ರಾಷ್ಟ್ರೀಕೃತ ಹಾಗು ಖಾಸಗಿ ಬ್ಯಾಂಕುಗಳು ಇದೀಗ ಜನರಿಗೆ ಮತ್ತೊಮ್ಮೆ ದೊಡ್ಡ ತೊಂದರೆ ನೀಡಲು ಮುಂದಾಗುತ್ತಿದೆ ಎನ್ನುವ ಸುದ್ದಿ ಬರುತ್ತಿದೆ. ಹೌದು ದೇಶದಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಮಾಡಲಾಯಿತು. ಇಷ್ಟೇ ಅಲ್ಲದೆ ನೋಟು ಅಮಾನ್ಯ ಆದ ಮೇಲೆಯೂ ಸಹ ಬ್ಯಾಂಕುಗಳ ಮೇಲೆ ಸರ್ಕಾರ ಕೆಲ ನಿಬಂಧನೆಗಳನ್ನು ಕೂಡ ಹೇರಿತ್ತು. ಇದಾದ ನಂತರ ಜಿಎಸ್ಟಿ ಕೂಡ ಬಣದ ಬಳಿಕ ಹಲವು ಸೇವೆಗಳು ತೆರಿಗೆಗೆಳ ವ್ಯಾಪ್ತಿಗೆ ಬಂದವು. ಸಾಮಾನ್ಯವಾಗಿ ಬ್ಯಾಂಕಿನಲ್ಲಿ ಎಟಿಎಂ, ಹಾಗು ಚೆಕ್ ಬುಕ್, ಪಾಸ್ ಬುಕ್ ಪ್ರಿಂಟಿಂಗ್ ಹಣ ವಿಥ್ಡ್ರಾ ಹೀಗೆ ಇನ್ನಿತರ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು.

ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇಲ್ಲವೆಂದರೆ ದಂಡ ವಿಧಿಸಲಾಗುತ್ತಿತ್ತು. ಬ್ಯಾಂಕುಗಳು ಇದೀಗ ಗ್ರಾಹಕರಿಗೆ ಮತ್ತೊಂದು ಬರಿಯ ಎಳೆಯಲು ಸಿದ್ಧವಾಗಿದೆ ಅದೇನೇನಾದ್ರೆ ಇನ್ನು ಮುಂದೆ ಉಚಿತವಾಗಿ ನೀಡುತ್ತಿದ್ದ ಸೇವೆಗಳಿಗೆ ನೀವು ಹಣ ಪಾವತಿಸಬೇಕಾಗುತ್ತದೆ. ಬ್ಯಾಂಕಿನ ಈ ಸೇವೆಗಳು ಜಿಎಸ್ಟಿ ವ್ಯಾಪ್ತಿಗೆ ಬರುವುದರಿಂದ ಈ ಸೇವೆಗಳ ಮೇಲೆ ಬ್ಯಾಂಕ್ ಶೀಘ್ರದಲ್ಲೇ ಹಣವನ್ನು ನಿಗದಿ ಮಾಡುತ್ತದೆ ಎನ್ನಲಾಗಿದೆ. ಈ ನಡುವೆ ತೆರಿಗೆ ಇಲಾಖೆಯ ಈ ಕೆಲಸ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ಇನ್ನಷ್ಟು ನಕಾರತ್ಮಕ ಪರಿಣಾಮ ಬೀರಲಿದೆ ಎನ್ನುತ್ತಿದ್ದಾರೆ ಅರ್ಥಿಕ ವಿಶ್ಲೇಷಕರು.

ಕಳೆದ ಎರಡು ತಿಂಗಳಿನಿಂದ ನ್ ಆದಾಯ ಇಲಾಖೆ ಬ್ಯಾಂಕುಗಳಿಗೆ ನೋಟಿಸ್ ನೀಡುತ್ತಿದ್ದು, ಚೆಕ್ ಬುಕ್ ಹಾಗು ಏಟಿಎಂ ಕಾರ್ಡ್ ಮೇಲೆ ಸೇವಾ ಚಾರ್ಜ್ ಪಡೆದು ತೆರಿಗೆ ಕಟ್ಟಿ ಎನ್ನುತ್ತಿದೆ. ಹೀಗಾಗಿ ಇನ್ನು ಮುಂದೆ ಸೇವಾಚರ್ಗೆ ಬಿದ್ದರೆ ಆಶ್ಚರ್ಯ ಪಡುವ ಸಂಗತಿ ಏನಿಲ್ಲ.ಈಗಾಗಲೇ ಹಲವು ಬ್ಯಾಂಕುಗಳು ಗ್ರಾಹಕರ ಅನುಕೂಲದ ಮೇರೆಗೆ 18% ಜಿಎಸ್ಟಿಯನ್ನು ಕೆಲ ಸೇವೆಗಳ ಮೇಲೆ ನಿಗದಿಪಡಿಸಿದೆ. ಗ್ರಾಹಕರು ಎಸ್ಸೆಮ್ಮೆಸ್‌ ಅಲರ್ಟುಗಳಿಗೆ, ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳಿಗೆ, ನೆಫ್ಟ್‌, ಆರ್‌ಟಿಜಿಎಸ್‌, ಐಎಂಪಿಎಸ್‌ ಮುಂತಾದ ಆನ್‌ಲೈನ್‌ ವ್ಯವಹಾರಗಳಿಗೆ, ಹೆಚ್ಚಿನ ಚೆಕ್‌ ಪುಸ್ತಕ ಬೇಕಾದರೆ, ಡಿಮ್ಯಾಂಡ್‌ ಡ್ರಾಫ್ಟ್‌ ಪಡೆದರೆ ಹೀಗೆ ಎಲ್ಲದಕ್ಕೂ ಫೀಸು ತೆತ್ತಬೇಕು.

ಚೆಕ್‌ ಬೌನ್ಸ್‌ ಆದರೆ, ಇಸಿಎಸ್‌ ಸಂದರ್ಭದಲ್ಲಿ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದಿದ್ದರೆ ದಂಡವನ್ನೂ ಕಟ್ಟಬೇಕು. ಇನ್ನು ಇದು ಗ್ರಾಹಕರಿಗೆ ಹೊರೆ ಅನ್ನಿಸಿದರೆ ಮುಂದೇನಾಗುತ್ತದೆ ಎನ್ನುವುದನ್ನು ರಿಸೆರ್ವೆ ಬ್ಯಾಂಕ್ ಆಫ್ ಇಂಡಿಯಾ ತಿಳಿಸಬೇಕಾಗುತ್ತದೆ. ಈ ಬಗ್ಗೆ ಸ್ಪಷ್ಟ ಮಾಹಿತಿ ಇನ್ನು ಹೊರಬಿದ್ದಿಲ್ಲ ಒಂದು ವೇಳೆ ಇದು ಅನುಷ್ಠಾನಕ್ಕೆ ಬಂದರೆ ಬ್ಯಾಂಕ್ ಗ್ರಾಹಕರಿಗೆ ಕಾದಿದೆ ಶಾಕ್. ದಯವಿಟ್ಟು ಎಲ್ಲರಿಗು ಮಾಹಿತಿ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/12/bank-accounts-shock-1024x576.jpghttp://karnatakatoday.in/wp-content/uploads/2018/12/bank-accounts-shock-150x104.jpgKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುರಾಷ್ಟ್ರೀಕೃತ ಹಾಗು ಖಾಸಗಿ ಬ್ಯಾಂಕುಗಳು ಇದೀಗ ಜನರಿಗೆ ಮತ್ತೊಮ್ಮೆ ದೊಡ್ಡ ತೊಂದರೆ ನೀಡಲು ಮುಂದಾಗುತ್ತಿದೆ ಎನ್ನುವ ಸುದ್ದಿ ಬರುತ್ತಿದೆ. ಹೌದು ದೇಶದಲ್ಲಿ ನಗದು ರಹಿತ ವ್ಯವಹಾರಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಿದ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಮಾಡಲಾಯಿತು. ಇಷ್ಟೇ ಅಲ್ಲದೆ ನೋಟು ಅಮಾನ್ಯ ಆದ ಮೇಲೆಯೂ ಸಹ ಬ್ಯಾಂಕುಗಳ ಮೇಲೆ ಸರ್ಕಾರ ಕೆಲ ನಿಬಂಧನೆಗಳನ್ನು ಕೂಡ ಹೇರಿತ್ತು. ಇದಾದ ನಂತರ ಜಿಎಸ್ಟಿ ಕೂಡ ಬಣದ ಬಳಿಕ ಹಲವು...Kannada News