ಪಾಂಡವರ ಜನ್ಮ ರಹಸ್ಯದ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ, ಸ್ನೇಹಿತರೆ ಕುಂತಿಗೆ ಹುಟ್ಟಿದ ಐದು ಮಕ್ಕಳು ಕೂಡ ದೇವರ ಪ್ರಸಾದ, ಪ್ರತಿಯೊಬ್ಬ ಪಾಂಡವರು ಕೂಡ ಒಬ್ಬೊಬ್ಬ ದೇವತೆಯ ಪ್ರಸಾದ ಮತ್ತು ಅದೇ ರೀತಿಯಾಗಿ ಭೀಮ ಕೂಡ ವಾಯುದೇವನ ಪುತ್ರ ಮತ್ತು ಭೀಮ ಪಾಂಡವರು ಅತ್ಯಂತ ಬಲಶಾಲಿ. ಇನ್ನು ಮಹಾಭಾರತದ ಕಥೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ, ಆದರೆ ಮಹಾಭಾರತದಲ್ಲಿ ಹನುಮಂತ ಬಂದಿದ್ದು ಯಾಕೆ ಅನ್ನುವ ವಿಷಯ ಇನ್ನು ಕೂಡ ಹಲವು ಜನರಿಗೆ ತಿಳಿದಿರಲು ಸಾಧ್ಯವಿಲ್ಲ. ಹಾಗಾದರೆ ಹನುಮಂತ ಮಹಾಭಾರತದಲ್ಲಿ ಬಂದಿದ್ದು ಯಾಕೆ ಹನುಮಂತ ಮತ್ತು ಭೀಮನಿಗೆ ಇರುವ ಸಂಬಂಧ ಏನು ಎಂದು ತಿಳಿದರೆ ನೀವು ಒಮ್ಮೆ ಶಾಕ್ ಆಗುತ್ತೀರಾ, ಹಾಗಾದರೆ ಹನುಮಂತ ಮತ್ತು ಭೀಮನಿಗೆ ಇರುವ ಸಂಭಂದ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸ್ನೇಹಿತರೆ ಭೀಮ ವಾಯುಪುತ್ರ ಅನ್ನುವುದು ನಿಮಗೆ ಗೊತ್ತೇ ಇದೆ ಮತ್ತು ಅದೇ ರೀತಿಯಾಗಿ ಹನುಮಂತ ಕೂಡ ವಾಯುಪುತ್ರ, ಇನ್ನು ಹನುಮಂತ ಮತ್ತು ಭೀಮ ಅಣ್ಣ ತಮ್ಮ, ಹೌದು ಸ್ನೇಹಿತರೆ ಹನುಮಂತ ಭೀಮನ ಅಣ್ಣ. ಇನ್ನು ಮಹಾಭಾರತದಲ್ಲಿ ಪಾಂಡವರು ಜೂಜಿನಲ್ಲಿ ಸೋತು ವನವಾಸಕ್ಕೆ ಹೋಗುತ್ತಾರೆ ಮತ್ತು ವನವಾಸಕ್ಕೆ ಹೋದ ಸಮಯದಲ್ಲಿ ಅರ್ಜುನ ಇಂದ್ರ ದೇವನನ್ನ ಪ್ರಾರ್ಥನೆ ಮಾಡಿ ಶಕ್ತಿ ಸಂಪಾದನೆ ಮಾಡಲು ಹಿಮಾಲಯಕ್ಕೆ ಹೋಗುತ್ತಾನೆ ಮತ್ತು ಉಳಿದ ಪಾಂಡವರು ಕಾಡಿನಲ್ಲಿ ವಾಸಿಸುತ್ತ ಇರುತ್ತಾರೆ. ಹೀಗೆ ಕಾಡಿನಲ್ಲಿ ಇರುವಾಗ ದ್ರೌಪದಿಗೆ ಒಂದು ದಿನ ಕಮಲದ ಹೂವಿನ ಸುವಾಸನೆ ಮೂಗಿಗೆ ಬಂದು ಬಡಿಯುತ್ತದೆ ಮತ್ತು ಆ ಹೂವಿಗೆ ಆಕರ್ಷಿತಳಾದ ದ್ರೌಪದಿ ನನಗೆ ಆ ಹೂವು ಬೇಕು ತಂದುಕೊಡು ಎಂದು ಭೀಮನಲ್ಲಿ ಹೇಳುತ್ತಾಳೆ. ಭೀಮನಿಗೆ ದ್ರೌಪದಿ ಅಂದರೆ ಅಂದರೆ ತುಂಬಾ ಪ್ರೀತಿ ಮತ್ತು ಆಕೆಯ ಯಾವುದೇ ಆಸೆಯನ್ನ ಕೂಡ ಈಡೇರಿಸಲು ಭೀಮ ತಯಾರಾಗಿ ಇರುತ್ತಾನೆ.

Bheema and Hanumanta

ಇನ್ನು ಮರುದಿನ ಹೂವನ್ನ ಹುಡುಕಿಕೊಡು ಹೋದ ಭೀಮ ಗಂಧಮಾದನ ಪರ್ವತಕ್ಕೆ ಹೋಗುತ್ತಾನೆ, ಇನ್ನು ಆ ಪರ್ವತದಲ್ಲಿ ಭೀಮ ಹೋಗುವಾಗ ಅಲ್ಲೊಂದು ಕೋತಿ ಬಲವನ್ನ ರಸ್ತೆಗೆ ಅಡ್ಡಲಾಗಿ ಹಾಕಿಕೊಂಡು ಕೂತಿರುತ್ತದೆ.ಇನ್ನು ಭೀಮನಿಗೆ ನೂರು ಆನೆಯ ಶಕ್ತಿ ಇರುವುದರಿಂದ ಅವನಿಗೆ ತುಂಬಾನೇ ಅಹಂಕಾರ ಇತ್ತು, ಇನ್ನು ಭೀಮನ ಅಹಂಕಾರವನ್ನ ಮುರಿಯುವ ಸಲುವಾಗಿ ಶ್ರೀ ಕೃಷ್ಣನು ಆಂಜನೇಯನನ್ನ ಅಲ್ಲಿಗೆ ಕಳುಹಿಸಿದ್ದ. ಇನ್ನು ಕೋಟಿಯನ್ನ ನೋಡಿದ ಭೀಮ ಹೇ ಕೋತಿ ಯಾಕೆ ದಾರಿಯಲ್ಲಿ ಕೂತಿದ್ದೀಯಾ ಎದ್ದು ಆಚೆ ಹೋಗು ಎಂದು ಹೇಳುತ್ತಾನೆ ಭೀಮ, ಆದರೆ ಹನುಮಂತ ಮಾತೆ ಆಡಲ್ಲ. ಇನ್ನು ಈ ಸಮಯದಲ್ಲಿ ಇನ್ನಷ್ಟು ಕೋಪ ಮಾಡಿಕೊಂಡ ಭೀಮ ಹೇ ಕೋತಿ ಬೇಗ ಎದ್ದು ಹೋಗು, ನೀನು ವೃದ್ಧ ನಾನು ನಿನ್ನ ಮೇಲೆ ಕೈ ಮಾಡಲಾ ಎಂದು ಎಂದು ಹೇಳುತ್ತಾನೆ ಭೀಮ, ಆಗ ಹನುಮಂತ ನಾನು ವೃದ್ಧ ನನಗೆ ನನ್ನ ಬಲವನ್ನ ಎತ್ತಿಕೊಂಡು ಆಚೆ ಹೋಗುವ ಶಕ್ತಿ ಇಲ್ಲ ಮತ್ತು ನೀನೇ ನನ್ನ ಬಲವನ್ನ ಪಕ್ಕಕ್ಕೆ ಇತ್ತು ಹೋಗು ಎಂದು ಹೇಳುತ್ತಾನೆ ಹನುಮಂತ.

ಆಗ ಭೀಮ ಕೋಪದಿಂದ ಕೋಟಿಯ ಬಲವನ್ನ ಎತ್ತಿ ಆಚೆ ಇಡಲು ನೋಡುತ್ತಾನೆ, ಆದರೆ ಭೀಮನಿಗೆ ಹನುಮಂತನ ಬಲವನ್ನ ಅಲುಗಾಡಿಸಲು ಕೂಡ ಸಾಧ್ಯವಾಗುವುದಿಲ್ಲ. ಈ ಕೋತಿ ಸಾಮಾನ್ಯ ಕೋತಿಯಲ್ಲ ಯಾರೋ ಶಕ್ತಿಶಾಲಿಯೇ ಇರಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ ಭೀಮ, ಆಗ ಭೀಮ ನನ್ನದು ತಪ್ಪಾಯಿತು ನನಗೆ ನೀವು ಯಾರು ಎಂದು ತಿಳಿಯಲಿಲ್ಲ ದಯವಿಟ್ಟು ನಿಮ್ಮ ನಿಜವಾದ ದರ್ಶನ ನೀಡಿ ಎಂದು ಕೇಳಿಕೊಳ್ಳುತ್ತಾನೆ ಭೀಮ. ಆಗ ಎದ್ದು ಭೀಮನನ್ನ ತಬ್ಬಿಕೊಳ್ಳುವ ಹನುಮಂತ ಆಗ ನನ್ನ ನಿಜವಾದ ರೂಪವನ್ನ ತೋರಿಸುತ್ತಾನೆ ಮತ್ತು ಅಹಂಕಾರ ಒಳ್ಳೆಯದಲ್ಲ ಎಂದು ಭೀಮನಿಗೆ ಬುದ್ದಿ ಮಾತನ್ನ ಹೇಳುತ್ತಾನೆ ಹನುಮಂತ.

Bheema and Hanumanta

Please follow and like us:
error0
http://karnatakatoday.in/wp-content/uploads/2019/12/Bheema-and-Hanumanta-1-1024x576.jpghttp://karnatakatoday.in/wp-content/uploads/2019/12/Bheema-and-Hanumanta-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಪಾಂಡವರ ಜನ್ಮ ರಹಸ್ಯದ ಬಗ್ಗೆ ನಿಮಗೆ ಗೊತ್ತೇ ಇರುತ್ತದೆ, ಸ್ನೇಹಿತರೆ ಕುಂತಿಗೆ ಹುಟ್ಟಿದ ಐದು ಮಕ್ಕಳು ಕೂಡ ದೇವರ ಪ್ರಸಾದ, ಪ್ರತಿಯೊಬ್ಬ ಪಾಂಡವರು ಕೂಡ ಒಬ್ಬೊಬ್ಬ ದೇವತೆಯ ಪ್ರಸಾದ ಮತ್ತು ಅದೇ ರೀತಿಯಾಗಿ ಭೀಮ ಕೂಡ ವಾಯುದೇವನ ಪುತ್ರ ಮತ್ತು ಭೀಮ ಪಾಂಡವರು ಅತ್ಯಂತ ಬಲಶಾಲಿ. ಇನ್ನು ಮಹಾಭಾರತದ ಕಥೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುತ್ತದೆ, ಆದರೆ ಮಹಾಭಾರತದಲ್ಲಿ ಹನುಮಂತ ಬಂದಿದ್ದು ಯಾಕೆ ಅನ್ನುವ ವಿಷಯ ಇನ್ನು ಕೂಡ ಹಲವು...Film | Devotional | Cricket | Health | India