ದೇಶದೆಲ್ಲೆಡೆ ಈಗ ಆಧಾರ್ ಕಾರ್ಡ್ ಕುರಿತು ಭಾರಿ ಚರ್ಚೆ ಆಗುತ್ತಿದೆ, ಆಧಾರ್ ಕಾರ್ಡಿನ ಸಾಂವಿಧಾನಿಕ ಮಾನ್ಯತೆ ಕುರಿತು ಚಿಂತಕರು ತಮ್ಮ ಅಭಿಪ್ರಾಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಅಲ್ಲದೆ ಸುಪ್ರೀಂ ಕೋರ್ಟ್ ಕೂಡ ಮಧ್ಯ ಪ್ರವೇಶಿಸಿ ಆಧಾರ್ ಬಗೆಗಿನ ಎಲ್ಲ ಸಂಶಯಗಳನ್ನು ದೂರ ಮಾಡಿದೆ. ಆಧಾರ್ ಗೆ ಸುಪ್ರೀಂ ಕೋರ್ಟ್ ಸಂಪೂರ್ಣ ಬಲ ನೀಡಿದೆ. ಆಧಾರ್ ಗೆ ಎಲ್ಲ ರೀತಿಯ ಸಹಕಾರ ನೀಡಿ ಸರ್ಕಾರೀ ಯೋಜನೆಗಳಿಗೆ ಆಧಾರ್ ಕಡ್ಡಾಯವೆಂದು ಘೋಷಿಸಿದೆ ಆದರೂ ಕೂಡ ಕೆಲ ಖಾಸಗಿ ಸಂಸ್ಥೆಗಳಿಗೆ ಕಾರ್ಡಿನ ಅವಶ್ಯಕತೆ ಇಲ್ಲವೆಂದು ಹೇಳಿದೆ. ದೇಶದ ಹಲವಾರು ಸೇವೆಗೆ ಈಗ ಆಧಾರ್ ಬೇಡವೆಂದು ತಿಳಿಸಿದೆ ಇನ್ನು ಸರ್ಕಾರ ಸಿಮ್ ತಗೆದುಕೊಳ್ಳಲು ,ಮತ್ತು ಬ್ಯಾಂಕ್ ಖಾತೆ ತೆರೆಯಲು ಆಧಾರ್ ಕಾರ್ಡಿನ ಅವಶ್ಯಕತೆ ಇಲ್ಲ ಎಂದು ಹೇಳಿದೆ.

ಈಗ ಕಾಡುತ್ತಿರುವ ಪ್ರಶ್ನೆ ಏನೆಂದರೆ ಈಗಾಗಲೇ ನಾವು ಲಿಂಕ್ ಮಾಡಿರುವ ನಮ್ಮ ಸಂಖ್ಯೆಯನ್ನು ಮತ್ತು ಮಾಹಿತಿಯನ್ನು ಹಿಂತಗೆದುಕೊಳ್ಳಬಹುದೇ ಎನ್ನುವುದರ ಬಗ್ಗೆ ಈಗಾಗಲೇ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡಿದಿವೆ ಇದರ ಬಗ್ಗೆ ಸ್ವಲ್ಪ ಮಾಹಿತಿ ನೀಡಲಿದ್ದೇವೆ ಕೇಳಿ. ಇನ್ನು ಕೆಲ ಬಲ್ಲ ಮೂಲಗಳ ಮಾಹಿತಿ ಪ್ರಕಾರ ಸರ್ಕಾರಕ್ಕೆ ಈಗ ಇರುವುದು ಎರಡೇ ದಾರಿ, ಮೊದಲೆನೆಯದಾಗಿ ಈಗಾಗಲೇ ಮಾಡಿರುವ ಸಿಮ್ ಮತ್ತು ಬ್ಯಾಂಕಿಗೆ ಆಧಾರ್ ಬೇಕೆನ್ನುವ ನಿಯಮವನ್ನು ಮತ್ತೆ ಪರಿಷ್ಕರಿಸಿ ಬದಲಾವಣೆಯನ್ನು ತರುವುದು.

ಇಲ್ಲವಾದಲ್ಲಿ ಈಗಾಗಲೇ ನಮ್ಮ ಮಾಹಿತಿ ನೀಡಿರುವ ಎಲ್ಲ ಸೇವೆಯನ್ನು ಆಧಾರ್ ನಿಂದ ತೆಗೆದುಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸುವುದು. ಸರ್ಕಾರ ಈ ಸೇವೆಯನ್ನು ಇನ್ನು ಕೆಲ ದಿನಗಳಲ್ಲೇ ಆರಂಭಿಸುವ ಸಾಧ್ಯತೆ ಕೂಡ ಹೆಚ್ಚಿದೆ ಎಂದು ಈಗಾಗಲೇ ಹಲವಾರು ಸುದ್ದಿ ಮಾಧ್ಯಮಗಳು ತಿಳಿಸಿವೆ. ಆಧಾರ್ ಡಿ ಲಿಂಕ್ ಮಾಡುವ ಬಗ್ಗೆ ಸರ್ಕಾರ ಯಾರಿಗೆ ಅನುಮತಿ ನೀಡಲಿದೆ ಎನ್ನುವುದು ಕೂಡ ಕಾದು ನೋಡಬೇಕಾದ ಸಂಗತಿಯಾಗಿದೆ.

ಹಲವಾರು ಜನರು ಈಗಾಗಲೇ ಬ್ಯಾಂಕ್, ಸ್ಕೂಲ್, ಡ್ರೈವಿಂಗ್ ಲೈಸನ್ಸ್, ಮತ್ತು ಇನ್ನಿತರೇ ಸೇವೆಗೆ ಆಧಾರ್ ಜೋಡಿಸಿದ್ದಾರೆ.ಆದ್ದರಿನ ಗ್ರಾಹಕರು ಎಲ್ಲಿ ಆಧಾರ್ ಅವಶ್ಯಕತೆ ಇದೆ ಅಲ್ಲಿ ಮಾತ್ರ ನೀಡಿ ಬೇಡದ ಜಾಗದಲ್ಲಿ ನೀಡಿದ ಕಾರ್ಡ್ ಮಾಹಿತಿಯನ್ನು ಅಳಿಸಿ ಹಾಕುವ ಬಗ್ಗೆ ಸ್ವಲ್ಪ ಗಮನವಿಡೀ. ಈ ಬಗ್ಗೆ ಡಿ ಲಿಂಕ್ ಮಾಡುವ ವಿಷಯ ಬಡ ಕೂಡಲೇ ನಾವು ನಿಮಗೆ ಟಿಯುಲಿಸುತ್ತೇವೆ ಸದ್ಯಕ್ಕೆ ಈ ಮಾಹಿತಿಯನ್ನು ಎಲ್ಲರಿಗು ತಲುಪಿಸಿ. ನಿಮ್ಮ ಸಲಹೆ ಸೂಚನೆ ಇದ್ದರೆ ತಿಳಿಸಿರಿ.

Please follow and like us:
0
http://karnatakatoday.in/wp-content/uploads/2018/09/adhaar-card-supreme-1024x576.pnghttp://karnatakatoday.in/wp-content/uploads/2018/09/adhaar-card-supreme-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುದೇಶದೆಲ್ಲೆಡೆ ಈಗ ಆಧಾರ್ ಕಾರ್ಡ್ ಕುರಿತು ಭಾರಿ ಚರ್ಚೆ ಆಗುತ್ತಿದೆ, ಆಧಾರ್ ಕಾರ್ಡಿನ ಸಾಂವಿಧಾನಿಕ ಮಾನ್ಯತೆ ಕುರಿತು ಚಿಂತಕರು ತಮ್ಮ ಅಭಿಪ್ರಾಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಅಲ್ಲದೆ ಸುಪ್ರೀಂ ಕೋರ್ಟ್ ಕೂಡ ಮಧ್ಯ ಪ್ರವೇಶಿಸಿ ಆಧಾರ್ ಬಗೆಗಿನ ಎಲ್ಲ ಸಂಶಯಗಳನ್ನು ದೂರ ಮಾಡಿದೆ. ಆಧಾರ್ ಗೆ ಸುಪ್ರೀಂ ಕೋರ್ಟ್ ಸಂಪೂರ್ಣ ಬಲ ನೀಡಿದೆ. ಆಧಾರ್ ಗೆ ಎಲ್ಲ ರೀತಿಯ ಸಹಕಾರ ನೀಡಿ ಸರ್ಕಾರೀ ಯೋಜನೆಗಳಿಗೆ ಆಧಾರ್ ಕಡ್ಡಾಯವೆಂದು ಘೋಷಿಸಿದೆ ಆದರೂ...Kannada News