ನಮ್ಮ ಮನೆಯ ಅಂಗಳದಲ್ಲಿ ಬೆಳೆದಿರುವ ಔಷಧಿ ಸಸ್ಯಗಳ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ, ನಾವು ಹೇಳುವ ಈ ಸಸ್ಯ ಬಹಳ ಚಿಕ್ಕದು ಆದರೆ ಇದರ ಮಹಿಮೆ ಮಾತ್ರ ಬಹಳ ದೊಡ್ಡದು, ಮೂರ್ತಿ ಚಿಕ್ಕದಾದದು ಕೀರ್ತಿ ದೊಡ್ಡದು ಅನ್ನುತ್ತಾರಲ್ಲ ಹಾಗೆ. ಹೌದು ಸ್ನೇಹಿತರೆ ಈ ಸಸ್ಯದ ಎಲೆಗಳನ್ನ ದಿನಾಲೂ ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ಇರುವ ಹಲವು ರೋಗಗಳು ನಿವಾರಣೆ ಆಗುತ್ತದೆ ಮತ್ತು ಯಾವುದೇ ರೋಗ ಕೂಡ ನಿಮ್ಮ ಬಳಿ ಸುಳಿಯುವುದಿಲ್ಲ. ಹಾಗಾದರೆ ಆ ಸಸ್ಯ ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ಬನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಸಸ್ಯದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

ಸ್ನೇಹಿತರೆ ತುಳಸಿ ಗಿಡ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಪ್ರತಿಯೊಬ್ಬರ ಮನೆಯಲ್ಲಿ ತುಳಸಿ ಗಿಡ ಇದ್ದೆ ಇರುತ್ತದೆ ಮತ್ತು ಹಿಂದೂಗಳು ತುಳಸಿ ಗಿಡಕ್ಕೆ ಪೂಜೆಯನ್ನ ಮಾಡುತ್ತಾರೆ. ಸ್ನೇಹಿತರೆ ತುಳಸಿ ಸಸ್ಯ ನಮ್ಮ ದೇಹಕ್ಕೆ ಎಷ್ಟು ಪ್ರಯೋಜನಕಾರಿ ಅನ್ನುವುದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ, ಹೌದು ಸ್ನೇಹಿತರೆ ದಿನಕ್ಕೆ ಮೂರೂ ತುಳಸಿ ಎಲೆಗಳನ್ನ ಸೇವನೆ ಮಾಡಿದರೆ ನಿಮ್ಮ ದೇಹದ ಹಲವು ರೋಗಗಗಳು ಮಂಗಮಾಯ ಆಗಲಿದೆ. ಅನೇಕ ಔಷಧಿ ಗುಣಗಳನ್ನ ಹೊಂದಿರುವ ತುಳಸಿ ಎಲೆ ಆರೋಗ್ಯ ತುಂಬಾ ಒಳ್ಳೆಯದು, ಇನ್ನು ಆಯುರ್ವೇದದಲ್ಲಿ ತುಳಸಿಗೆ ಬಹಳ ವಿಶೇಷವಾದ ಸ್ಥಾನಮಾನವನ್ನ ನೀಡಲಾಗಿದೆ, ಇನ್ನು ಇಷ್ಟೆಲ್ಲ ವಿಶೇಷತೆ ಹೊಂದಿರುವ ತುಳಸಿ ಎಲೆಯನ್ನ ಆಹಾರದ ರೂಪದಲ್ಲಿ ಸೇವನೆ ಮಾಡಿದರೆ ನಮ್ಮ ದೇಹಕ್ಕೆ ತುಂಬಾ ಒಳ್ಳೆಯದು.

Benefits of Tulasi leaf

ದಿನಕ್ಕೆ ಮೂರೂ ತುಳಸಿ ಎಲೆಗಳನ್ನ ತಿನ್ನುವುದರಿಂದ ನಮ್ಮ ಬುದ್ಧಿಶಕ್ತಿ ಹೆಚ್ಚಾಗುತ್ತದೆ ಆದ್ದರಿಂದ ವಿದ್ಯಾರ್ಥಿಗಳಿಗೆ ಇದು ಬಹಳ ಒಳ್ಳೆಯದು ಮತ್ತು ಇದು ದೇಹಕ್ಕೆ ಶಕ್ತಿಯನ್ನ ಕೂಡ ನೀಡುತ್ತದೆ. ಇನ್ನು ದಿನಕ್ಕೆ ಮೂರೂ ತುಳಸಿ ಎಲೆಗಳನ್ನ ಸೇವನೆ ಮಾಡಿದರೆ ಜ್ವರ ಮತ್ತು ಶೀತ ಕಡಿಮೆ ಆಗುತ್ತದೆ, ಇನ್ನು ತುಳಸಿ ಎಲೆಯನ್ನ ಚಹಾ ಅಥವಾ ಕಾಫಿ ಜೊತೆ ಸೇರಿಸಿ ಕುಡಿಯುವುದರಿಂದ ಮಲೇರಿಯಾ ಮತ್ತು ಡೆಂಗ್ಯೂ ಜ್ವರ ವಾಸಿಯಾಗುತ್ತದೆ. ಇನ್ನು ಜೀರ್ಣ ಶಕ್ತಿಗೆ ಉತ್ತಮ ಔಷಧಿ ತುಳಸಿ, ಹೌದು ತುಳಸಿ ಎಲೆಗಳನ್ನ ಸೇವನೆ ಮಾಡಿದರೆ ನಮ್ಮ ಜೀರ್ಣ ಶಕ್ತಿ ಉತ್ತಮ ಆಗುತ್ತದೆ, ಇನ್ನು ತುಳಸಿ ರಸವನ್ನ ಗಂಧದೊಂದಿಗೆ ಬೆರೆಸಿ ಹಣೆಗೆ ಹಚ್ಚಿಕೊಂಡರೆ ನಿಮ್ಮ ತಲೆನೋವು ಮಂಗಮಾಯ ಆಗುತ್ತದೆ, ಇನ್ನು ಅನೇಕ ತಲೆ ನೋವಿನ ಔಷಧಿಗಳಲ್ಲಿ ತುಳಸಿ ಕೂಡ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಡಯಾಬಿಟೀಸ್ ರೋಗವನ್ನ ನಿಯಂತ್ರಣ ಮಾಡುವುದರಲ್ಲಿ ತುಳಸಿ ಎಲೆ ಪ್ರಮುಖ ಪಾತ್ರವನ್ನ ವಹಿಸುತ್ತದೆ, ಹೌದು ತುಳಸಿ ಗಿಡದ ಬೇರನ್ನ ಒಣಗಿಸಿ ಪುಡಿ ಮಾಡಿ ಪ್ರತಿದಿನ ರಾತ್ರಿ ಮಲಗುವ ಮುನ್ನ ನೀರಿನಲ್ಲಿ ಬೆರೆಸಿ ಸೇವಿಸಬೇಕು ಮತ್ತು ಹೀಗೆ ಮಾಡುವುದರಿಂದ ನಮ್ಮ ದೇಹದಲ್ಲಿನ ಇನ್ಸುಲಿನ್ ಮಟ್ಟವನ್ನ ನಿಯಂತ್ರಣದಲ್ಲಿ ಇಡಬಹುದು ಮತ್ತು ಇದರಿಂದ ನೈಸರ್ಗಿಕವಾಗಿ ಸಕ್ಕರೆ ಖಾಯಿಲೆ ನಿಯಂತ್ರಣ ಆಗುತ್ತದೆ. ಇನ್ನು ಕಿಡ್ನಿ ಕಲ್ಲಿನ ಸಮಸ್ಯೆಗೆ ರಾಮಬಾಣ ಈ ತುಳಸಿ, ಕಿಡ್ನಿ ಕಲ್ಲನ್ನ ಕಡಿಮೆ ಮಾಡುವುದರಿಂದ ತುಳಸಿ ರಸ ಒಳ್ಳೆಯ ಔಷಧಿ, ಹೌದು ತುಳಸಿ ರಸವನ್ನ ಜೇನು ತುಪ್ಪದೊಂದಿಗೆ ಬೆರೆಸಿ ಆರು ತಿಂಗಳು ಸೇವನೆ ಮಾಡಿದರೆ ಕಿಡ್ನಿಯಲ್ಲಿನ ಕಲ್ಲು ಮಾಯವಾಗುತ್ತದೆ, ಇನ್ನು ಲೈಂಗಿಕ ಶಕ್ತಿಯ ವೃದ್ಧಿಗೂ ಈ ತುಳಸಿ ಎಲೆಗಳನ್ನ ಬಳಸಲಾಗುತ್ತದೆ.

Benefits of Tulasi leaf

Please follow and like us:
error0
http://karnatakatoday.in/wp-content/uploads/2019/11/Bnefits-of-Tulasi-leaf-1024x576.jpghttp://karnatakatoday.in/wp-content/uploads/2019/11/Bnefits-of-Tulasi-leaf-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲನಮ್ಮ ಮನೆಯ ಅಂಗಳದಲ್ಲಿ ಬೆಳೆದಿರುವ ಔಷಧಿ ಸಸ್ಯಗಳ ಬಗ್ಗೆ ನಮಗೆ ಮಾಹಿತಿ ಇರುವುದಿಲ್ಲ, ನಾವು ಹೇಳುವ ಈ ಸಸ್ಯ ಬಹಳ ಚಿಕ್ಕದು ಆದರೆ ಇದರ ಮಹಿಮೆ ಮಾತ್ರ ಬಹಳ ದೊಡ್ಡದು, ಮೂರ್ತಿ ಚಿಕ್ಕದಾದದು ಕೀರ್ತಿ ದೊಡ್ಡದು ಅನ್ನುತ್ತಾರಲ್ಲ ಹಾಗೆ. ಹೌದು ಸ್ನೇಹಿತರೆ ಈ ಸಸ್ಯದ ಎಲೆಗಳನ್ನ ದಿನಾಲೂ ಸೇವನೆ ಮಾಡಿದರೆ ನಿಮ್ಮ ದೇಹದಲ್ಲಿ ಇರುವ ಹಲವು ರೋಗಗಳು ನಿವಾರಣೆ ಆಗುತ್ತದೆ ಮತ್ತು ಯಾವುದೇ ರೋಗ ಕೂಡ ನಿಮ್ಮ ಬಳಿ...Film | Devotional | Cricket | Health | India