ಎಲ್ಲ ಸಂಬಂಧಗಳಿಗಿಂತ ಪತಿ- ಪತ್ನಿ ಸಂಬಂಧ ಶ್ರೇಷ್ಠವಾದುದು. ಮನೆಯಲ್ಲಿ ಶಾಂತಿ, ನೆಮ್ಮದಿ ಹಾಗೂ ಹೊಂದಾಣಿಕೆಯ ಜೀವನ ಸಾಗಿಸುವುದು ಪತ್ನಿಯ ಕರ್ತವ್ಯವಾದರೆ, ಪತಿಯು ತನ್ನ ಪತ್ನಿ ಮತ್ತು ಮಕ್ಕಳ ಹಿತವನ್ನು ಕಾಪಾಡುವುದರ ಜತೆಗೆ ಅವರ ಆಶೋತ್ತರಗಳನ್ನು ಈಡೇರಿಸಬೇಕು.

ಜೀವನದಲ್ಲಿ ಸುಖ- ದುಃಖಗಳನ್ನು ಸಮನಾಗಿ ಹಂಚಿಕೊಂಡು ಬಾಳಬೇಕು. ಗುಲಾಬಿ ಹೂವಿನಲ್ಲಿ ಮುಳ್ಳಿರುವ ಹಾಗೆ ಹೂವಿನ ಸೌಂದರ್ಯ ಮತ್ತು ಸುಗಂಧವನ್ನು ಬಯಸುವವರು ಮುಳ್ಳನ್ನು ಸಹಿಸಿಕೊಳ್ಳಬೇಕು. ಕುಟುಂಬ ಪದ್ಧತಿಯಲ್ಲಿ ಪತಿ, ಪತ್ನಿಯರು ಸಹನೆ ಹಾಗೂ ಹೊಂದಾಣಿಕೆಯಿಂದ ಜೀವನ ನಡೆಸುವುದರಿಂದ ಆ ಸಂಸಾರದಲ್ಲಿ ಶಾಂತಿ, ನೆಮ್ಮದಿಯಿಂದ ಬಾಳಲು ಸಾಧ್ಯ. ಹೀಗಾಗಿ ಒಬ್ಬ ಗಂಡನ ಯಶಸ್ವಿ ಜೀವನಕ್ಕೆ ಹೆಂಡತಿಯ ಪಾತ್ರ ಅಂದರೆ ಪತ್ನಿಯ ಪಾತ್ರ ಬಹುಮುಖ್ಯ.

ಯಾವ ಹೆಣ್ಣಿನಲ್ಲಿ ಈ 3 ಗುಣಗಳಿರುತ್ತವೆಯೋ ಅವಳ ಪತಿ ಯಾವಾಗಲು ಸಿರಿವಂತನಾಗಿಯೇ ಇರುತ್ತಾನಂತೆ. ಹಾಗಿದ್ದರೆ ಆ ಹೆಣ್ಣು ಹೇಗಿರಬೇಕು ಏನು ಮಾಡಬೇಕು ಎಂದು ನೋಡೋಣ. ಗಂಡನ ಶ್ರೀಮಂತಿಕೆಗೆ ಕಾರಣವಾದ ಆ ಗುಣಗಳು ಯಾವುವು ಎಂದು ತಿಳಿಯೋಣ. ಮೊದಲಿಗೆ ಯಾವ ಹೆಣ್ಣು ಬೆಳಿಗ್ಗೆ ಎದ್ದು ಶುಚಿಯಾಗಿ ದೇವರಿಗೆ ಕೈ ಮುಗಿದು ಪತ್ನಿಯ ಅರೋಗ್ಯ ತನ್ನ ಕುಟುಂಬದ ಆರೋಗ್ಯಕ್ಕಾಗಿ ದೇವರಲ್ಲಿ ಮೊರೆ ಇಡುತ್ತಾಳೋ ಈ ಗುಣ ಸಾಕು ಅವಳ ಗಂಡನ ಏಳಿಗೆಗೆ.

ಇಂತಹ ಮನೆಯಲ್ಲಿ ಲಕ್ಷ್ಮಿ ಸದಾ ನೆಲೆಸಿರುತ್ತಾಳೆ. ತನ್ನ ಗಂಡನ ಪ್ರತಿಯೊಂದು ಮಾತನ್ನು ಗೌರವಿಸುವ ಮತ್ತು ಎಂತಹ ಕಷ್ಟ ಕಾಲದಲ್ಲಿಯೂ ಗಂಡನನ್ನು ಕೈಬಿಡಲು ಇಚ್ಚಿಸದೆ ಸದಾ ಆತನ ಯಶಸ್ಸಿಗೆ ಶ್ರಮಿಸುವಳು ಕೂಡ ಹೌದು.

ಇನ್ನು ಮೂರನೆಯ ಗುಣಕ್ಕೆ ಬಂದರೆ ಯಾವ ಕನ್ಯೆ ತನ್ನ ಮನೆಗೆ ಬಂದ ಅಸಹಾಯಕರಿಗೆ ಬಡವರಿಗೆ ಮತ್ತು ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಬರಿ ಕೈಯಲ್ಲಿ ವಾಪಸು ಕಳುಹಿಸದೆ ಅವರಿಗೆ ಏನಾದರು ದಾನ ಧರ್ಮ ಮುಂತಾದ ಕಾರ್ಯಗಳನ್ನು ಮಾಡುತ್ತಾಳೋ ಆಕೆಯ ಗಂಡನ ಆರ್ಥಿಕ ಸ್ಥಿತಿ ಕೂಡ ಸದಾ ಉತ್ತುಂಗುದಲ್ಲಿರುತ್ತದೆ.

Please follow and like us:
0
http://karnatakatoday.in/wp-content/uploads/2018/10/Wife-with-3-qualities-ambani-1024x576.pnghttp://karnatakatoday.in/wp-content/uploads/2018/10/Wife-with-3-qualities-ambani-150x104.pngKarnataka Today's Newsಅಂಕಣಆಟೋಎಲ್ಲಾ ಸುದ್ದಿಗಳುಎಲ್ಲ ಸಂಬಂಧಗಳಿಗಿಂತ ಪತಿ- ಪತ್ನಿ ಸಂಬಂಧ ಶ್ರೇಷ್ಠವಾದುದು. ಮನೆಯಲ್ಲಿ ಶಾಂತಿ, ನೆಮ್ಮದಿ ಹಾಗೂ ಹೊಂದಾಣಿಕೆಯ ಜೀವನ ಸಾಗಿಸುವುದು ಪತ್ನಿಯ ಕರ್ತವ್ಯವಾದರೆ, ಪತಿಯು ತನ್ನ ಪತ್ನಿ ಮತ್ತು ಮಕ್ಕಳ ಹಿತವನ್ನು ಕಾಪಾಡುವುದರ ಜತೆಗೆ ಅವರ ಆಶೋತ್ತರಗಳನ್ನು ಈಡೇರಿಸಬೇಕು. ಜೀವನದಲ್ಲಿ ಸುಖ- ದುಃಖಗಳನ್ನು ಸಮನಾಗಿ ಹಂಚಿಕೊಂಡು ಬಾಳಬೇಕು. ಗುಲಾಬಿ ಹೂವಿನಲ್ಲಿ ಮುಳ್ಳಿರುವ ಹಾಗೆ ಹೂವಿನ ಸೌಂದರ್ಯ ಮತ್ತು ಸುಗಂಧವನ್ನು ಬಯಸುವವರು ಮುಳ್ಳನ್ನು ಸಹಿಸಿಕೊಳ್ಳಬೇಕು. ಕುಟುಂಬ ಪದ್ಧತಿಯಲ್ಲಿ ಪತಿ, ಪತ್ನಿಯರು ಸಹನೆ ಹಾಗೂ ಹೊಂದಾಣಿಕೆಯಿಂದ...Kannada News