ತಮ್ಮ ದಿನನಿತ್ಯದ ಹಣದ ವ್ಯವಹಾರಕ್ಕಾಗಿ ಒಂದು ಬ್ಯಾಂಕ್ ಖಾತೆಯನ್ನ ಎಲ್ಲರೂ ಹೊಂದಿರುತ್ತಾರೆ, ಇನ್ನು ಕೆಲವರು ಅಂದರೆ ದೊಡ್ಡ ದೊಡ್ಡ ಹಣದ ವಹಿವಾಟನ್ನ ಮಾಡುವವರು ಮತ್ತು ಅಥವಾ ಇತರೆ ಕೆಲಸಗಳ ಅನಿವಾರ್ಯದಿಂದ ಎರಡು ಅಥವಾ ಮೂರೂ ಖಾತೆಯನ್ನ ಕೂಡ ಹೊಂದಿರುತ್ತಾರೆ. ಹಾಗಾದರೆ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಇದ್ದರೆ ಏನಾಗುತ್ತದೆ, ನಾವು ಏನು ಮಾಡಬೇಕು ಮತ್ತು ಅದರಿಂದ ಆಗುವ ಲಾಭ ಮತ್ತು ನಷ್ಟಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ನಿಮ್ಮ ಹೆಸರಿನಲ್ಲಿ ಬ್ಯಾಂಕ್ ಖಾತೆ ಇದ್ದು ಅದನ್ನ ನೀವು ತುಂಬಾ ದಿನಗಳಿಂದ ಬಳಸದೆ ಇದ್ದರೆ ಅದನ್ನ ಈಗ ಮುಚ್ಚುವುದು ಉತ್ತಮವಾಗಿದೆ.

ಹೌದು ಸ್ನೇಹಿತರೆ ಬ್ಯಾಂಕುಗಳ ನಿಯಮಗಳ ಪ್ರಕಾರ ಗ್ರಾಹಕ ತನ್ನ ಖಾತೆಯಲ್ಲಿ ಮಿನಿಮಮ್ ಹಣವನ್ನ ಇರಿಸಿಕೊಂಡು ನಿಯಮಿತವಾಗಿ ಹಣದ ವ್ಯವಹಾರವನ್ನ ಮಾಡಬೇಕು ಇಲ್ಲವಾದರೆ ಬ್ಯಾಂಕುಗಳು ನಿಮಗೆ ಹೆಚ್ಚಿನ ದಂಡವನ್ನ ವಿಧಿಸುತ್ತದೆ. ಇನ್ನು ಇಂತಹ ಬ್ಯಾಂಕ್ ಖಾತೆ ಹೊಂದಿದವರು ನೇರವಾಗಿ ಬ್ಯಾಂಕುಗಳಿಗೆ ತಮ್ಮ ಪಾಶ್ ಪುಸ್ತಕ ತಗೆದುಕೊಂಡು ಅವುಗಳನ್ನ ಮುಚ್ಚುವುದು ಬಹಳ ಉತ್ತಮ ಮತ್ತು ಅವುಗಳನ್ನ ಮುಚ್ಚುವಾಗ ಕೆಲವು ಶುಲ್ಕಗಳನ್ನ ನೀವು ಬ್ಯಾಂಕಿಗೆ ಕಟ್ಟಬೇಕು. ಇನ್ನು ಪಾನ್ ಕಾರ್ಡ್, ಇನ್ಸೂರೆನ್ಸ್, ಕ್ರೆಡಿಟ್ ಕಾರ್ಡ್, ಬ್ಯಾಂಕ್ ಲೋನ್ ಮತ್ತು ಇತರೆ ಪ್ರಮುಖ ಪೇಮೆಂಟ್ ಗಳನ್ನ ನಿಮ್ಮ ಖಾತೆಯೊಂದಿಗೆ ಲಿಂಕ್ ಮಾಡಲಾಗಿರುತ್ತದೆ ಮತ್ತು ನೀವು ಹೆಚ್ಚಿನ ಬ್ಯಾಂಕ್ ಖಾತೆಯನ್ನ ಹೊಂದಿದ್ದರೆ ನೀವು ಆದಾಯ ತೆರಿಗೆ ಸಲ್ಲಿಸುವ ಸಮಯದಲ್ಲಿ ನೀವು ಎಲ್ಲಾ ಬ್ಯಾಂಕುಗಳ ಸ್ಟೇಟ್ಮೆಂಟ್ ಗಳನ್ನ ನೀಡಬೇಕಾಗುತ್ತದೆ.

Bank accounts news

ಇನ್ನು ಯಾವುದೇ ಬ್ಯಾಂಕಿನ ಖಾತೆದಾರನು ಬ್ಯಾಂಕ್ ಖಾತೆಯನ್ನ ತೆರೆದು ಅದನ್ನ 14 ದಿನಗಳ ಒಳಗೆ ಮುಚ್ಚಿದರೆ ಬ್ಯಾಂಕುಗಳು ಯಾವುದೇ ಶುಲ್ಕವನ್ನ ವಿಧಿಸುವುದಿಲ್ಲ ಮತ್ತು 14 ದಿನಗಳ ನಂತರ ಬ್ಯಾಂಕ್ ಖಾತೆಯನ್ನ ಮುಚ್ಚಿದರೆ ನೀವು ಶುಲ್ಕವನ್ನ ಬ್ಯಾಂಕುಗಳಿಗೆ ಕಟ್ಟಬೇಕಾಗುತ್ತದೆ. ಸ್ನೇಹಿತರೆ ಒಟ್ಟಿನಲ್ಲಿ ನೀವು ಹಲವು ಬ್ಯಾಂಕುಗಳ ಖಾತೆಯನ್ನ ಹೊಂದಿದ್ದರೆ ನೀವು ಆ ಖಾತೆಗಳಲ್ಲಿ ಕನಿಷ್ಠ ಹಣವನ್ನ ಇಡುವುದು ಕಡ್ಡಾಯವಾಗಿದೆ, SMS ಶುಲ್ಕ ಕೂಡ ಕಡ್ಡಬೇಕು, ಏಟಿಎಂ ಕಾರ್ಡ್ ಶುಲ್ಕ ಕೂಡ ಕಡ್ಡಬೇಕು ಮತ್ತು ಬ್ಯಾಂಕಿನ ವಾರ್ಷಿಕ ಶುಲ್ಕವನ್ನ ಕೂಡ ಕಟ್ಟಬೇಕು ಮತ್ತು ಇವೆಲ್ಲ ನಿಮಗೆ ನಷ್ಟ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಕೆಲವರು ಹಲವು ಬ್ಯಾಂಕ್ ಖಾತೆಗಳನ್ನ ಹೊಂದಿದ್ದು ಅದನ್ನ ಮೈನ್ಟೈನ್ ಮಾಡುವುದಿಲ್ಲ ಮತ್ತು ಮಿನಿಮಂ ಹಣವನ್ನ ಕೂಡ ಇಡುವುದಿಲ್ಲ, ಈ ಸಮಯದಲ್ಲಿ ನೀವು ಯಾವಾಗಲಾದರೂ ಅನಿವಾರ್ಯವಾಗಿ ಬ್ಯಾಂಕ್ ಗೆ ಹಣವನ್ನ ಹಾಕಿದರೆ ಬ್ಯಾಂಕುಗಳು ಶುಲ್ಕದ ಹಣವನ್ನ ಕೂಡಲೇ ಕಟ್ ಮಾಡುತ್ತದೆ. ಹಾಗಾಗಿ ಎರಡು ಅಥವಾ ಅದಕ್ಕೂ ಹೆಚ್ಚಿನ ಬ್ಯಾಂಕ್ ಖಾತೆಯನ್ನ ಹೊಂದಿದವರು ಇದರ ಬಗ್ಗೆ ತಿಳಿದುಕೊಳ್ಳುವುದು ತುಂಬಾ ಅವಶ್ಯಕವಾಗಿದೆ, ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಬ್ಯಾಂಕ್ ಗ್ರಾಹಕನಿಗೆ ತಲುಪಿಸಿ.

Bank accounts news

Please follow and like us:
error0
http://karnatakatoday.in/wp-content/uploads/2019/11/News-of-bank-accounts-1024x576.jpghttp://karnatakatoday.in/wp-content/uploads/2019/11/News-of-bank-accounts-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲತಮ್ಮ ದಿನನಿತ್ಯದ ಹಣದ ವ್ಯವಹಾರಕ್ಕಾಗಿ ಒಂದು ಬ್ಯಾಂಕ್ ಖಾತೆಯನ್ನ ಎಲ್ಲರೂ ಹೊಂದಿರುತ್ತಾರೆ, ಇನ್ನು ಕೆಲವರು ಅಂದರೆ ದೊಡ್ಡ ದೊಡ್ಡ ಹಣದ ವಹಿವಾಟನ್ನ ಮಾಡುವವರು ಮತ್ತು ಅಥವಾ ಇತರೆ ಕೆಲಸಗಳ ಅನಿವಾರ್ಯದಿಂದ ಎರಡು ಅಥವಾ ಮೂರೂ ಖಾತೆಯನ್ನ ಕೂಡ ಹೊಂದಿರುತ್ತಾರೆ. ಹಾಗಾದರೆ ಒಂದಕ್ಕಿಂತ ಹೆಚ್ಚಿನ ಬ್ಯಾಂಕ್ ಖಾತೆ ಇದ್ದರೆ ಏನಾಗುತ್ತದೆ, ನಾವು ಏನು ಮಾಡಬೇಕು ಮತ್ತು ಅದರಿಂದ ಆಗುವ ಲಾಭ ಮತ್ತು ನಷ್ಟಗಳೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು...Film | Devotional | Cricket | Health | India