಿ ಅಥವಾ ಕಾಲಿನಿಂದ ಬಾಗಿಲನ್ನ ಮುಚ್ಚುವುದಾಗಲೂ ಯಾವುದೇ ಕಾರಣಕ್ಕೂ ಮಾಡಬಾರದು, ಹೀಗೆ ಮಾಡಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯ ಒಳಗೆ ಬರುವುದಿಲ್ಲ ಮತ್ತು ಜೇಷ್ಠ ದೇವಿ ಅಂದರೆ ದರಿದ್ರ ಲಕ್ಷ್ಮಿ ನಿಮ್ಮ ಮನೆಯ ಒಳಗೆ ಬರುತ್ತಾಳೆ. ಇನ್ನು ಬಾಗಿಲಿಗೆ ನೇರವಾಗಿ ಅಥವಾ ಬಾಗಿಲಿಗೆ ಬೆನ್ನನ್ನ ಹಾಕಿ ಯಾವುದೇ ಕಾರಣಕ್ಕೂ ಊಟ ಮಾಡಬಾರದು ಮತ್ತು ಹೀಗೆ ಮಾಡಿದರೆ ಮನೆಯಲ್ಲಿ ದರಿದ್ರ ಕಾಡುತ್ತದೆ, ಇನ್ನು ಮನೆಯ ಮಹಿಳೆಯರು ರಾತ್ರಿ ಊಟ ಮಾಡಿದ ನಂತರ ಎಂಜಲು ಪಾತ್ರೆಗಳನ್ನ ರಾತ್ರಿಯ ತೊಳೆದು ಮಲಗಬೇಕು, ಒಂದೇವೇಳೆ ಮನೆಯಲ್ಲಿ ಎಂಜಲು ಪಾತ್ರಗಳು ಹಾಗೆ ಇದ್ದರೆ ಅಂತಹ ಮನೆಗೆ ಲಕ್ಷ್ಮಿ ದೇವಿ ಬರುವುದಿಲ್ಲ.

Bad thinks in Home

ಇನ್ನು ಮಹಿಳೆಯರು ಮುಸ್ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಮರೆತು ಕೂಡ ಮನೆಯನ್ನ ಗುಡಿಸಬಾರದು, ಹೌದು ಸಂಜೆ ಆರು ಘಂಟೆಯ ನಂತರ ಮಹಿಳೆಯರು ಯಾವುದೇ ಕಾರಣಕ್ಕೂ ಮನೆಯನ್ನ ಸ್ವಚ್ಛ ಮಾಡಬಾರದು. ಇನ್ನು ಮುಖ್ಯವಾಗಿ ಮಹಿಳೆಯರು ಮುಸ್ಸಂಜೆಯ ಸಮಯದಲ್ಲಿ ಮೊಸರು, ಹಾಲು, ತುಪ್ಪ, ಉಪ್ಪು ಮತ್ತು ಬೆಣ್ಣೆಯನ್ನ ಯಾವುದೇ ಕಾರಣಕ್ಕೂ ಬೇರೆಯವರಿಗೆ ಕೊಡಬಾರದು ಮತ್ತು ಈ ತಪ್ಪನ್ನ ನೀವು ಮಾಡಿದರೆ ಮನೆಯಲ್ಲಿ ಇರುವ ಲಕ್ಷ್ಮಿ ದೇವಿ ಮನೆಯಿಂದ ಹೊರಟು ಹೋಗುತ್ತಾಳೆ. ಹೌದು ಸ್ನೇಹಿತರೆ ನೀವು ದಾನ ಮಾಡುವ ಈ ವಸ್ತುಗಳ ಮೂಲಕ ಲಕ್ಷ್ಮಿ ದೇವಿ ನಿಮ್ಮ ಮನೆಯಿಂದ ಹೊರಟು ಹೋಗುತ್ತಾಳೆ.

ಇನ್ನು ಬೆಳಿಗ್ಗೆ ಸೂರ್ಯ ಉದಯ ಆದನಂತರ ಯಾವುದೇ ಕಾರಣಕ್ಕೂ ನಿದ್ರೆಯನ್ನ ಮಾಡಬಾರದು ಮತ್ತು ಮಾಡಿದರೆ ಅದೂ ದೊಡ್ಡ ತಪ್ಪು ಮತ್ತು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ದರಿದ್ರ ಲಕ್ಷ್ಮಿ ಬಂದು ನೆಲೆಸುತ್ತಾಳೆ ಮತ್ತು ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಬರುತ್ತದೆ. ಇನ್ನು ಹೆಣ್ಣು ಮಕ್ಕಳು ಬೆಳಿಗ್ಗೆ ಬೇಗ ಎದ್ದು ಮನೆಯ ಅಂಗಳವನ್ನ ಸ್ವಚ್ಛ ಮಾಡಬೇಕು, ಹೀಗೆ ಮಾಡದೆ ಇರುವುದು ಮನೆಯ ಯಜಮಾನನಿಗೆ ಶ್ರೇಯಸ್ಸಲ್ಲ ಮತ್ತು ಮನೆಗೆ ನಷ್ಟ ಆವರಿಸುತ್ತದೆ. ಸ್ನೇಹಿತರೆ ಇಂತಹ ತಪ್ಪುಗಳನ್ನ ಯಾವುದೇ ಕಾರಣಕ್ಕೂ ಮನೆಯಲ್ಲಿ ಮಾಡಬಾರದು ಮತ್ತು ಇಂತಹ ತಪ್ಪುಗಳನ್ನ ಮನೆಯಲ್ಲಿ ಮಾಡಿದರೆ ಆ ಮನೆಯಲ್ಲಿ ಲಕ್ಷ್ಮಿ ದೇವಿ ನೆಲೆಸುವುದಿಲ್ಲ ಮತ್ತು ಆ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತದೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Bad thinks in Home

Please follow and like us:
error0
http://karnatakatoday.in/wp-content/uploads/2020/01/Bad-thinks-in-Home-1-1024x576.jpghttp://karnatakatoday.in/wp-content/uploads/2020/01/Bad-thinks-in-Home-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಮನೆಯಲ್ಲಿ ಹೆಂಗಸರು ಈ ರೀತಿಯ ಕೆಲಸಗಳನ್ನ ಮಾಡಿದರೆ ದರಿದ್ರ ಅನ್ನುವುದು ಕಾಡುತ್ತದೆ, ಇನ್ನು ಕೆಲವೊಮ್ಮೆ ಗೊತ್ತಿದ್ದೂ ಮತ್ತು ಗೊತ್ತಿಲ್ಲದೇ ಹೆಣ್ಣು ಮಕ್ಕಳು ಮನೆಯಲ್ಲಿ ಇಂತಹ ತಪ್ಪುಗಳನ್ನ ಮಾಡುತ್ತಿರುತ್ತಾರೆ ಮತ್ತು ಇಂತಹ ಮನೆಯಲ್ಲಿ ಹೆಣ್ಣು ಮಕ್ಕಳು ಮಾಡಿದರೆ ಆ ಮನೆಯಲ್ಲಿ ಕಷ್ಟಗಳು ಯಾವಾಗಲೂ ಇರುತ್ತದೆ. ಹೌದು ಮೊದಲನೆಯದಾಗಿ ಹೆಣ್ಣು ಮಕ್ಕಳು ಅಪ್ಪಿತಪ್ಪಿ ಕೂಡ ಪೊರಕೆಯ ಮೇಲೆ ಕಾಲನ್ನ ಇಡಬಾರದು ಮತ್ತು ಪೊರಕೆಯನ್ನ ಯಾವುದೇ ಕಾರಣಕ್ಕೂ ಕಾಲಿನಿಂದ ಒದೆಯಬಾರದು. ಹೌದು...Film | Devotional | Cricket | Health | India