ಭಗವಾನ್ ಶ್ರೀ ಕೃಷ್ಣ ಪರಮಾತ್ಮನ ಅಂತ್ಯ ಹೇಗಾಯ್ತು ಎನ್ನುವುದು ಇನ್ನು ಕೆಲವರಿಗೆ ಗೊತ್ತಿಲ್ಲ. ಮಹಾಭಾರತದ ಯುದ್ಧದ ನಂತರದ ಪರಿಸ್ಥಿತಿ ಏನಾಗಿತ್ತು, ಹೇಗೆ ಯಾದವ ಕುಲದ ಅಂತ್ಯ ಆಯಿತು. ಕೃಷ್ಣನ ದ್ವಾರಕೆ ಹೇಗೆ ನಶ್ವರವಾಯಿತು ಎನ್ನುವ ಕುತೂಹಲಗಳ ಬಗ್ಗೆ ಇಂದು ತಿಳಿದುಕೊಳ್ಳೋಣ. ನಮ್ಮ ಹಿಂದೂ ಪುರಾಣಗಳಲ್ಲಿ ಕೆಲವರಿಗೆ ಮಾತ್ರ ತಿಳಿದಿರುವ ಅನೇಕ ಕುತೂಹಲ ಕೆರಳಿಸುವ ಕಥೆಗಳಿವೆ. ಅಂತಹದರಲ್ಲಿ ಶ್ರೀ ಕೃಷ್ಣನ ಸಾವಿನ ಬಗ್ಗೆ ಒಂದು ಕಥೆ ಇದೆ. ಶ್ರೀ ಕೃಷ್ಣನು ಹೇಗೆ ಜನ್ಮತಾಳಿದನೆಂದು ಎಲ್ಲರಿಗೂ ಗೊತ್ತಿದೆ. ಆದರೆ ಶ್ರೀ ಕೃಷ್ಣಾವತಾರದ ಪರಿಸಮಾಪ್ತಿ ಹೇಗಾಯ್ತು ಗೊತ್ತಿದೆಯೇ ಅದನ್ನೇ ಇಂದು ನೋಡಿ.

ದುರ್ಯೋಧನನು ಅಂತಿಮವಾಗಿ ಹತ್ಯೆಯಾಗಿ ಮಹಾಭಾರತದ ಯುದ್ಧ ಕೊನೆಗೊಂಡ ಮೇಲೆ, ಅವನ ಮಾತೆ ಗಾಂಧಾರಿಯ ಮನ ಛಿದ್ರಗೊಂಡಿತು. ಆಕೆ ತನ್ನ ಮಗನ ಅವಶೇಷವನ್ನು ನೋಡಿ ಶೋಕಿಸಲು ಯುದ್ಧ ಭೂಮಿಗೆ ತೆರಳಿದಳು. ಶ್ರೀ ಕೃಷ್ಣ ಮತ್ತು ಪಾಂಡವರು ಆಕೆಯ ಜೊತೆಗೂಡಿದರು. ತನ್ನ ಮಕ್ಕಳನ್ನೆಲ್ಲ ಕಳೆದುಕೊಂಡು ಶೋಕತಪ್ತೆಯಾಗಿದ್ದ ಗಾಂಧಾರಿ, ಶ್ರೀ ಕೃಷ್ಣನಿಗೆ 36 ವರ್ಷದ ಬಳಿಕ ಮರಣ ಹೊಂದಲಿ ಎಂದು ಶಾಪಕೊಡುತ್ತಾರೆ. ಸ್ವತಃ ಶ್ರೀ ಕೃಷ್ಣನು ಮುಗುಳ್ನಗೆಯಿಂದ ಈ ಶಾಪವನ್ನು ಸ್ವೀಕರಿಸುತ್ತಾರೆ. ಈ ಪ್ರಕರಣ ನಿಖರ 36 ವರ್ಷಗಳ ಬಳಿಕ ಒಬ್ಬ ಬೇಟೆಗಾರನ ಬಾಣದಿಂದ ಶ್ರೀಕೃಷ್ಣನು ಸಾವನ್ನಪ್ಪುತ್ತಾರೆ. ಇದರೊಂದಿಗೆ ಕೃಷ್ಣಾವತಾರದ ಪರಿಸಮಾಪ್ತಿಯಾಗುತ್ತದೆ.

ಕ್ರಮೇಣವಾಗಿ ಕೃಷ್ಣ ಪರಮಾತ್ಮನ ಯಾದವಕುಲ ಸಂಪೂರ್ಣವಾಗಿ ನಶಿಸಿಹೋಗುತ್ತದೆ. ದ್ವಾರಕ ಪಟ್ಟಣವು ಸಮುದ್ರದಲ್ಲಿ ಮುಳುಗಿ ಹೋಗಿದ್ದು, ಅದು ಈಗಲೂ ಸಮುದ್ರದಲ್ಲಿ ಉಳಿದುಕೊಂಡಿದೆವೆಂಬ ಐತಿಹ್ಯವಿದೆ. ಶ್ರೀ ಕೃಷ್ಣನ ಸಾವಿನ ದುರಂತ ಕಥೆ ಹೀಗಿದೆ. ತನ್ನ ನೂರು ಮಕ್ಕಳ ಸಾವಿನಿಂದ ದುಃಖಿತಳಾಗಿ ಗಾಂಧಾರಿಯು ಸಂಪೂರ್ಣ ರಕ್ತಪಾತಕ್ಕೆ ಶ್ರೀ ಕೃಷ್ಣನನ್ನು ಆರೋಪಿಸಿದಳು. ಶ್ರೀ ಕೃಷ್ಣನು ಸ್ವತಃ ದೇವರಾಗಿದ್ದರಿಂದ ಕುರು ಕ್ಷೇತ್ರಯುದ್ಧವನ್ನು ಸುಲಭವಾಗಿ ತಪ್ಪಿಸಬಹುದಾಗಿತ್ತೆಂದು ಗಾಂಧಾರಿಯು ಹೇಳಿದಳು. ಆದರೆ ಅವನು ಸಹೋದರರು ಒಬ್ಬರೊನ್ನೊಬ್ಬರು ಪರಸ್ಪರ ಕೊಲ್ಲಲು ಅವಕಾಶ ಮಾಡಿದನು.

ಹಾಗಾಗಿ, ಗಾಂಧಾರಿಯು ಕೃಷ್ಣನಿಗೆ ಯಾದವ ಕುಲವೂ ಕೂಡ ಕುರುವಂಶವು ನಾಶವಾದ ರೀತಿಯಲ್ಲಿ ನಾಶವಾಗಿಹೋಗಲಿ ಎಂದು ಶಪಿಸಿದಳು.ಯಾದವ ಕುಲದಲ್ಲಿಯೂ ಸಹೋದರರು ಪರಸ್ಪರ ಕೊಂದು ಕೃಷ್ಣನ ರಾಜ್ಯವು ಅಂತ್ಯವಾಗಲಿಯೆಂದು ಹೇಳಿದಳು. ಹಾಗೆಯೇ ಶ್ರೀ ಕೃಷ್ಣನು ಏಕಾಂಗಿಯಾಗಿ ಸಾಯುವನೆಂದು ಮತ್ತು ದ್ವಾರಕಾ ಪಟ್ಟಣವನ್ನು ಸಮುದ್ರವು ನುಂಗಿ ಹಾಕಲಿಯೆಂದೂ ಸಹ ಶಾಪ ಕೊಟ್ಟಳು.  ಯಾದವರು ಕೃಷ್ಣನ ಆಳ್ವಿಕೆಯಲ್ಲಿ ಒಂದು ಪ್ರವರ್ಧಮಾನ ವಂಶವಾಗಿತ್ತು. ಆದರೆ ಕಾಲಕ್ರಮೇಣ ಅವರಿಗೆ ತಮ್ಮ ಶಕ್ತಿ ಮತ್ತು ಶ್ರೀಮಂತಿಕೆಯ ಜೊತೆ ಮೈಮರೆತರು.

ಯಾದವರು ಎಲ್ಲಾ ರೀತಿಯ ವ್ಯಭಿಚಾರಗಳಲ್ಲಿ ತೊಡಗಿ ಸಹೋದರಗಳಲ್ಲಿಯೇ ಕಾದಾಟಗಳು ನಡೆಯಿತು. ಇದರ ಫಲವಾಗಿ ದೊಡ್ದ ಪ್ರಮಾಣದ ಯುದ್ಧಗಳಾಗಿ ಕೊನೆಗೆ ಯಾದವರು ರಣರಂಗದಲ್ಲಿ ಪರಸ್ಪರ ಕೊಲ್ಲಲ್ಪಟ್ಟರು. ಈ ಯುದ್ಧಗಳಲ್ಲಿ ಕೃಷ್ಣನ ಮಗನಾದ ಪ್ರದ್ಯುಮ್ನನೂ ಸಹ ಕೊಲ್ಲಲ್ಪಟ್ಟನು. ಶ್ರೀ ಕೃಷ್ಣನು ಈ ವಿನಾಶವನ್ನು ನೋಡಿ ದ್ವಾರಕಾ ಪಟ್ಟಣವನ್ನು ಬಿಟ್ಟು ಅರಣ್ಯದೊಳಗೆ ಹೋಗಲು ನಿಶ್ಚಯಿಸಿದನು.


ಕೃಷ್ಣನು ಅರಣ್ಯದೊಳಗೆ ತನ್ನ ಅಣ್ಣ ಬಲರಾಮನ ಜೊತೆ ಹೋದ ಕೆಲವು ಸಮಯದ ನಂತರ ಬಲರಾಮನು ಮೃತನಾದನು. ಕೃಷ್ಣನು ಬಹಳ ದುಃಖಿತನಾಗಿ ಒಂದು ಮರದಕೆಳಗೆ ಕುಳಿತು ವಿಶ್ರಾಂತಿ ಪಡೆಯುತ್ತಿದ್ದನು. ಒಬ್ಬ ಬೇಡನು ದೂರದಿಂದ ಕೃಷ್ಣನ ಪಾದದಲ್ಲಿ ಕಾಣುತ್ತಿದ್ದ ಕಮಲದ ಚಿಹ್ನೆಯನ್ನು ಒಂದು ಪ್ರಾಣಿಯೆಂದು ತಪ್ಪಾಗಿ ಅರಿತುಕೊಂಡನು. ಬೇಡನು ಆ ಕಮಲದ ಮೇಲೆ ಗುರಿಯಿಟ್ಟು ಬಾಣ ಬಿಟ್ಟಾಗ ಅದು ಕೃಷ್ಣನ ಪಾದಕ್ಕೆ ಹೊಡೆಯಿತು. ತನ್ನ ತಪ್ಪು ಅರಿವಾದ ತಕ್ಷಣವೇ ಬೇಡನು ಕೃಷ್ಣನ ಬಳಿ ಬಂದು ಕ್ಷಮೆಯಾಚಿಸಿದನು. ಶ್ರೀ ಕೃಷ್ಣನು ಇದೆಲ್ಲ ವಿಧಿನಿಯಮವೆಂದು ಹೇಳಿದನು. ಹೀಗೆ ಶ್ರೀ ಕೃಷ್ಣನು ಇಹಲೋಕವನ್ನು ತೊರೆದು ದ್ವಾಪರಯುಗದ ಅಂತ್ಯವಾಗುವಂತಾಯಿತು.

Please follow and like us:
error0
http://karnatakatoday.in/wp-content/uploads/2019/06/prabhu-krishna-1024x576.jpghttp://karnatakatoday.in/wp-content/uploads/2019/06/prabhu-krishna-150x104.jpgKarnataka Trendingಎಲ್ಲಾ ಸುದ್ದಿಗಳುಮಂಗಳೂರುಭಗವಾನ್ ಶ್ರೀ ಕೃಷ್ಣ ಪರಮಾತ್ಮನ ಅಂತ್ಯ ಹೇಗಾಯ್ತು ಎನ್ನುವುದು ಇನ್ನು ಕೆಲವರಿಗೆ ಗೊತ್ತಿಲ್ಲ. ಮಹಾಭಾರತದ ಯುದ್ಧದ ನಂತರದ ಪರಿಸ್ಥಿತಿ ಏನಾಗಿತ್ತು, ಹೇಗೆ ಯಾದವ ಕುಲದ ಅಂತ್ಯ ಆಯಿತು. ಕೃಷ್ಣನ ದ್ವಾರಕೆ ಹೇಗೆ ನಶ್ವರವಾಯಿತು ಎನ್ನುವ ಕುತೂಹಲಗಳ ಬಗ್ಗೆ ಇಂದು ತಿಳಿದುಕೊಳ್ಳೋಣ. ನಮ್ಮ ಹಿಂದೂ ಪುರಾಣಗಳಲ್ಲಿ ಕೆಲವರಿಗೆ ಮಾತ್ರ ತಿಳಿದಿರುವ ಅನೇಕ ಕುತೂಹಲ ಕೆರಳಿಸುವ ಕಥೆಗಳಿವೆ. ಅಂತಹದರಲ್ಲಿ ಶ್ರೀ ಕೃಷ್ಣನ ಸಾವಿನ ಬಗ್ಗೆ ಒಂದು ಕಥೆ ಇದೆ. ಶ್ರೀ ಕೃಷ್ಣನು...Film | Devotional | Cricket | Health | India