Baira Devi

ಯಾರ ಶಾಪವೋ ಏನೋ ಕನ್ನಡ ಚಿತ್ರರಂಗದ ಟೈಮ್ ಸರಿ ಇಲ್ಲ, ಹೌದು ಒಂದಾದರ ಮೇಲೆ ಒಂದು ಅವಘಡಗಳು ನಡೆಯುತ್ತಲೇ ಇದೆ, ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಸ್ವಾಮಿಗಳು, ರೆಬಲ್ ಸ್ಟಾರ್ ಅಂಬರೀಷ್ ಅವರ ಸಾವು ಇನ್ನು ಹಸಿರಾಗಿರುವಾಗಲೇ ಕನ್ನಡದ ಖ್ಯಾತ ನಟಿ ರಾಧಿಕಾ ಅವರು ಶೂಟಿಂಗ್ ನಲ್ಲಿ ಅನಾಹುತವನ್ನ ಮಾಡಿಕೊಂಡಿದ್ದಾರೆ.

ಇನ್ನು ರಾಧಿಕಾ ಕುಮಾರಸ್ವಾಮಿಯವರಿಗೆ ಆದ ಅನಾಹುತ ಏನು ಮತ್ತು ಅವರು ಈಗ ಹೇಗಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Baira Devi

ರಾಧಿಕಾ ಕುಮಾರಸ್ವಾಮಿಯವರು ಬಹಳ ದಿನಗಳ ನಂತರ ಬಣ್ಣ ಹಚ್ಚಿರುವ ಸಿನಿಮಾ ಬೈರ ದೇವಿ ಚಿತ್ರೀಕರಣದ ವೇಳೆ ಕೆಳಗೆ ಬಿದ್ದು ದೊಡ್ಡ ಪೆಟ್ಟನ್ನ ಮಾಡಿಕೊಂಡಿದ್ದಾರೆ, ಬೆಂಗಳೂರಿನ ಶಾಂತಿ ನಗರದ ಸ್ಮಶಾನದಲ್ಲಿ ಮಧ್ಯರಾತ್ರಿ 1:30 ರ ವೇಳೆ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಇನ್ನು ಈ ಸಿನಿಮಾದಲ್ಲಿ ಕಾಳಿ ಮಾತಾ ಗೆಟಪ್ ನಲ್ಲಿ ರಾಧಿಕಾ ಕುಮಾರಸ್ವಾಮಿಯವರು ಕಾಣಿಸಿಕೊಂಡಿದ್ದಾರೆ, ಇನ್ನು ಈ ಚಿತ್ರದ ಕ್ಲೈಮಾಕ್ಸ್ ಚಿತ್ರೀಕರಣವನ್ನ ಮಾಡುವ ಸಂದರ್ಭದಲ್ಲಿ ಗೋರಿ ಮೇಲಿಂದ ಬಿದ್ದು ರಾಧಿಕಾ ಕುಮಾರಸ್ವಾಮಿಯವರು ದೊಡ್ಡ ಪೆಟ್ಟನ್ನ ಮಾಡಿಕೊಂಡಿದ್ದಾರೆ.

Baira Devi

ಇನ್ನು ಪೆಟ್ಟಾಗಿದ್ದರು ಶೂಟಿಂಗ್ ಗೆ ತೊಂದರೆಯನ್ನ ಮಾಡದೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಾಧಿಕಾ ಅವರಿಗೆ ಮುಂದಿನ ದಿನ ಶೂಟಿಂಗ್ ಮಾಡುವ ಸ್ಪೈನಲ್ ಕಾರ್ಡ್ ಗೆ ಪೆಟ್ಟಾಗಿರುವುದು ಗೊತ್ತಾಗಿದೆ.

ಇನ್ನು ಯಾವುದೇ ಡ್ಯೂಪ್ ಹಾಕದೆ ರಾಧಿಕಾ ಅವರೇ ಶೂಟಿಂಗ್ ಭಾಗವಹಿಸಿದ್ದರು, ಇನ್ನು ಗೋರಿ ಮೇಲಿನಿಂದ ಬಿದ್ದ ಪರಿಣಾಮವಾಗಿ ರಾಧಿಕಾ ಕುಮಾರಸ್ವಾಮಿಯವರ ಸೊಂಟ ಮತ್ತು ಕಾಲಿಗೆ ಪೆಟ್ಟಾಗಿದೆ.

ಇನ್ನು ರಾಧಿಕಾ ಕುಮಾರಸ್ವಾಮಿಯವರನ್ನ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆಯನ್ನ ನೀಡಲಾಗಿತ್ತು ಆದರೆ ನೋವು ಕಡಿಮೆಯಾಗಿಲ್ಲ, ಇನ್ನು ರಾಧಿಕಾ ಅವರಿಗೆ ಚಿಕಿತ್ಸೆ ಮಾಡಿದ ವೈದ್ಯರು 30 ದಿನಗಳ ವರಗೆ ವಿಶ್ರಾಂತಿ ಪಡೆಯುವಂತೆ ಹೇಳಿದ್ದಾರೆ, ರಾಧಿಕಾ ಕುಮಾರಸ್ವಾಮಿಯವರು ಬೇಗ ಗುಣಮುಖರಾಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

Baira Devi

Please follow and like us:
0
http://karnatakatoday.in/wp-content/uploads/2019/02/Baira-Devi-1-1024x576.jpghttp://karnatakatoday.in/wp-content/uploads/2019/02/Baira-Devi-1-150x104.jpgeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಯಾರ ಶಾಪವೋ ಏನೋ ಕನ್ನಡ ಚಿತ್ರರಂಗದ ಟೈಮ್ ಸರಿ ಇಲ್ಲ, ಹೌದು ಒಂದಾದರ ಮೇಲೆ ಒಂದು ಅವಘಡಗಳು ನಡೆಯುತ್ತಲೇ ಇದೆ, ನಡೆದಾಡುವ ದೇವರು ಶ್ರೀ ಸಿದ್ದಗಂಗಾ ಸ್ವಾಮಿಗಳು, ರೆಬಲ್ ಸ್ಟಾರ್ ಅಂಬರೀಷ್ ಅವರ ಸಾವು ಇನ್ನು ಹಸಿರಾಗಿರುವಾಗಲೇ ಕನ್ನಡದ ಖ್ಯಾತ ನಟಿ ರಾಧಿಕಾ ಅವರು ಶೂಟಿಂಗ್ ನಲ್ಲಿ ಅನಾಹುತವನ್ನ ಮಾಡಿಕೊಂಡಿದ್ದಾರೆ. ಇನ್ನು ರಾಧಿಕಾ ಕುಮಾರಸ್ವಾಮಿಯವರಿಗೆ ಆದ ಅನಾಹುತ ಏನು ಮತ್ತು ಅವರು ಈಗ ಹೇಗಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ...Kannada News