ಈ ಆಧುನಿಕ ಜಗತ್ತಿನ್ಲಲಿ ಇನ್ನು ಕೆಲ ನಿಗೂಢ ಜಾಗಗಳು ಇವೆ ಎಂದ್ರೆ ನೀವು ನಂಬಲು ಸಾದ್ಯವಿಲ್ಲ ಹಾಗಿದ್ರೆ ಏನದು ನೋಡೋಣ ಬನ್ನಿ. ಈ ಜಗತ್ತಿನಲ್ಲಿ ವಿಶ್ವದ ಪ್ರಖ್ಯಾತ ವಿಜ್ಞಾನಿಗಳಿಗೂ ಬಗೆಹರಿಸಲಾಗದ ಅದೆಷ್ಟೋ ರಹಸ್ಯಗಳಿವೆ. ಇಂತಹ ನೂರಾರು ಭೌಗೋಳಿಕ ರಹಸ್ಯಗಳಲ್ಲಿ ಅಟ್ಲಾಂಟಿಕ್ ಮಹಾಸಾಗರದ ಬಳಿ ಕಾಣಸಿಗುವ ಬರ್ಮುಡಾ ಟ್ರಯಾಂಗಲ್ ಟ್ರಯಾಂಗಲ್ ಕೂಡ ಒಂದು.

ಈ ಪ್ರದೇಶ ಏಕೆ ಇಷ್ಟು ಕುಖ್ಯಾತಿಗಳಿಸಿದೆ ಎನ್ನಲು ಹಲವು ಉದಾಹರಣೆಗಳನ್ನು ನೀಡಬಹುದು. ಇಲ್ಲಿ ಹಾರಾಟ ಮಾಡಿದ ಹಲವು ವಿಮಾನಗಳು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದವು. ಈ ಜಲಭಾಗದಲ್ಲಿ ಸಂಚರಿಸಿದ ಅದೆಷ್ಟೋ ಹಡಗುಗಳು ನಿಗೂಢ ಅಪಘಾತಕ್ಕೀಡಾಗಿ ಅವುಗಳ ಅವಶೇಷಗಳು ಕೂಡ ಸಿಗಲಾರದ ಹಾಗೆ ಕಣ್ಮರೆಯಾಗಿವೆ. ಉತ್ತರ ಅಟ್ಲಾಂಟಿಕ್ ಸಾಗರದಲ್ಲಿರುವ ಬರ್ಮುಡಾ ದ್ವೀಪಗಳಿಂದ ಅಮೆರಿಕ ದೇಶದ ಮಿಯಾಮಿ, ಅಲ್ಲಿಂದ ಪ್ಯೂರ್ಟೋ ರೀಕೋ ನಂತರ ಮತ್ತೆ ಬರ್ಮುಡಾಕ್ಕೆ ಎಳೆದ ರೇಖೆಗಳ ನಡುವಣ ಪ್ರದೇಶದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಹಡಗುಗಳು ಮತ್ತು ವಿಮಾನಗಳು ಮಾಯವಾಗಿವೆ.

ಇದಕ್ಕೆ ಕಾರಣಗಳನ್ನು ಹುಡುಕ ಹೊರಟವರಿಗೆ ವೈಜ್ಞಾನಿಕ ಸತ್ಯಕ್ಕಿಂತ ಕಟ್ಟುಕಥೆಗಳ ಕಂತೆಯೇ ಪುಂಖಾನುಪುಂಖವಾಗಿ ದೊರಕಿದೆ. ಇನ್ನು ಬರ್ಮುಡಾ ಟ್ರಯಾಂಗಲ್ ತ್ರಿಕೋನಾಕೃತಿ ಪ್ರದೇಶ ಮಾತ್ರವಲ್ಲದೇ ಇದರ ಹೊರಗಿನ ಪ್ರದೇಶಗಳಲ್ಲಿಯೂ ಹಲವು ದುರಂತಗಳು ಸಂಭವಿಸಿದೆ. ಆದರೆ ಈ ತ್ರಿಕೋನಾಕೃತಿ ಪ್ರದೇಶದಲ್ಲಿಯೇ ಅತಿ ಹೆಚ್ಚು ಅಪಘಾತಗಳು ಸಂಭವಿಸಿವೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಬರ್ಮುಡಾ ಟ್ರಯಾಂಗಲ್ ನಲ್ಲಿ ನಾಪತ್ತೆಯಾಗುವ ವಿಮಾನ ಮತ್ತು ಹಡಗುಗಳ ಅವಶೇಷಗಳೇಕೆ ಪತ್ತೆಯಾಗುವುದಿಲ್ಲ ಎಂಬ ಪ್ರಶ್ನೆಗೂ ವಿಜ್ಞಾನಿಗಳು ಉತ್ತರ ಕಂಡುಹಿಡಿದಿದ್ದಾರೆ. ಬರ್ಮುಡಾ ಟ್ರಯಾಂಗಲ್ ತ್ರಿಕೋನಾಕೃತಿ ವ್ಯಾಪ್ತಿಯ ಪ್ರದೇಶದಲ್ಲಿ ಗಲ್ಫ್ ಸ್ಟ್ರೀಮ್ ಅತ್ಯಂತ ರಭಸವಾಗಿ ಹರಿಯುತ್ತದೆ. ಇದರ ಪ್ರವಾಹ ಅತ್ಯಂತ ಪ್ರಭಾವಶಾಲಿಯಾಗಿದ್ದು, ತೇಲುವ ವಸ್ತುಗಳನ್ನು ಸುಲಭವಾಗಿ ಒಳಗೆ ಸೆಳೆದುಕೊಳ್ಳುತ್ತದೆ. ಅಲ್ಲದೆ ಪುಟ್ಟ ವಿಮಾನಗಳನ್ನೂ ಕೂಡ ತನ್ನತ್ತ ಸೆಳೆದುಕೊಳ್ಳುವ ಶಕ್ತಿ ಈ ಪ್ರಭಾವಿ ಪ್ರವಾಹದ ಅಲೆಗಳಿಗಿದೆ. ಸಮುದ್ರದ ಒಳಗೆ ಉತ್ಪತ್ತಿಯಾಗುವ ನೈಸರ್ಗಿಕ ಅನಿಲಗಳೂ ಇಂಥಹ ಕಣ್ಮರೆಗೆ ಕಾರಣವೆಂದು ಹೇಳಲಾಗುತ್ತದೆ.

Please follow and like us:
0
http://karnatakatoday.in/wp-content/uploads/2018/06/BERMUDA-TRIANGLE-KANNADA-1024x576.pnghttp://karnatakatoday.in/wp-content/uploads/2018/06/BERMUDA-TRIANGLE-KANNADA-150x150.pngKarnataka Today's Newsಅಂಕಣಎಲ್ಲಾ ಸುದ್ದಿಗಳುಈ ಆಧುನಿಕ ಜಗತ್ತಿನ್ಲಲಿ ಇನ್ನು ಕೆಲ ನಿಗೂಢ ಜಾಗಗಳು ಇವೆ ಎಂದ್ರೆ ನೀವು ನಂಬಲು ಸಾದ್ಯವಿಲ್ಲ ಹಾಗಿದ್ರೆ ಏನದು ನೋಡೋಣ ಬನ್ನಿ. ಈ ಜಗತ್ತಿನಲ್ಲಿ ವಿಶ್ವದ ಪ್ರಖ್ಯಾತ ವಿಜ್ಞಾನಿಗಳಿಗೂ ಬಗೆಹರಿಸಲಾಗದ ಅದೆಷ್ಟೋ ರಹಸ್ಯಗಳಿವೆ. ಇಂತಹ ನೂರಾರು ಭೌಗೋಳಿಕ ರಹಸ್ಯಗಳಲ್ಲಿ ಅಟ್ಲಾಂಟಿಕ್ ಮಹಾಸಾಗರದ ಬಳಿ ಕಾಣಸಿಗುವ ಬರ್ಮುಡಾ ಟ್ರಯಾಂಗಲ್ ಟ್ರಯಾಂಗಲ್ ಕೂಡ ಒಂದು. ಈ ಪ್ರದೇಶ ಏಕೆ ಇಷ್ಟು ಕುಖ್ಯಾತಿಗಳಿಸಿದೆ ಎನ್ನಲು ಹಲವು ಉದಾಹರಣೆಗಳನ್ನು ನೀಡಬಹುದು. ಇಲ್ಲಿ ಹಾರಾಟ ಮಾಡಿದ ಹಲವು...Kannada News